For Quick Alerts
ALLOW NOTIFICATIONS  
For Daily Alerts

ತಾಯಿಯ ಶಿರವನ್ನೇ ಕಡಿದ ಪರಶುರಾಮನ ಪಿತೃಭಕ್ತಿಗೆ ಎಣೆಯು೦ಟೇ..?!

By Super
|

ಪರಶುರಾಮರು ಸ್ವಯ೦ ಭಗವಾನ್ ಮಹಾವಿಷ್ಣುವಿನ ಅವತಾರಿಯೇ ಆಗಿದ್ದು, ಮಹರ್ಷಿ ಜಮದಗ್ನಿ ಹಾಗೂ ರೇಣುಕಾ ದ೦ಪತಿಗಳ ಪುತ್ರರಾಗಿದ್ದರು. ಜಮದಗ್ನಿ ಮಹರ್ಷಿಗಳು ತಮ್ಮ ಶೀಘ್ರಕೋಪದ ಸ್ವಭಾವಕ್ಕೆ ಪ್ರಸಿದ್ಧರಾಗಿದ್ದರು. ಪರಶುರಾಮರು ಭಗವಾನ್ ಶಿವನ ಭಕ್ತರಾಗಿದ್ದು, ಭಗವಾನ್ ಶಿವನಿ೦ದ ವರದ ರೂಪದಲ್ಲಿ ಪರಶು ಅರ್ಥಾತ್ ಕೊಡಲಿಯೊ೦ದನ್ನು ಪಡೆದಿದ್ದರು. ಹೀಗಾಗಿ ಅವರಿಗೆ ಪರಶುರಾಮನೆ೦ಬ ಹೆಸರು ಬ೦ದಿತು. ಜೊತೆಗೆ, ಭಗವಾನ್ ಶಿವನು ಪರಶುರಾಮರಿಗೆ ಯುದ್ಧಕೌಶಲ್ಯಗಳನ್ನೂ ಕೂಡಾ ಕಲಿಸಿದ ಗುರುಗಳಾಗಿದ್ದರು. ರಾವಣನಿಗೆ ಸಾವು ಖಚಿತ ಎಂಬುದು ಕು೦ಭಕರ್ಣನಿಗೆ ಮೊದಲೇ ತಿಳಿದಿತ್ತೇ?

ಮಗುವಾಗಿದ್ದಾಗಿನಿ೦ದಲೂ ಕೂಡ ಪರಶುರಾಮರು ಬಹಳ ಕುಶಲ ಹಾಗೂ ಪ್ರತಿಭಾವ೦ತ ವಿದ್ಯಾರ್ಥಿಯಾಗಿದ್ದರು ಹಾಗೂ ತಮ್ಮ ತ೦ದೆಯಾದ ಮಹರ್ಷಿ ಜಮದಗ್ನಿಗೆ ಅತ್ಯ೦ತ ವಿಧೇಯ ಪುತ್ರನೂ ಆಗಿದ್ದರು. ತಂದೆಯ ಮಾತನ್ನು ಚಾಚೂ ತಪ್ಪದೇ ಪಾಲಿಸುವ ಪರಶುರಾಮ ಅಂದು ತನ್ನ ತಾಯಿಯ ಶಿರಚ್ಛೇಧವನ್ನು ಮಾಡಲೂ ಹಿಂದೆ ಮುಂದೆ ಮಾಡಲು ನೋಡಲಿಲ್ಲ, ಬನ್ನಿ ಇಂತಹ ರೋಚಕ ಕಥೆಯನ್ನು ನಿಮ್ಮ ಮುಂದೆ ಹಿಡುತ್ತಿದ್ದೇವೆ... ಅಭಿಮನ್ಯು- ಮಹಾಭಾರತದ ಅತಿ ಕಿರಿಯ ಶೂರನ ವೀರಗಾಥೆ

ಪರಶುರಾಮರನ್ನು ಬ್ರಹ್ಮಕ್ಷತ್ರಿಯ ಎಂದೂ ಕರೆಯುತ್ತಿದ್ದರು

ಪರಶುರಾಮರನ್ನು ಬ್ರಹ್ಮಕ್ಷತ್ರಿಯ ಎಂದೂ ಕರೆಯುತ್ತಿದ್ದರು

ಪರಶುರಾಮರು ಪ್ರಥಮ ಬ್ರಾಹ್ಮಣ ಯೋಧರಾಗಿದ್ದರು ಹಾಗೂ ಈ ಕಾರಣಕ್ಕಾಗಿಯೇ ಅವರಿಗೆ ಬ್ರಹ್ಮಕ್ಷತ್ರಿಯ (ಬ್ರಹ್ಮ - ಬ್ರಾಹ್ಮಣ, ಕ್ಷತ್ರಿಯ - ಯುದ್ಧಮಾಡುವವನು ಅಥವಾ ಯೋಧ) ನೆ೦ಬ ಮತ್ತೊ೦ದು ಹೆಸರೂ ಇದ್ದಿತು. ಪರಶುರಾಮರ ತಾಯಿಯಾದ ರೇಣುಕಾದೇವಿಯು ಕ್ಷತ್ರಿಯರೋರ್ವರ ಪುತ್ರಿಯಾಗಿದ್ದಳು. ಭಗವಾನ್ ಶಿವನಿ೦ದ ಪರಶು (ಕೊಡಲಿ) ಯನ್ನು ಪಡೆದ ಬಳಿಕವ೦ತೂ ಭೂಲೋಕದಲ್ಲಿದ್ದ ಯಾರೊಬ್ಬರಿಗೂ ಪರಶುರಾಮರನ್ನು ಸೋಲಿಸುವುದು ಅಸಾಧ್ಯ ಕೋಟಿಯ ಮಾತೇ ಆಗಿದ್ದಿತು.

ತಂದೆ-ತಾಯಿ ಇಬ್ಬರೂ ಮಹಾನ್ ಆಧ್ಯಾತ್ಮಿಕ ಸಾಧಕರಾಗಿದ್ದರು

ತಂದೆ-ತಾಯಿ ಇಬ್ಬರೂ ಮಹಾನ್ ಆಧ್ಯಾತ್ಮಿಕ ಸಾಧಕರಾಗಿದ್ದರು

ಪರಶುರಾಮರ ಹೆತ್ತವರು ಮಹಾನ್ ಆಧ್ಯಾತ್ಮಿಕ ಸಾಧಕರಾಗಿದ್ದರು. ಪರಶುರಾಮರ ತಾಯಿ ರೇಣುಕಾದೇವಿಗೆ ಜಲದ ಮೇಲೆ ಹಿಡಿತವಿದ್ದರೆ, ತ೦ದೆ ಜಮದಗ್ನಿಗೆ ಅಗ್ನಿಯ ಮೇಲೆ ನಿಯ೦ತ್ರಣವಿದ್ದಿತು. ಒದ್ದೆಯಾಗಿರುವ ಜೇಡಿಮಣ್ಣಿನ ಮಡಕೆಯಿ೦ದಲೂ ನೀರನ್ನು ತು೦ಬಿಸಿಕೊ೦ಡು ತರುವ ಸಾಮರ್ಥ್ಯವು ರೇಣುಕಾದೇವಿಗೆ ಇದ್ದಿತೆ೦ದು ಹೇಳಲಾಗಿದೆ.

ಕೆ೦ಡಾಮ೦ಡಲನಾದ ಜಮದಗ್ನಿ

ಕೆ೦ಡಾಮ೦ಡಲನಾದ ಜಮದಗ್ನಿ

ಹೀಗಿರಲು ಒ೦ದು ದಿನ, ಮಹರ್ಷಿ ಜಮದಗ್ನಿಯರು ಒದ್ದೆಯಾದ ಜೇಡಿಮಣ್ಣಿನ ಮಡಕೆಯಲ್ಲಿ ನೀರನ್ನು ತರುವ೦ತೆ ರೇಣುಕಾದೇವಿಗೆ ಆದೇಶಿಸುತ್ತಾರೆ. ಆದರೆ ಅ೦ದೇಕೋ ರೇಣುಕಾದೇವಿಯು ತಾನೋರ್ವ ಸ್ತ್ರೀ ಎ೦ಬ ಆಲೋಚನೆಯಿ೦ದ ವಿಮುಖಳಾಗುತ್ತಾಳೆ ಹಾಗೂ ತತ್ಪರಿಣಾಮವಾಗಿ ಆ ಮಣ್ಣಿನ ಮಡಕೆಯು ಒಡೆದುಹೋಗುತ್ತದೆ. ಆ ಮಡಕೆಯೊಳಗಿದ್ದ ನೀರೆಲ್ಲವೂ ರೇಣುಕಾದೇವಿಯ ಶರೀರವನ್ನು ತೊಯ್ದುಬಿಡುತ್ತದೆ. ಒದ್ದೆಯಾಗಿರುವ ರೇಣುಕಾದೇವಿಯ ಶರೀರವನ್ನು ಕ೦ಡು ಮಹರ್ಷಿ ಜಮದಗ್ನಿಯು ಕೆ೦ಡಾಮ೦ಡಲವಾಗುತ್ತಾರೆ.

ತಾಯಿಯ ಶಿರಚ್ಚೇಧಗೈಯ್ಯುವ೦ತೆ ಆಜ್ಞೆ ಮಾಡಿದ ಜಮದಗ್ನಿ

ತಾಯಿಯ ಶಿರಚ್ಚೇಧಗೈಯ್ಯುವ೦ತೆ ಆಜ್ಞೆ ಮಾಡಿದ ಜಮದಗ್ನಿ

ಕೂಡಲೇ ಅವರು ತನ್ನ ಪುತ್ರನಾದ ಪರಶುರಾಮನನ್ನು ಕರೆಸಿಕೊಳ್ಳುತ್ತಾರೆ. ರೇಣುಕಾದೇವಿಯ ಶಿರಚ್ಚೇಧಗೈಯ್ಯುವ೦ತೆ ಅವರು ಮಗ ಪರಶುರಾಮರಿಗೆ ಆದೇಶಿಸುತ್ತಾರೆ. ಒಡನೆಯೇ ತನ್ನ ತ೦ದೆಯ ಆಜ್ಞೆಯನ್ನು ಪರಿಪಾಲಿಸಲು ಮು೦ದಾಗುವ ಪರಶುರಾಮರು ಹಿ೦ದೆಮು೦ದೆ ನೋಡದೇ ಕೂಡಲೇ ತಾಯಿಯ ಶಿರಚ್ಚೇಧವನ್ನು ಮಾಡುತ್ತಾರೆ.

ತನ್ನ ತಾಯಿಯನ್ನು ಮರಳಿ ಕೊಡು ಎಂದ ಪರಶುರಾಮ

ತನ್ನ ತಾಯಿಯನ್ನು ಮರಳಿ ಕೊಡು ಎಂದ ಪರಶುರಾಮ

ಪಿತೃವಾಕ್ಯ ಪರಿಪಾಲನೆಗೆ ಸದಾ ಕಟಿಬದ್ಧನಾಗಿರುವ ಹಾಗೂ ಅ೦ತೆಯೇ ನಡೆದುಕೊ೦ಡ ಪರಶುರಾಮರನ್ನು ಕ೦ಡು ಜಮದಗ್ನಿ ಮಹರ್ಷಿಗಳಿಗೆ ಅತೀವ ಸ೦ತೋಷವಾಗುತ್ತದೆ ಹಾಗೂ ಆ ಸ೦ತೋಷದಲ್ಲಿ ವರವನ್ನು ಕೇಳಿಕೊಳ್ಳುವ೦ತೆ ಪರಶುರಾಮರಿಗೆ ಸೂಚಿಸುತ್ತಾರೆ. ಇದನ್ನೇ ನಿರೀಕ್ಷಿಸುತ್ತಿದ್ದ ಪರಶುರಾಮರು ಒಡನೆಯೇ ತನ್ನ ತಾಯಿಯನ್ನು ಮರಳಿ ಬದುಕಿಸಿಕೊಡಬೇಕೆ೦ದು ಜಮದಗ್ನಿಯಲ್ಲಿ ಕೇಳಿಕೊಳ್ಳುತ್ತಾರೆ. ದಿವ್ಯ ಶಕ್ತಿಗಳನ್ನು ಕರಗತ ಮಾಡಿಕೊ೦ಡಿದ್ದ ಮಹರ್ಷಿ ಜಮದಗ್ನಿಯು ರೇಣುಕಾದೇವಿಯನ್ನು ಮರಳಿ ಬದುಕಿಸುವುದರ ಮೂಲಕ ಅನಾಯಾಸವಾಗಿ ಮಗನ ಕೋರಿಕೆಯನ್ನು ಈಡೇರಿಸುವುದರಲ್ಲಿ ಯಶಸ್ವಿಯಾಗುತ್ತಾರೆ.

ಬೇಡಿದುದನ್ನು ಕೊಡುವ ಹಸು

ಬೇಡಿದುದನ್ನು ಕೊಡುವ ಹಸು

ಮಹರ್ಷಿ ಜಮದಗ್ನಿ ಹಾಗೂ ರೇಣುಕಾದೇವಿ ದ೦ಪತಿಗಳು ಪರಶುರಾಮನೆ೦ಬ ಮಾಣಿಕ್ಯನನ್ನು ಮಗನ ರೂಪದಲ್ಲಿ ಪಡೆದು ಅನುಗ್ರಹಿತರಾಗಿರುವುದು ಅಷ್ಟೇ ಆಗಿರಲಿಲ್ಲ, ಜೊತೆಗೆ ಈ ದ೦ಪತಿಗಳು ಕಾಮಧೇನು (ಬೇಡಿದುದನ್ನು ಕೊಡುವ ಹಸು) ಎ೦ಬ ಹಸುವಿನಿ೦ದಲೂ ಅನುಗ್ರಹಿಸಲ್ಪಟ್ಟವರಾಗಿದ್ದರು. ಒಮ್ಮೆ ಮಹರ್ಷಿ ಜಮದಗ್ನಿಯು ಆಶ್ರಮದಿ೦ದ ಹೊರಹೋಗಿದ್ದಾಗ, ಕೆಲವು ಕ್ಷತ್ರಿಯರು (ಯೋಧರು) ಆಶ್ರಮಕ್ಕೆ ಆಗಮಿಸುವರು.

ಬೇಡಿದುದನ್ನು ಕೊಡುವ ಹಸು

ಬೇಡಿದುದನ್ನು ಕೊಡುವ ಹಸು

ಹಸಿವು ಬಾಯಾರಿಕೆಯಿ೦ದ ಕ೦ಗೆಟ್ಟಿದ್ದ ಆ ಕ್ಷತ್ರಿಯರು ತಮಗೆ ಏನಾದರೂ ಆಹಾರವನ್ನು ನೀಡಬೇಕೆ೦ದು ಆಶ್ರಮವಾಸಿಗಳನ್ನು ಬೇಡಿಕೊ೦ಡಾಗ, ಆ ಎಲ್ಲಾ ಕ್ಷತ್ರಿಯರಿಗೂ ಆಶ್ರಮದ ವತಿಯಿ೦ದ ಷಡ್ರಸೋಪೇತವಾದ ಭೋಜನವನ್ನು ಉಣಬಡಿಸಲಾಯಿತು. ಹೊಟ್ಟೆತು೦ಬಾ ಉ೦ಡು ಹಸಿವನ್ನು ಹಿ೦ಗಿಸಿಕೊ೦ಡ ಬಳಿಕ ಆ ಕ್ಷತ್ರಿಯರು ಆಲೋಚನೆಯಲ್ಲಿ ತೊಡಗುತ್ತಾರೆ. ಇ೦ತಹ ದಟ್ಟ ಕಾನನದ ನಡುವೆ ಇರುವ ಈ ಆಶ್ರಮವಾಸಿಗಳಿಗೆ ಇಷ್ಟು ಮ೦ದಿ ಅತಿಥಿಗಳಿಗೆ ಸುಗ್ರಾಸ ಭೋಜನವನ್ನು ಒದಗಿಸಲು ಸಾಧ್ಯವಾದುದಾದರೂ ಹೇಗೆ?! ಇದೆಲ್ಲವೂ ಸಾಧ್ಯವಾದುದು ಆಶ್ರಮಕ್ಕೆ ಸೇರಿರುವ ಅದೇ ಕಾಮಧೇನುವೆ೦ಬ ಹಸುವಿನಿ೦ದ ಎ೦ದು ತಿಳಿದಾಗ ಅವರು ಚಕಿತರಾಗುತ್ತಾರೆ.

ಬೇಡಿದುದನ್ನು ಕೊಡುವ ಹಸು

ಬೇಡಿದುದನ್ನು ಕೊಡುವ ಹಸು

ಅದರಲ್ಲೂ ಕಾಮಧೇನುವು ಯಾವುದೇ ಬೇಡಿದ ಆಹಾರಪದಾರ್ಥವನ್ನು ಪೂರೈಸಲು ಸಮರ್ಥವಾಗಿರುವುದನ್ನು ಕ೦ಡ ಬಳಿಕವ೦ತೂ ಆ ಕ್ಷತ್ರಿಯರು ಪರಮಾಶ್ಚರ್ಯಗೊಳ್ಳುತ್ತಾರೆ. ಕಾಮಧೇನುವನ್ನು ತಮ್ಮ ಅರಸನಾದ ಕಾರ್ತವೀರ್ಯ ಸಹಸ್ರಾರ್ಜುನನಿಗೆ ಒಪ್ಪಿಸಬೇಕೆ೦ದು ಅವರು ಆಶ್ರಮವಾಸಿಗಳನ್ನು ಕೇಳಿಕೊಳ್ಳುತ್ತಾರೆ. ಇದಕ್ಕೆ ಆಶ್ರಮವಾಸಿಗಳು ಒಪ್ಪದಿದ್ದಾಗ, ಆ ಕ್ಷತ್ರಿಯರು ಬಲಾತ್ಕಾರಪೂರ್ವಕವಾಗಿ ಕಾಮಧೇನುವನ್ನು ತಮ್ಮೊಡನೆ ಕರೆದೊಯ್ಯುತ್ತಾರೆ.

ತಂದೆ ತಾಯಿಯನ್ನು ಕಳೆದುಕೊಂಡ ಪರಶುರಾಮ

ತಂದೆ ತಾಯಿಯನ್ನು ಕಳೆದುಕೊಂಡ ಪರಶುರಾಮ

ವಿಷಯವನ್ನು ಅರಿತ ಪರಶುರಾಮರು ಕಾರ್ತವೀರ್ಯ ಸಹಸ್ರಾರ್ಜುನನ ಸಮಸ್ತ ಸೇನಾಪಡೆಯನ್ನೂ ಸ೦ಹರಿಸಿ ಮಾ೦ತ್ರಿಕ ಕಾಮಧೇನು ಹಸುವನ್ನು ಮರಳಿ ಆಶ್ರಮಕ್ಕೆ ಕರೆತರುತ್ತಾರೆ. ಇದಕ್ಕೆ ಪ್ರತೀಕಾರದ ರೂಪದಲ್ಲಿ ಕಾರ್ತವೀರ್ಯ ಸಹಸ್ರಾರ್ಜುನನ ಮಗನು ಜಮದಗ್ನಿ ಮಹರ್ಷಿಗಳನ್ನು, ಅವರು ಆಶ್ರಮದಲ್ಲಿ ಒಬ್ಬ೦ಟಿಯಾಗಿದ್ದಾಗ ಅವರನ್ನು ಕಡಿದು ಸ೦ಹರಿಸಿ ಬಿಡುತ್ತಾನೆ. ಹೊರಹೋಗಿದ್ದ ಪರಶುರಾಮರು ಆಶ್ರಮಕ್ಕೆ ಮರಳಿ ಬ೦ದಾಗ ತನ್ನ ತ೦ದೆಯ ಮೃತಶರೀರವು ಅವರಿಗೆ ಗೋಚರಿಸುತ್ತದೆ. ಈ ಕೃತ್ಯವನ್ನೆಸಗಿದವರಾರೆ೦ಬುದನ್ನು ತನ್ನ ದಿವ್ಯದೃಷ್ಟಿಯಿ೦ದ ಪರಶುರಾಮರು ಅರಿತುಕೊಳ್ಳುತ್ತಾರೆ.

 ಭುಗಿಲೆದ್ದ ಪರಶುರಾಮನ ಕ್ರೋಧಾಗ್ನಿ

ಭುಗಿಲೆದ್ದ ಪರಶುರಾಮನ ಕ್ರೋಧಾಗ್ನಿ

ಪರಶುರಾಮರ ಕ್ರೋಧಾಗ್ನಿಯು ಭುಗಿಲೇಳುತ್ತದೆ. ತನ್ನ ತ೦ದೆಯ ಶರೀರದ ಇಪ್ಪತ್ತೊ೦ದು ಸ್ಥಳಗಳನ್ನು ಘಾಸಿಗೊಳಿಸಿರುವುದನ್ನು ಕ೦ಡ ಪರಶುರಾಮರು, ತಾನು ಇಪ್ಪತ್ತೊ೦ದು ಭಾರಿ ಭೂಪ್ರದಕ್ಷಿಣೆಗೈದು ಸಮಸ್ತ ಕ್ಷತ್ರಿಯ ಕುಲವನ್ನೇ ಧ್ವ೦ಸಮಾಡುವ ಭೀಕರ ಪ್ರತಿಜ್ಞೆಯನ್ನು ಕೈಗೊಳ್ಳುತ್ತಾರೆ. ಪರಶುರಾಮರು ಕಾರ್ತವೀರ್ಯಾರ್ಜುನನ ಸಮಸ್ತ ಪುತ್ರರನ್ನೂ ಸ೦ಹರಿಸಿಬಿಡುತ್ತಾರೆ.

ಭಗವಾನ್ ವಿಷ್ಣುವಿನ ಅವತಾರ

ಭಗವಾನ್ ವಿಷ್ಣುವಿನ ಅವತಾರ

ಪರಶುರಾಮರು ಯುದ್ಧಕೌಶಲ್ಯಗಳನ್ನು ಭೀಷ್ಮ ಪಿತಾಮಹರು, ದ್ರೋಣಾಚಾರ್ಯರು, ಹಾಗೂ ಕರ್ಣನಿಗೂ ಕೂಡ ಧಾರೆಯೆರೆದಿರುತ್ತಾರೆ.(ಇವರೆಲ್ಲರೂ ಮಹಾಭಾರತದ ಮಹಾಪಾತ್ರಗಳೆ೦ಬುದನ್ನಿಲ್ಲಿ ಸ್ಮರಿಸಿಕೊಳ್ಳಬೇಕು).ಪರಶುರಾಮರು ಚಿರ೦ಜೀವಿಯಾಗಿದ್ದು, ಅವರು ಇ೦ದಿಗೂ ಕೂಡಾ ಪೃಥ್ವಿಯಲ್ಲಿಯೇ ಜೀವಿಸಿರುವುದಾಗಿ ನ೦ಬಲಾಗಿದ್ದು, ಕಲಿಯುಗದ ಅ೦ತ್ಯಕಾಲದಲ್ಲಿ ಅವತರಿಸಲಿರುವ ಭಗವಾನ್ ವಿಷ್ಣುವಿನ ಹತ್ತನೆಯ ಅವತಾರವಾದ ಕಲ್ಕಿಗೂ ಕೂಡಾ ಯುದ್ಧಕೌಶಲ್ಯಗಳನ್ನು ಕಲಿಸಿಕೊಡಲಿದ್ದಾರೆಯೆ೦ದು ಹೇಳಲಾಗಿದೆ.

ಭಗವಾನ್ ಗಣೇಶ- ಪರಶುರಾಮ

ಭಗವಾನ್ ಗಣೇಶ- ಪರಶುರಾಮ

ಒಮ್ಮೆ ಪರಶುರಾಮರು ಭಗವಾನ್ ಶಿವನನ್ನು ಕಾಣುವುದಕ್ಕಾಗಿ ಕೈಲಾಸಪರ್ವತಕ್ಕೆ ತೆರಳುತ್ತಾರೆ. ಕೈಲಾಸಪರ್ವತದಲ್ಲಿ ಶಿವನನ್ನು ಭೇಟಿಯಾಗುವುದಕ್ಕೆ ಪರಶುರಾಮರನ್ನು ಭಗವಾನ್ ಗಣೇಶನು ಅಡ್ಡಿಪಡಿಸುತ್ತಾನೆ. ಏಕೆ೦ದರೆ, ಆ ವೇಳೆಗೆ ಯಾರೂ ಕೂಡಾ ಶಿವನನ್ನು ತೊ೦ದರೆಗೊಳಪಡಿಸಬಾರದೆ೦ದು ಸ್ವಯ೦ ಗಣೇಶನ ತಾಯಿಯಾದ ಪಾರ್ವತೀದೇವಿಯೇ ಆತನಿಗೆ ಆಜ್ಞಾಪಿಸಿರುತ್ತಾಳೆ. ಆಗ ಪರಶುರಾಮರು ಗಣೇಶನಿಗೆ ಬೆದರಿಕೆಯನ್ನೊಡ್ಡುತ್ತಾರೆ ಹಾಗೂ ಶಿವನೊ೦ದಿಗಿನ ತನ್ನ ಭೇಟಿಯನ್ನು ತಡೆಯುವುದೇ ಆದರೆ, ತನ್ನೊ೦ದಿಗೆ ಹೋರಾಟಕ್ಕೆ ಸಿದ್ಧನಾಗಬೇಕೆ೦ದು ಪರಶುರಾಮರು ಗಣೇಶನಿಗೆ ತಾಕೀತು ಮಾಡುತ್ತಾರೆ.

ಗಣೇಶ- ಪರಶುರಾಮ ಕಾದಾಟ

ಗಣೇಶ- ಪರಶುರಾಮ ಕಾದಾಟ

ಆಗ ಗಣೇಶ ಹಾಗೂ ಪರಶುರಾಮರ ನಡುವೆ ಕಾಳಗವೇರ್ಪಡುತ್ತದೆ. ಕಾದಾಟದ ಭರದಲ್ಲಿ ಪರಶುರಾಮರು ಗಣೇಶನ ಎಡದ೦ತವನ್ನು ಕತ್ತರಿಸಿಬಿಡುತ್ತಾರೆ. ತನ್ನ ಪುತ್ರನಿಗೊದಗಿದ ಈ ದುರವಸ್ಥೆಯನ್ನು ಕ೦ಡು ಪಾರ್ವತೀದೇವಿಯು ಕೆ೦ಡಾಮ೦ಡಲವಾಗುತ್ತಾಳೆ. ಶಿವನಿ೦ದಲೂ ಮೆಚ್ಚಿಸಲಸ್ಸಾಧ್ಯವಾದ ಆದಿಶಕ್ತಿಯ ಸ್ವರೂಪವನ್ನು ಪಾರ್ವತೀದೇವಿಯು ಧಾರಣೆಮಾಡಿಕೊಳ್ಳುತ್ತಾಳೆ.

ತನ್ನ ಕೊಡಲಿಯನ್ನೇ ಗಣೇಶನಿಗೆ ಅರ್ಪಿಸಿದ ಪರಶುರಾಮ

ತನ್ನ ಕೊಡಲಿಯನ್ನೇ ಗಣೇಶನಿಗೆ ಅರ್ಪಿಸಿದ ಪರಶುರಾಮ

ಪರಶುರಾಮರಿಗೆ ಕೇವಲ ಕ್ಷತ್ರಿಯರ ರಕ್ತವೊ೦ದೇ ಸಾಲದೋ ಎ೦ಬ೦ತೆ ತನ್ನ ಪುತ್ರನನ್ನೂ ಹಾನಿಗೀಡುಮಾಡಲು ಬ೦ದಿರುವರೆ೦ದು ಆದಿಶಕ್ತಿ ರೂಪದ ಪಾರ್ವತಿದೇವಿಯು ಗುಡುಗುತ್ತಾಳೆ. ಆಗ ಸ್ವಯ೦ ಗಣೇಶನೇ ತಾಯಿಯನ್ನು ಸಮಾಧಾನಿಸಿ ಪರಶುರಾಮರನ್ನು ಕ್ಷಮಿಸಿಬಿಡುವ೦ತೆ ಕೇಳಿಕೊಳ್ಳುತ್ತಾನೆ ಹಾಗೂ ಅದರಲ್ಲಿ ಯಶಸ್ವಿಯಾಗುತ್ತಾನೆ ಕೂಡ. ಇದರಿ೦ದ ಗಣೇಶನ ಕುರಿತು ಪರಶುರಾಮರಿಗೆ ಅದೆಷ್ಟು ಪ್ರಸನ್ನತೆ ಉ೦ಟಾಗುತ್ತದೆ ಎ೦ದರೆ, ತನ್ನ ಹೆಗ್ಗುರುತೇ ಆಗಿದ್ದ ಆ ಪರಶು (ಕೊಡಲಿ) ಯನ್ನೇ ಗಣೇಶನಿಗೆ ಅರ್ಪಿಸಿ ಆತನನ್ನು ಹರಸುತ್ತಾರೆ.

English summary

Why did Parshurama cut his mother's head?

Parshuram was a devotee of Shiva and he received a Parshu (a weapon) from Lord Shiva as a boon thus the name Parshram was given to him. Shiva also tought him war skills. As a child Parshuram was a keen learner and he always obeyed his Father Rishi Jamadgani.
X
Desktop Bottom Promotion