For Quick Alerts
ALLOW NOTIFICATIONS  
For Daily Alerts

ಬುದ್ಧನ ಹುಡುಕಾಟದಲ್ಲಿ ಹೊರಟ ಯತಿಗೆ ಸಿಕ್ಕಿದ್ದೇನು?

By Prasad
|
In search of Buddha
ಒಬ್ಬ ಯತಿಯು ಬುದ್ದನನ್ನು ಹುಡುಕುವುದಕ್ಕಾಗಿ ಬೃಹತ್ ತೀರ್ಥಯಾತ್ರೆಯೊಂದನ್ನು ಕೈಗೊಂಡನು. ತನ್ನ ಜೀವನದ ಹೆಚ್ಚಿನ ವರ್ಷಗಳನ್ನು ಬುದ್ದನ ಹುಡುಕಾಟಕ್ಕೆಂದೇ ಅರ್ಪಿಸಿದ್ದ ಯತಿ, ಕೊನೆಗೂ ಬುದ್ದನು ನೆಲೆಸಿರುವನು ಎಂದೆನಿಸಿಕೊಳ್ಳುವ ಕ್ಷೇತ್ರವನ್ನು ತಲುಪಿದನು. ಆ ಪ್ರದೇಶ ಪ್ರವೇಶಿಸಲೆಂದು ನದಿಯನ್ನು ದಾಟುತ್ತಿದ್ದಾಗ ನಾವಿಕನು ಹುಟ್ಟು ಹಾಕುತ್ತಿದ್ದುದನ್ನು ಮತ್ತು ತನ್ನ ಸುತ್ತಮತ್ತ ಎಲ್ಲವನ್ನೂ ಗಮನಿಸಿದನು.

ಪಯಣ ಹಾಗೇ ಸಾಗುತ್ತಿದ್ದಾಗ ನದಿಯಲ್ಲಿ ಏನೋ ತೇಲುತ್ತಾ, ತಮ್ಮತ್ತ ಬರುತ್ತಿರುವುದನ್ನು ಯತಿಯು ಗಮನಿಸಿದನು. ಅದು ಹತ್ತಿರ ಬರುತ್ತಿದ್ದಂತೇ ಅದು ಒಬ್ಬ ಮನುಷ್ಯನ ಮೃತ ಶರೀರವೆಂಬುವುದನ್ನು ಯತಿ ಅರಿತನು.

ಆ ಶವವು ತೇಲುತ್ತ ತೇಲುತ್ತ ತುಂಬಾ ಹತ್ತಿರ ಬಂದಾಗ ಯತಿಯು ಅದನ್ನು ಮುಟ್ಟಲು ಯತ್ನಿಸಿದನು. ಆಗ ಆಶ್ಚರ್ಯ ಮತ್ತು ಆವಾಕ್ಕಾಗುವ ಸರದಿ ಯತಿಯದಾಗಿತ್ತು. ಯಾಕೆಂದರೆ, ಆ ಮೃತ ಶರೀರವು ತನ್ನದೇ ಎಂಬುದು ಅವನಿಗೆ ತಕ್ಷಣ ಅರಿವಿಗೆ ಬಂದಿತು.

ನದಿಯ ಹರಿವಿನ ಜೊತೆ ತೇಲುತ್ತಾ ಸಾಗುತ್ತಿರುವಾಗ, ತಾನೇ ಸ್ವತಃ ಅಚಲ ಮತ್ತು ನಿರ್ಜೀವವಾಗಿರುವುದನ್ನು ಕಂಡ ವಿಹ್ವಲನಾದನು ಮತ್ತು ಅವನು ತನ್ನ ಎಲ್ಲ ಹಿಡಿತವನ್ನೂ ಕಳೆದುಕೊಂಡುಬಿಟ್ಟನು. ಬುದ್ಧನನ್ನು ಹುಡುಕುತ್ತ ಹೊರಟ ಆತನಿಗೆ, ಆ ಕ್ಷಣವೇ ವಿಮೋಚನೆಯ ಘಟ್ಟ ಆರಂಭವಾಯಿತು ಎಂಬಂತೆ ಅನುಭವವಾಯಿತು. ಆ ಕ್ಷಣವೇ ಯತಿ ಬುದ್ಧನ ಹುಡುಕಾಟವನ್ನೂ ಬಿಟ್ಟುಬಿಟ್ಟನು.

English summary

Searching For Buddha | Inspirational Zen short story | ಬುದ್ಧನ ಹುಡುಕಾಟದಲ್ಲಿ | ಜೆನ್ ಕಥೆಗಳು

Zen stories : A monk set off on a long pilgrimage to find the Buddha. He devoted many years to his search until he finally reached the land where the Buddha was said to live. While crossing the river to this country the monk had unusual experience.
Story first published: Monday, June 4, 2012, 16:59 [IST]
X
Desktop Bottom Promotion