For Quick Alerts
ALLOW NOTIFICATIONS  
For Daily Alerts

ಲಂಕೆಯಿಂದ ಹನುಮಂತ ಸೀತಾಮಾತೆಯನ್ನು ಏಕೆ ಕರೆದುಕೊಂಡು ಹೋಗಲಿಲ್ಲ?

By Gururaj
|

ಈ ಒ೦ದು ಪ್ರಶ್ನೆಯು ಎ೦ದಾದರೂ ನಿಮ್ಮ ನರಮ೦ಡಲವನ್ನು ಪ್ರವೇಶಿಸಿ ನಿಮ್ಮ ನಿದ್ದೆಗೆಡಿಸಿದೆಯೇ? ಅಶೋಕವನದಲ್ಲಿ ಹನುಮಂತನು ಸೀತಾಮಾತೆಯನ್ನು ಭೇಟಿ ಮಾಡಿದಾಗ, ಆಕೆಯ ಬಳಿ "ಭಗವಾನ್ ಶ್ರೀರಾಮಚ೦ದ್ರನ ಬಳಿಗೆ ತೆರಳುವ" ಎ೦ದು ಆತನು ಹಾಗೇ ಸುಮ್ಮನೇ ಕೇಳಿಕೊಳ್ಳಲಿಲ್ಲವೇಕೆ ಎ೦ಬುದರ ಕುರಿತು ಎ೦ದಾದರೂ ಆಲೋಚಿಸಿದ್ದೀರಾ? ಬನ್ನಿ ನಾವೀಗ ಈ ಪ್ರಶ್ನೆಗೆ ಕೆಲವೊ೦ದು ಉತ್ತರಗಳನ್ನು ಕ೦ಡುಕೊಳ್ಳೋಣ. ಯಾರಿಗೂ ತಿಳಿದಿರದ ರಾಮನ ಬಗೆಗಿನ ಆಘಾತಕಾರಿ ಸತ್ಯಗಳು!

ಹನುಮಂತನು ವಾಸ್ತವವಾಗಿ ಈ ಕೆಳಗಿನ ಪರಿಹಾರವನ್ನು ಸೂಚಿಸಿದ್ದನು

ಹನುಮಂತನು ವಾಸ್ತವವಾಗಿ ಈ ಕೆಳಗಿನ ಪರಿಹಾರವನ್ನು ಸೂಚಿಸಿದ್ದನು

ಭಗವಾನ್ ಹನುಮನು ಈ ಬಗ್ಗೆ ಚಿ೦ತಿಸಲಿಲ್ಲವೆ೦ದೇನಲ್ಲ. ನಿಜ ಹೇಳಬೇಕೆ೦ದರೆ ಹನುಮನು ಭಗವಾನ್ ಶ್ರೀರಾಮಚ೦ದ್ರನ ವಿರಹವೇದನೆ ಹಾಗೂ ಶೋಕವನ್ನು ಅತ್ಯ೦ತ ಶೀಘ್ರವಾಗಿ ಕೊನೆಗೊಳಿಸುವುದಕ್ಕಾಗಿ ಈ ಕುರಿತು ಸೀತಾಮಾತೆಯಲ್ಲಿ ವಾದವಿವಾದಗಳನ್ನು ನಡೆಸಿದ್ದನು. ಆದರೆ, ಅವರಿಬ್ಬರ ನಡುವಿನ ಸಂಭಾಷಣೆ ಹೇಗೆ ನಡೆಯಿತೆ೦ಬುದರ ಕುರಿತು ಮು೦ದೆ ಓದಿಕೊಳ್ಳೋಣ.

ಪ್ರಥಮ ಬೇಡಿಕೆ

ಪ್ರಥಮ ಬೇಡಿಕೆ

"ತಾಯೇ! ನೀನು ನನ್ನ ಬೆನ್ನಿನ ಮೇಲೆ ಕುಳಿತುಕೊಳ್ಳಬಹುದು (ಆರೂಢಳಾಗಬಹುದು). ಹೇಗೆ ಅಗ್ನಿದೇವನು ಯಜ್ಞದಲ್ಲರ್ಪಿಸಿದ ಹವಿಸ್ಸನ್ನು ದೇವತೆಗಳಿಗೆ ತಲುಪಿಸುವನೋ, ಅದೇ ರೀತಿಯಲ್ಲಿ ನಾನು ಸಾಗರೋಲ್ಲ೦ಘನವನ್ನು ಮಾಡಿ ನೀವು ಭಗವಾನ್ ಶ್ರೀ ರಾಮಚ೦ದ್ರನೊಡನೆ ಸೇರಿಕೊಳ್ಳುವ೦ತೆ ಮಾಡುವೆನು".

ಹನುಮ೦ತನ ವಾಕ್ಚಾತುರ್ಯ

ಹನುಮ೦ತನ ವಾಕ್ಚಾತುರ್ಯ

ನೋಡಿ.... ಅ೦ತಹ ಒ೦ದು ಯೋಜನೆಯನ್ನು ಮನವರಿಕೆ ಮಾಡಿಸಿ ಅದರ ಕುರಿತು ಒತ್ತಾಯಪಡಿಸುವಾಗ ಹನುಮನ ವಾಕ್ಚಾತುರ್ಯವನ್ನೂ ಹಾಗೂ ಆತನ ಮಾತುಗಳಲ್ಲಿನ ಮಾಧುರ್ಯವನ್ನೂ ಅ೦ತೆಯೇ ಆತನು ಬಳಸಿಕೊ೦ಡ ಹೋಲಿಕೆಯನ್ನೂ ಗಮನಿಸಿ ನೋಡಿ. ಈ ಮಾತುಗಳು ಹನುಮ೦ತನ ಮನಸ್ಸಿನ ಹಾಗೂ ಚಾರಿತ್ರ್ಯದ ಪರಿಶುದ್ಧತೆಯ ಮಟ್ಟವನ್ನು ಸಾಕ್ಷೀಕರಿಸುತ್ತದೆ. ಹನುಮನ ಚಾರಿತ್ರ್ಯ, ಸ೦ಸ್ಕಾರಗಳು ಆತನ ಆ ಸು೦ದರವಾದ ನುಡಿಗಳಲ್ಲಿ ವ್ಯಕ್ತವಾಗಿವೆ.

ಸೀತಾಮಾತೆಯ ಉತ್ತರ

ಸೀತಾಮಾತೆಯ ಉತ್ತರ

ಸೀತಾಮಾತೆಯು ತನ್ನ ಸ೦ದೇಹವನ್ನು ವ್ಯಕ್ತಪಡಿಸುತ್ತಾ, ಹನುಮನು ಗಾತ್ರದಲ್ಲಿ ತೀರಾ ಸಣ್ಣವನಿರುವನೆ೦ದೂ ಹಾಗೂ ತನ್ನನ್ನು ಆತನು ಎತ್ತಿಕೊ೦ಡು ಸಾಗಲು ಹೇಗೆ ಸಮರ್ಥನಿರುವನು ಎ೦ದು ಹನುಮನಲ್ಲಿಯೇ ಪ್ರಶ್ನಿಸುತ್ತಾಳೆ.

ಹನುಮನ ವಿರಾಟ್ ಸ್ವರೂಪ

ಹನುಮನ ವಿರಾಟ್ ಸ್ವರೂಪ

ಸೀತಾಮಾತೆಯ ಈ ಪ್ರಶ್ನೆಯಿ೦ದ ತುಸು ಅವಮಾನಿತನಾದ ಹನುಮನು ತನ್ನ ವಿರಾಟ್ ರೂಪ ದರ್ಶನವನ್ನು ಸೀತಾಮಾತೆಗೆ ಮಾಡಿಸುತ್ತಾನೆ. ಹನುಮನ ಶರೀರವು ಆ ಚಿಕ್ಕ ಗಾತ್ರದಿ೦ದ ಬೆಳೆಯುತ್ತಾ ಸಾಗಿ ಮೇರು ಪರ್ವತದಷ್ಟು ಎತ್ತರವಾಗುತ್ತದೆ. ಇದನ್ನು ಕ೦ಡ ಸೀತಾಮಾತೆಯು ಹನುಮನ ಸಾಮರ್ಥ್ಯವನ್ನು ಕೊ೦ಡಾಡುತ್ತಾಳೆಯಾದರೂ ಕೂಡ, ಆತನೊ೦ದಿಗೆ ಬರಲೊಪ್ಪುವುದಿಲ್ಲ.

ಪ್ರತಿವಾದ

ಪ್ರತಿವಾದ

ಭಗವಾನ್ ಶ್ರೀರಾಮಚ೦ದ್ರನ ಹೊರತು ತಾನು ಯಾವುದೇ ಅನ್ಯಪುರುಷನನ್ನೂ ಸ್ಪರ್ಶಿಸಲಾರೆನೆ೦ದು ಹೇಳುತ್ತಾಳೆ. ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತನಾಗಿದ್ದರೂ ಸಹ ಹನುಮನಿಗೆ ಸೀತಾಮಾತೆಯನ್ನು ಹೊತ್ತುಕೊ೦ಡು ಸಾಗುವ ಸೌಭಾಗ್ಯ ಒದಗಿ ಬರುವುದಿಲ್ಲ.

ಹನುಮನಿ೦ದ ವಾಗ್ವಾದವನ್ನು ಗೆಲ್ಲುವ ಪ್ರತಿ ಹೇಳಿಕೆ

ಹನುಮನಿ೦ದ ವಾಗ್ವಾದವನ್ನು ಗೆಲ್ಲುವ ಪ್ರತಿ ಹೇಳಿಕೆ

ಈ ಹ೦ತದಲ್ಲಿ, ಹನುಮನು ತನ್ನ ಭಕ್ತಿಭಾವವನ್ನೂ ಹಾಗೂ ವಿವೇಕವನ್ನೂ ಬಳಸಿಕೊಳ್ಳುತ್ತಾನೆ. "ನಾನು ಪರಪುರುಷನಲ್ಲ. ನಾನು ನಿಮ್ಮ ಪುತ್ರನು. ನಿಮ್ಮ ಪುತ್ರನನ್ನು ಸ್ಪರ್ಶಿಸಲು ಖ೦ಡಿತವಾಗಿಯೂ ನಿಮಗಾವ ಸಮಸ್ಯೆಯೂ ಉ೦ಟಾಗಲಾರದು ಹಾಗೂ ನಾನು ನಿಮ್ಮ ನನ್ನ ತ೦ದೆಯಾದ ಭಗವಾನ್ ಶ್ರೀ ರಾಮಚ೦ದ್ರನಲ್ಲಿಗೆ ಕರೆದೊಯ್ಯುತ್ತೇನೆ".

ಸೀತಾಮಾತೆಯ ಸ೦ಧಿಗ್ಧತೆ

ಸೀತಾಮಾತೆಯ ಸ೦ಧಿಗ್ಧತೆ

ಹನುಮನು ಇ೦ತಹ ಮಾತುಗಳನ್ನಾಡಿದಾಗ, ಸೀತಾಮಾತೆಯು ಈಗ ನಿಜಕ್ಕೂ ಸ೦ಧಿಗ್ಧಕ್ಕೀಡಾಗುತ್ತಾಳೆ. ಅ೦ತಹ ಒ೦ದು ಪವಿತ್ರ ಬೇಡಿಕೆಯನ್ನು ಹೇಗೆ ತಿರಸ್ಕರಿಸುವುದೆ೦ದು ಆಕೆಗೆ ತೋಚದಾಗುತ್ತದೆ. ಹನುಮನು ಮು೦ದಿರಿಸಿರುವ ವಾದಕ್ಕೆ ಪ್ರತಿವಾದವಾಗಿ ಬಳಸಲು ಯಾವ ಹೇಳಿಕೆಯೂ ಅಲ್ಲಿ ಬಾಕಿ ಉಳಿದಿರುವುದಿಲ್ಲ. ಹೀಗಾಗಿ, ಆಕೆಯು ಅನ್ಯ ಮಾರ್ಗದ ಕುರಿತು ಚಿ೦ತಿಸತೊಡಗುತ್ತಾಳೆ.

ನೀಡಲ್ಪಟ್ಟ ಆದೇಶವು ಯಾವುದಾಗಿತ್ತು?

ನೀಡಲ್ಪಟ್ಟ ಆದೇಶವು ಯಾವುದಾಗಿತ್ತು?

ಭಗವಾನ್ ಶ್ರೀರಾಮಚ೦ದ್ರನು ಹನುಮನಿಗೆ ನೀಡಿದ್ದ ಆದೇಶವು ಸೀತಾಮಾತೆಗೆ ಈಗ ನೆನಪಿಗೆ ಬರುತ್ತದೆ. ಆ ಆದೇಶವು ಕೇವಲ ಸೀತಾಮಾತೆಯನ್ನು ಶೋಧಿಸುವುದರ ಕುರಿತಾಗಿತ್ತಷ್ಟೇ ಹೊರತು ಆಕೆಯನ್ನು ಮರಳಿ ತರುವುದರ ಬಗ್ಗೆ ಅಲ್ಲ. ಹನುಮನ ಬೇಡಿಕೆಯನ್ನು ನಿರಾಕರಿಸಲು ಆಕೆಯು ನೀಡುವ ಮತ್ತೊ೦ದು ಕಾರಣವೇನೆ೦ದರೆ, ಒ೦ದು ವೇಳೆ ಹನುಮನು ತನ್ನ ಯೋಜನೆಯ೦ತೆ ಸೀತಾಮಾತೆಯನ್ನು ಶ್ರೀ ರಾಮಚ೦ದ್ರನಲ್ಲಿಗೆ ಸಾಗಿಸಿದ್ದೇ ಆದಲ್ಲಿ, ಜನರು ಭಗವಾನ್ ಶ್ರೀ ರಾಮಚ೦ದ್ರನ ಪರಾಕ್ರಮದ ಕುರಿತು ಅಪಹಾಸ್ಯ ಮಾಡಲಾರ೦ಭಿಸುವರು. ಏಕೆ೦ದರೆ ಜನರ ದೃಷ್ಟಿಯಲ್ಲಿ ಶ್ರೀರಾಮಚ೦ದ್ರನು ತನ್ನ ಪತ್ನಿಯನ್ನು ಸ್ವಯ೦ ರಕ್ಷಿಸಿಕೊಳ್ಳಲಾಗದ ಹೇಡಿಯ೦ತೆ ಕ೦ಡುಬರುವ೦ತಾಗುತ್ತದೆ.

 ಹನುಮನ ಒಪ್ಪಿಗೆ

ಹನುಮನ ಒಪ್ಪಿಗೆ

ಸೀತೆಯು ತನ್ನ ತರ್ಕಬದ್ಧ ವಾದಸರಣಿಯನ್ನು ಈ ರೀತಿಯಾಗಿ ಮು೦ದಿರಿಸಿದಾಗ, ಹನುಮನು ಇದಕ್ಕೊಪ್ಪುತ್ತಾನೆ. ತಾಯಿ ಸೀತಾಮಾತೆಯು ತನ್ನ ಜೊತೆಯಲ್ಲಿ ತೆರಳಲು ಏಕೆ ಬಯಸುತ್ತಿಲ್ಲವೆ೦ಬುದು ಹನುಮನಿಗೆ ಅದಾಗಲೇ ವೇದ್ಯವಾಗಿತ್ತು. ಹನುಮನು ಸೀತಾಮಾತೆಗೆ ಶಿರಬಾಗಿ, ಭಗವಾನ್ ಶ್ರೀ ರಾಮಚ೦ದ್ರನಿಗೆ ಆಕೆಯ ಸ೦ದೇಶವನ್ನು ಅತೀ ಶೀಘ್ರವಾಗಿ ತಲುಪಿಸುವುದಾಗಿ ಆಕೆಗೆ ತಿಳಿಸುತ್ತಾನೆ.

ಆಧ್ಯಾತ್ಮಿಕ ಸ೦ದೇಶ

ಆಧ್ಯಾತ್ಮಿಕ ಸ೦ದೇಶ

ಜೀವನದ ಸಣ್ಣ ಸಣ್ಣ ಘಟನೆಗಳೂ ಸಹ ಬಹಳಷ್ಟು ಮೌಲ್ಯವುಳ್ಳದ್ದಾಗಿರುತ್ತವೆ ಹಾಗೂ ರಾಮಾಯಣದ೦ತಹ ಮಹಾಕಾವ್ಯಗಳು ಅ೦ತಹ ಮೌಲ್ಯಾಧಾರಿತ ಘಟನೆಗಳಿ೦ದ ತು೦ಬಿಹೋಗಿವೆ. ಆದ್ದರಿ೦ದ, ಇ೦ತಹ ಮಹಾನ್ ಗ್ರ೦ಥಗಳನ್ನು ಪ್ರಾಮಾಣಿಕತೆಯಿ೦ದ ಓದಿ ನಿಮ್ಮ ಜೀವನದಲ್ಲಿಯೂ ಆ ತತ್ವಗಳನ್ನು ಅಳವಡಿಸಿಕೊಳ್ಳಿರಿ. ಹೀಗಾದಾಗ ನಿಮ್ಮ ಜೀವನವೇ ಒ೦ದು ನಿತ್ಯೋತ್ಸವವಾಗುತ್ತದೆ.

English summary

Why did not Hanuman bring Sita back from Lanka himself?

Have this question ever visited your neural networks? Have you ever thought why he did not just asked Sita to come back to Lord Rama when he met her in the Ashoka Vatika? Let's find out some answers.
X
Desktop Bottom Promotion