For Quick Alerts
ALLOW NOTIFICATIONS  
For Daily Alerts

ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದು ಅಪಶಕುನವೇ?

By manu
|

ಇಂದಿನ ಯುವಜನತೆಗೆ ಹಿರಿಯರ ಮಾತೆಂದರೆ ಕೊಂಚ ಅಸಡ್ಡೆ ಹೆಚ್ಚು. ಹಿರಿಯರು ಹೇಳಿದ್ದನ್ನೆಲ್ಲಾ ಒಂದು ಕಿವಿಯಲ್ಲಿ ಕೇಳಿ ಇನ್ನೊಂದರಲ್ಲಿ ಬಿಡುವ ಜಾಯಮಾನ. ಮನೆಯಲ್ಲಿ ನಿರ್ವಹಿಸಬೇಕಾದ ಧಾರ್ಮಿಕ ಪದ್ಧತಿ ಮತ್ತು ಪರಂಪರೆಯ ಆಚರಣೆಯೆಂದರೆ ಕೊಂಚ ಆಲಸಿತನವೂ ಸಹ. ಆದರೆ ಹಿರಿಯರು ಏಕಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಕೊಂಚ ಮನನ ಮಾಡಿಕೊಂಡರೆ ಈ ವಿಷಯದ ಹಿಂದಿನ ಧಾರ್ಮಿಕ ಹಾಗೂ ವೈಜ್ಞಾನಿಕ ಸತ್ಯವನ್ನು ಅರಿಯಬಹುದು.

ಅಂತೆಯೇ ಒಂದು ವೇಳೆ ಹಿರಿಯರು ಉತ್ತರಕ್ಕೆ ಮುಖ ಮಾಡಿ ಮಲಗಬೇಡಿ ಎಂದು ಹೇಳಿದರೆ ಖಂಡಿತಾ ಅವರ ಮಾತನ್ನು ಅಲಕ್ಷಿಸಬೇಡಿ. ಏಕೆಂದರೆ ಈ ಭಂಗಿಯಲ್ಲಿ ಕೆಟ್ಟ ಕನಸುಗಳು ಬೀಳುವ ಮೂಲಕ ನಿಮ್ಮ ನೆಮ್ಮದಿಯನ್ನು ಕೆಡಿಸಬಹುದು. ಇದಕ್ಕೆ ಮುಖ್ಯ ಕಾರಣ ಭೂಮಿಯ ಆಯಸ್ಕಾಂತೀಯ ಶಕ್ತಿಯ ಅಲೆಗಳ ಮೂಲಕ ಪಡೆಯಬಹುದಾದ ಧನಾತ್ಮಕ ಶಕ್ತಿಯನ್ನು ಪಡೆಯದೇ ಹೋಗುವುದು. ರಕ್ತಸಂಚಾರವೂ ಏರುಪೇರಾಗಿ ನಿದ್ದೆಯೂ ಅರ್ಧಂಬರ್ಧವಾಗುವುದನ್ನು ಆಧುನಿಕ ಉಪಕರಣಗಳು ಸಾಬೀತುಪಡಿಸಿವೆ.

ಇದರಿಂದ ದೇಹದ ಚೈತನ್ಯ ಉಡುಗುವುದು, ಮರುದಿನದ ಕೆಲಸದಲ್ಲಿ ಅಥವಾ ಜೀವನದಲ್ಲಿ ಮುನ್ನುಗ್ಗಲು ಅವಶ್ಯವಿರುವ ಛಲ ಕಾಣೆಯಾಗುವುದು ಮೊದಲಾದವುಗಳನ್ನು ಕಂಡುಕೊಳ್ಳಲಾಗಿದೆ.ಹಿಂದೂ ಪುರಾಣಗಳ ಪ್ರಕಾರ ಗಣಪತಿಯ ತಲೆ ತುಂಡರಿಸಲ್ಪಟ್ಟ ಬಳಿಕ ಉತ್ತರ ದಿಕ್ಕಿನಿಂದ ಆನೆಯ ತಲೆಯನ್ನು ತಂದು ಜೋಡಿಸಲಾಗಿತ್ತು. ಆದ್ದರಿಂದ ಉತ್ತರ ದಿಕ್ಕಿನೆಡೆ ತಲೆ ಹಾಕಿ ಮಲಗುವುದು ಅಪಶಕುನ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಬನ್ನಿ, ಈ ಕಥೆಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ತಿಳಿಯೋಣ ಹಾಗೂ ಉತ್ತರದೆಡೆ ತಲೆಹಾಕಿ ಮಲಗದಿರಲು ಹಿರಿಯರು ಏಕಾಗಿ ಹೇಳುತ್ತಾರೆ ಎಂಬುದನ್ನು ಅರಿಯೋಣ..

ದೇವತೆ ಪಾರ್ವತಿ

ದೇವತೆ ಪಾರ್ವತಿ

ಪುರಾಣದ ಕಥೆಯ ಪ್ರಕಾರ ದೇವತೆ ಪಾರ್ವತಿ ಪವಿತ್ರ ಸ್ನಾನಕ್ಕಾಗಿ ಸ್ನಾನಗೃಹಕ್ಕೆ ಹೋಗುವ ಮೊದಲು ಗಣೇಶನನ್ನು ಬಾಗಿಲ ಬಳಿ ಕಾವಲಿಗೆ ನಿಲ್ಲಿಸಿ ಯಾರನ್ನೂ ಒಳಬಿಡದಂತೆ ಆಜ್ಞಾಪಿಸುತ್ತಾಳೆ. ಆ ಸಮಯದಲ್ಲಿ ಪಾರ್ವತಿಯನ್ನು ನೋಡಲು ಬಂದ ಶಿವ ಮನೆಯೊಳಗೆ ಹೋಗಲು ಯತ್ನಿಸಿದಾಗ ಗಣೇಶ ಆತನನ್ನು ತಡೆಯುತ್ತಾನೆ.

ಶಿವನೊಂದಿಗೆ ಗಣೇಶನ ಹಣಾಹಣಿ

ಶಿವನೊಂದಿಗೆ ಗಣೇಶನ ಹಣಾಹಣಿ

ಆದರೆ ಆತನೇ ಪಾರ್ವತಿಯ ಪತಿ ಎಂದು ಅರಿಯದ ಗಣೇಶ ಮಾತೆಗೆ ನೀಡಿದ ವಾಗ್ದಾನದಂತೆ ಶಿವನಿಗೆ ಪ್ರವೇಶ ನಿರಾಕರಿಸುತ್ತಾನೆ.

ಗಣೇಶನ ತಲೆದಂಡ

ಗಣೇಶನ ತಲೆದಂಡ

ಇತ್ತ ಪಾರ್ವತಿ ಸ್ನಾನ ಮುಗಿಸಿ ಹೊರಬಂದಾಗ ಪತಿ ಶಿವ ಮತ್ತು ಪುತ್ರ ಗಣೇಶನ ನಡುವೆ ಆಗುತ್ತಿರುವ ವಾಗ್ಯುದ್ದವನ್ನು ನೋಡುತ್ತಾಳೆ. ಜಗಳದಿಂದ ಸಿಟ್ಟಿಗೆದ್ದ ಶಿವ ಗಣೇಶನ ತಲೆ ನಿವಾರಿಸುವಂತೆ ತನ್ನ ಬಂಟರಿಗೆ ಆಜ್ಞಾಪಿಸುತ್ತಾನೆ.

ಪಾರ್ವತಿಯ ಕ್ರೋಧ

ಪಾರ್ವತಿಯ ಕ್ರೋಧ

ಆ ಪ್ರಕಾರ ಗಣೇಶನ ಶಿರವನ್ನು ಪ್ರತ್ಯೇಕಿಸಿದುದನ್ನು ಕಂಡ ಪಾರ್ವತಿ ಕ್ರೋಧಿಕ್ತಳಾಗುತ್ತಾಳೆ. ಈ ಕ್ರೋಧಾಗ್ನಿಯಲ್ಲಿ ಇಡಿಯ ವಿಶ್ವವನ್ನೇ ಧ್ವಂಸ ಮಾಡುವ ಸಂಕಲ್ಪತೊಡುತ್ತಾಳೆ. ಆದರೆ ತಕ್ಷಣ ಆಗಮಿಸಿದ ಬ್ರಹ್ಮದೇವರು ಆಕೆಯನ್ನು ಸಂತೈಸಿ ಆಕೆಯ ಕ್ರೋಧವನ್ನು ಕಡಿಮೆಗೊಳಿಸುತ್ತಾನೆ. ಪಾರ್ವತಿಯನ್ನು ಸಂತೈಸಲು ಶಿವ ತನ್ನ ಅನುಯಾಯಿಗಳಿಗೆ ಉತ್ತರ ದಿಕ್ಕಿನಲ್ಲಿ ತಲೆಹಾಕಿ ಮಲಗಿರುವ ಯಾವುದೇ ಜೀವಿಯ ತಲೆಯನ್ನು ತರಲು ಆಜ್ಞಾಪಿಸುತ್ತಾನೆ.

ಉತ್ತರ ದಿಕ್ಕಿನ ಮಹಿಮೆ

ಉತ್ತರ ದಿಕ್ಕಿನ ಮಹಿಮೆ

ಶಿವನ ಆಜ್ಞೆಯನ್ನು ಪಾಲಿಸಲು ತೆರಳಿದ ಅನುಯಾಯಿಗಳು ಉತ್ತರ ದಿಕ್ಕಿನತ್ತ ತೆರಳಿ ಈ ದಿಕ್ಕಿನತ್ತ ಮುಖಮಾಡಿ ಮಲಗಿರುವ ಜೀವಿಯನ್ನು ಹುಡುಕತೊಡಗುತ್ತಾರೆ.

ಆನೆಯ ತಲೆ

ಆನೆಯ ತಲೆ

ಹೀಗೇ ಹುಡುಕುತ್ತಿದ್ದವರಿಗೆ ಉತ್ತರ ದಿಕ್ಕಿನತ್ತ ಮುಖಮಾಡಿ ಮಲಗಿದ್ದ ಆನೆಯೊಂದನ್ನು ಕಾಣುತ್ತಾರೆ. ತಮಗೆ ಆಜ್ಞಾಪಿಸಿದಂತೆ ಆ ಆನೆಯ ತಲೆಯನ್ನು ಸಂಹರಿಸಿ ಶಿವನಿಗೆ ತಂದು ಕೊಡುತ್ತಾರೆ.

ಆನೆ ತಲೆಯ ಮೂಲಕ ಗಜಮುಖನಾದ ಗಣೇಶ

ಆನೆ ತಲೆಯ ಮೂಲಕ ಗಜಮುಖನಾದ ಗಣೇಶ

ಬಳಿಕ ಈ ತಲೆಯನ್ನು ಗಣೇಶನ ಮುಂಡದ ಮೇಲಿರಿಸಿದ ಶಿವ ಗಣೇಶನಿಗೆ ಜೀವ ಬರುವಂತೆ ಮಾಡುತ್ತಾನೆ. ಬಳಿಕ ಪಾರ್ವತಿಗೆ ಆಕೆಯ ಗಜಮುಖದ ಮಗನನ್ನು ಜನರು ಪ್ರಥಮವಾಗಿ ಪ್ರಾರ್ಥಿಸುತ್ತಾರೆ ಎಂಬ ವರ ನೀಡುತ್ತಾನೆ. ಇದರಂತೆ ಇಂದಿಗೂ ಗಜಮುಖನಿಗೇ ಪ್ರಥಮವಾಗಿ ಆರಾಧನೆ ಸಲ್ಲಿಸಲಾಗುತ್ತದೆ.

ನಿದ್ದೆಗೆ ಉತ್ತಮ ದಿಕ್ಕು ಯಾವುದು

ನಿದ್ದೆಗೆ ಉತ್ತಮ ದಿಕ್ಕು ಯಾವುದು

ಆದ್ದರಿಂದ ಹಿಂದೂ ಪುರಾಣಗಳ ಪ್ರಕಾರ ಎಡಮಗ್ಗುಲಲ್ಲಿ ಮಲಗಿ ಮುಖ ಪೂರ್ವಕ್ಕೆ ಅಥವಾ ಪಶ್ಚಿಮದ ಕಡೆ ನೋಡುವಂತೆ ಮಲಗುವುದು ಶ್ರೇಯಸ್ಕರ. ಈ ಭಂಗಿಯಲ್ಲಿ ರಕ್ತಸಂಚಾರ ಅತ್ಯುತ್ತಮವಾಗಿದ್ದು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ.

English summary

Why You Should Not Sleep Facing North As Per Hindu Mythology

You might have heard elders say that you should not sleep facing the North direction. Have you ever thought as to why you should not sleep facing the North direction? Well, today in this article, we shall discuss as to why you should not sleep facing the North. It is believed that if you sleep facing the North, you are sure to get bad dreams that can disturb your mind.
Story first published: Saturday, February 6, 2016, 16:53 [IST]
X
Desktop Bottom Promotion