For Quick Alerts
ALLOW NOTIFICATIONS  
For Daily Alerts

ಕೈಲಾಸನಾಥ ಪರಶಿವನ ಕುರಿತ ರೋಚಕ ಜನ್ಮ ವೃತ್ತಾಂತ

By Super
|

ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ.

ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಭಗವಾನ್ ಶಿವಶ೦ಕರನು ಆದ್ಯ೦ತ್ಯಗಳಿಲ್ಲದ ಅನ೦ತಸ್ವರೂಪನು, ನಿರಾಕಾರನು, ಹಾಗೂ ತ್ರಿಮೂರ್ತಿಗಳ ಪೈಕಿ ಮಹಾನ್ ಶಕ್ತಿಯುಳ್ಳವನೆ೦ದೇ ಗುರುತಿಸಲ್ಪಟ್ಟಿರುವವನಾಗಿರುವನು. ನಿಮ್ಮನ್ನು ಮೂಕವಿಸ್ಮಿತಗೊಳಿಸುವ ಭಗವಾನ್ ಶಿವನ ರೋಚಕ ಕಥೆಗಳು!

ಶಿವನಿಗೆ ಹಲವಾರು ನಾಮಗಳಿವೆ. ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೇನಾಥ ಮೊದಲಾದವು. ಹಿಂದೂ ದೇವತೆಗಳಲ್ಲಿ ಶಿವನ ಬಗ್ಗೆ ವಿವರ ಕೆದಕಿದರೆ ಸಿಗುವ ಮಾಹಿತಿಗಳು ಬಹಳ ಕ್ಲಿಷ್ಟಕರವಾಗಿವೆ. ವಿವಿಧ ದೇವರಿಗಾಗಿ ಕಟ್ಟಿಸಿದ ದೇವಸ್ಥಾನಗಳಲ್ಲಿ ಶಿವಾಲಯಗಳನ್ನು ಪ್ರತ್ಯೇಕವಾಗಿ ಮತ್ತು ಎತ್ತರದ ಸ್ಥಳಗಳಲ್ಲಿ ಕಟ್ಟಿಸಿರುವುದು ಇದಕ್ಕೆ ಇಂಬು ಕೊಡುತ್ತದೆ.

ಶಿವನ ಬಗ್ಗೆ ಹಲವಾರು ಕಥೆಗಳಿದ್ದರೂ ಆತನ ಹುಟ್ಟಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾರದು. ಬನ್ನಿ ಇದುವರೆಗೆ ನೀವೆಂದೂ ಕೇಳದಿದ್ದ ಶಿವನ ಹುಟ್ಟಿನ ಕಥೆಯನ್ನು ಈ ಸ್ಲೈಡ್ ಶೋ ಮೂಲಕ ಓದಿ....

ಶಿವನ ವಿವಿಧ ರೂಪಗಳು

ಶಿವನ ವಿವಿಧ ರೂಪಗಳು

ಹಿಂದೂ ಪುರಾಣದ ಪ್ರಕಾರ ವಿಶ್ವದಲ್ಲಿ ಬ್ರಹ್ಮ, ವಿಷ್ಟು ಮಹೇಶ್ವರ ಎಂಬ ಮೂವರು ಅತ್ಯುನ್ನತ ದೇವತೆಗಳಿದ್ದಾರೆ. ಇವರಲ್ಲಿ ಬ್ರಹ್ಮನ ಪಾತ್ರ ಜೀವಗಳ ಜನನದಲ್ಲಿ, ವಿಷ್ಣುವಿನ ಪಾತ್ರ ಕಾಪಾಡುವುದರಲ್ಲಿ ಮತ್ತು ಶಿವನ ಪಾತ್ರ ಸಂಹಾರದಲ್ಲಿ ಎಂದು ವಿವರಿಸಲಾಗಿದೆ. ಈ ಸಂಹಾರ ಎಂದರೆ ಒಂದು ಪರ್ವವನ್ನು ಕೊನೆಗೊಳಿಸಿ ಇನ್ನೊಂದು ಪರ್ವಕ್ಕೆ ನಾಂದಿ ಹಾಡುವುವುದಾಗಿದೆ. ಪುರಾಣಗಳಲ್ಲಿ ವಿವರಿಸಿದ ಪ್ರಕಾರ ಶಿವನಿಗೆ ನಾಲ್ಕು ಕೈ, ನಾಲ್ಕು ಮುಖಗಳು ಮತ್ತು ಮೂರು ಕಣ್ಣುಗಳಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಿವನ ವಿವಿಧ ರೂಪಗಳು

ಶಿವನ ವಿವಿಧ ರೂಪಗಳು

ಈ ಮೂರನೆಯ ಕಣ್ಣು ಸದಾ ಮುಚ್ಚಿದ್ದು ತೆರೆದರೆ ಭೂಮಿಯನ್ನೇ ಸುಟ್ಟುಬಿಡುವಷ್ಟು ಪ್ರಖರ ಕಿರಣಗಳನ್ನು ಹೊಮ್ಮಿಸುವ ಶಕ್ತಿ ಹೊಂದಿದೆ. ಇದು ಜಗತ್ತನ ಜೀವಜಾಲವನ್ನಷ್ಟೇ ಅಲ್ಲ, ದೇವಲೋಕವನ್ನೂ ವಿನಾಶಗೊಳಿಸುವ ಶಕ್ತಿ ಹೊಂದಿದೆ. ಪುರಾತನ ವೇದಗಳಲ್ಲಿಯೂ ಶಿವನನ್ನು ಬಿರುಗಾಳಿಯ ದೇವನೆಂದು ಬಣ್ಣಿಸಲಾಗಿದೆ.

ಶಿವನ ಜನನ ಹೇಗಾಯಿತು?

ಶಿವನ ಜನನ ಹೇಗಾಯಿತು?

ಶಿವನ ಜನನದ ಕುರಿತು ರೋಚಕವಾದ ಕಥೆಯೊಂದಿದೆ. ಒಂದು ದಿನ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಮಾತುಮಾತಿನಲ್ಲಿ ತಮ್ಮಿಬ್ಬರಲ್ಲಿ ಬಲಶಾಲಿಗಳು ಯಾರು ಎಂಬ ವಿಷಯದ ಮೇಲೆ ಚರ್ಚೆ ಮಾಡತೊಡಗಿದರು. ಈ ಸಂದರ್ಭದಲ್ಲಿ ನೆಲದಿಂದ ಒಂದು ಬೃಹತ್ ಕಂಭ ಮೇಲೆದ್ದು ಆಕಾಶದೆತ್ತರಕ್ಕೆ ಬೆಳೆಯತೊಡಗಿತು. ನೋಡುನೋಡುತ್ತಿದ್ದಂತೆಯೇ ಇದರ ಎಲೆಗಳು ಆಕಾಶವನ್ನೆಲ್ಲಾ ಆವರಿಸಿತು ಮತ್ತು ಬೇರುಗಳು ಪಾತಾಳಕ್ಕಿಳಿದವು. ಈಗ ಕುತೂಹಲಗೊಂಡ ಬ್ರಹ್ಮ ಮತ್ತು ವಿಷ್ಣು ಇಬ್ಬರೂ ಇದರ ಬುಡ ಮತ್ತು ತುದಿಯನ್ನು ಹುಡುಕಲು ತೊಡಗುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಿವನ ಜನನ ಹೇಗಾಯಿತು?

ಶಿವನ ಜನನ ಹೇಗಾಯಿತು?

ಬ್ರಹ್ಮ ಒಂದು ಹಂಸದ ರೂಪ ತಳೆದು ಹಾರುತ್ತಾ ಕಂಭದ ತುತ್ತ ತುದಿಗೆ ಹೋಗಿ ತಲುಪಿದರೆ ವಿಷ್ಣು ಒಂದು ಕಾಡುಹಂದಿಯ ರೂಪ ಧರಿಸಿ (ವರಾಹವತಾರ) ಭೂಮಿಯನ್ನು ಕೊರೆಯುತ್ತಾ ಬೇರುಗಳನ್ನು ಹುಡುಕುತ್ತಾ ಆಳಕ್ಕೆ ತೆರಳುತ್ತಾನೆ. ಆದರೆ ಈ ಕಂಭದ ತುದಿ ಮತ್ತು ಬುಡಗಳನ್ನು ತಲುಪಲಾರದೇ ಇಬ್ಬರೂ ಕೈಚೆಲ್ಲಿ ಮೊದಲಿದ್ದಲ್ಲಿ ವಾಪಾಸಾಗುತ್ತಾರೆ. ಆಗ ಈ ಕಂಭದ ಒಂದು ತೆರೆದ ಭಾಗದಿಂದ ಶಿವನು ಹೊರಬರುತ್ತಿರುವುದನ್ನು ಕಾಣುತ್ತಾರೆ. ಶಿವನ ಈ ಶಕ್ತಿಯನ್ನು ಕಂಡ ಇಬ್ಬರೂ ತಮ್ಮಿಬ್ಬರಿಗಿಂತಲೂ ಮಿಗಿಲಾದ ಶಕ್ತಿಯೊಂದಿದೆ ಎಂಬುದನ್ನು ಮನಗಂಡು ತಮ್ಮ ಅಹಂಭಾವವನ್ನು ತ್ಯಜಿಸಿ ಶಿವನನ್ನು ಲೋಕದ ವಿನಾಶಕನನ್ನಾಗಿ ಸ್ವೀಕರಿಸುತ್ತಾರೆ.

ಮನುಷ್ಯರೂ ದೇವತೆಗಳೂ ಸಹಾಯಕ್ಕಾಗಿ ಮೊರೆಹೋಗುವ ಶಿವ

ಮನುಷ್ಯರೂ ದೇವತೆಗಳೂ ಸಹಾಯಕ್ಕಾಗಿ ಮೊರೆಹೋಗುವ ಶಿವ

ಶಿವನಲ್ಲಿರುವ ಅಪಾರವಾದ ಶಕ್ತಿ ಆತನನ್ನು ಅತಿ ಸಂಕೀರ್ಣನಾದ ದೇವತೆಯನ್ನಾಗಿಸಿದೆ. ಏಕೆಂದರೆ ಇಂತಹ ಶಕ್ತಿ ಇರುವ ದೇವತೆಗಳು ದೇವಲೋಕದಲ್ಲಿ ಸಕಲ ಐಶಾರಾಮಗಳೊಂದಿಗಿದ್ದರೆ ಶಿವ ಕೊರಳಲ್ಲಿ ಹಾವು, ಬುರುಡೆಗಳ ಮಾಲೆ, ಪ್ರಾಣಿಯಚರ್ಮದ ಪೋಷಾಕು, ಡಮರುಗ, ತ್ರಿಶೂಲಗಳೊಂದಿಗೆ ಸ್ಮಶಾನದಲ್ಲಿ ಅಥವಾ ಹಿಮಾಚ್ಛಾದಿತ ಬೆಟ್ಟದ ಮೇಲಿರುತ್ತಾನೆ. ಇವನ ಸಂಗಾತಿಗಳಲ್ಲಿ ರಕ್ತಕ್ಕೆ ಹಪಹಪಿಸುವರೇ ಹೆಚ್ಚು. ಆದರೆ ಸಂಕಟಕಾಲದಲ್ಲಿ ಮನುಷ್ಯರು ಮಾತ್ರವಲ್ಲ ದೇವದೇವತೆಗಳೂ ಶಿವನ ಬಳಿ ಸಹಾಯಕ್ಕಾಗಿ ಹೋಗುವುದನ್ನು ಪುರಾಣಗಳಲ್ಲಿ ವಿವರಿಸಲಾಗಿದೆ.

ದುಷ್ಟರನ್ನು ಸಹಿಸದ, ಭಕ್ತರ ಭಕ್ತಿಗೆ ಮನಸೋಲುವ ಶಿವ

ದುಷ್ಟರನ್ನು ಸಹಿಸದ, ಭಕ್ತರ ಭಕ್ತಿಗೆ ಮನಸೋಲುವ ಶಿವ

ಶಿವ ಅತ್ಯಂತ ನ್ಯಾಯವಂತನಾಗಿದ್ದು ದುಷ್ಟರನ್ನು ಸಂಹರಿಸುವಲ್ಲಿ ಎಷ್ಟು ಕಠೋರ ರೂಪ ತಾಳುತ್ತಾನೋ ಅದೇ ರೀತಿ ತನ್ನನ್ನು ಆರಾಧಿಸುವ ಭಕ್ತರಿಗೆ ಮನಸೋಲುತ್ತಾನೆ. ತನ್ನ ಹೆಚ್ಚಿನ ಹೊತ್ತನ್ನು ಹಿಮಾಲಯದಲ್ಲಿ ಪದ್ಮಾಸನದಲ್ಲಿ ಕುಳಿತು ಘೋರ ತಪಸ್ಸನ್ನು ಆಚರಿಸುತ್ತಾ ಕಳೆಯುತ್ತಾನೆ. ಆತ ತನ್ನ ತಾಂಡವನೃತ್ಯದ ಮೂಲಕ ಸತ್ಯವನ್ನು ಪ್ರತಿಪಾದಿಸುತ್ತಾ, ಅಜ್ಞಾನವನ್ನು ಅಳಿಸುತ್ತಾ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುತ್ತಾನೆ.

ಜಗತ್ತನ್ನುಳಿಸಲು ವಿಷಕುಡಿದು ವಿಷಕಂಠನಾದ ಶಿವ

ಜಗತ್ತನ್ನುಳಿಸಲು ವಿಷಕುಡಿದು ವಿಷಕಂಠನಾದ ಶಿವ

ಹಿಂದೂ ಪುರಾಣಗಳ ಪ್ರಕಾರ ವಾಸುಕಿ ಎಂಬ ಸರ್ಪದ ಘನಘೋರ ವಿಷವನ್ನು ಕುಡಿದು ದೇವಲೋಕ ಮತ್ತು ಭೂಲೋಕವನ್ನು ವಿನಾಶದಿಂದ ತಪ್ಪಿಸಿದ್ದ ಶಿವ ವಿಷಕಂಠನೆಂಬ ಹೆಸರನ್ನು ಪಡೆದುಕೊಂಡ. ಈ ವಿಷದ ಕಾರಣ ಶಿವನ ಕುತ್ತಿಗೆ ನೀಲವರ್ಣಕ್ಕೆ ತಿರುಗಿತ್ತು. ವಾಸುಕಿ ಸರ್ಪ ವಾಸ್ತವವಾಗಿ ಜಗತ್ತಿಗೆ ಅಗತ್ಯವಾದ ನೀರನ್ನು ಉಣಿಸುವ ಹೊಣೆ ಹೊತ್ತಿತ್ತು.

ತಲೆಯ ಮೇಲೆ ಗಂಗೆಯನ್ನು ಹೊತ್ತ ಶಿವ

ತಲೆಯ ಮೇಲೆ ಗಂಗೆಯನ್ನು ಹೊತ್ತ ಶಿವ

ಒಂದು ಕಾಲದಲ್ಲಿ ಗಂಗಾ ನದಿ ಕೇವಲ ದೇವಲೋಕದಲ್ಲಿ ಮಾತ್ರ ಹರಿಯುತ್ತಿತ್ತು. ಬಾಗೀರಥನ ತಪಸ್ಸಿನ ಕಾರಣ ಗಂಗಾನದಿ ಸ್ವರ್ಗದಿಂದ ನೇರವಾಗಿ ಭೂಮಿಗೆ ಧುಮುಕಿತು. ಈ ರಭಸ ಎಷ್ಟಿತ್ತು ಎಂದರೆ ಭೂಲೋಕವನ್ನೇ ಕೊಚ್ಚಿಕೊಂಡು ಹೋಗುವಷ್ಟು. ಆಗ ಆ ಧಾರೆಗೆ ತಡೆಹಿಡಿದ ಶಿವ ತನ್ನ ಜಟೆಯ ಮೂಲಕ ಗಂಗೆಯನ್ನು ಸೆರೆಹಿಡಿದುಬಿಟ್ಟ. ಬಳಿಕ ತನ್ನ ಜಟೆಯ ಮೂಲಕ ನಿರಾಳವಾಗಿ ಹರಿಯುವಂತೆ ಮಾಡಿ ಹಿಮಾಲಯದಿಂದ ಇಳಿಯುತ್ತಾ ಜೀವನದಿಯಾಗಿ ಭೂಲೋಕದಲ್ಲಿ ಸಮೃದ್ಧಿ ಪಡೆಯಲು ನೆರವಾದ.

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಒಂದು ಕಥೆಯ ಪ್ರಕಾರ ದೇವತೆಗಳ ಮೇಲೆ ರಾಕ್ಷಸರು ಯುದ್ಧಕ್ಕೆ ಬಂದಾಗ ದೇವತೆಗಳೆಲ್ಲಾ ಶಿವನ ಬಳಿ ಸಹಾಯಕ್ಕೆ ಆಗಮಿಸಿದರು. ಆಗ ಶಿವ ಎಲ್ಲಾ ದೇವತೆಗಳ ಶಕ್ತಿಯನ್ನು ಕೊಂಚವಾಗಿ ದಯಪಾಲಿಸಿದರೆ ರಾಕ್ಷಸರನ್ನು ಸಂಹರಿಸುವುದಾಗಿ ಕೇಳಿಕೊಂಡ.

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಇತರ ದೇವತೆಗಳ ಶಕ್ತಿಯನ್ನೂ ಪಡೆದು ಅತ್ಯಂತ ಶಕ್ತಿವಂತನಾದ ಶಿವ

ಆ ಪ್ರಕಾರ ಶಿವನಿಗೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯಲ್ಲಿ ಒಂದಂಶವನ್ನು ಧಾರೆಯೆರೆದರು. ಮಾತಿಗೆ ತಪ್ಪದೆ ಶಿವ ರಾಕ್ಷಸರನ್ನು ಸಂಹರಿಸಿ ಶಾಂತಿ ಮರುಕಳಿಸಲು ನೆರವಾದ. ಆದರೆ ಎರವಲು ಪಡೆದುಕೊಂಡ ಶಕ್ತಿಯನ್ನು ಮರಳಿಸದೇ ತನ್ನಲ್ಲೇ ಇಟ್ಟುಕೊಂಡ. ಎಲ್ಲಾ ಶಕ್ತಿಗಳನ್ನು ಹೊಂದಿರುವ ಶಿವ ಜಗತ್ತಿಯಲ್ಲಿಯೇ ಅತ್ಯಂತ ಶಕ್ತಿವಂತನಾದ.

ನಿಸರ್ಗದ ಶಕ್ತಿಗಳೇ ಈತನ ಭೂಷಣ

ನಿಸರ್ಗದ ಶಕ್ತಿಗಳೇ ಈತನ ಭೂಷಣ

ಶಿವನ ರೂಪವನ್ನು ವರ್ಣಿಸುವುದಾದರೆ ಆತ ಹಿಡಿದಿಟ್ಟಿರುವ ಶಕ್ತಿಗಳೇ ಭೂಷಣವಾಗಿರುವುದನ್ನು ನೋಡಬಹುದು. ಒಂದು ತುದಿಯಲ್ಲಿ ತಲೆಬುರುಡೆ ಇರುವ ದೊಣ್ಣೆ, ಮಿಂಚನ್ನು ಸೆರೆಹಿಡಿದು ತಯಾರಿಸಿದ ಬಾಣ, ಕಾಮನಬಿಲ್ಲನ್ನೇ ಬಗ್ಗಿಸಿ ಮಾಡಿದ ಬಿಲ್ಲು, ಗಂಗಾನದಿಯನ್ನು ಬಂಧಿಸಿದ ಜಟೆ, ಶಿಖೆಯಲ್ಲಿ ಅರ್ಧಚಂದ್ರ, ವಿಷಕುಡಿದು ನೀಲಿಯಾದ ಕುತ್ತಿಗೆ ಮೊದಲಾದವು ಈತನ ರೂಪದಲ್ಲಿ ನಿಸರ್ಗವನ್ನೇ ಬಂಧಿಸಿಟ್ಟಿವೆ.

English summary

Untold story of Lord Shiva and his birth

Everybody knows that Shiva is 'shakti' or power. Shiva is the destroyer, the most powerful god of the Hindu pantheon and one of the godheads in the Hindu Trinity. Known by many names - Mahadeva, Mahayogi, Pashupati, Nataraja, Bhairava, Vishwanath, Bhava, Bhole Nath - Lord Shiva is perhaps the most complex of Hindu deities.A lso, read in this story about Shiva’s unknown roles and powers. Click on this slide show for more…
X
Desktop Bottom Promotion