For Quick Alerts
ALLOW NOTIFICATIONS  
For Daily Alerts

ಶಿವಲಿಂಗವನ್ನು ಸ್ಪರ್ಶಿಸಲು ಮಹಿಳೆಯರಿಗೆ ಏಕೆ ಅವಕಾಶವಿಲ್ಲ?

By Super
|

ಶಿವಲಿಂಗವನ್ನು ಶಿವ (ಲೋಕವಿನಾಶಕ) ಮತ್ತು ಪಾರ್ವತಿ (ಶಕ್ತಿಯ ದೇವತೆ)ಯರ ಸಂಗಮವೆಂದು ಭಾವಿಸಲಾಗುತ್ತದೆ. ಈ ಶಿವಲಿಂಗವನ್ನು ಪೂಜಿಸುವವರು ಪುರುಷರು ಮಾತ್ರ ನೆರವೇರಿಸಬೇಕು ಎಂಬ ನಂಬಿಕೆ ಪ್ರಚಲಿತವಾಗಿದೆ.

ಮಹಿಳೆಯರು, ಅದರಲ್ಲೂ ವಿಶೇಷವಾಗಿ ಅವಿವಾಹಿತ ಕನ್ಯೆಯರು ಈ ಪೂಜೆಯನ್ನು ನಡೆಸಬಾರದು ಎಂಬ ನಂಬಿಕೆ ಬೆಳೆದುಬಂದಿದೆ. ಇದು ಸತ್ಯವೇ? ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದೆ. ಭಗವಾನ್ ಶಿವನನ್ನು ಲಿಂಗರೂಪದಲ್ಲಿ ಏಕೆ ಆರಾಧಿಸುತ್ತಾರೆ?

ಶಿವಲಿಂಗದ ಪೂಜೆ

ಶಿವಲಿಂಗದ ಪೂಜೆ

ಶಿವಲಿಂಗವನ್ನು ಕನ್ಯೆಯರು ಮುಟ್ಟುವುದು ಅಥವಾ ಇದಕ್ಕೆ ಪ್ರದಕ್ಷಿಣೆ ಬರುವುದರಿಂದ ಭಗವಂತ ಶಿವನ ತಪಸ್ಸು ಭಂಗಗೊಳ್ಳಬಹುದು ಮತ್ತು ಲಿಂಗದ ಪಾವಿತ್ರ್ಯತೆ ಕೆಡಬಹುದು ಎಂಬ ನಂಬಿಕೆಯಿಂದ ಕೇವಲ ಪುರುಷರಿಗೆ ಇದರ ಪೂಜೆಯನ್ನು ಅರ್ಹಗೊಳಿಸಲಾಗಿದೆ.

ಪವಿತ್ರ ವಿಧಿಗಳು

ಪವಿತ್ರ ವಿಧಿಗಳು

ಶಿವಲಿಂಗದ ಪೂಜೆ ಪವಿತ್ರವಾದ ವಿಧಿಯಾಗಿದ್ದು ಇದರಲ್ಲಿ ಯಾವುದೇ ಲೌಕಿಕ ಕಾಮನೆ ಅಥವಾ ಬಯಕೆಗಳಿರಬಾರದು. ಶಿವಲಿಂಗಗಳಿರುವ ಈ ಸ್ಥಳಗಳು ಸಾಮಾನ್ಯವಾಗಿ ದುರ್ಗಮ ಪ್ರದೇಶದಲ್ಲಿದ್ದು ನಶ್ವರದೇಹಿಗಳಾದ ಮನುಷ್ಯರು ಬಳಿಬರುವುದನ್ನು ತಡೆಯಲಾಗಿದೆ. ಆದರೆ ಪೂಜೆಯನ್ನು ನಡೆಸುವುದು ಅನಿವಾರ್ಯವಾದುದರಿಂದ ಪುರುಷರು ಮಾತ್ರ ಬಳಿ ಬರಬಹುದು ಎಂದು ಹೇಳಲಾಗಿದೆ.

ಪೂಜೆಯ ವೇಳೆಯಲ್ಲಿ ವಹಿಸಬೇಕಾದ ಅತಿ ಕಾಳಜಿ

ಪೂಜೆಯ ವೇಳೆಯಲ್ಲಿ ವಹಿಸಬೇಕಾದ ಅತಿ ಕಾಳಜಿ

ತಪಸ್ಸಿನಲ್ಲಿರುವ ಶಿವನ ಏಕಾಗ್ರತೆಯನ್ನು ಭಂಗಗೊಳಿಸದಿರಲು ಅತಿಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇಂದ್ರಲೋಕದ ಅಪ್ಸರೆಯರು ಮತ್ತು ದೇವಿಯರೇ ಶಿವನ ತಪಸ್ಸನ್ನು ಭಂಗಗೊಳಿಸದಿರಲು ಎಚ್ಚರಿಕೆ ವಹಿಸುತ್ತಿರುವಾಗ ಮನುಷ್ಯರಂತೂ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಪೂಜೆಗೆ ಸಂಬಂಧಿಸಿದ ದಂತಕಥೆ

ಪೂಜೆಗೆ ಸಂಬಂಧಿಸಿದ ದಂತಕಥೆ

ತಪಸ್ಸಿನಲ್ಲಿರುವ ಶಿವನಿಗೆ ಉದ್ದೇಶಪೂರ್ವಕವಲ್ಲದ ಯಾವುದೇ ಚಟುವಟಿಕೆ ಭಂಗ ತಂದರೂ ಆತನ ಕೋಪವನ್ನು ಈ ಭೂಮಿ ತಾಳಿಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಮಹಿಳೆಯರಿಗೆ ಶಿವಲಿಂಗದ ಬಳಿ ಬರುವುದನ್ನು ನಿಷೇಧಿಸಲಾಗಿದೆ ಎಂದು ಒಂದು ದಂತಕಥೆ ಹೇಳುತ್ತದೆ.

ಕನ್ಯೆಯರು ಪೂಜೆ ನೆರವೇರಿಸುವಂತಿಲ್ಲ

ಕನ್ಯೆಯರು ಪೂಜೆ ನೆರವೇರಿಸುವಂತಿಲ್ಲ

ಕನ್ಯೆಯರು ಶಿವನ ಪೂಜೆಯನ್ನು ನೆರವೇರಿಸುವಂತಿಲ್ಲವೇ? ಇದೆ, ಆದರೆ ಕೇವಲ ಶಿವನನ್ನು ಮಾತ್ರ ಪೂಜಿಸುವಂತಿಲ್ಲ, ಶಿವ ಮತ್ತು ಪಾರ್ವತಿಯರು ಜೊತೆಗಿರುವಂತಿದ್ದಾಗ ಮಾತ್ರ ಪೂಜಿಸಬಹುದು.

ಹದಿನಾರು ಸೋಮವಾರ ವ್ರತ

ಹದಿನಾರು ಸೋಮವಾರ ವ್ರತ

ಕನ್ಯೆಯರು ಪ್ರತಿ ಸೋಮವಾರದಂದು ಒಟ್ಟು ಹದಿನಾರು ವಾರಗಳ ಕಾಲ ಪೂಜಿಸುವ ವ್ರತ ಪಾಲಿಸಿದರೆ ಶುಭವಾಗುವುದೆಂದು ನಂಬಲಾಗಿದೆ.

ಸೋಮವಾರ ಶಿವನಿಗೆ ಪ್ರಿಯವಾದ ದಿನ

ಸೋಮವಾರ ಶಿವನಿಗೆ ಪ್ರಿಯವಾದ ದಿನ

ಶಿವನಿಗೆ ಸೋಮವಾರ ಪ್ರಿಯವಾದ ದಿನವೆಂದು ನಂಬಲಾಗಿದೆ. ಶಿವನೊಬ್ಬ ಮಾದರಿ ಪತಿಯೆಂದು ಪರಿಗಣಿಸಲಾಗುತ್ತದೆ. ಅಂತೆಯೇ ಸೋಮವಾರದಂದು ಉಪವಾಸವಿದ್ದು ಪೂಜಿಸುವ ಮೂಲಕ ಶಿವನಂತಹ ಪತಿಯೇ ದೊರಕುತ್ತಾನೆ ಎಂಬ ನಂಬಿಕೆ ಪ್ರಚಲಿತವಾಗಿದೆ.

ಭೋಲೆನಾಥನಿಗಾಗಿ ಉಪವಾಸ

ಭೋಲೆನಾಥನಿಗಾಗಿ ಉಪವಾಸ

ಸೋಮವಾರದಂದು ಉಪವಾಸವಿರುವುದರ ಜೊತೆಗೇ ಹಿಂದೂ ಕ್ಯಾಲೆಂಡರ್ ನ ಶ್ರಾವಣ ಮಾಸದಲ್ಲಿಯೂ ಉಪವಾಸವಿರುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ಲಭಿಸುವುದು ಎಂದು ನಂಬಲಾಗಿದೆ.

ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಗಳು

ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಗಳು

ಶಿವನ ಪೂಜೆ ಪ್ರತಿ ರಾಜ್ಯದಲ್ಲಿಯೂ ಬೇರೆ ಬೇರೆ ತೆರನಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಗರ್ಭಗುಡಿಯಲ್ಲಿ ಪೂಜಾರಿಯನ್ನು ಬಿಟ್ಟು ಬೇರಾರಿಗೂ ಪ್ರವೇಶವಿಲ್ಲ. ಅದೇ ಉತ್ತರ ಭಾರತದಲ್ಲಿ ವಿಂಧ್ಯಪರ್ವತದಲ್ಲಿರುವ ದೇವಾಲಯಗಳಲ್ಲಿ ಭಕ್ತರಿಗೆ ಶಿವಲಿಂಗದ ದರ್ಶನ ಲಭ್ಯವಿದೆ ಮತ್ತು ಪೂಜೆಗೂ ಅವಕಾಶವಿದೆ.

ಮನೆಯಲ್ಲಿಯೇ ಪೂಜೆ

ಮನೆಯಲ್ಲಿಯೇ ಪೂಜೆ

ದಕ್ಷಿಣ ಭಾರತದಲ್ಲಿ ಮನೆಯಲ್ಲಿಯೇ ಪುರುಷರು ಶಿವಲಿಂಗಕ್ಕೆ ಅಭಿಶೇಕ ನೀಡುವ ಮೂಲಕ ಪೂಜೆ ನಡೆಸಬಹುದು. ಪೂಜೆಯಲ್ಲಿ ಸಾಲಿಗ್ರಾಮ ಅಥವಾ ವಿಗ್ರಹಗಳನ್ನು ಅರ್ಪಿಸಬಹುದು. ಮಹಿಳೆಯರು ಇವರ ಪೂಜೆಗೆ ನೆರವಾಗಬಹುದು ಹಾಗೂ ಪೂಜೆಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸಬಹುದು.

ಶಿವಾಲಯಗಳು

ಶಿವಾಲಯಗಳು

ಭಾರತದಾದ್ಯಂತ ಲಕ್ಷಗಟ್ಟಲೆ ಶಿವಾಲಯಗಳಿವೆ. ಇವುಗಳಲ್ಲಿ ಹೆಚ್ಚಿನವು ನದಿತಟದಲ್ಲಿದ್ದು ಮಹಿಳೆಯರು ನಿತ್ಯರೂ ಪೂಜೆ ಸಲ್ಲಿಸುತ್ತಾರೆ.

ಶಿವಲಿಂಗಕ್ಕೆ ನೀರಿನ ಅರ್ಚನೆ

ಶಿವಲಿಂಗಕ್ಕೆ ನೀರಿನ ಅರ್ಚನೆ

ನದಿಯಲ್ಲಿ ಮುಳುಗು ಹಾಕಿದ ಬಳಿಕ ಶಿವಲಿಂಗಕ್ಕೆ ನೀರಿನಿಂದ ಅರ್ಚನೆ ಮಾಡುವುದು ಒಂದು ವಿಧಿಯಾಗಿದೆ. ಇದಕ್ಕೆ ಯಾವುದೇ ನಿರ್ಬಂಧವಿಲ್ಲ.

ಲಿಂಗಪುರಾಣ

ಲಿಂಗಪುರಾಣ

ಲಿಂಗಪುರಾಣದ ಪ್ರಕಾರ ಪುರುಷರೆಲ್ಲರೂ ಶಿವನ ಅಂಶವಾಗಿದ್ದು ಮಹಿಳೆಯರೆಲ್ಲರೂ ಪಾರ್ವತಿಯ ಒಂದು ಅಂಶವಾಗಿದ್ದಾರೆ. ರಾಮಾಯಣದಲ್ಲಿಯೂ ಸೀತೆ ಶಿವ ಮತ್ತು ಕಾತ್ಯಾಯನಿಯ ರೂಪದ ಪಾರ್ವತಿಯನ್ನು ಆರಾಧಿಸುವುದನ್ನು ಬಣ್ಣಿಸಲಾಗಿದೆ.

ರಾಮೇಶ್ವರದ ಮರಳಿನ ಲಿಂಗ

ರಾಮೇಶ್ವರದ ಮರಳಿನ ಲಿಂಗ

ತಮಿಳುನಾಡಿನ ರಾಮೇಶ್ವರದಲ್ಲಿ ಮರಳಿನ ಲಿಂಗವೊಂದಿದೆ. ಇದು ಸೀತೆ ನಿರ್ಮಿಸಿದ್ದು ಎಂಬ ನಂಬಿಕೆ ಇದೆ. ಹನುಮಂತನು ಕಾಶಿಯಿಂದ ಶಿವಲಿಂಗವೊಂದನ್ನು ತರಲು ಹೋಗಿದ್ದಾಗ ಕಾಯುತ್ತಿದ್ದ ಶ್ರೀರಾಮ ಈ ವೇಳೆಯಲ್ಲಿ ಈ ಲಿಂಗವನ್ನು ಪೂಜಿಸಿದ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ಭಕ್ತಿಯೇ ಪರಮಸತ್ಯ

ಭಕ್ತಿಯೇ ಪರಮಸತ್ಯ

ಶಿವನನ್ನು ಆರಾಧಿಸಲು ಪವಿತ್ರವಾದ ಹೃದಯ ಮತ್ತು ಭಕ್ತಿಯ ಅಗತ್ಯವಿದೆ. ಭಕ್ತಿಯಿಂದ ಆರಾಧಿಸಿದವರಿಗೆ ಶಿವ ಪ್ರಸನ್ನನಾಗುತ್ತಾನೆ. ಶಿವನಲ್ಲಿ ನಂಬಿಕೆ, ಅಚಲ ವಿಶ್ವಾಸ ಮತ್ತು ಶ್ರದ್ದೆ ಪೂಜೆ ಸಫಲಗೊಳ್ಳಲು ಅಗತ್ಯವಾಗಿವೆ.

English summary

Why are Unmarried Women prohibited from touching Shivlinga?

The lingam is frequently represented alongside the yoni, a symbol of the goddess or of Shakti, female creative energy. It is believed that the Puja of Linga should only be carried by men and not women. Especially Unmarried Women should not do Shiv Linga Puja. Is this true? Let’s discover all facts related to this.
Story first published: Monday, August 10, 2015, 13:08 [IST]
X
Desktop Bottom Promotion