For Quick Alerts
ALLOW NOTIFICATIONS  
For Daily Alerts

ಶಿವನ ಶಕ್ತಿ ಸ್ವರೂಪ ಎಂಟು ಆಭರಣಗಳ ಪರಮ ರಹಸ್ಯ

By Manu
|

ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಭಗವಾನ್ ಶಿವನನ್ನು ಲಿಂಗರೂಪದಲ್ಲಿ ಏಕೆ ಆರಾಧಿಸುತ್ತಾರೆ?

ಮಹಾದೇವ, ಮಹಾಯೋಗಿ, ಪಶುಪತಿ, ನಟರಾಜ, ಭೈರವ, ವಿಶ್ವನಾಥ, ಭಾವ, ಭೋಲೆನಾಥ ಇತ್ಯಾದಿ. ಅತಿ ಪರಾಕ್ರಮಿಯಾಗಿದ್ದರೂ ಅಗತ್ಯಬೀಳದೇ ಉಪಯೋಗಿಸದ, ಭವ್ಯತೆಯಲ್ಲಿರುವ ಅವಕಾಶವಿದ್ದರೂ ಸರಳವಾದ, ಹಿಮಾಚ್ಛಾದಿತ ಪ್ರದೇಶದಲ್ಲಿ ನೆಲೆಸುವ, ವಜ್ರವೈಢೂರ್ಯಗಳಿಂದ ಭೂಷಿತನಾಗಬಹುದಾದರೂ ಸರಳವಾದ ಉಡುಗೆಗಳಿಂದ, ಭಕ್ತನ ನೆರವಿಗೆ ಸದಾ ಧಾವಿಸುವ, ಕೋಪಗೊಂಡರೆ ಭೂಮಿಯನ್ನೇ ಸುಟ್ಟುಬಿಡುವ ಸಾಮರ್ಥ್ಯವಿರುವ ಶಿವ ಇತರ ದೇವರುಗಳಿಗಿಂತ ಭಿನ್ನನೂ, ಜಟಿಲನೂ ಆಗಿದ್ದಾನೆ. ಶಿವನ ತಾ೦ಡವ ನೃತ್ಯದಲ್ಲಡಗಿದೆ ಜಗತ್ತಿನ ಸೃಷ್ಟಿಯ ತತ್ವಗಳು

ಶಿವನ ಈ ಶಕ್ತಿ ಮತ್ತು ವೈಶಿಷ್ಟ್ಯಗಳನ್ನು ಕಂಡ ಭಕ್ತರು ಶಿವನಿಗೆ ಪ್ರತ್ಯೇಕವಾದ ಗುಡಿಗಳನ್ನು ಕಟ್ಟಿದ್ದಾರೆ. ಶಿವನ ಪರಾಕ್ರಮ ಮತ್ತು ಲೀಲೆಗಳ ಬಗ್ಗೆ ಹಲವಾರು ಕಥೆಗಳಿದ್ದರೂ, ಶಿವನ ಎಂಟು ಶೃಂಗಾರ ಆಭರಣಗಳ ಬಗ್ಗೆ ಹೆಚ್ಚಿನವರಿಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ಇದು ಮಹತ್ವದ ರಹಸ್ಯಗಳನ್ನು ತನ್ನಲ್ಲಿ ಒಳಗೊಂಡಿದೆ. ತಲೆಯಲ್ಲಿರುವ ಅರ್ಧ ಚಂದ್ರ ಮತ್ತು ಬಿಚ್ಚಿದ ಕೂದಲಿನಲ್ಲಿ ಗಂಗೆಯ ಹರಿವು ಅವರ ಡಮರು, ಸೃಷ್ಟಿಯ ನಾದವಾಗಿದೆ. ಆಧ್ಯಾತ್ಮಿಕ ಮಹತ್ವಗಳನ್ನು ಈ ಆಭರಣಗಳು ಒಳಗೊಂಡಿದ್ದು, ಇದರ ಹಿಂದಿನ ಗೂಢಾರ್ಥಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೀವು ತಿಳಿಯಲಿದ್ದೀರಿ. ಹಾಗಿದ್ದರೆ ಕೆಳಗಿನ ಸ್ಲೈಡರ್ ನೋಡಿ.....

ಶಿವ ದೇವರ ಮೂರು ಆಭರಣಗಳು

ಶಿವ ದೇವರ ಮೂರು ಆಭರಣಗಳು

ಮೂರು ಶಕ್ತಿಗಳನ್ನು ಈ ಮೂರು ಆಭರಣಗಳು ಎತ್ತಿ ತೋರಿಸುತ್ತಿದ್ದು ಜ್ಞಾನ, ಬಯಕೆ ಮತ್ತು ಅನುಷ್ಟಾನ ಹೀಗೆ ಮೂರೂ ಶಕ್ತಿಗಳನ್ನು ಇದು ಪ್ರತಿನಿಧಿಸುತ್ತದೆ.

ಡಮರು ವಿಶೇಷತೆ

ಡಮರು ವಿಶೇಷತೆ

ಡಮರು ಶಬ್ಧವನ್ನು ಪ್ರತಿನಿಧಿಸುತ್ತದೆ. ವೇದಗಳ ಶಬ್ಧವಾಗಿ ಇದನ್ನು ಪರಿಗಣಿಸಲಾಗಿದ್ದು, ಈ ಪವಿತ್ರ ಗ್ರಂಥಗಳಲ್ಲಿರುವ ಸಾರವು ದೇವರ ಮೂಲಕ ನಮ್ಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತದೆ.

ಕೊರಳಲ್ಲಿರುವ ಸರ್ಪ

ಕೊರಳಲ್ಲಿರುವ ಸರ್ಪ

ದೇವರ ಕೊರಳಲ್ಲಿ ಹಾರವಾಗಿರುವ ಸರ್ಪವು ಮಾನವನ ಅಹಂಕಾರದ ಪ್ರತೀಕವಾಗಿದೆ.

ದೇವರ ಕೈಯಲ್ಲಿರುವ ಜಪಮಾಲೆ

ದೇವರ ಕೈಯಲ್ಲಿರುವ ಜಪಮಾಲೆ

ದೇವರ ಕೈಯಲ್ಲಿರುವ ಜಪಮಾಲೆಯನ್ನು ರುದ್ರಾಕ್ಷಿ ಮಣಿಗಳಿಂದ ತಯಾರಿಸಲಾಗಿದೆ. ಇದು ಶುದ್ಧತೆಯ ಸಂಕೇತವಾಗಿದೆ. ಈ ಮಾಲೆಯು, ದೇವರ ಬಲಗೈಯಲ್ಲಿ ಇದ್ದು ಏಕಾಗ್ರತೆಯ ಸಂಕೇತವಾಗಿದೆ.

ದೇವರ ಶಿರಭಾಗ

ದೇವರ ಶಿರಭಾಗ

ದೇವರ ಶಿರವು ಪವಿತ್ರ ನದಿ ಗಂಗೆಯನ್ನು ಪ್ರತಿನಿಧಿಸಿದೆ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಾದುಹೋಗುವ ಬುದ್ಧಿವಂತಿಕೆ ಧರ್ಮಗ್ರಂಥಗಳ ಬೋಧನೆಯ ಹರಿವನ್ನು ಇದು ಸಂಕೇತಿಸಿದೆ.

ಶಿವನ ತಲೆಯನ್ನು ಅಲಂಕರಿಸುವ ಚಂದ್ರ

ಶಿವನ ತಲೆಯನ್ನು ಅಲಂಕರಿಸುವ ಚಂದ್ರ

ಶಿವನು ಸಮಯಕ್ಕೆ ಅಧಿಪತಿಯಾಗಿದ್ದು ಆತ ಸಮಯಾತೀತ (ಅಂದರೆ ಸಮಯದ ಕಟ್ಟುಪಾಡಿಗೆ ಬಗ್ಗದವರು) ಎಂಬುದಾಗಿ ಚಂದ್ರನು ಸಂಕೇತಿಸಿದ್ದಾನೆ.

ಹಣೆಯಲ್ಲಿರುವ ತಿಲಕ

ಹಣೆಯಲ್ಲಿರುವ ತಿಲಕ

ಶಿವನ ಹಣೆಯಲ್ಲಿರುವ ಗೋಲಾಕಾರದ ತಿಲಕವು ಜ್ಞಾನದ ಮೂರನೇ ಕಣ್ಣು ಎಂದೇ ಪ್ರಸಿದ್ಧವಾಗಿದೆ. ಮೂರನೇ ಕಣ್ಣು ತೆರೆದಲ್ಲಿ, ಎದುರಿಗಿರುವವರನ್ನೇ ಇದು ಸುಟ್ಟು ಬೂದಿ ಮಾಡುತ್ತದೆ ಎಂದೇ ಹೇಳಲಾಗಿದೆ. ದುಷ್ಟ ನಾಶ ಮತ್ತು ಅಜ್ಞಾನದ ಅಂತ್ಯವನ್ನು ಇದು ಸಂಕೇತಿಸುತ್ತದೆ.

ಹುಲಿಯ ಚರ್ಮದ ಮೇಲೆ ಕುಳಿತಿರುವುದು

ಹುಲಿಯ ಚರ್ಮದ ಮೇಲೆ ಕುಳಿತಿರುವುದು

ಶಿವನು ಸ್ವತಃ ಹುಲಿಯ ಚರ್ಮವನ್ನು ಧರಿಸಿದ್ದು ಅದೇ ಪ್ರಾಣಿಯ ಚರ್ಮದ ಮೇಲೆ ಕುಳಿತಿದ್ದಾರೆ ಇದು ಅವರು ಧೈರ್ಯಶಾಲಿ ಎಂಬುದನ್ನು ಸಂಕೇತಿಸುತ್ತದೆ.

English summary

Understanding The Meaning Of Shiva's 8 Adornments

Lord Shiva is the primary deity in Hinduism, and his devotees are many in number. Most devotees are familiar with the different legends associated with Lord Shiva, which uphold his status as an invincible Divine power. Lord Shiva has 8 adornments, and it is believed that each of these adornments has a significance behind it.
X
Desktop Bottom Promotion