For Quick Alerts
ALLOW NOTIFICATIONS  
For Daily Alerts

ಸಾಷ್ಟಾಂಗ ನಮಸ್ಕಾರ ಮಾಡಿ ದೇವರ ದಯೆ ಪಡೆಯಿರಿ

By Manu
|

ಆಸ್ತಿಕರಾಗಿರುವ ಪ್ರತಿಯೊಬ್ಬರಿಗೂ ದೇವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಇದಕ್ಕಾಗಿಯೇ ಅವರು ಆಗಾಗ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆದು, ಪೂಜಾಧಿಗಳನ್ನು ನೆರವೇರಿಸಿಕೊಂಡು ಬರುತ್ತಾರೆ, ಅಲ್ಲದೆ ದೇವರ ಸಮ್ಮುಖದಲ್ಲಿ ನಿಂತುಕೊಂಡು ತಮ್ಮ ಕಷ್ಟಗಳಿಗೆ ಆದಷ್ಟು ಬೇಗ ಪರಿಹಾರ ಕಾಣುವಂತೆ ಮಾಡು ದೇವರೇ, ಎಂದು ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿಕೊಂಡು, ಬಳಿಕ ಪ್ರದಕ್ಷಿಣೆ ಹಾಕಿ ನಮಸ್ಕಾರ ಹಾಕುತ್ತಾರೆ. ಗುರು ಹಿರಿಯರ ಪಾದ ಸ್ಪರ್ಶ ಮಾಡುವುದರ ಉದ್ದೇಶ ತಿಳಿದಿದ್ದೀರಾ?

ಕೆಲವರು ಅರ್ಧಬಗ್ಗಿ ನಮಸ್ಕಾರ ಮಾಡಿದರೆ, ಮತ್ತೆ ಕೆಲವರು ಉದ್ದಗೆ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಈ ಸಾಷ್ಟಾಂಗ ನಮಸ್ಕಾರವನ್ನು ದಂಡಕ ನಮಸ್ಕಾರ ಮತ್ತು ಉದ್ದಾಂಡ ನಮಸ್ಕಾರ ಎಂದು ಕರೆಯುತ್ತಾರೆ. ನೆಲದಲ್ಲಿ ಬಿದ್ದ ಕೋಲಿನಂತೆ ನಮಸ್ಕಾರ ಮಾಡುವುದು ದಂಡಕ ನಮಸ್ಕಾರದ ಅರ್ಥವಾಗಿದೆ.

ನೆಲದ ಮೇಲೆ ಬಿದ್ದಿರುವ ಕೋಲಿಗೆ ಯಾವುದೇ ನೆರವು ಇರುವುದಿಲ್ಲ. ಅದು ಕೇವಲ ಬಿದ್ದಿರುತ್ತದೆ. ಅದೇ ರೀತಿ ದೇವರ ಮುಂದೆ ನಾವು ಸಾಷ್ಟಾಂಗ ನಮಸ್ಕಾರ ಮಾಡಿ ನಮ್ಮ ಸಮಸ್ಯೆಗಳನ್ನು ದೇವರಲ್ಲಿ ಹೇಳಿಕೊಳ್ಳಬೇಕು. ಮತ್ತೊಂದು ಅರ್ಥದಲ್ಲಿ ಹೇಳುವುದಾದರೆ ನಾನು ದೇವರಿಗೆ ಸಂಪೂರ್ಣವಾಗಿ ಶರಣಾಗಿದ್ದೇನೆ ಎಂದು ಸಾಷ್ಟಾಂಗ ನಮಸ್ಕಾರ ಮೂಲಕ ಹೇಳುವುದು. ಬನ್ನಿ ಸಾಷ್ಟಾಂಗ ನಮಸ್ಕಾರದ ಇನ್ನಷ್ಟು ಪ್ರಾಮುಖ್ಯತೆಯನ್ನು ತಿಳಿಯೋಣ....

 ಸಾಷ್ಟಾಂಗ ನಮಸ್ಕಾರ ಮಹತ್ವ

ಸಾಷ್ಟಾಂಗ ನಮಸ್ಕಾರ ಮಹತ್ವ

ದೇವರ ಮುಂದೆ ನಮ್ಮ ಅಹಂಕಾರವನ್ನು ತ್ಯಜಿಸುವುದು ಇದರರ್ಥ ಕೂಡ. ತಲೆಯನ್ನು ಬೇರೆಯವರು ತಗ್ಗಿಸುವಂತೆ ಮಾಡಿದರೆ ಅದು ಅಗೌರವ. ಆದರೆ ನಾವಾಗಿಯೇ ತಲೆಯನ್ನು ತಗ್ಗಿಸಿದರೆ ಅದು ಗೌರವ ಎನ್ನುವುದು ನಮಸ್ಕಾರದ ಅರ್ಥವಾಗಿದೆ. ಸನ್ಯಾಸಿಗಳು, ಗುರುಗಳು ಹಾಗೂ ಹಿರಿಯರ ಮುಂದೆ ಇಂತಹ ನಮಸ್ಕಾರ ಮಾಡಿದಾಗ ನಿಮ್ಮ ಪ್ರಾರ್ಥನೆಯು ಅವರ ಮೂಲಕ ದೇವರಿಗೆ ತಲುಪಲಿದೆ ಎನ್ನುವ ನಂಬಿಕೆಯಿದೆ. ನಮಸ್ಕಾರವನ್ನು ಸ್ವೀಕರಿಸುವಾತ ಇದು ತನಗೆ ಮಾಡಿದಂತಹ ನಮಸ್ಕಾರವಲ್ಲ, ಇದನ್ನು ದೇವರಿಗೆ ಮುಟ್ಟಿಸಿ ನಮಸ್ಕಾರ ಮಾಡಿದಾತನಿಗೆ ಅದರ ಶ್ರೇಯಸ್ಸನ್ನು ತಲುಪಿಸಬೇಕಾಗಿದೆ ಎಂದು ಭಾವಿಸಬೇಕು.

ಸಾಷ್ಟಾಂಗ ನಮಸ್ಕಾರ ಮಾಡುವುದು ಹೇಗೆ?

ಸಾಷ್ಟಾಂಗ ನಮಸ್ಕಾರ ಮಾಡುವುದು ಹೇಗೆ?

ನೆಲಕ್ಕೆ ಹೊಟ್ಟೆ ತಾಗುವಂತೆ ಮಲಗಿಕೊಂಡು ಎಲ್ಲಾ ಎಂಟು ಅಂಗಾಂಗಗಳು ನೆಲಕ್ಕೆ ಮುಟ್ಟುತ್ತಿರಬೇಕು. ಎದೆ, ತಲೆ, ಕೈ, ಕಾಲುಗಳು, ಮೊಣಕಾಲು, ದೇಹ ಮತ್ತು ಮಾತು ಇವುಗಳು ನೆಲವನ್ನು ಮುಟ್ಟುತ್ತಿರಬೇಕು. ಇಂತಹ ನಮಸ್ಕಾರವನ್ನು ಹೆಚ್ಚಾಗಿ ಪುರುಷರು ಮಾಡುತ್ತಾರೆ.

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆಯಾ?

ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆಯಾ?

ಕೆಲವೊಂದು ಪುರಾಣಗಳ ಪ್ರಕಾರ ಮಹಿಳೆಯರು ಸಾಷ್ಟಾಂಗ ನಮಸ್ಕಾರ ಮಾಡುವಾಗ ಅವರ ಗರ್ಭ ಮತ್ತು ಸ್ತನ ನೆಲಕ್ಕೆ ತಾಗುವುದಿಲ್ಲವೆನ್ನಲಾಗಿದೆ.

ಮಹಿಳೆಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಯಾಕೆ ಬಿಡುವುದಿಲ್ಲ?

ಮಹಿಳೆಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಯಾಕೆ ಬಿಡುವುದಿಲ್ಲ?

ಮಹಿಳೆಯರು ಸಾಷ್ಟಾಂಗ ನಮಸ್ಕಾರವನ್ನು ಮಾಡುವಂತಿಲ್ಲ. ಆದರೆ ಪಂಚಾಂಗ ನಮಸ್ಕಾರವನ್ನು ಮಾಡಬಹುದು. ಮಹಿಳೆಯರ ಮೊಣಕಾಲುಗಳು ಜತೆಯಾಗಿ ನೆಲಕ್ಕೆ ತಾಗುವುದು ಮತ್ತು ಪಾದಗಳು ಕೂಡ ನೆಲಕ್ಕೆ ತಾಗಿ ಮಾಡುವಂತಹ ನಮಸ್ಕಾರವನ್ನು ಪಂಚಾಂಗ ನಮಸ್ಕಾರವೆನ್ನುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಹಿಳೆಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಯಾಕೆ ಬಿಡುವುದಿಲ್ಲ?

ಮಹಿಳೆಯರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಯಾಕೆ ಬಿಡುವುದಿಲ್ಲ?

ಸಾಷ್ಟಾಂಗ ನಮಸ್ಕಾರ ಮಾಡುವಾಗ ಮಹಿಳೆಯರ ಗರ್ಭ ಮತ್ತು ಸ್ತನ ನೆಲಕ್ಕೆ ತಾಗುವುದಿಲ್ಲವೆಂದು ಪುರಾಣಗಳು ಹೇಳುತ್ತದೆ. ಸ್ತನಗಳು ಮಹಿಳೆಯ ದೇಹದ ಅಂಗವಾಗಿದ್ದು, ಇದು ಮಗುವಿಗೆ ಹಾಲನ್ನು ನೀಡುವುದು ಮತ್ತು ಗರ್ಭವು ಶಿಶುವಿಗೆ ಜನ್ಮವನ್ನು ನೀಡುತ್ತದೆ. ಇದರಿಂದ ಇದೆರಡು ನೆಲಕ್ಕೆ ಮುಟ್ಟಬಾರದು ಎಂದು ನಂಬಲಾಗಿದೆ.

English summary

What Is The Significance Of The Sashtanga Namaskara?

A sashtanga namaskar is one of the many types of namaskar, where is which all the body parts or angas touch the ground. This type of namaskara is also commonly known as the "dandakara namaskaram" and "uddanda namaskara". According to the theory, the word "danda" means "stick". Therefore, the dandakara namaskaram is where the person doing the namaskara lies on the ground just like a fallen stick.
X
Desktop Bottom Promotion