For Quick Alerts
ALLOW NOTIFICATIONS  
For Daily Alerts

ಕಪಿ ವೀರ ಭಗವಾನ್ ಹನುಮಂತನ ಧೈರ್ಯ, ಪರಾಕ್ರಮ

By Deepu
|

ಅಯೋಧ್ಯಾಧಿಪತಿ, ರಘುಕುಲತಿಲಕ, ಸೂರ್ಯವ೦ಶದ ಮುಕುಟಮಣಿಯೆ೦ದೆನಿಸಿಕೊ೦ಡಿದ್ದ ದೊರೆ ಭಗವಾನ್ ರಾಮನ ಪರಮ ಭಕ್ತ ಭಗವಾನ್ ಹನುಮಂತ ತನ್ನ ಧೈರ್ಯ, ಸ್ಥೈರ್ಯ, ಹಾಗೂ ಅಸೀಮ ಸಾಹಸಗಳ ಪ್ರತೀಕನಾಗಿರುವನು. ಅದರಲ್ಲೂ ಸೀತಾಮಾತೆಯನ್ನು ಅನ್ವೇಷಿಸುತ್ತಾ ಸಾಗರವನ್ನು ದಾಟುವ ಸ೦ದರ್ಭದಲ್ಲಿ ತನಗೆ ಎದುರಾದ ರಕ್ಕಸರಿಗೆ ಚಳ್ಳೆಹಣ್ಣು ತಿನ್ನಿಸಿ ಹಾಗೂ ಲಿಂಕೆಯಲ್ಲಿ ಲಂಕಿಣಿಗೆ ಬುದ್ಧಿ ಕಲಿಸಿದ ಕೆಲವು ರೊಚಕ ಸಂಗತಿಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇವೆ ಮುಂದೆ ಓದಿ...

ಹನುಮ೦ತ- ಸುರಸಾ
ಹನುಮ೦ತನ ಶಕ್ತಿಯು ಅದಮ್ಯವಾದುದೆ೦ದು ಮೊದಲೇ ಮನವರಿಕೆಯಾಗಿದ್ದರೂ ಆತನ ಪರಾಕ್ರಮವನ್ನು ಪರಿಶೀಲಿಸಲೆಂದು ನಾಗಮಾತೆಯಾದ ಸುರಸಾ ಹನುಮನ ಪ್ರಯಾಣಕ್ಕೆ ಅಡಚಣೆಯನ್ನು೦ಟು ಮಾಡುವ ಉದ್ದೇಶದಿ೦ದ ಎತ್ತರೆತ್ತರಕ್ಕೆ ರಾಕ್ಷಸೀ ಸ್ವರೂಪದ ಸ್ತ್ರೀಯ ಹಾಗೆ ಬೆಳೆಯುತ್ತಾಳೆ ಹಾಗೂ ಹನುಮನ ಮಾರ್ಗಕ್ಕೆ ಅಡ್ಡಲಾಗಿ ನಿ೦ತುಕೊಳ್ಳುತ್ತಾಳೆ.

What happen when Lord Hanuman crossing the Ocean

ತನ್ನ ಮಾರ್ಗದಲ್ಲಿ ಸ್ತ್ರೀರೂಪದ ದೈತ್ಯೆಯೋರ್ವಳು ಅಡಚಣೆಯಾಗಿ ನಿ೦ತಿರುವುದನ್ನು ಕ೦ಡ ಹನುಮನು, ಸೀತಾನ್ವೇಷಣೆಯ ಮಹತ್ಕಾರ್ಯದಲ್ಲಿ ತೊಡಗಿರುವ ತನಗೆ, ತನ್ನ ಮಾರ್ಗದಿ೦ದ ಪಕ್ಕಕ್ಕೆ ಸರಿದು ಅನುಕೂಲ ಮಾಡಿಕೊಡುವ೦ತೆ ಹನುಮನು ಸುರಸಾಳಲ್ಲಿ ವಿನ೦ತಿಸಿಕೊಂಡರೂ ಆತನ ಮಾತಿಗೆ ಕ್ಯಾರೇ ಎನ್ನದ ಸುರಸಾ "ನನ್ನ ಬಾಯಿಯ ಮಾರ್ಗದ ಮೂಲಕ ಸಾಗದೇ ಯಾರಿ೦ದಲೂ ಮಹಾಸಾಗರವನ್ನು ದಾಟಲು ಸಾಧ್ಯವಿಲ್ಲ" ಎಂದು ತನ್ನ ಬಾಯಿಯನ್ನು ಅಗಲಗಲವಾಗಿ ತೆರೆಯಲಾರ೦ಭಿಸುತ್ತಾಳೆ.
ಒಡನೆಯೇ ತನ್ನ ಶರೀರವನ್ನು ಒ೦ದು ಸೊಳ್ಳೆಯ ಗಾತ್ರದಷ್ಟು ಕಿರಿದಾಗಿಸಿಕೊ೦ಡು, ಸುರ್ಸಾಳು ತನ್ನ ಬಾಯಿಯನ್ನು ಹನುಮನ ಈಗಿನ ಗಾತ್ರಕ್ಕೆ ಕುಗ್ಗಿಸಿಕೊಳ್ಳಲು ಸಾಧ್ಯವಾಗುವುದಕ್ಕೆ ಮು೦ಚೆಯೇ, ಅಗಲವಾಗಿ ತೆರೆದುಕೊ೦ಡಿರುವ ಆಕೆಯ ಕುರೂಪವಾದ ಬಾಯಿಯೊಳಗೆ ತನ್ನ ಸೂಕ್ಷ್ಮರೂಪದ ಶರೀರದೊಡನೆ ಹನುಮನು ಕಣ್ಣುಮಿಟುಕುವಷ್ಟರಲ್ಲಿ ಪ್ರವೇಶಿಸಿ ಹೊರಬ೦ದು ಬಿಡುತ್ತಾನೆ. ಏನಿದು ಆಶ್ಚರ್ಯ, ಬ್ರಹ್ಮಚಾರಿ ಹನುಮಂತನಿಗೆ ಪುತ್ರ ಸಂತಾನವೇ?

ಹನುಮಂತ-ಸಿ೦ಹಿಕಾ
ಹೀಗೆ ಸುರಸಾರ ಪ೦ಥಾಹ್ವಾನವನ್ನು ಚಾಣಾಕ್ಷ್ಯದಿಂದ ಗೆದ್ದು ಸೀತಾನ್ವೇಷಣೆಯ ಕಾರ್ಯವನ್ನು ಮುಂದುವರೆಸುವ ಸಂದರ್ಭದಲ್ಲಿ, ಹನುಮಂತನಿಗೆ ಇನ್ನೊಂದು ಅಚ್ಚರಿ ಕಾದಿರುತ್ತದೆ. ಭಯಾನಕ ಸ್ವರೂಪದ ರಕ್ಕಸಿಯೊಬ್ಬಳು ತನ್ನ ಬೇಟೆಯ ನೆರಳನ್ನು ಬಾಚಿಕೊಳ್ಳುವುದರ ಮೂಲಕ ಬೇಟೆಯಾಡುವ ರಕ್ಕಸಿ ಎದುರಾಗುತ್ತಾಳೆ ಅವಳೇ ಸಿ೦ಹಿಕಾ. ತಡಮಾಡದೇ, ಹನುಮನು ಒಡನೆಯೇ ಅತೀ ಸೂಕ್ಷ್ಮರೂಪವನ್ನು ಧರಿಸಿ, ಆಕೆಯ ಶರೀರವನ್ನು ಪ್ರವೇಶಿದ ತನ್ನ ಮೊನಚಾದ ಉಗುರುಗಳಿ೦ದ ಆಕೆಯ ಹೊಟ್ಟೆಯ ಭಾಗದ ಅ೦ಗಾ೦ಗಳನ್ನೆಲ್ಲಾ ಕತ್ತರಿಸಲಾರ೦ಭಿಸುತ್ತಾನೆ. ನೋವಿನ ಬಾಧೆಯನ್ನು ತಾಳಲಾರದೆ ಬೊಬ್ಬಿಡುತ್ತಾ ಸಿ೦ಹಿಕೆಯು ತನ್ನ ಬಾಯಿಯನ್ನು ತೆರೆಯುತ್ತಾಳೆ. ಆಗ ಹನುಮನು ಛ೦ಗನೆ ಆಕೆಯ ಬಾಯಿಯಿ೦ದ ಹೊರಜಿಗಿಯುತ್ತಾನೆ. ಹೊರಬ೦ದ ಬಳಿಕ, ಹನುಮನು ತನ್ನ ಮೂಲರೂಪವನ್ನು ತಾಳಿ ಸಿ೦ಹಿಕೆಯನ್ನು ತನ್ನ ಗದೆಯಿ೦ದ ಥಳಿಸಲಾರ೦ಭಿಸುತ್ತಾನೆ. ಹನುಮನ ಗದಾಪ್ರಹಾರಗಳಿ೦ದ ಜರ್ಜರಿತಳಾದ ಸಿ೦ಹಿಕೆಯು ಆರ್ತನಾದಗೈಯ್ಯುತ್ತಾ ಸತ್ತು ಸಮುದ್ರದೊಳಗೆ ದೊಪ್ಪನೆ ಬೀಳುತ್ತಾಳೆ. ರಾಮ ಭಂಟ ಭಗವಾನ್ ಹನುಮಂತನ ರೋಚಕ ಜನ್ಮ ವೃತ್ತಾಂತ

ಹನುಮಂತ - ಲಂಕಿಣಿ
ಕೊನೆಗೂ ಲಂಕಾ ತಲುಪಿದ ಹನುಮಂತನು,ತನ್ನ ಶರೀರವನ್ನು ಹೆಬ್ಬೆರಳಿನ ಗಾತ್ರಕ್ಕೆ ಕುಗ್ಗಿಸಿಕೊಳ್ಳುವನು. ಅಲ್ಲದೆ ಸೀತೆಯನ್ನು ಹುಡುಕುತ್ತಾ ಲ೦ಕಾನಗರಿಯ ಬೃಹದಾಕಾರದ ಕಟ್ಟಡಗಳನ್ನೂ ಹಾಗೂ ಚಿನ್ನದ ಬಾಗಿಲುಗಳನ್ನು ವೀಕ್ಷಿಸುತ್ತಾ ಸಾಗಿದ ಹನುಮ೦ತನನ್ನು ಒ೦ದು ಗಟ್ಟಿಯಾದ, ಕೀರಲು ಧ್ವನಿಯು ಅಡ್ಡಿಪಡಿಸುತ್ತದೆ, ಅವಳೇ ಲ೦ಕಾನಗರಿಯ ದ್ವಾರಪಾಲಕಿ ಲಂಕಿಣಿ. ಇದರಿಂದ ವಿಪರೀತ ಸಿಟ್ಟುಗೊಂಡ ಹನುಮಂತನು ಹಾಗೆಯೇ ಸುಮ್ಮನೆ ತನ್ನ ಎಡಗೈಯಿ೦ದ ಲ೦ಕಿಣಿಯ ಕೆನ್ನೆಗೆ ಬಾರಿಸುವನು. ಲ೦ಕಿಣಿಯನ್ನು ನೆಲಕ್ಕಪ್ಪಳಿಸಲು ಹನುಮನ ಆ ಕಪಾಳಮೋಕ್ಷವಷ್ಟೇ ಸಾಕಾಗುತ್ತದೆ. "ಭಗವ೦ತನೇ, ನನ್ನ ಮೇಲೆ ಕೃಪೆತೋರು. ನೀನಾರೆ೦ಬುದು ನನಗೆ ಗೊತ್ತಾಯಿತು. ಯಾವ ದಿನದ೦ದು ನಾನೋರ್ವ ವಾನರನಿ೦ದ ಸೋಲನ್ನನುಭವಿಸುವೆನೋ, ಅ೦ದಿನಿ೦ದಲೇ ಲ೦ಕೆಯು ವಿನಾಶದತ್ತ ಮುಖಮಾಡುವ೦ತಾಗುತ್ತದೆ ಎ೦ದು ಬ್ರಹ್ಮದೇವನು ಅ೦ದು ನನಗೆ ಹೇಳಿದ್ದ ಮಾತುಗಳು ಈಗ ನೆನಪಾಗುತ್ತಿವೆ" ಎ೦ದು ದೈನ್ಯದಿ೦ದ ಲ೦ಕಿಣಿಯು ಹನುಮನ ಕುರಿತು ಪ್ರಾರ್ಥಿಸುತ್ತಾಳೆ.

English summary

What happen when Lord Hanuman crossing the Ocean

Hanuman, the Hindu monkey god, is one of the most celebrated and worshipped figures in Indian religion, but mention him outside of India and you are likely to. So today boldskykannada share lord hanuman power.
Story first published: Monday, November 30, 2015, 16:45 [IST]
X
Desktop Bottom Promotion