For Quick Alerts
ALLOW NOTIFICATIONS  
For Daily Alerts

ಹುಲಿಯಲ್ಲಿ ಮಾತ್ರ ಕಂಡುಬರುವ ವಿಶಿಷ್ಟವಾದ ಗುಣಗಳಿವು!

|

ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಕಾಡು ಪ್ರಾಣಿಗಳ ರಾಜ ಎಂದು ಕರೆಯಲ್ಪಡುವ ಹುಲಿಯನ್ನು ಮುಂದಿನ ಪೀಳಿಗೆಯವರು ಚಿತ್ರಗಳಲ್ಲಿ ಮಾತ್ರ ನೋಡುವಂತಹ ಪರಿಸ್ಥಿತಿ ಎದುರಾಗುತ್ತಿದೆ. ದಿನದಿಂದ ದಿನಕ್ಕೆ ಹುಲಿಗಳ ಸಂತತಿ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಅನೇಕ ಜಾಗೃತಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.

ಹುಲಿಗಳ ಅಳಿವಿಗೆ ಪರಿಸರ ಪ್ರವಾಸೋದ್ಯಮದ ಕೂಡ ಒಂದು ಕಾರಣವಾಗಿದೆ. ಕಾಡಿನಲ್ಲಿ ರೆಸಾರ್ಟ್‌ಗಳು, ಜಂಗಲ್ ಲಾಡ್ಜ್‌ಗಳು ತಲೆ ಎತ್ತಿರುವುದರಿಂದ ಕಾಡುಪ್ರಾಣಿಗಳಿಗೆ ಓಡಾಡಲು ಜಾಗವಿಲ್ಲದಾಗಿದೆ. ಆಹಾರದ ಕೊರತೆ ಕೆಲವು ಹುಲಿಗಳು ಸಾವನ್ನಪ್ಪಿದರೆ ಮತ್ತೆ ಕೆಲವು ಆಹಾರದ ಕೊರತೆಯಿಂದ ನಾಡಿಗೆ ಬಂದು ಜನರ ಕೈಯಲ್ಲಿ ಸಾವನ್ನಪ್ಪಿದವು. ಹುಲಿಗಳ ಸಂತತಿ ಉಳಿಸುವುದು ಸರ್ಕಾರದ ಹಾಗೂ ಜನರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ.

ಈ ಲೇಖದಲ್ಲಿ ಹುಲಿಯ ಬಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಹೇಳಲಾಗಿದೆ ನೋಡಿ:

ಹುಲಿಯ ವಿಶೇಷತೆ

ಹುಲಿಯ ವಿಶೇಷತೆ

* ಹುಲಿಗಳ ಕಣ್ಣಿನ ಪಾಪೆಯೂ ವೃತ್ತಾಕಾರವಾಗಿದ್ದು ಬೆಕ್ಕನ್ನು ಹುಲಿಯ ಜಾತಿ ಎಂದು ಗುರುತಿಸಿದ್ದರೂ ಬೆಕ್ಕಿನಲ್ಲಿ ಈ ರೀತಿ ಕಾಣಲು ಸಾಧ್ಯವಲ್ಲ. ಹುಲಿಯೂ ಮುಂಜಾನೆ ಹಾಗೂ ಸಾಯಂಕಾಲದ ಹೊತ್ತು ಹೆಚ್ಚಾಗಿ ಭೇಟೆಯನ್ನಾಡುತ್ತವೆ.

* ಹುಲಿಗೆ ದೃಷ್ಟಿ ಸಾಮರ್ಥ್ಯವೂ ಮನುಷ್ಯನ ದೃಷ್ಟಿ ಸಾಮರ್ಥ್ಯಕ್ಕಿಂತ 6 ಪಟ್ಟು ಅಧಿಕವಿದೆ.

* ಹುಲಿಯೂ ಮೂತ್ರ ಮಾಡುವಾಗ ಮರವನ್ನು ಕೆರೆದು ನಂತರ ಮಾಡುತ್ತದೆ. ಹುಲಿಗೆ ಮತ್ತೊಂದು ಹುಲಿಯ ಮೂತ್ರದ ವಾಸನೆಯ ಮುಖಾಂತ ಅದರ ವಯಸ್ಸು ಹಾಗೂ ಅದು ಹೆಣ್ಣೋ, ಗಂಡೋ ಎಂದು ಕಂಡು ಹಿಡಿಯುತ್ತದೆ.

* ಗಂಡು ಹುಲಿಗೆ ತಿರುಗಾಡಲು ಹೆಣ್ಣು ಹುಲಿಗಿಂತ ಅಧಿಕ ಜಾಗಬೇಕು.

ಹುಲಿಯ ವಿಶೇಷತೆ

ಹುಲಿಯ ವಿಶೇಷತೆ

* ಹುಲಿಯೂ ಸಾಮಾನ್ಯವಾಗಿ ಇತರ ಪ್ರಾಣಿಗಳನ್ನು ನೋಡಿದಾಗ ಘರ್ಜಿಸುವುದಿಲ್ಲ, ಆ ಸಮಯದಲ್ಲಿ ಭುಸುಗುಟ್ಟುತ್ತದೆ. ಇತರ ಹುಲಿಯ ಜೊತೆ ಸಂವಹನ ಮಾಡಲು ಘರ್ಜಿಸುತ್ತದೆ.

* ಹುಲಿಗಳು ಭೇಟೆಯಾಡಿದ ನಂತರ ಹೆಣ್ಣು ಹುಲಿ ಮೊದಲು ತಿನ್ನುವವರೆಗೆ ಗಂಡು ಹುಲಿ ಕಾಯುತ್ತದೆ.ಆದರೆ ಗಂಡು ಸಿಂಹವೂ ಈ ರೀತಿ ಕಾಯದೆ ಭೇಟೆಯಾಡಿದ ಪ್ರಾಣಿಯನ್ನು ತಿಂದು ಮುಗಿಸುತ್ತದೆ.

* ಮನುಷ್ಯರಂತೆ ಹುಲಿಯ ಹೆಜ್ಜೆ ಗುರುತು ಒಂದು ಹುಲಿಗಿಂತ ಮತ್ತೊಂದು ಹುಲಿಯದು ಭಿನ್ನವಾಗಿರುತ್ತದೆ.

ಹುಲಿಯ ವಿಶೇಷತೆ

ಹುಲಿಯ ವಿಶೇಷತೆ

* ಹುಲಿಗೆ ನೀರಿನಲ್ಲಿ ಈಜುವುದು ಎಂದರೆ ಬಲು ಇಷ್ಟ. ಕಾಡಿನಲ್ಲಿರುವ ಹುಲಿ ಕಡಿಮೆಯೆಂದರೂ ಒಂದು ದಿನಲ್ಲಿ 30 ಕಿ.ಮೀ ಈಜುತ್ತದೆ.

* ಹುಲಿ ಹುಟ್ಟಿದ ಒಂದು ವಾರಗಳ ಕಾಲ ಸಂಪೂರ್ಣ ಕುರುಡಾಗಿರುತ್ತದೆ. ಹುಲಿ ಮರಿಗಳಲ್ಲಿ ಶೇ. ಅರ್ಧದಷ್ಟು ಮಾತ್ರ ಬೆಳೆಯುತ್ತದೆ. ಉಳಿದ ಮರಿಗಳು ಸತ್ತು ಹೋಗುತ್ತವೆ.

* ಹುಲಿಗಳಿಗೆ ವರ್ಷದಲ್ಲಿ 5 ದಿನ ಮಾತ್ರ ಗರ್ಭಧಾರಣೆಯ ಸಾಮರ್ಥ್ಯಇರುತ್ತದೆ. ಈ ಸಮಯದಲ್ಲಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುತ್ತದೆ. ಹುಲಿ ಗರ್ಭಧಾರಣೆಯಾಗಿ 3 ತಿಂಗಳಿಗೆ ಮಗುವಿಗೆ ಜನ್ಮ ನೀಡುತ್ತದೆ. ಒಂದು ಹುಲಿಯೂ 2-3 ಮರಿಗೆ ಜನ್ಮ ನೀಡುತ್ತದೆ.

ಹುಲಿಯ ವಿಶೇಷತೆ

ಹುಲಿಯ ವಿಶೇಷತೆ

* ಹುಲಿಯ ಕಾಲಿನ ಸ್ನಾಯುಗಳು ತಂಬಾ ಶಕ್ತಿಯುತವಾಗಿದ್ದು ಹುಲಿ ಸತ್ತರೂ ಅದನ್ನು ನಿಲ್ಲಿಸಬಹುದಾಗಿದೆ.

* ಹತ್ತರಲ್ಲಿ ಒಂದು ಹುಲಿ ಬೇಟೆಯಾಡುವುದರಲ್ಲಿ ನಿಸ್ಸೀಮಾವಾಗಿರುತ್ತದೆ. ಹುಲಿಗೆ ತುಂಬಾ ದಿನ ಏನೂ ತಿನ್ನದೆ ಬದುಕುತ್ತದೆ. 3 ವಾರಗಳ ನಂತರ ಏನೂ ತಿನ್ನದಿದ್ದರೆ ಮಾತ್ರ ಸಾವನ್ನಪ್ಪುತ್ತದೆ.

ಹುಲಿಯ ವಿಶೇಷತೆ

ಹುಲಿಯ ವಿಶೇಷತೆ

* ಪ್ರಾಣಿಯನ್ನು ಕೊಲ್ಲುವಾಗ ಪ್ರಾಣಿಯ ಕುತ್ತಿಗೆಗೆ ಕಚ್ಚಿ ಕೊಲ್ಲುತ್ತದೆ. ಹುಲಿಯ ಎಂಜಲಿನಲ್ಲಿ ಆಂಟಿ ಸೆಪ್ಟಿಕ್ ಅಂಶವಿರುವುದರಿಂದ ಗಾಯವಾದಾಗ ಆ ಭಾಗ ನೆಕ್ಕಿದರೆ ಗಾಯ ಒಣಗುವುದು. ಬೆಕ್ಕಿನ ರೀತಿ ನಾಲಗೆಯಿಂದ ಅದರ ಮೈಯನ್ನು ಶುಚಿಗೊಳಿಸುತ್ತದೆ.

* ಹುಲಿಯ ವಯಸ್ಸು 25 ವರ್ಷವಾಗಿದೆ. ಹುಲಿಗಳ ಸಂಕ್ಯೆ ಕಡಿಮೆಯಾಗಿ ಈಗ ಇವುಗಳ ಸಂಖ್ಯೆ 3,500ಕ್ಕೆ ಇಳಿದಿದೆ.

Read more about: ಭಾರತ ಜೀವನ life
English summary

Interesting Facts About Tiger | India's National Animal | ಹುಲಿಯ ಬಗ್ಗೆ ಕೆಲವು ಆಸಕ್ತಿಕರ ವಿಷಯಗಳು | ಭಾರತದ ರಾಷ್ಟ್ರೀಯ ಪ್ರಾಣಿ

Tigers are the most varied cat on earth and that are in endangered due to human carelessness. Here we have mentioned some interesting things about tier.
X
Desktop Bottom Promotion