For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದ ಪೂಜ್ಯನೀಯ ದೇವತೆ, ಗೋಮಾತೆ

By Manu
|

ಹಿಂದೂಗಳಿಗೆ ಗೋವೆಂದರೆ ಮಾತೆ, ದೇವತೆಯ ಸಮಾನ. ಗೋವಿನಲ್ಲಿ ಎಲ್ಲಾ ದೇವದೇವತೆಗಳಿದ್ದಾರೆ ಮತ್ತು ಗೋವು ಕೇಳಿದ್ದನ್ನು ಪರಿಪಾಲಿಸುತ್ತಾಳೆ ಎಂದು ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ. ಕಾಮಧೇನು ಎಂದರೆ ಬೇಡಿದನ್ನು ಕೊಡುವುದು ಎನ್ನುವ ಅರ್ಥವಿದೆ. ಈ ಕಾಮಧೇನು ಎನ್ನುವ ಪದದ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದೆ.

Why Is The Cow A Sacred Animal For The Hindus?

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಧೇನುನಾಮ್ ಆಸ್ಮಿ ಕಾಮಧುಕ ಎನ್ನುತ್ತಾನೆ. ಇದರರ್ಥ ಗೋವುಗಳಲ್ಲಿ ನಾನು ಕಾಮಧುಕ, ಬೇಡಿದನ್ನು ಕೊಡುವ ಗೋವು ಎಂದು. ಕಾಮಧುಕ ಎಂದರೆ ಕಾಮಧೇನು ಎಂದರ್ಥ. ಇದನ್ನೇ ಸುರಭಿ ಎನ್ನಲಾಗುತ್ತದೆ. ಹಾಗಾದರೆ ಸುರಭಿ ಯಾರು ಮತ್ತು ಏನು? ಭಗವಂತ ಶ್ರೀ ಕೃಷ್ಣನ ಶಕ್ತಿಯನ್ನೇ ಪಡೆಯಲು ಈ ಪ್ರಾಣಿಗೆ ಹೇಗೆ ಸಾಧ್ಯವಾಯಿತು? ಈ ಪ್ರಶ್ನೆಗಳಿಗೆ ವೇದವ್ಯಾಸರು ಬರೆದಿರುವ ಮಹಾಭಾರತದ ಅನುಶಾಸನ ಪರ್ವದಲ್ಲಿ ಉತ್ತರವನ್ನು ಕೊಟ್ಟಿದ್ದಾರೆ.

ಸುರಭಿ ಗೋವು ಅಂದರೇನು?
ಆಧ್ಯಾತ್ಮಕ ಲೋಕದಿಂದ ಹೊರಬಂದು ಎಲ್ಲಾ ಜೀವಗಳಿಗೆ ಲಾಭವನ್ನು ಉಂಟುಮಾಡಿದ್ದೇ ಸುರಭಿ ಗೋವು. ಸುರಭಿ ಗೋವಿನಿಂದಲೇ ಭಾರತದ ಗೋವುಗಳು ಹುಟ್ಟಿವೆ. ಇದರಿಂದಾಗಿ ಭಾರತದ ಗೋವುಗಳು ಪೂಜ್ಯನೀಯವಾಗಿದೆ. ಎಲ್ಲಾ ಸೃಷ್ಟಿಗಳಿಗೆ ಮಾತೆಯಾಗಿರುವ ಕಾರಣ ಗೋವನ್ನು ತುಂಬಾ ಪಾವಿತ್ರ್ಯವೆಂದು ಪರಿಗಣಿಸಲಾಗುತ್ತದೆ ಎನ್ನುವುದು ಧರ್ಮಗುರುಗಳ ಅಭಿಮತವಾಗಿದೆ. ಹಿಂದೂ ಧರ್ಮದಲ್ಲಿ ಗೋಮಾತೆಯ ಸಗಣಿಯ ಪ್ರಾಮುಖ್ಯತೆಯೇನು?

33 ಕೋಟಿ ದೇವತೆಗಳಿಗೂ ಗೋವು ಮಾತೆಯೆನ್ನುವುದು ಪುರಾಣಗಳಲ್ಲಿ ಉಲ್ಲೇಖವಿದೆ. ಗೋವನ್ನು ದೇವತೆಗಳ ದೇವತೆ ಎನ್ನುತ್ತಾರೆ. ಇದರಿಂದಾಗಿಯೇ ಸಾವಿರಾರು ವರ್ಷಗಳಿಂದಲೂ ಗೋವನ್ನು ಪೂಜ್ಯನೀಯವೆಂದು ಪರಿಗಣಿಸಲಾಗಿದೆ ಮತ್ತು ಗೋ ಮಾತೆಯನ್ನು ಪೂಜಿಸಲಾಗುತ್ತಿದೆ. ಗೋ ಮಾತೆಯ ಸೆಗಣಿ, ಮೂತ್ರ ಮತ್ತು ಹಾಲು ಅತೀ ಪಾವಿತ್ರ್ಯವೆಂದು ಪರಿಗಣಿಸಲಾಗಿದೆ. ಗೋವನ್ನು ಅದರ ಕರುವಿನಿಂದ ದೂರ ಮಾಡಬಾರದು. ಒಂದು ವೇಳೆ ಹೀಗೆ ಮಾಡಿದಲ್ಲಿ ಅದು ದೊಡ್ಡ ಪಾಪ ಎಂಬ ನಂಬಿಕೆಯಿದೆ.

ಪುರಾತನ ಕಾಲದಲ್ಲಿ ಸೆಗಣಿಯನ್ನು ಕೂಡ ಪೂಜಿಸಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಸೆಗಣಿ ಬಿಡಿ, ಗೋವಿಗೆ ಕೂಡ ಗೌರವ ಸಲ್ಲಿಸುವುದನ್ನು ಮರೆಯುತ್ತಿದ್ದಾರೆ. ಗೋವಿನ ಹಾಲನ್ನು ಪ್ರತಿಯೊಂದು ಹಿಂದೂಗಳು ತಮ್ಮ ಮನೆಯಲ್ಲಿ ಪವಿತ್ರವೆಂದು ಪರಿಗಣಿಸಿ ಬಳಸುತ್ತಾರೆ. ಹಿಂದೂಗಳು ಗೋಮಾತೆಯನ್ನು ಪೂಜಿಸಲು ಕಾರಣಗಳೇನು?

ಗೋವು ಎಷ್ಟು ಪರಿಶುದ್ಧ?
ಪುರಾತನ ಕಾಲದಿಂದಲೂ ಗೋವಿನ ಸೆಗಣಿಯನ್ನು ಪವಿತ್ರವೆಂದು ಕಾಣಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಹೆಚ್ಚಿನ ಹಿಂದೂಗಳು ತಮ್ಮ ಹಬ್ಬ ಹಾಗೂ ಇತರ ಕೆಲವು ಸಂದರ್ಭಗಳಲ್ಲಿ ಸೆಗಣಿಯನ್ನು ದೇವರ ಕೆಲಸಗಳಿಗೆ ಬಳಸುತ್ತಾರೆ. ಪುರಾಣಗಳಲ್ಲಿ ಇರುವಂತೆ ಮಲಗಿರುವ ಹಸುವನ್ನು ಎಬ್ಬಿಸಬಾರದು. ಇದು ಅದಕ್ಕೆ ಅಗೌರವ ತೋರಿಸಿದಂತೆ.


ಹಿಂದೂಗಳ ಮನೆಯಲ್ಲಿ ಹಾಲಿಗೂ ಪಾವಿತ್ರ್ಯತೆಯನ್ನು ಕೊಡಲಾಗಿದೆ. ಅತ್ಯಂತ ಸಾಧು ಸ್ವಭಾವದ ಮತ್ತು ಸುಂದರ ಗೋವುಗಳು ಅಗಾಧ ಶಕ್ತಿಯನ್ನು ಹೊಂದಿದೆ. ಇವುಗಳನ್ನು ಪೂಜಿಸಿದರೆ ನಮಗೆ ಪುಣ್ಯ ಹಾಗೂ ಎದುರಾಗುವಂತಹ ಸಂಕಷ್ಟಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ.
English summary

Why Is The Cow A Sacred Animal For The Hindus?

The cow is considered to be a sacred animal in Hinduism. Do you know why? Going through the scriptures of the Holy Book, Lord Krishna states in Srimad Bhagavad-Gita (Chapter 10, Verse 28): Dhenunam asmi kamadhuk, meaning, "Among cows, I am Kamadhuk, the wish-fulfilling cow." The term Kamadhuk means Kamadhenu, which is also known as Surabhi.
X
Desktop Bottom Promotion