ಮದುವೆಯಾಗಿದ್ದ ಪುರುಷರನ್ನು ಪ್ರೇಮಿಸಿದ ನಟಿಯರು

By:

ಸಿನಿಮಾ ರಂಗದಲ್ಲಿ ನಟ-ನಟಿಯರ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಾ ಇರುತ್ತವೆ. ಕೆಲವೊಮ್ಮೆ ಅಂತಹ ಗಾಸಿಪ್ ನಿಜವಾಗಿ ಬಿಡುತ್ತದೆ. ತುಂಬಾ ಪ್ರಸಿದ್ಧಿಯನ್ನು ಪಡೆದಂತಹ ಅನೇಕ ನಟಿಯರು ಹೀಗಾಗಲೇ ಮದುವೆಯಾಗಿರುವವನ ಜೊತೆ ಅಫೀರ್ ಇಟ್ಟುಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಕರೀನಾ  2 ಮಕ್ಕಳ ತಂದೆಯಾದ ಸೈಫ್ ಅಲಿ ಖಾನ್ ಜೊತೆ ಮದುವೆಯಾದಳು.

ಇದೆಲ್ಲಾ ನೋಡುವಾಗ ಇಷ್ಟೊಂದು ಪ್ರಸಿದ್ಧಿಯನ್ನು ಪಡೆದಂತಹ, ನೋಡಲು ಸುರಸುಂದರಿಗಳಾದ ಇವರೆಲ್ಲಾ ಏಕೆ ಒಂದು ಮದುವೆಯಾದ ವ್ಯಕ್ತಿ ಜೊತೆ ಸಂಬಂಧ ಇಟ್ಟುಕೊಳ್ಳುತ್ತಾರೆ ಎಂದು ಜನಸಾಮಾನ್ಯರಾದ ನಾವೆಲ್ಲಾ ಚರ್ಚೆ ನಡೆಸುತ್ತೇವೆ. ಸಾಕಷ್ಟು ಗಾಸಿಪ್ ಗಳನ್ನು ಹೇಳುತ್ತೇವೆ. ಕೊನೆಗೆ ಅವರ ಖಾಸಗಿ ಜೀವನದ ಬಗ್ಗೆ ಮಾತನಾಡಲು ನಾವು ಯಾರು? ಎಂದು ಹೇಳಿಕೊಂಡು ನಮ್ಮ-ನಮ್ಮ ಕೆಲಸದ ಕಡೆಗೆ ಗಮನ ಹರಿಸುತ್ತೇವೆ ಅಲ್ಲವೇ?

ಇತ್ತೀಚಿಗೆ ಬಾಲಿವುಡ್, ಹಾಲಿವುಡ್ ಹಾಗೂ ಇತರ ಭಾಷೆಯ ಸಿನಿಮಾ ನಟಿಯರು ಒಂದು ಮದುವೆಯಾಗಿರುವ ಪುರುಷನ ಪ್ರೇಮಪಾಶಕ್ಕೆ ಬೀಳುವುದು ಸಾಮಾನ್ಯವಾಗಿದೆ. ಇದನ್ನು ಟ್ರೆಂಡ್ ಅನ್ನುವುದಾ ಅಥವಾ ಅವರ ಪರಿಸ್ಥಿತಿಯೋ ಒಂದು ಅರ್ಥವಾಗುವುದಿಲ್ಲ.

ಎಷ್ಟೋ ಯುವಕ-ಯುವತಿಯರು ತಮ್ಮ ಇಷ್ಟದ ಸೆಲೆಬ್ರಿಟಿಗಳ ಸ್ಟೈಲ್ ಹಾಗೂ ಉಡುಗೆ-ತೊಡುಗೆಗಳನ್ನು ತಮ್ಮ ಜೀವನದಲ್ಲಿ ಅನುಸರಿಸುತ್ತಾರೆ. ಆದರೆ ಯುವತಿಯರು ಪ್ರೀತಿ-ಪ್ರೇಮದ ವಿಷಯದಲ್ಲಿ ಇವರನ್ನು ರೋಲ್ ಮಾಡಲ್ ಗಳಾಗಿ ತೆಗೆದುಕೊಳ್ಳದಿದ್ದರೆ ಒಳ್ಳೆಯದು!

ಮದುವೆಯಾದ ಪುರುಷನನ್ನು ಪ್ರೇಮಿಸಿ ದೊಡ್ಡ ಸುದ್ದಿ ಮಾಡಿದಂತಹ ಹಾಗೂ ಮಾಡುತ್ತಿರುವ ಆ ಜನಪ್ರಿಯ ನಟಿಯರು ಯಾರು ಎಂದು ನೋಡುವ ಬನ್ನಿ:

ರಾಣಿ ಮುಖರ್ಜಿ

ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರ ಇವರ ನಡುವೆ ಸಂಬಂಧವಿದೆ ಎಂಬ ಗಾಸಿಪ್ ಗಳು ಕೇಳಿ ಬರ್ತಾ ಇತ್ತು. ಈಗ ಅದು ನಿಜವೆಂದು ಸಾಬೀತಾಗಿದೆ. ಆದಿತ್ಯ ಚೋಪ್ರ 8 ವರ್ಷಗಳ ದಾಂಪತ್ಯ ಜೀವನದನಂತರ ತನ್ನ ಹೆಮಡತಿಗೆ ವಿಚ್ಛೇದನ ನೀಡಿದ್ದಾರೆ. ಸದ್ಯದಲ್ಲಿಯೇ ರಾಣಿ ಮುಖರ್ಜಿಯನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೆ.

ಕರೀನಾ ಕಪೂರ್

ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ಸಂಬಂಧ ಮದುವೆಯ ಜೀವನದವರೆಗೂ ಬಂತು. ಆದರೆ ಸೈಫ್ ಅಲಿಖಾನ್ ಈ ಹಿಂದೆ ಕೂಡ  ಅಮೃತಾ ಸಿಂಗ್ ಜೊತೆ ಪ್ರೀತಿಸಿ ಮದುವೆಯಾಗಿದ್ದರು! ಈ ದಂಪತಿಗಳಿಗೆ ಎರಡು ಮಕ್ಕಳು ಕೂಡ ಇವೆ. ಈಗ ಅಮೃತಾ ಸಿಂಗ್ ಗೆ ವಿಚ್ಛೇದನ ನೀಡಿ ಕರೀನಾಳ ಕೈ ಹಿಡಿದನು.

ರೇಖಾ

ರೇಖಾ ಮತ್ತು ಅಮಿತಾ ಬಚ್ಚನ್ ಇಬ್ಬರ ಸಂಬಂಧದಿಂದಾಗಿ ಜಯಾಬಚ್ಚನ್ ಜೀವನದಲ್ಲಿ ದೊಡ್ಡ ಚಂಡಾಮಾರುತವೇ ಬೀಸಿತು. ಆದರೆ ನಂತರ ರೇಖಾ ಮತ್ತು ಅಮಿತಾ ಬಚ್ಚನ್ ಸಂಬಂಧ ಜಯಾ ಬಚ್ಚನ್ ನಿಗೆ ವಿಚ್ಛೇದನ ನೀಡಿ ಮದುವೆಯಾಗುವವರೆಗೆ ಹೋಗದೆ ಅಲ್ಲಿಗೆ ಕೊನೆಗೊಂಡು ಮತ್ತೆ ಜಯಾ ಬಚ್ಚನ್ ಜೀವನದಲ್ಲಿ ವಸಂತ ಮೂಡುವಂತಾಯಿತು.

ಶ್ರೀದೇವಿ

ಮಧ್ಯ ವಯಸ್ಸು ದಾಟಿದರೂ ತಾರುಣ್ಯದ ಚೆಲುವಿನಿಂದ ಈಗಲೂ ಮಿಂಚುತ್ತಿರುವ ಈ ಸುಂದರ ನಟಿ ಕೂಡ 2 ಮಕ್ಕಳಿದ್ದ ಬೋನಿ ಕಪೂರ್ ಜೊತೆ ಮದುವೆಯಾದಳು.

ಡಿಂಪಲ್ ಕಾಪಾಡಿಯಾ

ಡಿಂಪಲ್ ಕಾಪಾಡಿಯಾ ಮತ್ತು ರಾಜೇಶ್ ಖನ್ನಾ ಹಗೂ ಸನ್ನಿ ಮತ್ತು ಪೂಜಾ ಮದುವೆಯಾಗಿದ್ದರು. ಆದರೆ ಕೊನೆಗೆ ಡಿಂಪಲ್ ಕಾಪಾಡಿಯಾ ಮತ್ತು ಸನ್ನಿ ಡಿಯೋಲ್ ಲೀವ್ ಇನ್ ರಿಲೇಷನ್ ಶಿಪ್ ಜೀವನ ನಡೆಸಿದರು.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿಗೆ ರಾಜೇಶ್ ಕುಂದ್ರಾ ಜೊತೆ ಮದುವೆಯಾಗಿ ಒಂದು ಮಗು ಇದೆ. ಆದರೆ ಕುಂದ್ರಾ ಶಿಲ್ಪಾಳನ್ನು ಕೈ ಹಿಡಿಯುವ ಮೊದಲು ಒಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದರು.

ರವೀನಾ ಟಂಡನ್

ಹಾಟ್ ಬೆಡಗಿಯಾಗಿದ್ದ ರವೀನಾ ಟಂಡನ್ ಅನಿಲ್ ತಡಾನಿ ಜೊತೆ ಮದುವೆಯಾದರು. ಅದರೆ ಅನಿಲ್ ಗೆ ರವೀನಾ 2ನೇ ಹೆಂಡತಿ.

ಕರಿಷ್ಮಾ ಕಪೂರ್

ಕರೀನಾಳ ಅಕ್ಕ ಕರಿಷ್ಮಾ ಕೂಡ ಒಂದು ಮದುವೆಯಾಗಿದ್ದ ಸಂಜಯ್ ಕಪೂರ್ ಜೊತೆ ಮದುವೆಯಾದಳು.

See next photo feature article

ಹೇಮಾ ಮಾಲಿನಿ

ಡ್ರೀಮ್ ಗರ್ಲ್ ಆಗಿದ್ದ ಹೇಮಾ ಮಾಲಿಯ ಕೈ ಹಿಡಿಯಲು ಧರ್ಮೇಂದ್ರ ತನ್ನ ಮೊದಲನೆ ಪತ್ನಿ ಹಾಗೂ ನಾಲ್ಕು ಮಕ್ಳನ್ನು ಬಿಟ್ಟು ಬಂದರು!

Read more about: ಸೆಲೆಬ್ರಿಟಿ, ಜೀವನ, ಮದುವೆ, celebrity, life, marriage
English summary

Celebrities Who Fell For Married Men | Marriage And Life | ಮದುವೆಯಾಗಿದ್ದ ಪುರುಷರನ್ನು ಪ್ರೇಮಿಸಿದ ನಟಿಯರು | ಮದುವೆ ಮತ್ತು ಜೀವನ

It is not strange to say that celebs these days are falling for married men. I mean what is wrong with these gorgeous women? Many celebrities have fallen for married men. I know there are women who love dating married men but the rage has become the talk of the town.
Story first published: Wednesday, November 21, 2012, 9:01 [IST]
Please Wait while comments are loading...
Subscribe Newsletter