For Quick Alerts
ALLOW NOTIFICATIONS  
For Daily Alerts

ಇಸ್ಲಾಮ್ ಧರ್ಮದಲ್ಲಿ “ಕಪ್ಪು ಶಿಲೆ” ಏಕೆ ಪವಿತ್ರ?

By Viswanath S
|

ವಿಶ್ವದಲ್ಲಿ ಪ್ರತಿಯೊಂದು ಧರ್ಮದಲ್ಲಿ ತನ್ನದೇ ಆದ ರಹಸ್ಯಗಳನ್ನು ಹೊಂದಿದೆ. ಒಂದು ನಿರ್ದಿಷ್ಟ ಧರ್ಮದ ಸಮಗ್ರ ವಿವರಗಳನ್ನು ತಿಳಿಯಲು ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಆದರೆ, ವಿಶ್ವದ ವಿವಿಧ ಧರ್ಮಗಳ ಪದ್ಧತಿಗಳು, ನಂಬಿಕೆಗಳು ಮತ್ತು ಆಚಾರಗಳು ಇವನ್ನೆಲ್ಲಾ ತಿಳಿಯಲು ಕುತೂಹಲ ಮತ್ತು ಆಸಕ್ತಿದಾಯಕವೂ ಹೌದು. ಈ ಧರ್ಮಗಳಲ್ಲಿ ಇಸ್ಲಾಮ್ ಧರ್ಮದ ವಿವರಗಳನ್ನು ತಿಳಿಯಲು ಜನಗಳಿಗೆ ಅಪಾರ ಆಸಕ್ತಿಯ ವಿಷಯವಾಗಿದೆ.

ಇತರ ಧರ್ಮಗಳ ಜನರಿಗೆ ಇಸ್ಲಾಮ್ ಧರ್ಮದಲ್ಲಿರುವ ಆಚರಣೆಗಳು ಬಹಳ ರಹಸ್ಯಕರವಾಗಿವೆ. ಈ ರಹಸ್ಯಗಳಲ್ಲಿ ಕಾಬಾದಲ್ಲಿರುವ "ಕಪ್ಪು ಶಿಲೆ" ಒಂದಾಗಿದೆ. ಮೆಕ್ಕಾದಲ್ಲಿರುವ ಭವ್ಯ ಮಸೀದಿಯ ಕಾಬಾದ ಪೂರ್ವ ಭಾಗದಲ್ಲಿ ಇದನ್ನು ಅಳವಡಿಸಲಾಗಿದೆ. ಮುಸ್ಲಿಮ್ ಜನಾಂಗದವರಿಗೆ ಈ "ಕಪ್ಪು ಶಿಲೆ" ಮಹತ್ತರ ಪವಿತ್ರವಾದದ್ದು ಮತ್ತು ಆಡಮ್ ಮತ್ತು ಈವ್ ಅವರ ಕಾಲದ್ದೆಂದು ನಂಬಲಾಗಿದೆ.

Why Is The Black Stone Held Sacred In Islam?

ಈ ಶಿಲೆ ಕಪ್ಪು ಬಣ್ಣದಲ್ಲಿದ್ದು ಇದರ ಮೇಲೆ ಒಂದು ಅಸ್ಪಷ್ಟವಾದ ಏರುಪೇರಿನ ಆಕಾರ ಕಂಡುಬರುತ್ತದೆ. ಅದನ್ನು ಒಂದು ಬೆಳ್ಳಿ ಚೌಕಟ್ಟಿನಲ್ಲಿ ಬೆಳ್ಳಿಯ ಮೊಳೆಗಳಿಂದ ಜೋಡಿಸಲ್ಪಟ್ಟಿದೆ. ಈ ಶಿಲೆಯ ಮೂಲ ಗಾತ್ರವು ಎಷ್ಟಿತ್ತೆಂಬುದು ಗೊತ್ತಿಲ್ಲವಾದರೂ ದಾಖಲಾದ ಅಳತೆಗಳು ಸಮಯ ಕಳೆಯುತ್ತದ್ದಂತೆ ಬದಲಾಗಿವೆ. ಇಸ್ಲಾಮಿಕ್ ಸಂಪ್ರದಾಯ ಮತ್ತು ನಂಬಿಕೆಗಳ ಪ್ರಕಾರ ಈ ಶಿಲೆ ಎಲ್ಲಿ ಸ್ಥಾಪಿತವಾಗಬೇಕೆಂದು ಆಡಮ್ ಮತ್ತು ಈವ್ ಇವರಿಗೆ ತೋರಿಸಲು ಸ್ವರ್ಗದಿಂದ ಬಿತ್ತೆಂದು ದಾಖಲಾಗಿದೆ. ಕೆಲವು ಸಿದ್ದಾಂತಗಳ ಪ್ರಕಾರ ಇದು ವಾಸ್ತವವಾಗಿ ಆಕಾಶದಿಂದ ಭೂಮಿಯ ಮೇಲೆ ಬಿದ್ದ ಉಲ್ಕಾ ಶಿಲೆ (Meteorite) ಎಂದಿದ್ದರೂ ಈ ಕಲ್ಪನೆಯು ಸಾಬೀತಾಗಿಲ್ಲ.

ಆದ್ದರಿಂದ ಇಸ್ಲಾಮ್ ಧರ್ಮದಲ್ಲಿ ಈ "ಕಪ್ಪು ಶಿಲೆಯ" ಪ್ರಾಮುಖ್ಯತೆ ಏನು ಮತ್ತು ಅದನ್ನು ಏಕೆ ಪವಿತ್ರ ಎಂದು ಹೇಳುತ್ತಾರೆ? ಇದರ ಬಗ್ಗೆ ಕಂಡುಹಿಡಿಯೋಣ ಬನ್ನಿ:

"ಕಪ್ಪು ಶಿಲೆಯ" ಇತಿಹಾಸ:
ಈ "ಕಪ್ಪು ಶಿಲೆ" ಪ್ರವಾದಿ ಮೊಹಮ್ಮದ್ ಉಪದೇಶ ಆರಂಭಿಸುವುದಕ್ಕಿಂತಾ ಬಹಳ ಮೊದಲೇ ಇತ್ತೆಂದು ನಂಬಲಾಗಿದೆ. ಪಂಡಿತರಗಳ ಪ್ರಕಾರ ಈ ಶಿಲೆಯನ್ನು ಹ್ಯೂಬಾಲ್ ಎಂಬುವ ನಬಾತಿಯನ್ ದೇವತೆಗೆ ಅರ್ಪಿಸಲಾಗಿತ್ತು. ಇತರ ಪಂಡಿತರಗಳ ಪ್ರಕಾರ ಇಸ್ಲಾಮ್ ಹುಟ್ಟುವ ಮೂರು ತಲೆಮಾರಿನ ಹಿಂದೆಯೇ ಕಾಬ ಎಂಬುದೇ ಸ್ವತಃ ಒಂದು ಹೆಣ್ಣು ದೇವತೆಯೆಂದು ನಂಬಿದ್ದರು. ಆದರೆ ಪ್ರವಾದಿ ಮೊಹಮ್ಮದ್ ಈ ಶಿಲೆಯನ್ನು ಕಾಬ ಗೋಡೆಯಲ್ಲಿ ಜೋಡಿಸಿದ್ದನೆಂದು ನಂಬಲಾಗಿದೆ. ಹಲವು ಶತಮಾನಗಳಲ್ಲಿ ಹಲವು ಬಾರಿ ಕಳ್ಳತನವಾಗಿ ಮತ್ತು ಸುಲಿಗೆಯ ಹಣಕ್ಕಾಗಿ ಅನೇಕ ರಾಜರುಗಳ ಆಡಳಿತಗೊಳ ಪಟ್ಟು ಈ ಶಿಲೆಗೆ ಬಹಳವಾಗಿ ಹಾನಿಯಾಯಿತು. ಮೂಲ ಶಿಲೆ ಒಡೆದು ಏಳು ತುಂಡುಗಳಾಯಿತು. ನಂತರ ಅಬ್ದ್ ಅಲ್ಲಾಃ ಜುಬೈರ್ ಎನ್ನುವವನು ಆ ತುಂಡುಗಳನ್ನು ಬೆಳ್ಳಿ ರಜ್ಜಿನಿಂದ ಪುನರ್‌ ಜೊಡಿಸಿದನು.

"ಕಪ್ಪು ಶಿಲೆಯ" ಪ್ರಾಮುಖ್ಯತೆ:
ಹಜ್ ಆಚರಣೆಯಲ್ಲಿ ಈ ಕಪ್ಪು ಶಿಲೆ ಪ್ರಮುಖ ಪಾತ್ರ ವಹಿಸುತ್ತದೆ. ಯಾತ್ರಿಗಳು ಕಾಬ ಸುತ್ತಲೂ ಏಳು ಬಾರಿ ವಿರೋಧ ದಿಕ್ಕಿನಲ್ಲಿ ಪ್ರದಕ್ಷಿಣೆ ಮಾಡಬೇಕು. ಯಾತ್ರಾರ್ತಿಗಳು ಆ ಏಳು ಬಾರಿಯಲ್ಲಿ ಪ್ರತಿ ಬಾರಿಯೂ ಆ ಕರಿ ಶಿಲೆಯನ್ನು ಚುಂಬಿಸುವ ಪ್ರಯತ್ನಮಾಡಬೇಕು. ಆದಾಗ್ಯೂ ಅತಿ ಹೆಚ್ಚು ಯಾತ್ರಾರ್ಥಿಗಳು ಸೇರುವುದರಿಂದ ಪ್ರತಿ ಬಾರಿಯೂ ಹತ್ತಿರ ಹೋಗಿ ಚುಂಬಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾತ್ರಾರ್ಥಿಗಳು ದೂರದಿಂದಲೇ ಶಿಲೆಯ ದಿಕ್ಕಿನಲ್ಲಿ ಚುಂಬಿಸುವಂತೆ ಮಾಡಿದರೆ ಸಾಕು. ಕಪ್ಪು ಬಣ್ಣವು ಅಗತ್ಯ ಆಧ್ಯಾತ್ಮಿಕ ನಿರ್ಲಿಪ್ತತೆಯ ಮಾಲ್ಯಗಳನ್ನು ಸಂಕೇತಿಸುತ್ತದೆ ಮತ್ತು ತಾನು ಎನ್ನುವ 'ಅಹಂ' ಅಥವ ಅಹಂಕಾರವನ್ನು ಬಿಟ್ಟು ಪ್ರಗತಿಯ ಹಾದಿಯಲ್ಲಿ ದೇವರ ಕಡೆಗೆ ಹೋಗುವುದಕ್ಕೆ ಸಾಧ್ಯವಾಗುತ್ತದೆ.

ಸುತ್ತಮುತ್ತಲಿನ ರಹಸ್ಯಗಳು:
ಈ ಕಪ್ಪು ಶಿಲೆಯನ್ನು ಮನುಷ್ಯನು ಮುಟ್ಟಿದರೆ ತಾನು ಮಾಡಿರುವ ಪಾಪಗಳನ್ನು ಹೀರಿಕೊಳ್ಳುವುದೆಂಬ ಪವಾಡ ಮಾಡುವ ಶಕ್ತಿಯಿದೆಯೆಂದು ಸಾಮಾನ್ಯ ನಂಬಿಕೆ. ಸಹಜವಾಗಿ ಈ ಶಿಲೆಯು ಸ್ವರ್ಗದಿಂದ ಬಿದ್ದಾಗ ಶುದ್ಧ ಮತ್ತು ಬೆರಗುಗೊಳಿಸುವ ಹೊಳಪಿತ್ತೆಂಬ ನಂಬಿಕೆ. ಆದರೆ ಕ್ರಮೇಣ ಮಾನವರ ಪಾಪಗಳನ್ನು ಹೀರಿಕೊಂಡು ಕಪ್ಪು ಬಣ್ಣಕ್ಕೆ ತಿರುಗಿತು. ಈ ಶಿಲೆಯ ಮೂಲ ಮತ್ತು ರಹಸ್ಯಗಳು ಇಂದೂ ನಿಗೂಢವಾಗಿಯೇ ಇವೆ ಹಾಗೂ ಅದರ ಬಗ್ಗೆ ಮುಂಬರುವ ಶತಮಾನಗಳಲ್ಲೂ ರಹಸ್ಯವಾಗಿಯೇ ಉಳಿಯುತ್ತದೆ. ಕೆಲವರು ಈ ಶಿಲೆಯು ಒಂದು ಉಲ್ಕಾ ಶಿಲೆಯೆಂದು ನಂಬಿದರೆ ಮತ್ತೆ ಕೆಲವರು ಅದು ಒಂದು ಹೆಣ್ಣಿನ ಪೇಗನ್ ಧರ್ಮದ ಸಂಕೇತದ ದೃಷ್ಟಿಯಲ್ಲಿ ನೋಡುತ್ತಾರೆ. ನಂಬಿದವರಿಗೆ ತಮ್ಮ ಪಾಪ ಕರ್ಮಗಳನ್ನು ತೆಗೆದುಕೊಳ್ಳುವುದಕ್ಕೆ ಒಂದು ವರವಾಗಿ ಭೂಮಿಗೆ ಬಂದಿದೆ ಎನ್ನುತ್ತಾರೆ.

English summary

Why Is The Black Stone Held Sacred In Islam?

Every religion has its own set of mysteries. It is not possible for anyone to know all the nitty-gritty details about a particular religion. So, what is the significance of this black stone in Islam and why is it held sacred? Let us find out.
X
Desktop Bottom Promotion