For Quick Alerts
ALLOW NOTIFICATIONS  
For Daily Alerts

ದೀಪಗಳಿಂದಲೇ ದೀಪಾವಳಿ ಹಬ್ಬಕ್ಕೆ ಮೆರುಗು ಏಕೆ?

By Super
|

ದೀಪಾವಳಿ ಹಬ್ಬವು ಹಿಂದೂ ಜನಾಂಗದವರಿಗೆ ಒಂದು ಅಪಾರ ಪ್ರಸಿದ್ಧ ಹಬ್ಬ. ಅಕ್ಟೋಬರ್ ಅಥವ ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಭಾರತೀಯ ಹಬ್ಬಗಳಲ್ಲಿ ಇದು ಒಂದಾಗಿದೆ. ದೀಪಾವಳಿ ಅಂದರೆ 'ದೀಪಗಳ ಸಾಲು" ಎಂದರ್ಥ. ಆದ್ದರಿಂದ ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ. ದೀಪಾವಳಿ ಸಮಯದಲ್ಲಿ ಪ್ರತಿ ಮನೆಯಲ್ಲಿ ಎಣ್ಣೆ ದೀಪಗಳು, ಮೇಣದ ಬತ್ತಿಗಳು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಹಚ್ಚಿ ಅಲಂಕರಿಸುತ್ತಾರೆ.

ಸಾಂಪ್ರದಾಯಿಕವಾಗಿ ಬಹಳಷ್ಟು ಮನೆಗಳಲ್ಲಿ ಹತ್ತಿಯಿಂದ ತಯಾರಿಸಿದ ಬತ್ತಿಗಳನ್ನು ಮಣ್ಣಿನ ಹಣತೆಯಲ್ಲಿಟ್ಟು ಬೆಳಗುತ್ತಾರೆ. ಆದಾಗ್ಯೂ ಬದಲಾಗುತ್ತಿರುವ ಈ ಆಧುನಿಕ ಕಾಲದಲ್ಲಿ ಮಣ್ಣಿನ ಹಣತೆಗಳನ್ನು ಮೇಣದ ಬತ್ತಿಗಳಿಂದ ಬದಲಾಯಿಸಲ್ಪಟ್ಟಿದೆ. ಆದರೂ ಬೆಳಕಿನಹಬ್ಬದ ಕಲ್ಪನೆಯೇನೂ ಬದಲಾಗದೇ ಉಳಿದಿದೆ. ಹಿಂದೂ ಜನಾಂಗದವರು ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಏಕೆ ಬೆಳಗುತ್ತಾರೆ ಎಂಬುವುದಕ್ಕೆ ಕಾರಣಗಳೇನು ಎಂದು ಯೋಚಿಸಿದ್ದೀರಾ? ಯಾಕೆಂಬುದನ್ನು ನೋಡೋಣ ಬನ್ನಿ:

Why Do Hindus Light Lamps During Diwali?

ದೀಪಗಳನ್ನು ಬೆಳಗುವ ಹಿಂದಿರುವ ಪುರಾಣದ ಕಥೆ
ಭಾರತದ ಉತ್ತರ ಭಾಗದಲ್ಲಿ ಪ್ರಸಿದ್ಧ ಕಥೆಯೊಂದರಂತೆ ಹಿಂದೆ ಶ್ರೀ ರಾಮನು ಪತ್ನಿ ಮತ್ತು ತಮ್ಮನೊಡನೆ 14 ವರ್ಷಗಳ ಕಾಲ ವನವಾಸ ಮುಗಿಸಿಕೊಂಡು ಅಯೋಧ್ಯೆಗೆ ಮರಳಿ ಬಂದ ಸಮಯವೆಂದು ಆಚರಿಸುತ್ತಾರೆ. ತಮ್ಮ ರಾಜನು ಮರಳಿ ಬಂದ ಸಮಯವನ್ನು ಸಾಂಪ್ರದಾಯಿಕವಾಗಿ ದೀಪಗಳಿಂದ ಬೆಳಗುತ್ತಾರೆ ಮತ್ತು ಹೀಗಾಗಿ ದೀಪಗಳನ್ನು ಬೆಳಗುವ ಸಂಪ್ರದಾಯವು ಮುಂದುವರಿದಿದೆ.

ಭಾರತದ ದಕ್ಷಿಣ ಭಾಗದಲ್ಲಿ ಜನರು ಕುಖ್ಯಾತ ರಾಕ್ಷಸನಾಗಿದ್ದ ನರಕಾಸುರನನ್ನು ದುರ್ಗಾ ದೇವಿಯು ಇದೇ ಸಮಯದಲ್ಲಿ ಸಂಹಾರ ಮಾಡಿದ ವಿಜಯವನ್ನು ಆಚರಿಸಲು ದೀಪಗಳನ್ನು ಬೆಳಗುತ್ತಾರೆ. ಆದ್ದರಿಂದ ದಕ್ಷಿಣ ಭಾರತದಲ್ಲಿ ಜನರು ' ಕತ್ತಲೆ ಸಾಗಿ ಬೆಳಕುಬರುವ ಹಬ್ಬ' ಅಂದರೆ 'ದುಷ್ಟ ಶಕ್ತಿಯ ಮೇಲಿನ ವಿಜಯ' ವನ್ನು ಆಚರಿಸಲು ನರಕಚತುರ್ದಶಿಯಂದು ದೀಪಗಳನ್ನು ಬೆಳಗುತ್ತಾರೆ. ಕಾಜು ಬರ್ಫಿ: ದೀಪಾವಳಿಗೆ ಸ್ಪೆಷಲ್ ರೆಸಿಪಿ

ದೀಪಗಳನ್ನು ಬೆಳಗುವುದರಲ್ಲಿರುವ ಮಹತ್ವ
ಹಿಂದೂ ಧರ್ಮದಲ್ಲಿ ದೀಪ ಒಂದು ಮಹತ್ವವುಳ್ಳ ವಿಷಯ ಯಾಕೆಂದರೆ ಅದು ಪವಿತ್ರತೆ, ಒಳ್ಳೆಯತನ ಮತ್ತು ಶಕ್ತಿ ಇವುಗಳ ಸಂಕೇತವಾಗಿದೆ. ಬೆಳಕಿದೆಯೆಂದರೆ ಕತ್ತಲೆ ಮತ್ತು ದುಷ್ಟ ಶಕ್ತಿಗಳ ಇರುವುದಿಲ್ಲ ಎನ್ನುವ ನಂಬಿಕೆ. ಅಮಾವಾಸ್ಯೆಯ ರಾತ್ರಿ ಎಲ್ಲೆಡೆಯಲ್ಲೂ ಸಂಪೂರ್ಣ ಕತ್ತಲೆ ಇರುವಾಗ ಜನರು ಲಕ್ಷಾಂತರ ದೀಪಗಳನ್ನು ಬೆಳಗಿ ಕತ್ತಲನ್ನು ತೊಡೆದುಹಾಕಲು ದೀಪಾವಳಿಯನ್ನು ಆಚರಿಸುತ್ತಾರೆ. ದುಷ್ಟ ಶಕ್ರಿಗಳು ಮತ್ತು ಅವುಗಳ ಪಡೆಗಳು ಕತ್ತಲಲ್ಲಿ ಸಕ್ರಿಯವಾಗುತ್ತಾರೆಂಬ ನಂಬಿಕೆ ಜನರಿಗೆ ಇದೆ.

ಆದ್ದರಿಂದ ದುಷ್ಟಶಕ್ತಿಗಳನ್ನು ದುರ್ಬಲಗೊಳಿಸಲು ಮನೆಯ ಪ್ರತಿಯೊಂದು ಮೂಲೆಯಲ್ಲೂ ದೀಪಗಳನ್ನು ಬೆಳಗುತ್ತಾರೆ. ವ್ಯಕ್ತಿಯ ಅಂತರಿಕ ಆಧ್ಯಾತ್ಮಿಕ ಬೆಳಕು ಹೊರಗೂ ಸೂಚಿಸಬೇಕೆಂಬ ಸಂದೇಶವನ್ನು ಸಾರಲು ಪ್ರತಿ ಮನೆಯ ಬಾಗಿಲ ಹೊರಗೆ ದೀಪಗಳನ್ನು ಬೆಳಗುತ್ತಾರೆ. ಒಂದು ದೀಪದಿಂದ ಹಲವಾರು ದೀಪಗಳನ್ನು ತನ್ನ ಬೆಳಕಿಗೆ ಧಕ್ಕೆಯಾಗದಂತೆ ಬೆಳಗಲು ಸಮರ್ಥವಾಗಿದೆ. ಆದ್ದರಿಂದ ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಬೆಳಗುವುದು ಆಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲಾ ಮನುಷ್ಯರಿಗೆ ಗಮನಾರ್ಹವಾಗಿ ಅನ್ವಯಿಸುತ್ತದೆ.

English summary

Why Do Hindus Light Lamps During Diwali?

Diwali is a very popular Hindu festival. It is one of the most important Indian festivals which is either celebrated in the month of October or November. Diwali literally means 'row of lamps'. So, it is understandable that lamps play the most important role in this festival.
Story first published: Tuesday, October 21, 2014, 16:25 [IST]
X
Desktop Bottom Promotion