For Quick Alerts
ALLOW NOTIFICATIONS  
For Daily Alerts

ಮದ್ಯಪಾನ ಸೇವನೆಯು ಅನೇಕ ಧರ್ಮಗಳಲ್ಲಿ ಏಕೆ ನಿಷೇಧಿಸಲ್ಪಟ್ಟಿದೆ?

By Super
|

ಸಮಸ್ತ ಜಗತ್ತನ್ನು ಆವರಿಸಿಕೊಂಡಿರುವ ಮಾಯೆಯ ಮೂರು ಗುಣಗಳಾದ ಸತ್ವ, ರಜ, ಮತ್ತು ತಮೋ ಗುಣಗಳು, ಈ ಜಗತ್ತಿನ ಭಾಗವಾಗಿರುವ ಪ್ರತಿಯೋರ್ವ ವ್ಯಕ್ತಿಯ ಮನದಲ್ಲಿ ಬೇರೆ ಬೇರೆ ಮಟ್ಟಗಳಲ್ಲಿ ನೆಲೆಗೊoಡಿರುತ್ತವೆ. ಸತ್ವ ಗುಣದ ಸ್ವರೂಪಗಳೆoದರೆ; ಜಯಶೀಲರಾಗಿರುವುದು (ದಕ್ಷತೆ), ಮಿತಿಯನ್ನು ದಾಟದಿರುವುದು (ಸಂಯಮ), ತ್ರಿಕರಣಪೂರ್ವಕ ಪರಿಶುದ್ಧತೆ, ಮತ್ತು ಮನಶ್ಶ್ಯಾoತಿ. ಮಾಯೆಯ ಸ್ವರೂಪದಿಂದ ಒಡಗೂಡಿದ ಭೋಗ ಮತ್ತು ಕಾಮನೆಗಳನ್ನು ಪಡೆಯಲು ಹಾತೊರೆಯುವಂತೆ ಮಾಡುವ ಮಾಯೆಯ ಗುಣವೇ ರಜೋಗುಣ.

ತಮೋಗುಣವು ಕೆಟ್ಟ ಸ್ವರೂಪದಿಂದ ಕೂಡಿದ್ದು, ಈ ಗುಣವು ಹೆಚ್ಚಾಗಿರುವವರಲ್ಲಿ ಕೋಪ, ದ್ವೇಷ, ದುರಹಂಕಾರ, ಹಾಗೂ ವಿನಾಶಕಾರೀ ಪ್ರವೃತ್ತಿಯನ್ನುoಟು ಮಾಡುತ್ತದೆ. ಓರ್ವ ವ್ಯಕ್ತಿಯು ತನ್ನ ಮನವನ್ನು ಭಗವಂತನಲ್ಲಿ ಸ್ಥಿರವಾಗಿ ನೆಲೆನಿಲ್ಲುವಂತೆ ಮಾಡಲು ಅವನಲ್ಲಿ ರಜ ಮತ್ತು ತಮೋಗುಣಗಳ ಮಟ್ಟವು ಕ್ಷೀಣ ಮಟ್ಟದಲ್ಲಿದ್ದು ಅವುಗಳನ್ನು ಸತ್ವ ಗುಣವು ಮೆಟ್ಟಿ ನಿಲ್ಲಬೇಕು.

WHY IS IT FORBIDDEN TO EAT MEAT, ALCOHOL, ONIONS, GARLIC IN MANY RELIGIONS?

ವಿವಿಧ ಬಗೆಯ ಆಹಾರವಸ್ತುಗಳು ಹಾಗೂ ಪಾನೀಯಗಳು ವ್ಯಕ್ತಿಯೋರ್ವನ ಮನಸ್ಸಿನ ಮೇಲೆ ಪ್ರಭಾವವನ್ನುoಟು ಮಾಡಬಲ್ಲವು ಹಾಗೂ ತನ್ಮೂಲಕ ಮನದಲ್ಲಿ ಅಡಕವಾಗಿರುವ ಸತ್ವ, ರಜ, ಹಾಗೂ ತಮೋಗುಣಗಳ ಮಟ್ಟವನ್ನು ಏರುಪೇರಾಗಿಸಬಲ್ಲವು. ಉದಾಹರಣೆಗೆ, ಮದ್ಯಪಾನವು ಸಂಯಮ ಅಥವಾ ಸಂಕೋಚ ಪ್ರವೃತ್ತಿಯನ್ನು ಹತ್ತಿಕ್ಕಿ ರಾಜಸಿಕ ಗುಣವಾದoತಹ ಕಾಮನೆಯನ್ನು ಕೆರಳಿಸಬಲ್ಲದು. ಅದೇ ರೀತಿ, ನೀರುಳ್ಳಿ, ಬೆಳ್ಳುಳ್ಳಿ, ಹಿಂಗು, ಮೊದಲಾದ ಆಹಾರವಸ್ತುಗಳು ಕೋಪದoತಹ ತಾಮಸೀ ಗುಣಗಳನ್ನು ಹೆಚ್ಚಿಸಬಲ್ಲವು.

ಹಿಂದೂ ಧರ್ಮವು ಮದ್ಯಪಾನವನ್ನು ನಿಷೇಧಿಸುತ್ತದೆಯೇ?

ವ್ಯಕ್ತಿಯೋರ್ವನ ಮನದಲ್ಲಿ ರಾಜಸಿಕ ಹಾಗೂ ತಾಮಸಿಕ ಗುಣಗಳು ವೃದ್ಧಿಗೊoಡಾಗ ಆತನ ಚಿತ್ತವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಆದ್ದರಿಂದಲೇ, ಈ ಸ್ಥಿತಿಯಲ್ಲಿ ವ್ಯಕ್ತಿಯೋರ್ವನಿಗೆ ಭಗವಂತನ ಕುರಿತು ಚಿಂತಿಸುವುದಾಗಲಿ, ಧ್ಯಾನಿಸುವುದಾಗಲಿ ಸಾಧ್ಯವಾಗುವುದಿಲ್ಲ. ಇವುಗಳ ಬದಲಿಗೆ ಸತ್ವ ಗುಣವು ವೃದ್ಧಿಯಾದಾಗ, ಭಗವಂತನ ಧ್ಯಾನವನ್ನೂ, ಭಕ್ತಿಪೂರ್ವಕವಾದ ಉಪಾಸನೆಯನ್ನೂ ಕೈಗೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದಲೇ, ಭಗವದ್ಭಕ್ತರು ತಮ್ಮ ಮನಸ್ಸಿನಲ್ಲಿ ಯಾವಾಗಲೂ ರಾಜಸಿಕ ಹಾಗೂ ತಾಮಸಿಕ ಗುಣಗಳನ್ನು ಹತ್ತಿಕ್ಕುವಂತೆ ಮಾಡಬೇಕು ಹಾಗೂ ಸಾತ್ವಿಕ ಮನಸ್ಥಿತಿಯನ್ನು ಕಾಯ್ದುಕೊಳ್ಳಬೇಕು.

ಪ್ರತಿಯೋರ್ವ ವ್ಯಕ್ತಿಯೂ ಸಹ, ರಸನೇಂದ್ರಿಯವನ್ನೂ ಒಳಗೊಂಡಂತೆ, ತನ್ನೆಲ್ಲಾ ಇಂದ್ರಿಯಗಳನ್ನು ನಿಯoತ್ರಣದಲ್ಲಿಟ್ಟುಕೊಳ್ಳಬೇಕು ಹಾಗೂ ಅವು ಪರಿಶುದ್ಧವಾಗಿರುವಂತೆ ಎಚ್ಚರದಿಂದಿರಬೇಕು. ಹೀಗೆ ಮಾಡುವುದರಿಂದ ಚಿತ್ತ ಶುದ್ದಿ ಹಾಗೂ ಭಾವಶುದ್ಧಿಯು ಉಂಟಾಗುತ್ತದೆ. ಕಾಯಾ, ವಾಚಾ, ಹಾಗೂ ಮನಸಾ ಪರಿಶುದ್ಧವಾಗಿರುವುದರ ಮೂಲಕ ವ್ಯಕ್ತಿಯೋರ್ವನು ದೇವರನ್ನು ಸoಪ್ರೀತಗೊಳಿಸಬಹುದು. ಇದರರ್ಥವೇನೆoದರೆ, ನಮ್ಮ ಮನಸ್ಸು, ನಮ್ಮ ನಡೆ, ಮತ್ತು ನಮ್ಮ ನುಡಿಗಳು ಸ್ವಚ್ಚವಾಗಿರಬೇಕು.

English summary

WHY IS IT FORBIDDEN TO EAT MEAT, ALCOHOL, ONIONS, GARLIC IN MANY RELIGIONS?

The three qualities of Maya (satva, rajas, and tamas) exist in varying levels within one's mind. Various foods and drink can influence the state of one's mind and can therefore manipulate the levels of satva, rajas and tamas.
Story first published: Thursday, September 18, 2014, 11:18 [IST]
X
Desktop Bottom Promotion