For Quick Alerts
ALLOW NOTIFICATIONS  
For Daily Alerts

ಹಿಂದೂ ಧರ್ಮದಲ್ಲಿ ಪ್ರಾರ್ಥನೆಯ ಉದ್ದೇಶ ಮತ್ತು ಮಹತ್ವ

By manu
|

ಭೂಮಿ ಮೇಲೆ ಹಲವಾರು ಧರ್ಮಗಳಿವೆ. ಪ್ರತಿಯೊಂದು ಧರ್ಮದಲ್ಲೂ ಕೋಟ್ಯಂತರ ಮಂದಿ ಅನುಯಾಯಿಗಳಿರುತ್ತಾರೆ. ಅವರವರ ಧರ್ಮಕ್ಕೆ ಅನುಗುಣವಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ ದೇವರು ಎನ್ನುವ ಪ್ರತಿಯೊಂದು ಧರ್ಮದಲ್ಲೂ ಇದ್ದೇ ಇರುತ್ತಾನೆ. ಆದರೆ ಆತನನ್ನು ಆರಾಧಿಸುವ ರೀತಿ ಮಾತ್ರ ಭಿನ್ನವಾಗಿರಬಹುದು.

ಎಲ್ಲರೂ ದೇವರ ಮೇಲಿನ ನಂಬಿಕೆಯಿಂದ ಮನಸ್ಸಿನ ಶಾಂತಿಗಾಗಿ ಪ್ರಾರ್ಥಿಸುತ್ತಾ ಇರುತ್ತಾರೆ. ಕೆಲವೊಂದು ಧರ್ಮಗಳಲ್ಲಿ ದೇವರಿಗೆ ಹರಕೆ ಹೊತ್ತುಕೊಂಡು ತಮ್ಮ ಕೆಲಸ ಈಡೇರಿದ ಬಳಿಕ ಅದನ್ನು ತೀರಿಸುವಂತಹ ಸಂಪ್ರದಾಯವಿದೆ. ಆದರೆ ಈ ಪ್ರಾರ್ಥನೆ ಸಲ್ಲಿಸುವುದು ಯಾಕೆ? ಇದರ ಹಿಂದಿರುವ ಉದ್ದೇಶವೇನು? ತಾವು ಬೇಡಿಕೊಂಡಿರುವುದು ಅವರಿಗೆ ನಿಜವಾಗಿಯೂ ಸಿಗುತ್ತದೆಯಾ?

ಈ ಲೇಖನದಲ್ಲಿ ಪ್ರಾರ್ಥನೆಯ ಕಡೆ ನಾವು ಗಮನಹರಿಸಲಿದ್ದೇವೆ. ಪ್ರಾರ್ಥನೆಯ ನಿಜವಾದ ಉದ್ದೇಶವೇನು ಮತ್ತು ಪ್ರಾರ್ಥನೆಯ ನೈಜ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿರ್ವಾಯತೆಯನ್ನು ತಿಳಿಸಲಿದ್ದೇವೆ. ಮನುಷ್ಯ ಯಾಕೆ ಪ್ರಾರ್ಥಿಸುತ್ತಾರೆ ಎಂಬ ಪ್ರಶ್ನೆಗೆ ನಾವು ಉತ್ತರಿಸಲಿದ್ದೇವೆ. ಆದರೆ ಮನುಷ್ಯನ ಸ್ವಾರ್ಥವು ಇಂದಿನ ದಿನಗಳಲ್ಲಿ ಪ್ರಾರ್ಥನೆಯ ಮೂಲ ಉದ್ದೇಶವನ್ನೇ ಮರೆಯುವಂತೆ ಮಾಡಿದೆ.

 What Is The Real Purpose Of Prayer?

ಧರ್ಮವು ಅಧರ್ಮದ ಕಡೆಗೆ ವಾಲುತ್ತಿರುವ ಈ ಕಾಲದಲ್ಲಿ ಜನರು ತಮ್ಮದೇ ಆದ ಜೀವನದಲ್ಲಿ ಕಳೆದುಹೋಗಿರುವಾಗ ಪ್ರಾರ್ಥನೆಯ ಮೂಲ ಉದ್ದೇಶವನ್ನು ಅರಿತುಕೊಳ್ಳುವುದು ಅತೀ ಮುಖ್ಯ. ಮನುಷ್ಯ ಅಳವಡಿಸಿಕೊಂಡಿರುವ ಸ್ವಾರ್ಥ ಭಾವನೆಯು ಎಂದೂ ಅವರನ್ನು ಒಳ್ಳೆಯವರನ್ನಾಗಿಸಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ಹುಟ್ಟಿದಂತಹ ಕೆಲವು ಜನರು ಎಷ್ಟೇ ಒಳ್ಳೆಯವರಾದರೂ ಏನಾದರೂ ಸಮಸ್ಯೆಯಲ್ಲಿ ಸಿಲುಕಿರುತ್ತಾರೆ. ಇದನ್ನು ನಾವು ಕರ್ಮವೆನ್ನಬಹುದು. ಸಾಷ್ಟಾಂಗ ನಮಸ್ಕಾರ ಮಾಡಿ ದೇವರ ದಯೆ ಪಡೆಯಿರಿ

ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ ಅವರು ಮಾಡಿದಂತಹ ಕರ್ಮವು ಆತನ ಬೆನ್ನು ಬಿಡುವುದಿಲ್ಲ. ಕರ್ಮವು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ, ಆತನ ಕುಟುಂಬ ಮತ್ತು ಆತನಿರುವ ಜಾಗಕ್ಕೂ ವ್ಯಾಪಿಸುವುದು.

ಪ್ರಾರ್ಥನೆಯ ಮೂಲ ಉದ್ದೇಶವೆಂದರೆ ಅಡೆತಡೆಗಳನ್ನು ನಿವಾರಣೆ ಮಾಡು ಮತ್ತು ಸ್ವಾರ್ಥವನ್ನು ಕಡಿಮೆ ಮಾಡು ಎಂದು ಬೇಡಿಕೊಳ್ಳುವುದು. ಸ್ವಾರ್ಥದಿಂದಾಗಿ ದ್ವೇಷ, ಅಸೂಯೆ, ಕೋಪ ಮತ್ತು ಮನಸ್ಥಾಪವು ಉಂಟಾಗುವುದು. ಪ್ರತಿಯೊಬ್ಬ ಮನುಷ್ಯನು ಸ್ವಾರ್ಥವನ್ನು ಬಿಟ್ಟು ಪ್ರಾರ್ಥಿಸಿದರೆ ಭೂಮಿ ಮೇಲೆ ಶಾಂತಿ ನೆಲೆಸುವುದು ಮತ್ತು ಪ್ರತಿಯೊಬ್ಬರಲ್ಲೂ ಸಂತೋಷ ಉಂಟಾಗುವುದು.

English summary

What Is The Real Purpose Of Prayer?

In this article,we look at prayer with a new lens. We explore the true purpose of prayer and the necessity of understanding the true purpose of prayer. We answer the basic question of why should people pray. Selfish desires of humankind have literally eroded the sanctity of true prayer.
X
Desktop Bottom Promotion