For Quick Alerts
ALLOW NOTIFICATIONS  
For Daily Alerts

ಶಿವನಿಗೇಕೆ ಶ್ರಾವಣ ಮಾಸವೆಂದರೆ ಅಚ್ಚು ಮೆಚ್ಚು?

By Deepak M
|

ಶ್ರಾವಣಮಾಸವು ಹಿಂದೂ ಪಂಚಾಂಗದಲ್ಲಿಯೇ ಅತ್ಯಂತ ಪವಿತ್ರವಾದ ಮಾಸವೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ಮಾಸದಲ್ಲಿ ಶಿವನು ಭೂಮಿಯ ಜೊತೆಗೆ ತನ್ನ ಅವಿನಾಭಾವ ಸಂಬಂಧವನ್ನು ತೋರಿದ್ದಾನೆ. ಹಾಗಾಗಿ ಈ ಮಾಸದಲ್ಲಿ ವ್ರತ ಮತ್ತು ಪೂಜೆಗಳಲ್ಲಿ ತೊಡಗಿಸಿಕೊಂಡು ಆತನನ್ನು ಆರಾಧಿಸಿದರೆ ಶಿವನ ಆಶೀರ್ವಾದ ಲಭಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ರಾವಣ ಮಾಸದ ಸೋಮವಾರಗಳು ಹೆಂಗಳೆಯರ ಪಾಲಿಗೆ ಅತ್ಯಂತ ಮುಖ್ಯವಾದುದಾಗಿದೆ. ಏಕೆಂದರೆ ಇವರು ತಮಗೆ ಅನುರೂಪನಾದ ವರ ಸಿಗಲೆಂದು ಮತ್ತು ಕುಟುಂಬದಲ್ಲಿ ಶಾಂತಿ ನೆಲೆಸಲೆಂದು ಶಿವನನ್ನು ಪ್ರಾರ್ಥಿಸುವ ಮಾಸ ಇದಾಗಿದೆ.

ಶ್ರಾವಣ ಮಾಸದ ಮಹತ್ವವನ್ನು ಅರಿತುಕೊಳ್ಳಿ

ಶ್ರಾವಣ ಮಾಸವು ಶಿವನ ಮೆಚ್ಚಿನ ಮಾಸವೆಂದೆ ಖ್ಯಾತಿ ಪಡೆದಿದೆ. ನಂಬಿಕೆಗಳ ಪ್ರಕಾರ ಶಿವನು ಶ್ರಾವಣ ಮಾಸದಲ್ಲಿ ಪಾರ್ವತಿ ದೇವಿಯೊಂದಿಗೆ ಮತ್ತೆ ಒಂದಾದನೆಂದು ಪುರಾಣ ಹೇಳುತ್ತದೆ. ಆದ್ದರಿಂದ ಅನುರೂಪನಾದ ಗಂಡ ಬೇಕೆಂದು ಕೋರುವ ಹೆಂಗಸರು ಶಿವನನ್ನು ಈ ತಿಂಗಳಿನಲ್ಲಿ ಆರಾಧಿಸುತ್ತಾರೆ ಮತ್ತು ಅವರಿಗೆ ಯೋಗ್ಯನಾದ ವರನನ್ನು ಪಡೆಯುತ್ತಾರೆ ಎಂಬ ಪ್ರತೀತಿ ಸಹ ಇದೆ. ಇದರ ಜೊತೆಗೆ ಶ್ರಾವಣ ಮಾಸವು ಏಕೆ ಶಿವನಿಗೆ ಅಚ್ಚು ಮೆಚ್ಚು ಎಂಬುದರ ಕುರಿತು ಈ ಅಂಕಣದಲ್ಲಿ ಹೆಚ್ಚಿನ ಮಾಹಿತಿಗಳನ್ನು ನೀಡಲಾಗಿದೆ ಓದಿಕೊಳ್ಳಿ.

ಹಾಗಾದರೆ ಯಾವ ಎಲ್ಲಾ ಅಂಶಗಳು ಶ್ರಾವಣವನ್ನು ಶಿವನಿಗೆ ಮೆಚ್ಚಿನ ಮೆಚ್ಚಿನ ಮಾಸವನ್ನಾಗಿ ಮಾಡಿದೆ? ನೀವು ಖಂಡಿತ ಇದರ ಕುರಿತಾಗಿ ಕುತೂಹಲ ಹೊಂದಿದ್ದೀರೆಂದು ನಮಗೆ ಗೊತ್ತು. ತಡಮಾಡದೆ ಮುಂದೆ ಇರುವ ಅಂಶಗಳನ್ನು ಓದಿ.

ಶ್ರಾವಣ ಮಾಸದ ವಿಶೇಷ: ಬೈದ್ಯನಾಥ ಶಿವನ ಕಥೆ

ಪಾರ್ವತಿ ದೇವಿ ಶಿವ ಮತ್ತೆ ಒಂದಾಗಿದ್ದು

ಪಾರ್ವತಿ ದೇವಿ ಶಿವ ಮತ್ತೆ ಒಂದಾಗಿದ್ದು

ದಂತಕತೆಗಳ ಪ್ರಕಾರ ಸತಿಯು ತನ್ನನ್ನು ತಾನು ಅಗ್ನಿಯಲ್ಲಿ ಸುಟ್ಟುಕೊಂಡ ಮೇಲೆ ಪಾರ್ವತಿ ದೇವಿಯಾಗಿ ಮರು ಅವತಾರವನ್ನು ಎತ್ತಿದಳು. ಆಗ ಆಕೆಯು ಶಿವನನ್ನು ಮದುವೆಯಾಗುವ ಸಲುವಾಗಿ ಘೋರ ತಪಸ್ಸನ್ನು ಆಚರಿಸಿದಳು. ಇದರಿಂದ ಸಂತುಷ್ಟನಾದ ಶಿವನು ಪಾರ್ವತಿಯನ್ನು ಮದುವೆಯಾಗಲು ಒಪ್ಪಿದನು. ನಂಬಿಕೆಗಳ ಪ್ರಕಾರ ಇವರಿಬ್ಬರು ಮದುವೆಯಾಗಿದ್ದು ಶ್ರಾವಣ ಮಾಸದಲ್ಲಿ. ಹೀಗೆ ಶಿವ ಪಾರ್ವತಿಯರು ಮತ್ತೆ ಒಂದಾದ ಮಾಸ ಇದಾಗಿರುವುದರಿಂದ ಶ್ರಾವಣ ಮಾಸಕ್ಕೆ ಅಷ್ಟು ಪ್ರಾಮುಖ್ಯತೆ ಬಂದಿದೆ. ಅದಕ್ಕೆ ಶ್ರಾವಣ ಮಾಸದಲ್ಲಿ ಮದುವೆಗಳು ಹೆಚ್ಚಿಗೆ ನಡೆಯುತ್ತವೆ.

ಶಿವನು ತನ್ನ ಅತ್ತೆ-ಮಾವನ ಮನೆಗೆ ಭೇಟಿ ನೀಡುವ ಮಾಸ

ಶಿವನು ತನ್ನ ಅತ್ತೆ-ಮಾವನ ಮನೆಗೆ ಭೇಟಿ ನೀಡುವ ಮಾಸ

ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಶಿವನು ತನ್ನ ಅತ್ತೆ- ಮಾವನ ಮನೆಗೆ ಭೇಟಿ ನೀಡುವ ಮಾಸ ಇದಾಗಿದೆ. ಅವರು ಅಪರಿಮಿತವಾದ ಪ್ರೀತಿ ಮತ್ತು ವಾತ್ಸಲ್ಯದಿಂದ ಶಿವನನ್ನು ಬರಮಾಡಿಕೊಳ್ಳಲು ಕಾಯುತ್ತಿರುತ್ತಾರಂತೆ. ಈ ಕಾರಣಕ್ಕಾಗಿಯೂ ಸಹ ಶಿವನಿಗೆ ಶ್ರಾವಣ ಮಾಸವೆಂದರೆ ಅತ್ಯಂತ ಪ್ರೀತಿ.

ಜಲಾಭಿಷೇಕ

ಜಲಾಭಿಷೇಕ

ಯಾವಾಗ ಶಿವನು ಕೈಲಾಸದಿಂದ ತನ್ನ ಅತ್ತೆ-ಮಾವನನ್ನು ನೋಡಲು ಇಳಿದು ಬರುತ್ತಾನೋ, ಆಗ ಆತನಿಗೆ ಅತ್ಯಂತ ಆದರದ ಸ್ವಾಗತವನ್ನು ನೀಡಲಾಗುತ್ತದೆಯಂತೆ. ಆತ ಭುವಿಗೆ ಇಳಿದು ಬರುವ ಸಂದರ್ಭವನ್ನು ಜಲಾಭಿಷೇಕದ ಮೂಲಕ ಆರಾಧಿಸಲಾಗುತ್ತದೆ. ಆದ್ದರಿಂದಲೇ ಶಿವಾಲಯಗಳಲ್ಲಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು ಇತ್ಯಾದಿಗಳಿಂದ ಅಭಿಷೇಕವನ್ನು ಮಾಡುತ್ತಾರೆ.

ಭೂಮಿಗೆ ಬರುವ ಭಗವಂತ

ಭೂಮಿಗೆ ಬರುವ ಭಗವಂತ

ಈ ಮಾಸದಲ್ಲಿ ಶಿವನು ತನ್ನ ಅತ್ತೆ- ಮಾವರನ್ನು ನೋಡಲು ಭೂಮಿಗೆ ಬರುತ್ತಾನೆ ಎಂಬ ಪ್ರತೀತಿ ಇರುವುದರಿಂದ ಶ್ರಾವಣದಲ್ಲಿ ಶಿವನನ್ನು ಭಕ್ತಾಧಿಗಳು ಭಕ್ತಿ ಭಾವಗಳಿಂದ ಆರಾಧಿಸಲಾಗುತ್ತದೆ. ಹೀಗೆ ಪೂಜಿಸುವ ಭಕ್ತಾಧಿಗಳು ಶಿವನು ಕೋರಿದ ವರಗಳನ್ನು ನೀಡಿ ಹರಸುತ್ತಾನೆ ಎಂಬ ಪ್ರತೀತಿ ಇದೆ.

ಕ್ಷೀರಸಾಗರ ಮಂಥನ

ಕ್ಷೀರಸಾಗರ ಮಂಥನ

ನಂಬಿಕೆಗಳ ಪ್ರಕಾರ ಶ್ರಾವಣ ಮಾಸದಲ್ಲಿಯೆ ಕ್ಷೀರಸಾಗರ ಮಂಥನ ನಡೆಯಿತು ಎಂಬ ಪ್ರತೀತಿ ಇದೆ. ದೇವತೆಗಳು ಅಮೃತವನ್ನು ಪಡೆದ ಮಾಸ ಇದಾಗಿರುವುದರಿಂದ ಈ ಮಾಸಕ್ಕೆ ವಿಶೇಷವಾದ ಮಹತ್ವ ಬಂದಿದೆ.

ಶಿವನು ಹಾಲಾಹಲವನ್ನು ಸೇವಿಸಿದ ಮಾಸ

ಶಿವನು ಹಾಲಾಹಲವನ್ನು ಸೇವಿಸಿದ ಮಾಸ

ಕ್ಷೀರಸಾಗರ ಮಂಥನದ ಸಮಯದಲ್ಲಿ ಉದ್ಭವಿಸಿದ ಭಯಾನಕ ಹಾಲಾಹಲದಿಂದ ಎಲ್ಲಾ ಜೀವಿಗಳಿಗು ಅಪಾಯವೊದಗುವ ಸಂದರ್ಭ ಬಂದಾಗ ಶಿವನು ಮಧ್ಯ ಪ್ರವೇಶಿಸಿ ಅದನ್ನು ಸೇವಿಸಿದನು. ಇದನ್ನು ಸೇವಿಸಿದ ನಂತರ ಶಿವನು ಮೂರ್ಛೆ ತಪ್ಪಿದನು. ಆಗ ದೇವತೆಗಳ ಸಲಹೆಯಂತೆ ಬ್ರಹ್ಮದೇವನು ಶಿವನಿಗೆ ಜಲಾಭಿಷೇಕವನ್ನು ಮಾಡಿ, ಹಲವಾರು ಗಿಡಮೂಲಿಕೆಗಳಿಂದ ಶಿವನಿಗೆ ಚಿಕಿತ್ಸೆ ನೀಡಿದನು. ಆಗ ಶಿವನು ಪ್ರಙ್ಞೆಗೆ ಮರಳಿದನು. ಇದರಿಂದಾಗಿಯೇ ಲಿಂಗದ ಮೇಲೆ ಜಲಾಭಿಷೇಕವನ್ನು ಮಾಡುವ ಪದ್ಧತಿ ಅನುಷ್ಟಾನಕ್ಕೆ ಬಂದಿತು.

ಮಹಾ ಯೋಗಿ

ಮಹಾ ಯೋಗಿ

ಶಿವನು ಈ ಮಾಸದಲ್ಲಿ ವಿಶ್ವದ ಶ್ರೇಷ್ಠ ಯೋಗಿಯೆಂದೆ ಪರಿಗಣಿಸಲ್ಪಡುವ ಶಿವನು ಯೋಗನಿದ್ರೆಗೆ ಹೋಗುವ ಸಮಯ. ಹಾಗಾಗಿಯೇ ಈಶ್ವರನಿಗೆ ಈ ಮಾಸ ಎಂದರೆ ಅತ್ಯಂತ ಪ್ರೀತಿ.

English summary

Why Is Shravan The Favourite Month Of Lord Shiva?

The month of Shravan has been considered one of the most auspicious months in Hindu calendar. During this month Lord Shiva is in close proximity to Earth and hence anyone who observes penance and prays to Him with full faith and devotion receives His blessings.
X
Desktop Bottom Promotion