ಯಶಸ್ವಿ ವ್ಯಕ್ತಿಗಳು ತಮ್ಮ ಸಾಧನೆಗೆ ಬಳಸುವ 7 ಅಸ್ತ್ರಗಳು

By:
Subscribe to Boldsky

ಸಾಧಕರ ಆತ್ಮಚರಿತ್ರೆಯನ್ನು ಓದಿದರೆ ನಮ್ಮ ಜೀವನದ ಉದ್ದೇಶ, ಅದಕ್ಕಾಗಿ ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಅದೇ ರೀತಿ ಯಶಸ್ವಿ ವ್ಯಕ್ತಿಗಳಾಗಿ ಯಾರೆಲ್ಲಾ ಗುರುತಿಸಿಕೊಂಡಿದ್ದಾರೆ ಅವರ ದಿನಚರಿ ಹಾಗೂ ಹವ್ಯಾಸಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಆಗ ನಿಮಗೆ ಅವರ ಗೆಲುವಿನ ಹಿಂದೆ ಅವರ ಶ್ರಮ ನಿಮಗೆ ಗೋಚರವಾಗುತ್ತದೆ. ಅದರಲ್ಲೂ ಸಾಧಕರರಲ್ಲಿ ಈ ಕೆಳಗಿನ ಗುಣಗಳು ಕಂಡು ಬರುತ್ತವೆ, ಅಲ್ಲದೆ ಅವರ ಆ ಗುಣಗಳೇ ಅವರ ಸಾಧನೆಯ ಮೂಲಮಂತ್ರಗಳಾಗಿರುತ್ತವೆ.

1. ಬೆಳಗ್ಗೆ ಏಳುವುದು: ಬೆಳಗ್ಗೆ ಬೇಗ ಎದ್ದಷ್ಟು ಬೇಗನೆ ಕೆಲಸ ಮಾಡಲು ಅಥವಾ ಮಾಡಬೇಕಾದ ಕೆಲಸಗಳ ಕಡೆ ಗಮನ ಹರಿಸಲು ಪ್ರಾರಂಭಿಸುತ್ತೇವೆ. ಇದರಿಂದ ದುಡಿಯಲು ಅಧಿಕ ಸಮಯ ದೊರೆಯುತ್ತದೆ.

7 Habits Of Successful People

2. ತಾಳ್ಮೆ ಮತ್ತು ವೃತ್ತಿ ನಿಷ್ಠೆ: ತಾಳ್ಮೆ ಅನ್ನುವುದು ಸಾಧಕರ ಮೂಲ ಮಂತ್ರವಾಗಿರುತ್ತದೆ. ಅಲ್ಲದೆ ತಮ್ಮ ಕೆಲಸವನ್ನು ತುಂಬಾ ನಿಷ್ಠೆಯಿಂದ ಮಾಡುವುದಲ್ಲದೆ ಕೆಲಸದ ಮೇಲೆ ಶೇ.100ರಷ್ಟು ಗಮನವನ್ನು ನೀಡುವವರು ಆಗಿರುತ್ತಾರೆ.

3. ನೆಟ್ ವರ್ಕ್: ಸಾಧಕರಿಗೆ ಜನರ ಜೊತೆ ಚೆನ್ನಾಗಿ ಬೆರೆಯುವುದು ಗೊತ್ತಿರುತ್ತದೆ. ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ. ಜನರನ್ನು ತಮ್ಮ ಗುಣದಿಂದ ಆಕರ್ಷಿಸುವ ಕಲೆ ಗೊತ್ತಿರುತ್ತದೆ.

4. ಜ್ಞಾನ: ಸಾಕಷ್ಟು ಜ್ಞಾನವನ್ನು ಗಳಿಸಿರುತ್ತಾರೆ.  ಆ ಜ್ಞಾನವನ್ನು ಓದಿ ಆಗಿರಬಹುದು, ಅನುಭವದಿಂದ ಇರಬಹುದು ಅಥವಾ ತಾನು ಬೆರೆಯುವ ಸಮಾಜದಿಂದ ಪಡೆದುಕೊಂಡಿರುತ್ತಾರೆ.  ಜ್ಞಾನವೇ ಅವರ ಶಕ್ತಿಯಾಗಿರುತ್ತದೆ.

5. ಸಮಯ ಪ್ರಜ್ಞೆ: ಸಾಧಕರಲ್ಲಿ ಸಮಯ ಪ್ರಜ್ಞೆ ಕಂಡು ಬರುತ್ತದೆ. ಸಮಯ ಪ್ರಜ್ಞೆ ಅನ್ನುವುದು ಇದ್ದರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಜಯಗಳಿಸುತ್ತಾರೆ.

6. ಲೆಕ್ಕಾಚಾರ: ಸಾಧಕರು ಪ್ರತಿಯೊಂದು ವಿಷಯದ ಬಗ್ಗೆ ಲೆಕ್ಕಚಾರ ಹಾಕಿ ನಂತರ ಕೆಲಸಕ್ಕೆ ಕೈ ಹಾಕುತ್ತಾರೆ. ಈ ರೀತಿ ಮಾಡಿದರೆ ಈ ರೀತಿ ಉಂಟಾಗಬಹುದೆಂಬ ಸ್ಪಷ್ಟ ಕಲ್ಪನೆ ಇರುತ್ತದೆ.

7. ನಿಖರತೆ ಹಾಗೂ ಪರಿಪೂರ್ಣತೆ: ಸಾಧಕರು ಮಾಡುವ ಕೆಲಸದಲ್ಲಿ ಪರಿಪೂರ್ಣತೆ ಇರುತ್ತದೆ. ಅವರ ಆಲೋಚನೆಗಳಲ್ಲಿ ನಿಖರತೆ ಇರುತ್ತದೆ.

ಆದ್ದರಿಂದ ನೀವು ಏನಾದರೂ ಸಾಧನೆ ಮಾಡಬೇಕೆಂದು ಇದ್ದರೆ ಈ ಮೇಲಿನ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು.

Story first published: Wednesday, November 14, 2012, 15:55 [IST]
English summary

7 Habits Of Successful People | Life And Lifestyle | ಸಾಧಕರಲ್ಲಿ ಕಂಡು ಬರುವ 7 ಗುಣಗಳು | ಜೀವನ ಮತ್ತು ಜೀವನ ಶೈಲಿ

Successful people cultivate habits that help them achieve their goals. Such effective habits should be developed by everyone who wants to be successful.
Please Wait while comments are loading...
Subscribe Newsletter