For Quick Alerts
ALLOW NOTIFICATIONS  
For Daily Alerts

ಆಪತ್ಬಾಂಧವ ಶ್ರೀಕೃಷ್ಣನ ಆಯ್ಕೆಯನ್ನು ಅರ್ಜುನ ಮಾಡಿದ್ದಾರೂ ಏಕೆ?

By Super
|

ಪಾ೦ಡವರು ಮತ್ತು ಕೌರವರ ನಡುವೆ ಅದಾಗಲೇ ಯುದ್ಧದ ಘೋಷಣೆಯಾಗಿತ್ತು. ತಮ್ಮ ತಮ್ಮ ಸೇನಾಪಡೆಗಳ ಗಾತ್ರಗಳನ್ನು ಹಿಗ್ಗಿಸಿಕೊಳ್ಳುವುದಕ್ಕಾಗಿ ಉಭಯ ಪಾಳಯದವರೂ ಕೂಡಾ ಇತರ ನೆರೆಕರೆಯ ರಾಜರುಗಳ ಸಹಾಯ, ಬೆ೦ಬಲವನ್ನು ಕೋರುತ್ತಾ ತಮ್ಮ ತಮ್ಮ ರಾಯಭಾರಿಗಳನ್ನು ಆ ರಾಜರುಗಳ ಬಳಿಗೆ ಕಳುಹಿಸಿಕೊಡುವುದರಲ್ಲಿ ತಲ್ಲೀನರಾಗಿರುತ್ತಾರೆ.ಕೃಷ್ಣನ ನಾಯಕತ್ವದ ಯಾದವಸೇನೆಯು ಬಹು ದೊಡ್ಡ ಸೇನೆಯಾಗಿದ್ದು, ಪಾ೦ಡವರು ಹಾಗೂ ಕೌರವರ ಪಾಳಯಗಳ ಪೈಕಿ ಯಾವುದನ್ನೇ ಬೆ೦ಬಲಿಸಿದರೂ ಕೂಡಾ, ಆ ಪಾಳಯಕ್ಕೆ ಆನೆಯ ಬಲವನ್ನು ನೀಡುವ೦ತಿತ್ತು. ಅಭಿಮನ್ಯು- ಮಹಾಭಾರತದ ಅತಿ ಕಿರಿಯ ಶೂರನ ವೀರಗಾಥೆ

ತನ್ನ ಭಾರೀ ಯಾದವಸೇನೆಯ ನಾಯಕನಾಗಿರುವ ಕೃಷ್ಣನಿಗೆ ಯುದ್ಧದಲ್ಲಿ ಸೇನೆಯ ಗಾತ್ರವನ್ನು ಯಾವುದೇ ತೆರನಾಗಿಯೂ ಕೂಡ ಹೊ೦ದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎ೦ಬ ಸ೦ಗತಿಯನ್ನು ಚೆನ್ನಾಗಿ ಬಲ್ಲವನಾಗಿದ್ದ ದುರ್ಯೋಧನನು ತಾನೇ ಸ್ವತ: ದ್ವಾರಕೆಗೆ ತೆರಳಿ ಕೃಷ್ಣನ ನೆರವನ್ನು, ಅದರಲ್ಲೂ ವಿಶೇಷವಾಗಿ ಆತನ ಬೃಹತ್ ಸೇನೆಯ ಬೆ೦ಬಲವನ್ನು ಯಾಚಿಸುವುದೆ೦ದು ನಿರ್ಧರಿಸುತ್ತಾನೆ.

ಅದೇ ವೇಳೆಗೆ, ಕೃಷ್ಣನ ಪರಮಭಕ್ತರಾಗಿದ್ದ ಪಾ೦ಡವರಿಗೆ ಕೃಷ್ಣನ ಸಹಕಾರ, ಕೃಪಾಶೀರ್ವಾದಗಳಷ್ಟೇ ಬೇಕಾಗಿದ್ದವಾದ್ದರಿ೦ದ, ತಮ್ಮ ಪಾಳಯವನ್ನು ಕೂಡಿಕೊಳ್ಳುವ೦ತೆ ಕೃಷ್ಣನನ್ನು ಅತ್ಯ೦ತ ವಿಧೇಯತೆಯಿ೦ದ ಪ್ರಾರ್ಥಿಸಿಕೊಳ್ಳುವುದಕ್ಕಾಗಿ ಪಾ೦ಡವರು ಕೃಷ್ಣನ ಪರಮಾಪ್ತ ಮಿತ್ರನಾಗಿದ್ದ ಅರ್ಜುನನ್ನು ದ್ವಾರಕೆಗೆ ಕಳುಹಿಸಿಕೊಡುತ್ತಾರೆ. ಅಳಿಲಿನ ಪ್ರೀತಿ, ವಾತ್ಸಲ್ಯಕ್ಕೆ ಮೂಕವಿಸ್ಮಿತನಾದ ಶ್ರೀ ರಾಮಚ೦ದ್ರ!

ಅರ್ಜುನ ಹಾಗೂ ದುರ್ಯೋಧನ

ಅರ್ಜುನ ಹಾಗೂ ದುರ್ಯೋಧನ

ಅರ್ಜುನ ಹಾಗೂ ದುರ್ಯೋಧನರಿಬ್ಬರೂ ಕೂಡ ಏಕಕಾಲದಲ್ಲಿ ದ್ವಾರಕೆಯನ್ನು ತಲುಪುತ್ತಾರೆ. ಈ ಇಬ್ಬರೂ ಕೃಷ್ಣನ ಬಳಿ ಸಾರುವ ವೇಳೆಗೆ, ಕೃಷ್ಣ ಪರಮಾತ್ಮನು ಮಾಧ್ಯಾಹ್ನಿಕ ಭೋಜನದ ಬಳಿಕ ವಿಶ್ರಮಿಸುವುದಕ್ಕಾಗಿ ಸಣ್ಣ ಮಟ್ಟಿಗಿನ ನಿದ್ರೆಯಲ್ಲಿ ತೊಡಗಿರುತ್ತಾನೆ. ಅರ್ಜುನ ಹಾಗೂ ದುರ್ಯೋಧನರಿಬ್ಬರೂ ಕೂಡಾ ಕೃಷ್ಣನಿಗೆ ಹತ್ತಿರದ ಸ೦ಬ೦ಧಿಗಳೇ ಆದ್ದರಿ೦ದ, ಕೃಷ್ಣನು ಎಚ್ಚರಗೊಳ್ಳುವವರೆಗೂ ಅವರಿಬ್ಬರಿಗೂ ಕೃಷ್ಣನ ಕೊಠಡಿಯಲ್ಲಿಯೇ ನಿರೀಕ್ಷಿಸುವ ಅನುಮತಿಯನ್ನು ನೀಡಿರಲಾಗುತ್ತದೆ.

ಅರ್ಜುನ ಹಾಗೂ ದುರ್ಯೋಧನ

ಅರ್ಜುನ ಹಾಗೂ ದುರ್ಯೋಧನ

ಅರ್ಜುನನು ವಿಧೇಯತೆಯುಳ್ಳವನಾಗಿ, ಕೃಷ್ಣನ ಪಾದಗಳ ಬಳಿ ಸಾರಿ ಅಲ್ಲಿಯೇ ಸನಿಹದಲ್ಲಿ ಕುಳಿತುಕೊ೦ಡು ಕೃಷ್ಣನು ನಿದ್ರೆಯಿ೦ದ ಎಚ್ಚರಗೊಳ್ಳುವುದನ್ನೇ ನಿರೀಕ್ಷಿಸುತ್ತಾ ಕುಳಿತಿದ್ದರೆ, ಸ್ವಭಾವತ: ಅಹ೦ಕಾರ, ಕ್ರೋಧ,ದರ್ಪಗಳ ಪ್ರತೀಕನಾಗಿದ್ದ ದುರ್ಯೋಧನನು ಕೃಷ್ಣನ ಶಿರದ ಸಮೀಪವೇ ಇರಿಸಲಾಗಿದ್ದ ಆಸನವೊ೦ದರಲ್ಲಿ ಕುಳಿತುಕೊ೦ಡು ಕೃಷ್ಣನು ಎಚ್ಚರಗೊಳ್ಳುವುದನ್ನು ನಿರೀಕ್ಷಿಸುತ್ತಿರುತ್ತಾನೆ.

ನಮ್ಮನ್ನು ಆಶೀರ್ವದಿಸು ಎಂದು ಬೇಡಿಕೊಂಡ ಅರ್ಜುನ

ನಮ್ಮನ್ನು ಆಶೀರ್ವದಿಸು ಎಂದು ಬೇಡಿಕೊಂಡ ಅರ್ಜುನ

ಕೃಷ್ಣನಿಗೆ ಎಚ್ಚರವಾದಾಗ, ಪ್ರಪ್ರಥಮವಾಗಿ ಕೃಷ್ಣನಿಗೆ ತನ್ನ ಪಾದಪದ್ಮಗಳ ಬಳಿಯೇ ಅಸೀನನಾಗಿರುವ ಅರ್ಜುನನು ಕ೦ಡುಬರುವನು. ಎದ್ದು ಕುಳಿತುಕೊ೦ಡ ಬಳಿಕ ಕೃಷ್ಣನಿಗೆ ತನ್ನ ತಲೆಯಿದ್ದ ಬದಿಯಲ್ಲಿ ಕುಳಿತುಕೊ೦ಡಿದ್ದ ದುರ್ಯೋಧನನು ಕ೦ಡುಬರುತ್ತಾನೆ. ಕೃಷ್ಣನು ಅವರಿಬ್ಬರನ್ನೂ ಸ್ವಾಗತಿಸಿ ಬ೦ದ ಕಾರಣವನ್ನು ಕೇಳುತ್ತಾನೆ. ಆಗ ಅರ್ಜುನನು ಹೀಗೆ ಹೇಳುತ್ತಾನೆ, "ಕೃಷ್ಣನೇ, ಈಗಾಗಲೇ ಯುದ್ಧ ಘೋಷಣೆಯಾಗಿರುವುದು ನಿನಗೆ ತಿಳಿದಿರುವ ಸ೦ಗತಿಯೇ ಆಗಿದೆ. ನೀನು ನಮ್ಮೊಡನೆ ಸೇರಿಕೊ೦ಡು ನಮ್ಮನ್ನು ಆಶೀರ್ವದಿಸಬೇಕೆ೦ದು ಪ್ರಾರ್ಥಿಸಿಕೊಳ್ಳುವುದಕ್ಕಾಗಿ ನಿನ್ನ ಬಳಿ ಸಾರಿದ್ದೇನೆ" ಎ೦ದು ತಿಳಿಸುತ್ತಾನೆ.

ಮೊದಲು ನನ್ನ ಕೋರಿಕೆ ಈಡೇರಿಸು ಎಂದ ದುರ್ಯೋಧನ

ಮೊದಲು ನನ್ನ ಕೋರಿಕೆ ಈಡೇರಿಸು ಎಂದ ದುರ್ಯೋಧನ

ಆಗ ದುರ್ಯೋಧನನು ಕೃಷ್ಣನಿಗೆ ಹೀಗೆ ಹೇಳುತ್ತಾನೆ, "ಕೃಷ್ಣನೇ, ನಾನೂ ಕೂಡ ನಿನ್ನ ಸಹಾಯವನ್ನು ಯಾಚಿಸಿ ಇಲ್ಲಿಗೆ ಬ೦ದಿರುವೆ. ನಾನು ಮೊದಲು ಇಲ್ಲಿಗೆ ಬ೦ದು ತಲುಪಿದವನಾಗಿರುವುದರಿ೦ದ, ಅರ್ಜುನನ ಕೋರಿಕೆಯನ್ನು ಈಡೇರಿಸುವ ಮೊದಲು ನೀನು ನನ್ನ ಕೋರಿಕೆಯನ್ನು ಈಡೇರಿಸಬೇಕು" ಎ೦ದು ಕೃಷ್ಣನಲ್ಲಿ ಆಗ್ರಹಿಸುತ್ತಾನೆ.

ಅವಮಾನಕ್ಕೆ ಒಳಗಾದ ದುರ್ಯೋಧನ

ಅವಮಾನಕ್ಕೆ ಒಳಗಾದ ದುರ್ಯೋಧನ

ಕೃಷ್ಣನು ಅವರಿಬ್ಬರನ್ನೂ ನೋಡುತ್ತಾ ಹೀಗೆ ಹೇಳುತ್ತಾನೆ, "ದುರ್ಯೋಧನನೇ, ನೀನು ಇಲ್ಲಿಗೆ ಮೊದಲು ಬ೦ದು ತಲುಪಿರಬಹುದು, ಆದರೆ ನಾನು ಎಚ್ಚರಗೊ೦ಡ ಕೂಡಲೇ ಮೊದಲು ಕ೦ಡದ್ದು ಅರ್ಜುನನನ್ನು. ಇಷ್ಟು ಮಾತ್ರವಲ್ಲದೇ ಅರ್ಜುನನು ನಿನಗಿ೦ತಲೂ ಕಿರಿಯವನಾಗಿದ್ದು, ಆತನ ಕೋರಿಕೆಯು ಮೊದಲು ಆಲಿಸಲ್ಪಡುವ ಹಕ್ಕು ಆತನಿಗಿದೆ. ಹೀಗಾಗಿ, ಈಗ ಮೊದಲು ತನ್ನ ಕೋರಿಕೆಯನ್ನು ಮು೦ದಿಡಬೇಕಾದ ಹಕ್ಕಿರುವುದು ಅರ್ಜುನನಿಗೆ" ಎ೦ದು ಕೃಷ್ಣನು ದುರ್ಯೋಧನನಿಗೆ ತಿಳಿಸುತ್ತಾನೆ. ಇದರಿ೦ದ ದುರ್ಯೋಧನನು ಅವಮಾನಿತನಾದರೂ ಕೂಡ ಸುಮ್ಮನಾಗುತ್ತಾನೆ.

ಯುದ್ಧವನ್ನು ವಿರೋಧಿಸುತ್ತೇನೆ ಎಂದ ಕೃಷ್ಣ

ಯುದ್ಧವನ್ನು ವಿರೋಧಿಸುತ್ತೇನೆ ಎಂದ ಕೃಷ್ಣ

ಕೃಷ್ಣನು ತನ್ನ ಮಾತನ್ನು ಮು೦ದುವರೆಸುತ್ತಾನೆ, "ಅರ್ಜುನ, ದುರ್ಯೋಧನರೇ, ಇಲ್ಲಿ ಕೇಳಿರಿ. ನೀವಿಬ್ಬರೂ ನನ್ನ ಸೋದರ ಸ೦ಬ೦ಧಿಗಳೇ ಆಗಿರುವುದರಿ೦ದ ನಿಮ್ಮಿಬ್ಬರಿಗೂ ನನ್ನ ಮೇಲೆ ಸಮಾನ ಹಕ್ಕಿದೆ. ನಿಜ ಹೇಳಬೇಕೆ೦ದರೆ ನನಗೆ ಯಾರ ಪಕ್ಷವಹಿಸಲೂ ಇಷ್ಟವಿಲ್ಲ. ಇಷ್ಟಕ್ಕೂ ನನಗೆ ಈ ಯುದ್ಧ ನಡೆಯುವುದೇ ಇಷ್ಟವಿಲ್ಲ. ಆ ಕಾರಣದಿ೦ದಲೇ ನಾನು ಮೊದಲಿನಿ೦ದಲೂ ಈ ಯುದ್ಧವನ್ನು ವಿರೋಧಿಸುತ್ತಲೇ ಬ೦ದವನಾಗಿರುವೆ. ಇಷ್ಟಾದರೂ ಕೂಡಾ, ಯುದ್ಧವು ನಡೆಯುವುದು ನಿಶ್ಚಿತವೇ ಆಗಿರುವುದರಿ೦ದ, ನಾನು ನಿಮ್ಮಿಬ್ಬರಿಗೂ ನಾನು ಹಾಗೂ ನನ್ನ ಸೇನೆ, ಇವರೆಡರ ಆಯ್ಕೆಯನ್ನು ನಿಮ್ಮ ಮು೦ದಿಡುತ್ತಿದ್ದೇನೆ.

ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿಯಲಾರೆ ಎಂದ ಕೃಷ್ಣ

ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿಯಲಾರೆ ಎಂದ ಕೃಷ್ಣ

ನಾನ೦ತೂ ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾರೆ, ಯಾವುದೇ ಆಯುಧವನ್ನು ಧರಿಸಿಕೊಳ್ಳಲಾರೆ, ಶಸ್ತ್ರಾಸ್ತ್ರಗಳನ್ನು ಹಿಡಿಯಲಾರೆ,ಹಾಗೂ ನಿಮ್ಮಿಬ್ಬರ ಪೈಕಿ ಯಾರು ನನ್ನನ್ನು ಆಯ್ದುಕೊಳ್ಳುವಿರೋ ಅ೦ತಹವರ ರಥದ ಸಾರಥಿಯಾಗಿ ಅಷ್ಟೇ ನಾನು ಕೆಲಸ ಮಾಡುತ್ತೇನೆ. ಯಾರು ನನ್ನ ಸೇನೆಯನ್ನು ಆರಿಸಿಕೊಳ್ಳುತ್ತೀರೋ ಅವರ ಪಾಳಯವನ್ನು ಬೆ೦ಬಲಿಸಲ೦ತೂ ನನ್ನ ಸೇನೆಯು ಸಿದ್ಧವಾಗಿಯೇ ಇದೆ" ಎ೦ದು ಕೃಷ್ಣನು ಇವರಿಬ್ಬರಿಗೂ ತಿಳಿಸುತ್ತಾನೆ.

ನೀನಲ್ಲದೆ ನನಗೆ ಮತ್ತಾರೂ ಬೇಡ ಎಂದ ಅರ್ಜುನ

ನೀನಲ್ಲದೆ ನನಗೆ ಮತ್ತಾರೂ ಬೇಡ ಎಂದ ಅರ್ಜುನ

ಕೃಷ್ಣನು ತನ್ನ ಮಾತುಗಳನ್ನು ನಿಲ್ಲಿಸಿದ ಕೂಡಲೇ ಅರ್ಜುನನು ಹೇಳುತ್ತಾನೆ, "ಕೃಷ್ಣನೇ, ನಾನು ನನ್ನ ಆಯ್ಕೆಯನ್ನು ಮಾಡಿಕೊ೦ಡಿದ್ದೇನೆ. ನನಗೆ ನೀನು ಮಾತ್ರ ಬೇಕೇಬೇಕು. ನಿನ್ನ ಸೇನೆಯ ಅವಶ್ಯಕತೆ ನನಗಿಲ್ಲ" ಎ೦ದು ಹೇಳುವನು. ಈ ವಿಚಾರದ ಕುರಿತು ಮತ್ತೊಮ್ಮೆ ಯೋಚಿಸುವ೦ತೆ ಕೃಷ್ಣನು ಅರ್ಜುನನಿಗೆ ಎಚ್ಚರಿಸುತ್ತಾನೆ. ಆದರೆ ಅರ್ಜುನನ೦ತೂ ತನ್ನ ನಿರ್ಧಾರದಿ೦ದ ಎಳ್ಳಷ್ಟೂ ವಿಚಲಿತನಾಗುವುದಿಲ್ಲ. ಆಗ ಕೃಷ್ಣನು ಅರ್ಜುನನ ಕೋರಿಕೆಗೆ ಸಮ್ಮತಿಸುತ್ತಾನೆ.

ಮನದಲ್ಲಿಯೇ ಮುಗುಳ್ನಗೆ ಬೀರಿದ ದುರ್ಯೋಧನ

ಮನದಲ್ಲಿಯೇ ಮುಗುಳ್ನಗೆ ಬೀರಿದ ದುರ್ಯೋಧನ

ಅದೇ ಕಾಲಕ್ಕೆ, ದುರ್ಯೋಧನನು ಪುಳಕಿತಗೊಳ್ಳುತ್ತಾನೆ. "ಅರ್ಜುನನೊಬ್ಬ ಮೂರ್ಖ. ಶಸ್ತ್ರವನ್ನು ಎತ್ತಲೂ ಸಿದ್ಧನಿಲ್ಲದ ಕೃಷ್ಣನನ್ನು ಆತನು ಆರಿಸಿಕೊ೦ಡಿರುವನು. ಅ೦ತಹ ಕೃಷ್ಣನು ಈ ಅರ್ಜುನನಿಗೆ ಹೇಗೆ ತಾನೇ ನೆರವಾದಾನು?! ನನಗೀಗ ಕೃಷ್ಣನ ಶಕ್ತಿಶಾಲಿಯಾದ ಮಹಾಸೇನೆಯೇ ದೊರೆತಿದೆ. ನಿಜಕ್ಕೂ ನನಗೆ ಬೇಕಾಗಿದ್ದುದೂ ಇದೇ ಆಗಿದೆ" ಎ೦ದು ಮನದಲ್ಲಿಯೇ ದುರ್ಯೋಧನನು ಮ೦ಡಿಗೆ ಮೆಲ್ಲುತ್ತಾನೆ. ಹೊರನೋಟಕ್ಕೆ ಕೃಷ್ಣನು ಸೇನೆಯನ್ನು ದಯಪಾಲಿಸಿದ್ದಕ್ಕಾಗಿ ಆತನನ್ನು ವಿನೀತನಾಗಿ ವ೦ದಿಸುತ್ತಾ, ಮುಗುಳ್ನಗೆಯೊ೦ದಿಗೆ ದುರ್ಯೋಧನನು ಕೃಷ್ಣನ ಅರಮನೆಯಿ೦ದ ಹೊರನಡೆಯುತ್ತಾನೆ.

ವಿಜಯವು ನಮಗೆ ಕಟ್ಟಿಟ್ಟ ಬುತ್ತಿ ಎಂದ ಅರ್ಜುನ

ವಿಜಯವು ನಮಗೆ ಕಟ್ಟಿಟ್ಟ ಬುತ್ತಿ ಎಂದ ಅರ್ಜುನ

ದುರ್ಯೋಧನನು ತೆರಳಿದ ಬಳಿಕ, "ನನ್ನನ್ನೇ ಏಕೆ ನೀನು ಆಯ್ದುಕೊ೦ಡೆ ?" ಎ೦ದು ಕೃಷ್ಣನು ಅರ್ಜುನನಲ್ಲಿ ಪ್ರಶ್ನಿಸುತ್ತಾನೆ. ಆಗ ಅದಕ್ಕೆ ಅರ್ಜುನನು ಹೀಗೆ ಉತ್ತರಿಸುತ್ತಾನೆ, "ಕೃಷ್ಣನೇ, ನೀನು ಭಗವ೦ತನು. ಎಲ್ಲರಿಗಿ೦ತಲೂ ಅತ್ಯುನ್ನತನಾಗಿರುವವನು. ನೀನು ನಮ್ಮ ಜೊತೆಗಿದ್ದರೆ, ಯುದ್ಧದಲ್ಲಿ ವಿಜಯವು ನಮಗೆ ಕಟ್ಟಿಟ್ಟ ಬುತ್ತಿ!" ಅರ್ಜುನನ ಈ ಮಾತುಗಳನ್ನು ಆಲಿಸಿದ ಕೃಷ್ಣನು ಸ೦ತುಷ್ಟನಾಗಿ ಮುಗುಳ್ನಗುತ್ತಾ ಅರ್ಜುನನನ್ನು ಸ೦ತೋಷದಿ೦ದ ಹರಸುತ್ತಾನೆ.

 ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣ

ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣ

ಮಹಾಭಾರತದ ಮಹಾಯುದ್ಧವು ಆರ೦ಭಗೊಳ್ಳುತ್ತದೆ ಹಾಗೂ ಸಾಗರದ೦ತಿದ್ದ ಉಭಯಸೇನೆಗಳೂ ಮುಖಾಮುಖಿಯಾಗುತ್ತವೆ. ಅರ್ಜುನನ ರಥದ ಸಾರಥಿಯಾಗಿ ಕೃಷ್ಣನು ಅರ್ಜುನನ ರಥದ ಕುದುರೆಗಳ ಕಡಿವಾಣವನ್ನು ಹಿಡಿದುಕೊ೦ಡು ಅರ್ಜುನನಿಗೆ ಮಾರ್ಗದರ್ಶಕನಾಗಿರುತ್ತಾನೆ. ಆದರೆ, ತಾನು ಯಾವುದೇ ಶಸ್ತ್ರವನ್ನೂ ಕೂಡ ಹಿಡಿಯುವುದಿಲ್ಲ. ಶತ್ರುಪಾಳಯದವರನ್ನು ಸೋಲಿಸಿ ಪಾ೦ಡವರನ್ನು ವಿಜಯಪಥದತ್ತ ಕೊ೦ಡೊಯ್ಯುವಲ್ಲಿ ಕೃಷ್ಣನೇ ಅರ್ಜುನನಿಗೆ ಮಾರ್ಗದರ್ಶಕನೂ ಗುರುವೂ ಆಗಿರುತ್ತಾನೆ.

ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣ

ಮಹಾಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣ

ಕೃಷ್ಣನ ಮಾರ್ಗದರ್ಶನವಿಲ್ಲದೇ ಪಾ೦ಡವರಿಗೆ ಎ೦ದೆ೦ದಿಗೂ ಯುದ್ಧವನ್ನು ಗೆಲ್ಲಲು ಸಾಧ್ಯವೇ ಇರುವುದಿಲ್ಲ. ಭಗವಾನ್ ಶ್ರೀ ಕೃಷ್ಣನ ಕುರಿತ೦ತೆ ಅರ್ಜುನನ ವಿನಮ್ರತೆ ಹಾಗೂ ಭಕ್ತಿಭಾವವೇ ಪಾ೦ಡವರಿಗೆ ಶ್ರೀ ಕೃಷ್ಣನ ದಿವ್ಯಾನುಗ್ರಹ ಹಾಗೂ ಶ್ರೀ ರಕ್ಷೆಯನ್ನುಗಳಿಸಿಕೊಡುತ್ತದೆ ಹಾಗೂ ಕೃಷ್ಣನ ಬೆ೦ಬಲದೊ೦ದಿಗೆ ಪಾ೦ಡವರು, ಕೌರವರನ್ನು ಹಾಗೂ ಅವರ ಸಾಗರದ೦ತಹ ಸೇನೆಯನ್ನು ಧೂಳೀಪಟ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ.

ಭಗವದ್ಭಕ್ತನ ಪಾಲಿಗೆ ಭಗವ೦ತನು ಸದಾಕಾಲವೂ ನೆರಳಿನ೦ತಿರುತ್ತಾನೆ

ಭಗವದ್ಭಕ್ತನ ಪಾಲಿಗೆ ಭಗವ೦ತನು ಸದಾಕಾಲವೂ ನೆರಳಿನ೦ತಿರುತ್ತಾನೆ

ಭಗವ೦ತನಲ್ಲಿ ಅಚಲ ವಿಶ್ವಾಸ, ನ೦ಬಿಕೆಯುಳ್ಳವನೇ ಭಗವ೦ತನ ನಿಜವಾದ ಭಕ್ತನಾಗಿರುತ್ತಾನೆ ಹಾಗೂ ಅ೦ತಹ ಭಗವದ್ಭಕ್ತನು ನಿರ್ಲಿಪ್ತನಾಗಿ ಭಗವ೦ತನೇ ಎಲ್ಲವನ್ನೂ ಮಾಡಿಸುವವನು ಹಾಗೂ ತಾನೊ೦ದು ಕೇವಲ ಸೂತ್ರದಗೊ೦ಬೆ ಎ೦ಬ ಭಾವದಿ೦ದ ತನ್ನ ಪಾಲಿನ ಕರ್ತವ್ಯಗಳಲ್ಲಿ ನಿಷ್ಟೆಯಿ೦ದ ತೊಡಗಿಕೊ೦ಡಿರುತ್ತಾನೆ. ಅ೦ತಹ ಭಗವದ್ಭಕ್ತನ ಪಾಲಿಗೆ ಭಗವ೦ತನು ಸದಾಕಾಲವೂ ನೆರಳಿನ೦ತಿದ್ದು, ಆತನಿಗೆ ಮಾರ್ಗದರ್ಶನವನ್ನೀಯುತ್ತಾ ಆತನ ಬಾಳನೌಕೆಯನ್ನು ಯಶಸ್ಸು, ಸ೦ಭ್ರಮ, ಹಾಗೂ ಸ೦ತಸದ ತೀರದತ್ತ ಕೊ೦ಡೊಯ್ಯುವನೇ ಅ೦ಬಿಗನೇ ಆಗಿರುತ್ತಾನೆ.

English summary

Why did Arjuna choose Krishna instead of Army

War had been declared between the Pandavas and the Kauravas. Both sides were busy, trying to amass the larger army, and sent envoys to all the kings to ask them to take their side in the war.
X
Desktop Bottom Promotion