For Quick Alerts
ALLOW NOTIFICATIONS  
For Daily Alerts

ರಾಮನ ಹೆಜ್ಜೆ ಗುರುತು ಸೀತೆ ಲಕ್ಷ್ಮಣರಿಗೆ ಪಾವನ ಏಕೆ?

By Super
|

ರಾಮಾಯಣವನ್ನು ಓದಿದ ಮೇಲೆ ಅಥವಾ ಕೇಳಿದ ಮೇಲೆ ಒಂದು ವಿಚಾರ ನಮಗೆ ಮತ್ತೆ ಮತ್ತೆ ಅರ್ಥವಾಗುತ್ತದೆ. ಅದು ರಾಮ ಎಲ್ಲಿಯೇ ಹೋದರು ಸೀತೆ ಮತ್ತು ಲಕ್ಷ್ಮಣರು ಆತನ ಹಿಂದೆಯೇ ಹೋಗುತ್ತಿದ್ದರು ಎಂದು. ರಾಮ ಎಲ್ಲಿಯೇ ಹೋದರು ಇವರು ಆತನ ಹಿಂದೆ ಅಲ್ಲಿ ಹಾಜರಿರುತ್ತಿದ್ದರು ಹಾಗು ಜನರು ಸಹ ಇವರನ್ನು ಬರ ಮಾಡಿಕೊಳ್ಳಲು ಮತ್ತು ಅವರಿಗೆ ಆತಿಥ್ಯ ನೀಡಲು ಹಾಗೂ ಭೇಟಿ ಮಾಡಲು ಕಾಯುತ್ತ ಕುಳಿತಿರುತ್ತಿದ್ದರು ಎಂದು ನಮಗೆ ತಿಳಿದು ಬರುತ್ತದೆ.

ಆದರೂ ಒಂದು ವಿಚಾರ ನಮಗೆ ತಿಳಿಯುತ್ತದೆ. ಅದೇನೆಂದರೆ ಸೀತೆ ಮತ್ತು ಲಕ್ಷ್ಮಣ ಇಬ್ಬರೂ ರಾಮನ ಹಿಂದೆ ಹೋದರೆ ಹೊರತು, ಅಪ್ಪಿ-ತಪ್ಪಿ ಸಹ ಆತನ ಮುಂದೆ ನಡೆಯಲಿಲ್ಲ, ಯಾವಾಗಲು ಇವರು ರಾಮನನ್ನೆ ಹಿಂಬಾಲಿಸಿದರು. ವಿಚಿತ್ರ ಎನಿಸಿದರು ಇದು ಸತ್ಯ. ಇದಕ್ಕೆ ಕಾರಣ ಅವರಲ್ಲಿ ಇದ್ದ ನಂಬಿಕೆಯೇ ಕಾರಣ, ಅದೇ ಅವರನ್ನು ಹೀಗೆ ಮಾಡಿಸಿತ್ತು. ಹಾಗಾದರೆ ಯಾವ ನಂಬಿಕೆ ಮತ್ತು ಆಚಾರ ಸೀತೆ ಮತ್ತು ಲಕ್ಷ್ಮಣರನ್ನು ಎಂದೆಂದಿಗು ರಾಮನ ಹಿಂದೆಯೇ ಹೋಗುವಂತೆ ಮಾಡಿತ್ತು? ಎಂಬುದನ್ನು ನೋಡೋಣ.

Why did Sita and Lakshman always walk behind Lord Rama?

ಪ್ರಯಾಣ ಮಾಡುವಾಗ ಸೀತೆಯು ರಾಮನ ಹಿಂದೆಯೇ ನಡೆದುಕೊಂಡು ಬರುತ್ತಿದ್ದಳು. ಹೀಗೆ ಬರುವಾಗ ಆಕೆ ಸುಮ್ಮನೆ ಬರುತ್ತಿರಲಿಲ್ಲ, ಸೀತೆ ಅಪ್ಪಿ-ತಪ್ಪಿ ಸಹ ರಾಮನ ಹೆಜ್ಜೆ ಗುರುತುಗಳನ್ನು ತುಳಿಯಲು ಹೋಗುತ್ತಿರಲಿಲ್ಲ. ಇದಕ್ಕಾಗಿ ಆಕೆಯು ನಡೆಯುವಾಗ ರಾಮನ ಹೆಜ್ಜೆ ಗುರುತುಗಳ ನಡುವೆಯೇ ಹೆಜ್ಜೆ ಇರಿಸಿ ನಡೆದುಕೊಂಡು ಬರುತ್ತಿದ್ದಳು. ಇದರ ಜೊತೆಗೆ ಲಕ್ಷ್ಮಣನು ಇವರಿಬ್ಬರ ಹಿಂದೆ ನಡೆದುಕೊಂಡು ಬರುತ್ತಿದ್ದನು. ಆತನು ಸಹ ರಾಮ-ಸೀತೆ ಇಬ್ಬರ ಹೆಜ್ಜೆ ಗುರುತುಗಳನ್ನು ತುಳಿಯದೆ ಬರುತ್ತಿದ್ದನು. ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?

ಸೀತೆ ರಾಮನ ಹೆಜ್ಜೆ ಗುರುತನ್ನು ತುಳಿಯದೆ ಇರುವುದಕ್ಕು, ಲಕ್ಷ್ಮಣ ಸೀತಾ-ರಾಮರ ಹೆಜ್ಜೆ ಗುರುತುಗಳನ್ನು ತುಳಿಯದೆ ಇರುವುದು ಕುಟುಂಬ ಗೌರವದ ಒಂದು ಅಮೋಘ ಉದಾಹರಣೆಯಾಗಿ ನಿಲ್ಲುತ್ತದೆ. ಏಕೆಂದರೆ ರಾಮನು ಸೀತೆಯ ಪತಿಯಾದ್ದರಿಂದ ಆಕೆ ತನ್ನ ಪತಿಯ ಹೆಜ್ಜೆ ಗುರುತುಗಳನ್ನು ತುಳಿಯದೆ ಆತನಿಗೆ ಗೌರವವನ್ನು ನೀಡುತ್ತಿದ್ದಳು.

ಲಕ್ಷ್ಮಣನಿಗೆ ರಾಮ ಮತ್ತು ಸೀತೆ ಇಬ್ಬರೂ ಹಿರಿಯರಾದ್ದರಿಂದ, ಆತನು ಈ ಇಬ್ಬರ ಹೆಜ್ಜೆ ಗುರುತುಗಳನ್ನು ತುಳಿಯದೆ ಅವರಿಬ್ಬರಿಗೆ ಗೌರವವನ್ನು ನೀಡುತ್ತಿದ್ದನು. ಇಲ್ಲಿ ಸೀತಾ ಮತ್ತು ಲಕ್ಷ್ಮಣರ ನಡವಳಿಕೆಯು ಕುಟುಂಬಗಳ ಮೌಲ್ಯವನ್ನು ಮತ್ತು ಹಿರಿಯರಿಗೆ ನೀಡುವ ಗೌರವವನ್ನು ಸಾರುತ್ತದೆ. ಕುಟುಂಬದ ಹಿರಿಯರಿಗೆ ಗೌರವ ನೀಡದಿದ್ದಲ್ಲಿ ಅವರನ್ನು ನಿಂದಿಸಿದಂತೆಯೇ ಆಗುತ್ತದೆ.

English summary

Why did Sita and Lakshman always walk behind Lord Rama?

After hearing, reading and watching Ramayan for a long time now over and over again, it is clear that that wherever Lord Rama accompanied by Sita and Lakshman would travel, people would go gaga to meet them and show their hospitality.
X
Desktop Bottom Promotion