For Quick Alerts
ALLOW NOTIFICATIONS  
For Daily Alerts

ಮಗುವಿನ 'ಕೇಶ ಮುಂಡನ', ಹಿಂದೂ ಸಂಸ್ಕೃತಿಯ ಬಿಂಬ...

By Jaya
|

ಹಿಂದೂ ಧರ್ಮದಲ್ಲಿ ಕೇಶ ಮುಂಡನಾ ಅಥವಾ ಚೂಡಕರಣ ಹೆಚ್ಚು ಅಗತ್ಯವಾಗಿರುವ ಮತ್ತು ಅತ್ಯಗತ್ಯವಾಗಿ ಪಾಲಿಸಬೇಕಾಗಿರುವ ಕ್ರಮ ಎಂದೆನಿಸಿದೆ. ಮುಂಡನ ಎಂಬ ಸಂಸ್ಕೃತ ಪದದಿಂದ ಚೂಡಕರಣ ಎಂಬ ಪದ ವಿಭಾಗಿಸಲ್ಪಟ್ಟಿದ್ದು ಮಗುವಿನ ಮೊದಲ ಕೇಶ ಮುಂಡನಾ ಎಂಬುದಾಗಿ ಪ್ರಚಲಿತದಲ್ಲಿದೆ.

What Is Chudakarana Samskara In Hinduism?

ಹಿಂದೂ ಧರ್ಮದಲ್ಲಿ ಹೆಚ್ಚು ಅಗತ್ಯವಾಗಿ ಕ್ರಮಪ್ರಕಾರವಾಗಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದು ಮಗುವಿನ ಪೋಷಕರು ಈ ಪದ್ಧತಿಯನ್ನು ಮಗುವಿಗೆ ಎರಡು ಮೂರು ವರ್ಷಗಳಾದಾಗ ಪುಣ್ಯ ಕ್ಷೇತ್ರಗಳಲ್ಲಿ ನಡೆಸುತ್ತಾರೆ. ಕೇಶ ಮುಂಡನದ ಸಮಯದಲ್ಲಿ ತಲೆಕೂದಲನ್ನು ಸಂಪೂರ್ಣವಾಗಿ ಬೋಳಿಸುತ್ತಾರೆ, ಶಿಖೆಯನ್ನು ಹಾಗೆಯೇ ಬಿಡುತ್ತಾರೆ. ಕೂದಲಿನ ಕಿರೀಟವಾಗಿ ಈ ಶಿಖೆ ಇರುತ್ತದೆ. ಹಿಂದೂ ಧರ್ಮ ಪ್ರಪಂಚದಲ್ಲೇ ಶ್ರೇಷ್ಠ ಧರ್ಮವೇಕೆ?

ಧರ್ಮಶಾಸ್ತ್ರಗಳ ಪ್ರಕಾರ ದೇಹದಲ್ಲಿರುವ ಕೂದಲು ಮೂಲತಃ ಹಿಂದಿನ ಜನ್ಮದ ಮುಂದುವರಿಕೆ ಎಂದಾಗಿದೆ. ಇದು ಪ್ರಸ್ತುತ ಬದುಕಿಗೆ ಕೆಟ್ಟದ್ದಾಗಿರುವುದರಿಂದ ಈ ಮುಂಡನ ಕ್ರಿಯೆಯನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಚೂಡಕರಣ ಪ್ರಕ್ರಿಯೆಯು ಹಿಂದಿನ ಜನ್ಮದಲ್ಲಿ ಈಡೇರಿಸಿಕೊಳ್ಳಲಾಗದೇ ಇರುವ ಆಸೆಗಳನ್ನು ತ್ಯಜಿಸುವುದು ಎಂಬುದಾಗಿ ಅರ್ಥವನ್ನು ಪಡೆದುಕೊಂಡಿದೆ. ಹಿಂದಿನ ಜನ್ಮದ ಕರ್ಮಗಳಿಂದ ಮುಕ್ತಿಯನ್ನು ಪಡೆದುಕೊಳ್ಳುವುದು ಎಂಬುದೂ ಇದರಲ್ಲಿ ಅಡಕವಾಗಿದೆ.

ಮುಂಡನ ಕ್ರಿಯೆಯು ನಡೆದ ನಂತರ, ಒಂದು ವರ್ಷದ ಮಗುವು ಭವಿಷ್ಯದ ಜೀವನದಲ್ಲಿ ಮುಂದುವರಿಯುತ್ತದೆ. ಹಿಂದಿನ ಜೀವನದಿಂದ ಪ್ರಸ್ತುತ ಜೀವನಕ್ಕೆ ಅಡಿ ಇಡುತ್ತದೆ ಎಂಬ ಅರ್ಥವೂ ಇದೆ. ಹಿಂದಿನ ಜೀವನದಿಂದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದು ಮುಂದಿನ ಜೀವನಕ್ಕೆ ಅಡಿ ಇಡುವುದು ಎಂದಾಗಿದೆ. ಹಿಂದೂ ಧರ್ಮದಲ್ಲಿ ಅಡಗಿರುವ 21 ವೈಜ್ಞಾನಿಕ ಸತ್ಯಗಳು

ಕೇಶ ಮುಂಡನವನ್ನು ಎಲ್ಲಿ ಮಾಡಲಾಗುತ್ತದೆ?
ಹಿಂದೂ ಧರ್ಮದಲ್ಲಿ ಕೇಶ ಮುಂಡನವು ದೊಡ್ಡ ಸಂಪ್ರದಾಯ ಎಂದೆನಿಸಿದೆ. ಹೃಷಿಕೇಶ ಮತ್ತು ಹರಿದ್ವಾರಗಳಂತಹ ಪುಣ್ಯ ಕ್ಷೇತ್ರದಲ್ಲಿ ಇದನ್ನು ನಡೆಸಲಾಗುತ್ತದೆ.

ಇಂದಿನ ದಿನಗಳಲ್ಲಿ ಹೆಚ್ಚಿನ ಕುಟುಂಬದವರು ಪುರೋಹಿತರನ್ನು ಮನೆಗೆ ಆಹ್ವಾನಿಸಿ ಇದನ್ನು ಸ್ವಗೃಹದಲ್ಲಿಯೇ ನೆರವೇರಿಸುತ್ತಾರೆ. ಕೇಶಮುಂಡನಕ್ಕೆ ಲಿಂಗ ಬೇಧವಿರುವುದಿಲ್ಲ. ಮಗುವಿನ ಮೇಲೆ ಈ ಕ್ರಿಯೆಯನ್ನು ನಡೆಸುವಾಗ, ಪುರೋಹಿತರು ಮಂತ್ರವನ್ನು ಉಚ್ಛರಿಸುತ್ತಾರೆ ನಂತರ ತಲೆಯಲ್ಲಿ ಒಂದೆರಡು ಕೂದಲನ್ನು ಬಿಡುತ್ತಾರೆ.

ಕೇಶಮುಂಡನದ ಬಳಿಕ ನಡೆಯುವ ಶಾಸ್ತ್ರವೇನು?
ಚೂಡಕರಣದ ನಂತರ ಪವಿತ್ರ ನದಿ ಗಂಗೆಗೆ ಕೂದಲನ್ನು ಅರ್ಪಿಸಲಾಗುತ್ತದೆ. ಪವಿತ್ರ ನದಿಯ ಬಳಿಯೇ ಈ ಕ್ರಿಯೆಯನ್ನು ನಡೆಸುವುದರಿಂದ ಕೂಡಲೇ ಕೂದಲನ್ನು ಗಂಗೆಗೆ ಹರಿಯಬಿಡಲಾಗುತ್ತದೆ. ಇಲ್ಲವೇ ಆಚರಣೆಯನ್ನು ವಿಧಿ ವತ್ತಾಗಿ ಪೂರೈಸಿದ ನಂತರ ನದಿಗೆ ಕೂದಲನ್ನು ಅರ್ಪಿಸಲಾಗುತ್ತದೆ. ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ...

English summary

What Is Chudakarana Samskara In Hinduism?

In Hinduism, Mundan or Chudakarana is one of the most important and most necessary rituals to be followed. Chudakarana is derived from a Sanskrit word for Mundan and is ideally known as the first hair-cut for the baby. In other words, the meaning of Chudakarana is arranging the hair tuft. This practice is followed by most Hindus whose parents are particular about performing this act with all the regular traditions.
X
Desktop Bottom Promotion