For Quick Alerts
ALLOW NOTIFICATIONS  
For Daily Alerts

ಮಂಗಳವಾರ ಕೂದಲು ಕತ್ತರಿಸುವುದು ಅಪಶಕುನವೇ?

ದೇಶದ ಎಲ್ಲಾ ಕ್ಷೌರಿಕರಿಗೆ ಮಂಗಳವಾರ ರಜೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವಾರ ಕುಜ ಅಥವಾ ಮಂಗಳ ಗ್ರಹ ಅಧಿಪತ್ಯದಲ್ಲಿದ್ದು ಇದು ಅಪಶಕುನವಾಗಿದೆ.

By Super Admin
|

ಏನೇ ಆಗಲಿ, ಮಂಗಳವಾರ ಕ್ಷೌರ ಮಾಡಿಸಿಕೊಳ್ಳಬೇಡಿ ಎಂದು ಕೆಲವರು ಕುಹಕವಾಡುತ್ತಾರೆ. ಏಕೆಂದರೆ ದೇಶದ ಎಲ್ಲಾ ಕ್ಷೌರಿಕರಿಗೆ ಮಂಗಳವಾರ ರಜೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳವಾರ ಕುಜ ಅಥವಾ ಮಂಗಳ ಗ್ರಹ ಅಧಿಪತ್ಯದಲ್ಲಿದ್ದು ಇದು ಅಪಶಕುನವಾಗಿದೆ. ಒಂದು ನಂಬಿಕೆಯ ಪ್ರಕಾರ ಮನುಷ್ಯರ ದೇಹದ ಶಕ್ತಿಯ ಒಂದು ಭಾಗ ಕೂದಲಿನಲ್ಲಿ ಕೇಂದ್ರೀಕೃತವಾಗಿದ್ದು ಕೇಶವನ್ನು ಕತ್ತರಿಸಿಕೊಳ್ಳುವುದರಿಂದ ದೇಹದ ಶಕ್ತಿ ನಷ್ಟವಾಗಿ ಕುಜನ ಪ್ರಭಾವ ಬಹಳವೇ ಆಗುತ್ತದೆ.

ಮಂಗಳವಾರವೇ ಏಕೆ ಎಂಬ ಪ್ರಶ್ನೆಗೆ ಯಾರಲ್ಲಿಯೂ ಸ್ಪಷ್ಟವಾದ ಉತ್ತರ ದೊರಕುವುದಿಲ್ಲ. ಸಾಮಾನ್ಯಜನರಿರಲಿ, ಕ್ಷೌರಿಕರಿಗೇ ತಾವೇಕೆ ಮಂಗಳವಾರವೇ ರಜೆ ತೆಗೆದುಕೊಳ್ಳುತ್ತೇವೆ ಎಂದು ಗೊತ್ತಿರುವುದಿಲ್ಲ. ಇದಕ್ಕೆ ಯಾವುದೇ ವೈಜ್ಞಾನಿಕವಾದ ಆಧಾರವಿಲ್ಲ. ಆದರೆ ನೂರಾರು ವರ್ಷಗಳಿಂದ ಈ ನಂಬಿಕೆ ಭಾರತೀಯರಲ್ಲಿ ಬೆಳೆದು ಬಂದಿರುವುದು ಮಾತ್ರ ಸತ್ಯ. ಇದಕ್ಕೆ ಕಾರಣಗಳೇನು ಎಂಬುದನ್ನು ಕೆಳಗಿನ ಶೋ ಮೂಲಕ ನೀಡಲಾಗಿದೆ.

ದುರ್ಗೆ ಮತ್ತು ಲಕ್ಷ್ಮಿಯರ ದಿನ

ದುರ್ಗೆ ಮತ್ತು ಲಕ್ಷ್ಮಿಯರ ದಿನ

ಭಾರತದ ಹಲವು ರಾಜ್ಯಗಳಲ್ಲಿ ಮಂಗಳವಾರ ಹಣಕಾಸಿನ ವಹಿವಾಟು, ಅಂದರೆ ಹಣ ಹೊರಹೋಗುವ ಯಾವುದೇ ವ್ಯವಹಾರವನ್ನು ಮಾಡುವುದಿಲ್ಲ. ಮಂಗಳವಾರ ಹಣದ ದೇವಿಯಾದ ಲಕ್ಷ್ಮಿ ಮನೆಯಿಂದ ಹೊರಹೋದರೆ ಮತ್ತೆ ಮನೆಗೆ ಬರುವುದಿಲ್ಲ ಎಂಬ ನಂಬಿಕೆಯ ಕಾರಣ ವ್ಯಾಪಾರ ಕಡಿಮೆ ಇರುತ್ತದೆ. ಕೇಶಮುಂಡನದಿಂದ ದುರ್ಗೆ ಅಪ್ರಸನ್ನಳಾಗುತ್ತಾಳೆ ಎಂದೂ ಕೆಲವರು ನಂಬುತ್ತಾರೆ.

ಮಂಗಳವಾರ ಆದಾಯದ ದಿನ

ಮಂಗಳವಾರ ಆದಾಯದ ದಿನ

ಮನೆಯಲ್ಲಿ ಲಕ್ಷ್ಮಿ ನೆಲೆಸಿರಬೇಕಾದರೆ ಮಂಗಳವಾರವನ್ನು ಆದಾಯದ ದಿನವನ್ನಾಗಿಸಬೇಕೇ ಹೊರತು ಖರ್ಚಿನ ದಿನವನ್ನಾಗಿ ಅಲ್ಲ ಎಂದು ಭಕ್ತರು ನಂಬುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಂಗಳವಾರ ಆದಾಯದ ದಿನ

ಮಂಗಳವಾರ ಆದಾಯದ ದಿನ

ಈ ದಿನ ವ್ಯಾಪಾರ ಇರಲಿ, ದಾನವನ್ನೂ ನೀಡುವ ಮೂಲಕ ಆ ಧನದ ಮೂಲಕ ಬರಬಹುದಾಗಿದ್ದ ಅನುಗ್ರಹವನ್ನು ಬೇರೆಯವರಿಗೆ ದಾಟಿಸುತ್ತಿದ್ದೇವೆ ಎಂಬ ನಂಬಿಕೆ ಬೆಳೆದುಬಂದಿದೆ. ಆದ್ದರಿಂದ ಈ ದಿನ ಏನನ್ನೂ ಖರ್ಚು ಮಾಡದಿರುವ ಜನರು ಕ್ಷೌರವನ್ನೂ ಮಾಡಿಸಿಕೊಳ್ಳುವುದಿಲ್ಲ.

ಮನೆಯ ಕಸವನ್ನು ಎಸೆಯುವುದಿಲ್ಲ

ಮನೆಯ ಕಸವನ್ನು ಎಸೆಯುವುದಿಲ್ಲ

ಕ್ಷೌರದ ಮೂಲಕ ಮುಖದ ಸ್ವಚ್ಛತೆ ಬಿಡಿ, ಮನೆಯ ಸ್ವಚ್ಛತೆಯನ್ನು ಮಾಡಿದರೂ ಕಸವನ್ನು ಎಸೆಯುವುದಿಲ್ಲ. ಆ ದಿನ ಸಂಗ್ರಹವಾಗಿದ್ದ ಕಸವನ್ನು ಮೂಲೆಯಲ್ಲಿಯೇ ಇಟ್ಟು ಮರುದಿನ ಎಸೆಯುತ್ತಾರೆ.

ಮನೆಯ ಕಸವನ್ನು ಎಸೆಯುವುದಿಲ್ಲ

ಮನೆಯ ಕಸವನ್ನು ಎಸೆಯುವುದಿಲ್ಲ

ಅಲ್ಲದೇ ಈ ಸ್ವಚ್ಛತೆ ಕೇವಲ ಮೇಲುಮೇಲಿಂದ ಆಗಿರುತ್ತದೆಯೇ ಹೊರತು ಜೇಡರ ಬಲೆ ಮೊದಲಾದವುಗಳನ್ನು ತೆಗೆಯಲಾಗುವುದಿಲ್ಲ.

ಅಪಶಕವುನ

ಅಪಶಕವುನ

ಮಂಗಳವಾರದಂದು ಅನಿವಾರ್ಯವಲ್ಲದ ಖರ್ಚು ಮಾಡುವುದು, ಕಸ ಎಸೆಯುವುದು, ಕೂದಲು ಕತ್ತರಿಸುವುದು, ದಾನ ನೀಡುವುದು, ಮನೆಯ ವಸ್ತುಗಳನ್ನು ಹೊರಗೆ ನೀಡುವುದು ಮೊದಲಾದವು ಅಪಶಕುನ ಎಂದು ಭಾರತದ ಬಹಳಷ್ಟು ಕಡೆ ನಂಬಲಾಗಿದೆ.

ಮಂಗಳವಾರದ ಕೇಶಮುಂಡನದಿಂದ ಆಯಸ್ಸಿನಲ್ಲಿ ಕಡಿತ

ಮಂಗಳವಾರದ ಕೇಶಮುಂಡನದಿಂದ ಆಯಸ್ಸಿನಲ್ಲಿ ಕಡಿತ

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಮಂಗಳವಾರದಂದು ಕೇಶಮುಂಡನ ಮಾಡಿಸಿಕೊಂಡವರ ಆಯಸ್ಸಿನಲ್ಲಿ ಎಂಟು ತಿಂಗಳು ಕಡಿಮೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಂಗಳವಾರದ ಕೇಶಮುಂಡನದಿಂದ ಆಯಸ್ಸಿನಲ್ಲಿ ಕಡಿತ

ಮಂಗಳವಾರದ ಕೇಶಮುಂಡನದಿಂದ ಆಯಸ್ಸಿನಲ್ಲಿ ಕಡಿತ

ಮಾನವ ದೇಹದಲ್ಲಿ ಕುಜನು ಕೇಶ ಮತ್ತು ರಕ್ತದಲ್ಲಿ ವಿರಾಜಮಾನನಾಗಿದ್ದು ಮಂಗಳವಾರದ ಕೇಶಮುಂಡನ ಮತ್ತು ಗಡ್ಡ ತೆಗೆಯುವುದರಿಂದ ರಕ್ತಸಂಬಂಧಿ ಕಾಯಿಲೆಗಳು ಎದುರಾಗುತ್ತವೆ ಎಂಬ ನಂಬಿಕೆಯೂ ಇದೆ.

ಕುಜನ ಮೇಲೆ ಋಣಾತ್ಮಕ ಪರಿಣಾಮ

ಕುಜನ ಮೇಲೆ ಋಣಾತ್ಮಕ ಪರಿಣಾಮ

ಕೆಲವು ಜ್ಯೋತಿಷಿಗಳ ಪ್ರಕಾರ ಕೂದಲ ಬಣ್ಣ ಕಪ್ಪಗಾಗಿರುವುದರಿಂದ ಕಪ್ಪುಬಣ್ಣದ ಅಧಿಪತಿಯಾದ ಶನಿಯೂ ನಮ್ಮ ಕೂದಲುಗಳ ಅಧಿಪತಿಯಾಗಿದ್ದಾನೆ. ಶನಿಯು ಕುಜನ ಪ್ರಭಾವವನ್ನು ತಡೆದು ಕುಜನ ಋಣಾತ್ಮಕ ಪರಿಣಾಮವನ್ನು ಕಡಿಮೆಗೊಳಿಸುತ್ತಾನೆ.

ಕುಜನ ಮೇಲೆ ಋಣಾತ್ಮಕ ಪರಿಣಾಮ

ಕುಜನ ಮೇಲೆ ಋಣಾತ್ಮಕ ಪರಿಣಾಮ

ಆದರೆ ಮಂಗಳವಾರ ಕೂದಲು ಕತ್ತರಿಸುವುದರಿಂದ ಶನಿಯ ರಕ್ಷಣೆಯನ್ನು ಕಡಿಮೆ ಮಾಡಿದಂತಾಗಿ ಕುಜನ ಪ್ರಭಾವ ಹೆಚ್ಚಾಗುತ್ತದೆ. ಆದರೆ ಈ ವಿಷಯವನ್ನು ದೃಢೀಕರಿಸಲು ಯಾವುದೇ ಪುರಾವೆ ಇಲ್ಲದ ಕಾರಣ ಈ ಮಾಹಿತಿಯನ್ನು ಖಡಾಖಂಡಿತವೆಂದು ಪರಿಗಣಿಸಲು ಸಾಧ್ಯವಿಲ್ಲ.

ಹಿರಿಯರಿಗೆ ತೋರುವ ಅನಾದರ

ಹಿರಿಯರಿಗೆ ತೋರುವ ಅನಾದರ

ಕೆಲವರು ವಾದಿಸುವ ಪ್ರಕಾರ ಮಂಗಳವಾರದಂದು ಕೂದಲು ಕತ್ತರಿಸಿಕೊಳ್ಳುವುದರಿಂದ ಹಿರಿಯರಿಗೆ ಅನಾದರ ತೋರಿದಂತಾಗುತ್ತದೆ. ಅದು ಹೇಗೆಂದರೆ ಹಿರಿಯರು ತಮ್ಮ ಹಿರಿಯರಿಂದ ನಡೆಸಿಕೊಂಡು ಬಂದ ಪದ್ಧತಿಯ ಪ್ರಕಾರ ಮಂಗಳವಾರದಂದು ಕೇಶಮುಂಡನ ಮಾಡದೇ ಇರುವ ನಂಬಿಕೆಯನ್ನು ಕಿರಿಯರು ಉಲ್ಲಂಘಿಸಿದಂತಾಗುತ್ತದೆ.

ಹಿರಿಯರಿಗೆ ತೋರುವ ಅನಾದರ

ಹಿರಿಯರಿಗೆ ತೋರುವ ಅನಾದರ

ಆದ್ದರಿಂದ ಅವರು ಮಂಗಳವಾರ ಕೂದಲು ಕತ್ತರಿಸಿಕೊಳ್ಳುವುದು ಅಥವಾ ಶೇವ್ ಮಾಡಿಕೊಳ್ಳುವುದು ಬೇಡ ಎಂದೇ ಹೇಳುತ್ತಾರೆ. ಒಂದು ವೇಳೆ ಇದಕ್ಕೂ ಹೊರತಾಗಿ ಕೇಶಮುಂಡನ ಮಾಡಿಸಿಕೊಂಡರೆ ಹಿರಿಯರ ಮಾತಿಗೆ ಬೆಲೆ ನೀಡದಿದ್ದಂತಾಗುತ್ತದೆ. ಆದರೆ ಈ ನಂಬಿಕೆಗೂ ಯಾವುದೇ ಸ್ಪಷ್ಟ ಆಧಾರವಿಲ್ಲ.

English summary

Why haircut are prohibited on Tuesday

According to astrology lord for Tuesday is Kuja or mars it is a bad planet and causes bad effects. There is one belief that the power of humans is stored in hair. That power will stops effect of planets on us. So if we cut hair on Tuesdays our power will be reduced and the bad effect of kuja will be more on us. This is the reason....
X
Desktop Bottom Promotion