For Quick Alerts
ALLOW NOTIFICATIONS  
For Daily Alerts

ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

By Jaya subramanaya
|

ಹಿಂದೂ ಧರ್ಮದಲ್ಲಿರುವ ಪವಿತ್ರ ತ್ರಿಮೂರ್ತಿಗಳ ಬಗ್ಗೆ ನೀವು ಕೇಳಿರುತ್ತೀರಿ ತಾನೇ...? ಹೆಚ್ಚು ಶಕ್ತಿಯುತ ದೇವರುಗಳಾದ ಬ್ರಹ್ಮ, ವಿಷ್ಣು ಮಹೇಶ್ವರರನ್ನೇ ತ್ರಿಮೂರ್ತಿಗಳೆಂಬುದಾಗಿ ಕರೆಯುತ್ತಾರೆ. ಈ ಮೂವರಲ್ಲಿ ಶಿವ ಮತ್ತು ವಿಷ್ಣುವನ್ನು ಲೋಕದಲ್ಲಿ ಹೆಚ್ಚು ಪೂಜಿಸುತ್ತಾರೆ. ಆದರೆ ಬ್ರಹ್ಮ ದೇವರ ಪೂಜೆಯನ್ನು ಯಾವುದೇ ಹಿಂದೂ ಸಮಾರಂಭಗಳಲ್ಲಿ ಮಾಡುವುದಿಲ್ಲ...!ಯಾವುದೇ ನಿರ್ದಿಷ್ಟ ದಿನವನ್ನು ಬ್ರಹ್ಮನಿಗಾಗಿ ಮೀಸಲಿಟ್ಟಿಲ್ಲ.

ಅಂತೆಯೇ ಯಾವುದೇ ದೇವಸ್ಥಾನವನ್ನು ಈ ದೇವರು ಹೊಂದಿಲ್ಲ. ಯಾವುದೇ ಮೂರ್ತಿಯೂ ಇಲ್ಲ. ನಿಜಕ್ಕೂ ಇದು ಆಶ್ಚರ್ಯಕರವಾಗಿದ್ದರೂ ಏಕೆಂಬುದು ನಿಮಗೆ ಗೊತ್ತೇ?

Why Is Brahma Not Worshipped?

ಸೃಷ್ಟಿಕರ್ತನೆಂದೇ ಪರಿಗಣಿತನಾಗಿ ಎಲ್ಲೆಡೆಯೂ ಮಾನ್ಯತೆಯನ್ನು ಬ್ರಹ್ಮನು ಪಡೆದುಕೊಂಡಿದ್ದಾರೆ. ಭೂಮಿಯಲ್ಲಿರುವ ಜೀವಿಗಳು ಬ್ರಹ್ಮನ ರಚನೆಯಾಗಿದೆ. ಜ್ಞಾನದ ದೇವತೆಯಾಗಿರುವ ಬ್ರಹ್ಮನು ವೇದಗಳನ್ನು ಸೃಷ್ಟಿಸಿದವರಾಗಿದ್ದಾರೆ, ಅದೂ ನಾಲ್ಕು ತಲೆಗಳಿಂದ ವೇದಗಳ ಸೃಷ್ಟಿಯಾಗಿದೆ ಎಂಬ ಮಾತೂ ಇದೆ. ಇಷ್ಟೆಲ್ಲಾ ಮಹಿಮೆಗಳನ್ನು ಹೊಂದಿರುವ ಬ್ರಹ್ಮ ದೇವರನ್ನು ಯಾರೂ ಪೂಜಿಸುತ್ತಿಲ್ಲ. ಹಾಗಿದ್ದರೆ ಇದಕ್ಕೆ ಕಾರಣವಾಗಿರುವ ಅಂಶಗಳನ್ನು ನಿಮಗೆ ತಿಳಿದುಕೊಳ್ಳಬೇಕು ಎಂದಾದಲ್ಲಿ ಕೆಳಗಿನ ಸ್ಲೈಡರ್‎ಗಳಲ್ಲಿ ನಾವು ನೀಡುತ್ತಿರುವ ಮಾಹಿತಿಯನ್ನು ಓದಿ. ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಶಿವನ ಶಾಪ
ದಂತಕಥೆಗಳ ಪ್ರಕಾರ, ಬ್ರಹ್ಮ ಮತ್ತು ವಿಷ್ಣು ತಮ್ಮಲ್ಲಿ ಯಾರು ದೊಡ್ಡವರು ಎಂಬ ವಾದಕ್ಕೆ ನಿಂತರು. ನಮ್ಮಿಬ್ಬರಲ್ಲಿ ಯಾರು ಹೆಚ್ಚು ಸಮರ್ಥರು ಎಂಬುದನ್ನು ಕಂಡುಕೊಳ್ಳಬೇಕೆಂಬ ವಿಚಾರಕ್ಕೆ ಅವರ ಚರ್ಚೆ ನಡೆಯಿತು. ಶಿವ ದೇವರು ಈ ವಾದದ ಮಧ್ಯಸ್ಥಿಕೆಯನ್ನು ವಹಿಸಿದರು. ಶಿವನು ಅತಿ ದೊಡ್ಡ ಲಿಂಗ ಸ್ವರೂಪಕ್ಕೆ ತಮ್ಮನ್ನು ಬದಲಿಸಿಕೊಂಡರು. (ಶಿವನ ಶಿಶ್ನದ ಸಂಕೇತ) ಬೆಂಕಿಯಿಂದ ಈ ಲಿಂಗವನ್ನು ಸೃಷ್ಟಿಸಿದ್ದರು.

ಇದು ಸ್ವರ್ಗದಿಂದ ಭೂಗತ ಲೋಕದವರೆಗೆ ವಿಸ್ತಾರವನ್ನು ಪಡೆದುಕೊಂಡಿತ್ತು. ಲಿಂಗವು ತನ್ನ ಕೊನೆಯನ್ನು ಬ್ರಹ್ಮ ಮತ್ತು ವಿಷ್ಣುವಲ್ಲಿ ಯಾರು ಹುಡುಕುತ್ತಾರೋ ಅವರುಗಳೇ ಶ್ರೇಷ್ಟರು ಎಂಬುದಾಗಿ ಗುರುತಿಸಲ್ಪಡುತ್ತಾರೆ ಎಂಬುದಾಗಿ ತಿಳಿಸಿತು.

ಶಿವ ಮತ್ತು ವಿಷ್ಣು ಇಬ್ಬರೂ ಈ ಪಂಥಕ್ಕೆ ಒಪ್ಪಿ ಲಿಂಗದ ಕೊನೆಯನ್ನು ಅನ್ವೇಷಿಸಲು ತೊಡಗಿದರು. ವರ್ಷಗಳವರೆಗೆ ಇವರು ಅನ್ವೇಷಣೆಯನ್ನು ನಡೆಸಿದರೂ, ಲಿಂಗವು ಕೊನೆಯನ್ನು ಹೊಂದಿಲ್ಲ ಎಂಬುದನ್ನು ಅರಿತುಕೊಂಡರು. ತ್ರಿಮೂರ್ತಿಗಳಲ್ಲಿ ಶಿವನೇ ಶ್ರೇಷ್ಟ ಎಂಬ ಸತ್ಯವನ್ನು ವಿಷ್ಣುವು ಮನವರಿಕೆ ಮಾಡಿಕೊಂಡರು. ಪುರಾಣದಲ್ಲಿ ಬಚ್ಚಿಟ್ಟ ಸತ್ಯ- ಭಗವಾನ್ ಶಿವನ ಜನ್ಮ ರಹಸ್ಯ!

ಆದರೆ ಬ್ರಹ್ಮನು ಶಿವನನ್ನೇ ಕೆಳಕ್ಕಿಳಿಸುವ ಯೋಜನೆಗೆ ತೊಡಗಿಕೊಂಡರು. ಕೊನೆಯನ್ನು ಹುಡುಕುವ ಅನ್ವೇಷಣೆಯಲ್ಲಿ ಅವರಿದ್ದಾಗ, ಲಿಂಗದ ಮೇಲ್ಭಾಗದಲ್ಲಿದ್ದ ಕೇತಕಿ ಹೂವಿನ ಬಳಿ ಬ್ರಹ್ಮನು ಸಮೀಪಿಸಿದರು. ಶಿವನಿಗಿಂತಲೂ ಮುನ್ನವೇ ಲಿಂಗದ ಮೇಲ್ಭಾಗವನ್ನು ಬ್ರಹ್ಮನು ಏರಿದ್ದಾಗಿ ಮತ್ತು ತುದಿಯನ್ನು ಕಂಡಿರುವಂತೆ ಸಾಕ್ಷಿ ಹೇಳಲು ಕೇತಕಿ ಹೂವಿಗೆ ತಿಳಿಸಿದರು. ಕೇತಕಿ ಇದಕ್ಕೆ ಒಪ್ಪಿಕೊಂಡಿತು.

ಶಿವನಿಗಿಂತ ಮುನ್ನ, ಬ್ರಹ್ಮನು ಕೊನೆಯನ್ನು ಕಂಡಿದ್ದಾರೆ ಎಂಬುದಾಗಿ ಕೇತಕಿಯು ಸುಳ್ಳು ಸಾಕ್ಷಿಯನ್ನು ಹೇಳಿತು. ಈ ಸುಳ್ಳಿನಿಂದ ಶಿವನು ಕೋಪೋದ್ರಿಕ್ತನಾದರು. ಯಾವುದೇ ಮಾನವನಿಂದ ಬ್ರಹ್ಮನು ಪೂಜಿಸಲ್ಪಡಬಾರದು ಎಂಬುದಾಗಿ ಶಾಪವನ್ನಿತ್ತು, ಯಾವುದೇ ಹಿಂದೂ ಕಾರ್ಯಗಳಲ್ಲಿ ಕೇತಕಿ ಹೂವನ್ನು ಬಳಸಬಾರದು ಎಂಬುದಾಗಿ ಶಾಪವಿತ್ತರು. ಇದರಿಂದಾಗಿ ಬ್ರಹ್ಮನು ಯಾರಿಂದಲೂ ಪೂಜಿಸಲ್ಪಡುತ್ತಿಲ್ಲ.

ಸರಸ್ವತಿಯ ಶಾಪ
ಇನ್ನೊಂದು ದಂತಕಥೆಯ ಪ್ರಕಾರ, ಬ್ರಹ್ಮನ ಜನನದ ನಂತರ, ಸರಸ್ವತಿಯನ್ನು ಅವರು ಸೃಷ್ಟಿಸಿದರು. ಆಕೆಯನ್ನು ಸೃಷ್ಟಿಸಿದೊಡನೆ ಆಕೆಯ ಸೌಂದರ್ಯಕ್ಕೆ ಬ್ರಹ್ಮನು ಮರುಳಾಗುತ್ತಾರೆ. ಇಂದ್ರಿಯ ಸುಖದ ಆಸೆಯಿಂದ ಹೊರಬರುವುದಕ್ಕಾಗಿ ಸರಸ್ವತಿಯು ಬ್ರಹ್ಮ ಬಯಕೆಯನ್ನು ತಿರಸ್ಕರಿಸುತ್ತಾರೆ ಮತ್ತು ಅವರ ಕಾಮುಕ ಬಯಕೆಯಿಂದ ತಪ್ಪಿಸಿಕೊಳ್ಳಲು ತಮ್ಮ ರೂಪವನ್ನು ಬದಲಾಯಿಸಿಕೊಳ್ಳುತ್ತಾರೆ. ಆದರೆ ಆತ ಹಿನ್ನಡೆಯುವುದಿಲ್ಲ.

ಕೊನೆಗೆ, ಆಕೆ ತನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದೇ, ಭೂಮಿಯಲ್ಲಿರುವ ಯಾರಿಂದಲೂ ಬ್ರಹ್ಮನು ಪೂಜಿಸಲ್ಪಡಬಾರದು ಎಂಬ ಶಾಪವನ್ನು ನೀಡುತ್ತಾರೆ. ಬ್ರಹ್ಮನು ಸೃಷ್ಟಿಕರ್ತ ಎಂಬುದನ್ನು ಹೊರತುಪಡಿಸಿ ಅವರನ್ನು ಭೂಮಿಯಲ್ಲಿರುವ ಯಾರೂ ಕೂಡ ಪೂಜಿಸುವುದಿಲ್ಲ. ಬ್ರಹ್ಮನ ಕಾಮವು ಮಾನವೀತೆಯ ಪತನವನ್ನು ಸೂಚಿಸುತ್ತದೆ. ಹಿಂದೂ ಧರ್ಮದಲ್ಲಿ, ಮೂಲಭೂತ ಆಸೆಗಳು ಮೋಕ್ಷ ಮಾರ್ಗದ ಅಡಚಣೆ ಎಂಬುದಾಗಿ ನಂಬಲಾಗಿದೆ. ಆದರೆ ಸೃಷ್ಟಿಕರ್ತನೇ ಮೂಲಭೂತ ಆಸೆಗಳಿಗೆ ಒಳಗಾಗಿ ಅವನತಿಯನ್ನು ಕಂಡುಕೊಂಡಿದ್ದಾರೆ.

English summary

Why Is Brahma Not Worshipped?

Lord Brahma is the creator. All the living beings on this Earth are said to be originated from Brahma. He is the God of wisdom and all the four Vedas are believed to have originated from His four heads. In spite of all these credentials, Lord Brahma is not worshipped by anyone. If you want to find out the reason, then read on.
X
Desktop Bottom Promotion