For Quick Alerts
ALLOW NOTIFICATIONS  
For Daily Alerts

ಹಿಂದೂ ದೇವರುಗಳನ್ನು ದಿನದ ಪ್ರಕಾರ ಪೂಜಿಸಿ

By Deepak M
|

ಇಡೀ ವಿಶ್ವದಲ್ಲಿ ವಾರದಲ್ಲಿ ಇರುವುದೇ ಏಳು ದಿನಗಳು. ಹಿಂದೂ ಪುರಾಣದ ಪ್ರಕಾರ ವಾರದ ಪ್ರತಿದಿನವನ್ನು ಒಂದು ದೇವರನ್ನು ಆರಾಧಿಸಲಾಗುತ್ತದೆ. ಭಕ್ತಾಧಿಗಳು ಆಯಾ ದಿನಕ್ಕೆ ಸಂಬಂಧಿಸಿದ ದೇವರನ್ನು ಆಯಾ ವಾರಗಳಲ್ಲಿ ಆರಾಧಿಸುತ್ತಾರೆ. ಒಂದೇ ದಿನ ಭಗವಂತನ ಎಲ್ಲಾ ಅವತಾರಗಳನ್ನು ಪೂಜಿಸುವುದು ಸಮಂಜಸವಲ್ಲ. ಇದಕ್ಕೆ ಕಾಲ ವ್ಯಯವಾಗುತ್ತದೆ.

ಅಲ್ಲದೆ ಈ ರೀತಿಯ ಪೂಜೆಯು ನಿಮಗೆ ಪುಣ್ಯವನ್ನು ಸಹ ತಂದು ಕೊಡುವುದಿಲ್ಲ. ಅದಕ್ಕೆ ನಮ್ಮ ಹಿರಿಯರು ಅದಕ್ಕೆ ಆದ ಪೂಜಾ ವಿಧಿವಿಧಾನಗಳ ಜೊತೆಗೆ ಇಂತಿಂಥಹ ವಾರಗಳಂದು ಈ ಪೂಜೆಗಳನ್ನು ಮಾಡಬೇಕು ಎಂದು ತಿಳಿಸಿದ್ದಾರೆ. ಉದಾಹರಣೆಗೆ, ಸೋಮವಾರದಂದು ಶಿವನ ಪೂಜೆಯನ್ನು ಮಾಡಲಾಗುತ್ತದೆ. ಮಂಗಳವಾರದಂದು ಹನುಮಂತನ ಪೂಜೆಯನ್ನು ಮಾಡಲಾಗುತ್ತದೆ. ಬುಧವಾರದಂದು ಗಣಪತಿಯನ್ನು ಪ್ರಾರ್ಥನೆ ಮಾಡಲಾಗುತ್ತದೆ.

ಈ ಎಲ್ಲಾ ವಿಚಾರಗಳನ್ನು ಶಿವಪುರಾಣದಲ್ಲಿ ವಿವರವಾಗಿ ತಿಳಿಸಲಾಗಿದೆ. ಹಾಗಾದರೆ ಯಾವ ವಾರಗಳಂದು ಯಾವ ದೇವರನ್ನು ಆರಾಧಿಸಬೇಕು ಎಂಬುದು ನಿಮ್ಮ ಸಂಶಯವೇ? ಏಕೆ ಆ ಸಂಶಯ ಬಿಡಿ. ಇಲ್ಲಿ ನಾವು ನಿಮಗಾಗಿ ಆ ಪಟ್ಟಿಯನ್ನು ನೀಡಿದ್ದೇವೆ ಓದಿಕೊಳ್ಳಿ. ವಿಶೇಷ ದಿನಗಳಂದು

ದೇವರನ್ನು ಆರಾಧಿಸುವುದರಿಂದ ನಿಮಗೆ ಮತ್ತಷ್ಟು ಯಶಸ್ಸು ಮತ್ತು ಆಧ್ಯಾತ್ಮಿಕತೆಯಲ್ಲಿ ಅನುಪಮವಾದ ಙ್ಞಾನೋದಯವು ನಿಮಗೆ ದೊರೆಯುತ್ತದೆ. ವಿಷ್ಣುವಾಗಿರಲಿ, ಈಶ್ವರನಾಗಿರಲಿ, ಲಕ್ಷ್ಮೀ ದೇವಿಯಾಗಿರಲಿ ಮತ್ತು ಸೂರ್ಯ ದೇವನಾಗಿರಲಿ ಯಾವ ದೇವರಾದರು ಸರಿ ಆ ದೇವರುಗಳನ್ನು ಅವರನ್ನು ಪೂಜೆ ಮಾಡಲು ನಿಗದಿಗೊಳಿಸಲಾಗಿರುವ ವಾರಗಳಂದು ಪೂಜಿಸುವುದರಿಂದ ವಿಶೇಷ ಫಲಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಮಹಾಭಾರತದ ಯುದ್ಧವನ್ನು ಒಂದು ನಿಮಿಷದಲ್ಲಿ ಮುಗಿಸಿಬಿಡುವವನ್ನಾಗಿದ್ದ ಯೋಧ

ಸೋಮವಾರ: ಈಶ್ವರ

ಸೋಮವಾರ: ಈಶ್ವರ

ಬಹುಶಃ ಸೋಮವಾರಗಳಂದು ಈಶ್ವರ ದೇವಸ್ಥಾನದ ಮುಂದೆ ಜನಜಂಗುಳಿಯನ್ನು ನೀವು ನೋಡಿರುತ್ತೀರಿ. ಏಕೆಂದರೆ ಸೋಮೇಶ್ವರ ಎಂದೂ ಸಹ ಕರೆಯಲ್ಪಡುವ ಪಾರ್ವತಿಪತಿಯ ನೆಚ್ಚಿನ ವಾರ ಸೋಮವಾರ. ಹಾಗಾಗಿ ಸೋಮವಾರಗಳಂದು ಈಶ್ವರನನ್ನು ಪೂಜಿಸಿ. ಅಂದು ಸ್ವಾಮಿಗೆ ಹಾಲು, ಅನ್ನ ಮತ್ತು ಸಕ್ಕರೆಯನ್ನು ನೈವೇದ್ಯವಾಗಿ ಅರ್ಪಿಸಿ. ಶಿವನಿಗೆ ಬಿಳಿಯ ಬಣ್ಣ ಇಷ್ಟ, ಹಾಗಾಗಿ ಈ ಪದಾರ್ಥಗಳನ್ನು ತಪ್ಪದೆ ಅರ್ಪಿಸಿ ಇದರಿಂದ ಶಿವನು ಸಂತುಷ್ಟನಾಗುವುದಲ್ಲದೆ, ನವಗ್ರಹಗಳಲ್ಲಿ ಒಬ್ಬನಾಗಿರುವ ಚಂದ್ರನ ಕೃಪೆಯು ನಿಮಗೆ ಲಭಿಸುತ್ತದೆ.

ಮಂಗಳವಾರ: ಹನುಮಂತ

ಮಂಗಳವಾರ: ಹನುಮಂತ

ವಾಯು ಪುತ್ರ ಹನುಮನನ್ನು ಮಂಗಳವಾರದಂದು ಆರಾಧಿಸಿ. ಈತ ಶಿವನ ಅವತಾರಗಳಲ್ಲಿ ಒಬ್ಬನೆಂದು, ಶಕ್ತಿಯನ್ನು ದಯಪಾಲಿಸುವ ದೇವನೆಂದು ಪರಿಗಣಿಸಲ್ಪಟ್ಟಿದ್ದಾನೆ. ಈತನನ್ನು ಪೂಜಿಸಿದರೆ ನಿಮಗೆ ರಾಮನ ಅನುಗ್ರಹವು ದೊರೆಯುತ್ತದೆ. ಕೆಂಪು ವಸ್ತ್ರ, ಕೆಂಪು ಹೂ, ಕೇಸರಿಯಿಂದ ಸ್ವಾಮಿಯನ್ನು ಪೂಜಿಸಿ. ಕೆಂಪು ಗ್ರಹವಾದ ಮಂಗಳನ ಕೃಪೆಗೆ ಪಾತ್ರರಾಗಿ.

ಬುಧವಾರ: ಗಣಪತಿ

ಬುಧವಾರ: ಗಣಪತಿ

ಬುಧವಾರ ಗಣಪತಿ ಬಪ್ಪಾ ಮೋರಿಯಾ ಎನ್ನಿ. ಬುಧವಾರ ಸರ್ವ ವಿಘ್ನಗಳನ್ನು ನಿವಾರಿಸು ದೇವ ಎಂದು ಗಣಪತಿಗೆ ಮೊರೆ ಹೋಗಿ. ಬುಧವಾರ ಗಣಪತಿಗೆ ಪ್ರಿಯವಾದ ವಾರ. ಹೋಗುವಾಗ 21 ಗರಿಕೆಯನ್ನು ಸ್ವಾಮಿಗೆ ತೆಗೆದುಕೊಂಡು ಹೋಗಿ. ಏಕೆಂದರೆ ಹಸಿರು ಬುಧ ಗ್ರಹವನ್ನು ಸಹ ಖುಷಿಪಡಿಸಿ, ನಿಮಗೆ ಸನ್ಮಂಗಲವನ್ನು ತರುತ್ತದೆ.

ಗುರುವಾರ: ವಿಷ್ಣು

ಗುರುವಾರ: ವಿಷ್ಣು

ವಿಷ್ಣುವನ್ನು ಗುರುವಾರಗಳಂದು ಆರಾಧಿಸುತ್ತಾರೆ. ಆದ್ದರಿಂದಲೇ ರಾಯರ ಮಠದಲ್ಲಿ ಗುರುವಾರಗಳಂದು ಸಾಮೂಹಿಕ ಸತ್ಯ ನಾರಾಯಣ ಸ್ವಾಮಿ ವ್ರತವನ್ನು ನಡೆಸಿದರೆ, ಸಾಯಿ ಬಾಬಾ ಹಾಗು ಇತರ ವಿಷ್ಣು ಆಲಯಗಳಲ್ಲಿ ಅಂದು ಸಾಮೂಹಿಕ ವಿಷ್ಣು ಸಹಸ್ರನಾಮವನ್ನು ಪಠಿಸಲಾಗುತ್ತದೆ. ಗುರುವಾರವು ವಿಷ್ಣುವಿಗೆ ಪ್ರಿಯವಾದ ವಾರ, ಇದರಿಂದ ವಿಷ್ಣು ಪತ್ನಿಯಾದ ಲಕ್ಷ್ಮೀದೇವಿಯು ಸಂತುಷ್ಟಳಾಗುತ್ತಾಳೆ. ಸ್ವಾಮಿಗೆ ಹಳದಿ ಪುಷ್ಪ, ನೈವೇಧ್ಯ ಮತ್ತು ವಸ್ತ್ರವನ್ನು ಅರ್ಪಿಸಿದರೆ ಗುರು ಗ್ರಹವೂ ನಿಮ್ಮನ್ನು ಅನುಗ್ರಹಿಸುತ್ತದೆ.

ಶುಕ್ರವಾರ : ದುರ್ಗಾದೇವಿ

ಶುಕ್ರವಾರ : ದುರ್ಗಾದೇವಿ

ದುರ್ಗಾ ದೇವಿಯನ್ನು ಮತ್ತು ಆಕೆಯ ಎಲ್ಲಾ ಅವತಾರಗಳನ್ನು ಶುಕ್ರವಾರದಂದು ಪೂಜಿಸಲಾಗುತ್ತದೆ. ಇದಲ್ಲದೆ ಆಕೆಯ ಎಲ್ಲಾ ಅವತಾರಗಳನ್ನು ಏಕ ಮಾತ್ರ ಶಕ್ತಿ ಸ್ವರೂಪಿಣಿಯಾಗಿ ಸಹ ಇಂದು ಪೂಜಿಸಲಾಗುತ್ತದೆ.ಪಂಚಾಮೃತವನ್ನು (ಹಾಲು, ತುಪ್ಪ, ಜೇನು, ಮೊಸರು ಮತ್ತು ಸಕ್ಕರೆ) ದೇವಿಗೆ ಅರ್ಪಿಸಿ. ಇದರಿಂದ ಶುಕ್ರ ಗ್ರಹವು ನಿಮಗೆ ಶುಕ್ರದೆಸೆಯನ್ನು ಕರುಣಿಸುತ್ತದೆ. ಅಷ್ಟೈಶ್ವರ್ಯಗಳು ನಿಮ್ಮದಾಗುತ್ತವೆ.

ಶನಿವಾರ: ಶನಿ ದೇವ

ಶನಿವಾರ: ಶನಿ ದೇವ

ಶನಿವಾರವು ಶನಿ ದೇವನ ಜೊತೆಗೆ ಸಂಬಂಧವನ್ನು ಹೊಂದಿದೆ. ಹೇಳಿ ಕೇಳಿ ಈ ದಿನದ ಅಧಿಪತಿಯಾದ ಶನಿ ದೇವ ಮತ್ತು ಶನಿಗ್ರಹವು ನಿಮ್ಮನ್ನು ಕರುಣಿಸಬೇಕು ಎಂದರೆ ಶನಿ ದೇವನನ್ನು ಪೂಜಿಸಿ. ಇನ್ನೂ ಕೆಲ ಭಕ್ತರು ಹನುಮಂತ ಮತ್ತು ಕಾಳಿಕಾ ದೇವಿಯನ್ನು ಸಹ ಪೂಜಿಸುತ್ತಾರೆ. ಇಂದು ಶನಿ ದೇವನಿಗೆ ಅಥವಾ ಆಂಜನೇಯನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ.

ಭಾನುವಾರ: ಸೂರ್ಯ ದೇವ

ಭಾನುವಾರ: ಸೂರ್ಯ ದೇವ

ನವಗ್ರಹಗಳ ಅಧಿಪತಿಯಾದ ಸೂರ್ಯ ದೇವನನ್ನು ಭಾನುವಾರದಂದು ಆರಾಧಿಸಿ. ಸೂರ್ಯದೇವನನ್ನು ಪೂಜಿಸುವುದು ತುಂಬಾ ಸರಳ. ಮುಂಜಾನೆ ಎದ್ದು ಸೂರ್ಯೋದಯಕ್ಕಿಂತ ಮೊದಲು ಸ್ನಾನ ಮಾಡಿ. ಸೂರ್ಯ ಉದಯವಾಗುವಾಗ ಗಾಯಿತ್ರಿ ಮಂತ್ರವನ್ನು ಪಠನೆ ಮಾಡಿ. ಇನ್ನೂ ಕೆಲವರು ಆದಿತ್ಯ ಹೃದಯ ಸ್ತೋತ್ರವನ್ನು ಸಹ ಪಠನೆ ಮಾಡುತ್ತಾರೆ.

English summary

Worship Hindu Gods Day Wise

In Hindu mythology, every day of the week is dedicated to one particular god. Devotees who believe in god worship particular lords every day. So, if you want to worship all avatras and forms of god in particular, you get one whole day to shower your devotion to the god! In short, every day of the week is dedicated to a particular god.
X
Desktop Bottom Promotion