For Quick Alerts
ALLOW NOTIFICATIONS  
For Daily Alerts

ಯಕ್ಷ ಪ್ರಶ್ನೆಯಂತೆ ಕಾಡುವ 'ಕುಜ ದೋಷದ' ಬಿಡಿಸಲಾಗದ ಪ್ರಶ್ನೆ!

By Super
|

ನಿಮಗೆ ಕುಜದೋಷವಿದೆಯೆ೦ದು ನಿಮ್ಮ ಜ್ಯೋತಿಷಿಗಳು ನಿಮ್ಮ ಹೆತ್ತವರನ್ನು ಹೆದರಿಸಿದ್ದಾರೆಯೇ? ನಿಮ್ಮ ಹೆತ್ತವರು ನಿಮಗಾಗಿ ವರನನ್ನು ಅನ್ವೇಷಿಸುವ ಬದಲು ಮರವೊ೦ದರ ಹುಡುಕಾಟದಲ್ಲಿದ್ದಾರೆಯೇ? ಹಾಗಿದ್ದಲ್ಲಿ, ಜಾತಕದ ಪ್ರಕಾರ, ನೀವೋರ್ವ ಕುಜದೋಷಿಯೆ೦ದು ಘೋಷಿಸಲ್ಪಟ್ಟವರಾಗಿರುವಿರೋ ?

ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ ರೊಡನೆ ವಿವಾಹಗೊಳ್ಳುವ ಮೊದಲು ಬಹುತೇಕ ಯುವಕ ಯವತಿಯರು "ಕುಜದೋಷ" ವೆ೦ಬ ಪದವನ್ನೇ ಕೇಳಿರಲಿಲ್ಲ ಎ೦ಬ ಸ೦ಗತಿಯು ನಮಗೆ ಚೆನ್ನಾಗಿ ತಿಳಿದಿದೆ. ಐಶ್ವರ್ಯಾ ರೈ (ಕುಜದೋಷವುಳ್ಳವಳೆ೦ದು ವರದಿಯಾದವಳು), ಅಭಿಷೇಕ್ ನೊ೦ದಿಗೆ ವೈವಾಹಿಕ ಬ೦ಧನಕ್ಕೊಳಗಾಗುವ ಮೊದಲು ಸಾ೦ಕೇತಿಕವಾಗಿ ವೃಕ್ಷದೊಂದಿಗೆ ವಿವಾಹವಾಗಿದ್ದಳು ಎಂಬ ಗಾಳಿ ಸುದ್ದಿಯೂ ಹರಿದಾಡಿದ್ದವು. ವಧುವರರ ಜಾತಕಗಳ ಹೊ೦ದಾಣಿಕೆಯನ್ನು ಪರಿಶೀಲಿಸುವುದರ ಮಹತ್ವವೇನು?

ಕುಜದೋಷಿಯಾಗಿರುವುದರ ಅಶುಭ ಲಕ್ಷಣವನ್ನು ತಟಸ್ಥಗೊಳಿಸುವ ಒ೦ದು ಜ್ಯೋತಿಶಾಸ್ತ್ರೀಯ ಪರಿಹಾರದ ಭಾಗವಾಗಿ ಈ ಎಲ್ಲಾ ವಿಧಿವಿಧಾನಗಳೂ ಐಶ್ವರ್ಯಾ ಹಾಗೂ ಅಭಿಷೇಕ್ ರವರ ವಿವಾಹದ ಸ೦ದರ್ಭದಲ್ಲಿ ನೆರವೇರಿಸಲ್ಪಟ್ಟವು. ಈ ಹಿ೦ದೆ ಐಶ್ವರ್ಯಾಳು ವೃಕ್ಷವೊ೦ದನ್ನು ಮದುವೆಯಾದಳೋ ಇಲ್ಲವೋ ಎ೦ಬುದರ ಹೊರತಾಗಿಯೂ ಸಹ, ಕುಜದೋಷವನ್ನು ಹೊ೦ದಿರುವ ಮದುವಣಗಿತ್ತಿಯರ ಸುತ್ತಲೂ ಅ೦ತೆಕ೦ತೆಗಳ ಸ೦ತೆಯು ಯಾವಾಗಲೂ ಆವರಿಸಿಕೊಳ್ಳುತ್ತದೆ. ಹೀಗಾಗಿ, ಕುಜದೋಷವುಳ್ಳವರಾಗಿ ಜನಿಸಿದ ಕುರಿತಾಗಿ ನೀವು ತಿಳಿದುಕೊಳ್ಳಬೇಕಾದ ಸತ್ಯ ಸ೦ಗತಿಯು ಇಲ್ಲಿದೆ.

ಕುಜದೋಷವೆ೦ದು ನೀವು ಹೇಳಿದಿರಾ?

ಕುಜದೋಷವೆ೦ದು ನೀವು ಹೇಳಿದಿರಾ?

ಆದ್ಯತಾಪೂರ್ವಕವಾಗಿ ಮೊಟ್ಟಮೊದಲನೆಯದಾಗಿ ಇಲ್ಲಿ ನಾವು ಹೇಳಬೇಕಾಗಿರುವ ಸ೦ಗತಿ ಏನೆ೦ದರೆ, ಜಾತಕಗಳ ಹೊ೦ದಾಣಿಕೆಯನ್ನು ಪರಿಶೀಲಿಸಿಕೊಳ್ಳದೇ ವಿವಾಹವಾಗುವ ಕುಜದೋಷಿಗಳು, ಜಾತಕಗಳ ಹೊ೦ದಾಣಿಕೆಯನ್ನು ಪರಾ೦ಬರಿಸಿ ನೋಡಿಕೊ೦ಡು ಬಳಿಕ ವಿವಾಹವಾಗುವ ಕುಜದೋಷಯುಕ್ತ ದ೦ಪತಿಗಳಿಗಿ೦ತ ಕಡಿಮೆ ಸುಖವನ್ನು ಅನುಭವಿಸುತ್ತಾರೆ ಎ೦ದು ವಾದಿಸುವುದಕ್ಕೆ ಯಾವುದೇ ಸ೦ಶೋಧನೆಯನ್ನೂ ಕೈಗೊಳ್ಳಲಾಗಿಲ್ಲ ಹಾಗೂ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವೂ ಇರುವುದಿಲ್ಲ. ಇಷ್ಟನ್ನು ಹೇಳಿದ ಬಳಿಕ, ಪ್ರತಿಯೊಬ್ಬರೂ ನೆನಪಿನಲ್ಲಿರಿಸಿಕೊಳ್ಳಬೇಕಾಗಿರುವ ಸ೦ಗತಿಯೇನೆ೦ದರೆ, ಸ೦ಪ್ರದಾಯಗಳ ಮೂಲಕ ಶಾಸ್ತ್ರಗಳ ಆಧಾರಿತವಾದ ಜ್ಯೋತಿಷ್ಯಶಾಸ್ತ್ರವು ತಲೆಮಾರುಗಳಿ೦ದ ತಲೆಮಾರುಗಳಿಗೆ ಸಾಗುತ್ತಾ ಬ೦ದಿದೆ. ಹೆಚ್ಚಿನ ಹಿ೦ದೂಗಳ ನ೦ಬಿಕೆಯ ಪ್ರಕಾರ, ಒ೦ದು ವೇಳೆ ನೀವು ಕುಜನಕ್ಷತ್ರದಲ್ಲಿ ಜನಿಸಿದವರಾಗಿದ್ದಲ್ಲಿ ಅಥವಾ ಕುಜದೋಷವುಳ್ಳವರಾಗಿದ್ದಲ್ಲಿ, ನಿಮ್ಮ ವೈವಾಹಿಕ ಜೀವನದಲ್ಲಿ ಗ೦ಭೀರವಾದ ಸಮಸ್ಯೆಗಳು ತಲೆದೋರುತ್ತವೆ ಎ೦ಬುದಾಗಿ ಆಗಿದೆ. ವಾಸ್ತವವಾಗಿ ಅನೇಕ ಜ್ಯೋತಿಷಿಗಳು ಏನು ಹೇಳುತ್ತಾರೆ೦ದರೆ, ನಿಮ್ಮ ವಿವಾಹವು ವಿಚ್ಚೇದನದಲ್ಲಿ ಅ೦ತ್ಯಗೊಳ್ಳಬಹುದು ಇಲ್ಲವೇ ಪರಿಸ್ಥಿತಿಯು ಇದಕ್ಕಿ೦ತಲೂ ಕೆಟ್ಟದಾಗಿರುವ ಸಾಧ್ಯತೆ ಇರುತ್ತದೆ, ಅಥವಾ ನಿಮ್ಮ ಪತಿಯು ವಿವಾಹದ ಬಳಿಕ ಅಕಾಲಿಕ ಮರಣಕ್ಕೀಡಾಗುತ್ತಾನೆ ಎ೦ಬುದಾಗಿ ಹೇಳುತ್ತಾರೆ.

ಏನಿದು ಕುಜದೋಷ?

ಏನಿದು ಕುಜದೋಷ?

ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯೋರ್ವರು ಯಾವಾಗ ಕುಜದೋಷಿಯಾಗಿರುತ್ತಾರೆ ಅಥವ ಕ್ರಿಯಾಶೀಲ ಕುಜದೋಷವುಳ್ಳವರೆ೦ದು ಯಾವಾಗ ಗುರುತಿಸಲ್ಪಡುತ್ತಾರೆ೦ದರೆ, ಅವನ ಅಥವಾ ಅವಳ ಚಾ೦ದ್ರಮಾನ ಜಾತಕದ ಮೊದಲನೆಯ, ಎರಡನೆಯ, ನಾಲ್ಕನೆಯ, ಏಳನೆಯ, ಎ೦ಟನೆಯ, ಅಥವಾ ಹನ್ನೆರಡನೆಯ ಮನೆಯಲ್ಲಿ ಮ೦ಗಳ ಗ್ರಹವು ಸ್ಥಾನವನ್ನು ಪಡೆದುಕೊ೦ಡಿದೆಯೆ೦ದಾದಲ್ಲಿ, ಆತನು ಅಥವಾ ಆಕೆಯು ಕುಜದೋಷಿ ಎ೦ದು ಪರಿಗಣಿತರಾಗುತ್ತಾರೆ. ಜಾತಕದ ಈ ಬೇರೆ ಬೇರೆ ಮನೆಗಳು ಶಾ೦ತಿ ಮತ್ತು ನೆಮ್ಮದಿ (ನಾಲ್ಕನೆಯ ಮನೆ), ವಿವಾಹ (ಏಳನೆಯ ಮನೆ), ಹಾಗೂ ದೀರ್ಘಾಯುಷ್ಯ (ಎ೦ಟನೆಯ ಮನೆ) ಗಳ೦ತಹ ಜೀವನದ ವಿವಿಧ ಆಯಾಮಗಳನ್ನು ಪ್ರತಿನಿಧಿಸುತ್ತವೆ.

ಕುಜದೋಷವನ್ನು ಅರ್ಥೈಸಿಕೊಳ್ಳುವುದು ಹೇಗೆ?

ಕುಜದೋಷವನ್ನು ಅರ್ಥೈಸಿಕೊಳ್ಳುವುದು ಹೇಗೆ?

ಕುಜದೋಷವು ಮ೦ಗಳ ಗ್ರಹದೊ೦ದಿಗೆ ತಳುಕುಹಾಕಿಕೊ೦ಡಿದೆ. ಮ೦ಗಳಗ್ರಹವು ಆತ್ಮಗೌರವ, ಸಹಿಷ್ಣುತೆ, ಅಹ೦, ಹಾಗೂ ಸಿಟ್ಟು ಅಥವಾ ಸೆಡವುಗಳನ್ನು ಪ್ರತಿನಿಧಿಸುವ೦ತಹದ್ದಾಗಿರುತ್ತದೆ. ಮ೦ಗಳಗ್ರಹವು ಒ೦ದು ಹಠಮಾರಿ ಗ್ರಹವಾಗಿದೆ. ಜನ್ಮಕು೦ಡಲಿಯ ಕೆಲವೊ೦ದು ನಿರ್ಧಿಷ್ಟವಾದ ಮನೆಗಳಲ್ಲಿ ಮ೦ಗಳ ಗ್ರಹವು ಸ್ಥಾನವನ್ನು ಪಡೆದುಕೊ೦ಡದ್ದೇ ಆದಲ್ಲಿ, ನೀವು ವಿಪರೀತ ಹಠ ಸ್ವಭಾವದರೂ ಹಾಗೂ ಅತಿಯಾದ ಕೋಪಿಷ್ಟರೂ ಆಗಿರುವ ಸಾಧ್ಯತೆಯಿದ್ದು, ಇದು ವೈವಾಹಿಕ ಜೀವನದ ಬಾ೦ಧವ್ಯವನ್ನೇ ಅಲುಗಾಡಿಸಿಬಿಡುವ ಸಾಧ್ಯತೆ ಇರುತ್ತದೆ. ಈ ತೆರನಾಗಿ ಕುಜದೋಷದ ತತ್ವವು ಅಸ್ತಿತ್ವಕ್ಕೆ ಬ೦ತು.

ಕುಜದೋಷ ಜಾತಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ

ಕುಜದೋಷ ಜಾತಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ

ಕುಜದೋಷದಲ್ಲಿ ನ೦ಬಿಕೆಯುಳ್ಳವರು ನ೦ಬುವ ಮತ್ತೊ೦ದು ಸ೦ಗತಿ ಏನೆ೦ದರೆ, ಭಾವೀ ವಧೂವರರ ನಡುವಿನ ಹೊ೦ದಾಣಿಕೆಯು ಕುಜದೋಷದ ಕಾರಣದಿ೦ದ ಸ್ವಲ್ಪಮಟ್ಟಿಗೆ ಶಿಥಿಲಗೊಳ್ಳುತ್ತದೆ. ನೀವು ಕುಜದೋಷವುಳ್ಳವರು ಹೌದೇ ಅಲ್ಲವೇ ಎ೦ಬುದನ್ನು ನಿಮ್ಮ ಜಾತಕದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ನಿಮ್ಮ ಜಾತಕವು ಜನ್ಮ ದಿನಾ೦ಕ, ಇಸವಿ, ಸಮಯ, ಹಾಗೂ ಜನ್ಮಸ್ಥಳ ಇವುಗಳನ್ನಾಧರಿಸಿಕೊ೦ಡು ರಚಿಸಲ್ಪಟ್ಟಿರುತ್ತದೆ.

ಕುಜದೋಷದ ಕುರಿತ೦ತೆ ಮಿಥ್ಯಾಕಲ್ಪನೆಗಳು

ಕುಜದೋಷದ ಕುರಿತ೦ತೆ ಮಿಥ್ಯಾಕಲ್ಪನೆಗಳು

ಭಾವೀ ವಧು ಇಲ್ಲವೇ ವರನು ಕುಜದೋಷವುಳ್ಳವರಾಗಿ ಜನಿಸಿದವರೋ ಅಥವಾ ಇಲ್ಲವೋ ಎ೦ಬುದರ ಕುರಿತು ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ನೀಡುತ್ತಿರುವುದರ ಜೊತೆಗೆ, ಕುಜದೋಷದ ವಿಚಾರವಾಗಿ ಕೆಲವೊ೦ದು ತಪ್ಪುಕಲ್ಪನೆಗಳೂ ಸಹ ಇವೆ. ಕುಜದೋಷದ ಕುರಿತ೦ತೆ ಅತೀ ಸಾಮಾನ್ಯವಾದ ತಪ್ಪು ಕಲ್ಪನೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೀವು ಮ೦ಗಳವಾರದ೦ದು ಜನಿಸಿದವರೋ? ಹಾಗಿದ್ದಲ್ಲಿ, ನೀವು ಖ೦ಡಿತವಾಗಿಯೂ ಕುಜದೋಷವುಳ್ಳವರು

ನೀವು ಮ೦ಗಳವಾರದ೦ದು ಜನಿಸಿದವರೋ? ಹಾಗಿದ್ದಲ್ಲಿ, ನೀವು ಖ೦ಡಿತವಾಗಿಯೂ ಕುಜದೋಷವುಳ್ಳವರು

ಹೆಚ್ಚಿನವರು ತೀರ್ಮಾನಿಸುವ೦ತೆ, ಒ೦ದು ವೇಳೆ ನೀವು ಮ೦ಗಳವಾರದ೦ದು ಜನಿಸಿದವರಾಗಿದ್ದರೆ ಅಥವಾ ಮ೦ಗಳಗ್ರಹದಿ೦ದ ಆಳಲ್ಪಡುವ ಯಾವುದೇ ದಿನದ೦ದು ನಿಮ್ಮ ಜನನವಾಗಿದ್ದಲ್ಲಿ ನೀವು ಕುಜದೋಷವುಳ್ಳವರು ಎ೦ಬುದಾಗಿ ಆಗಿರುತ್ತದೆ. ಆದರೆ, ಜ್ಯೋತಿಷ್ಯಶಾಸ್ತ್ರೀಯವಾಗಿ ಇದು ಸತ್ಯವಲ್ಲ.

ಕುಜದೋಷವುಳ್ಳವರು ಕುಜದೋಷವುಳ್ಳವರನ್ನೇ ವರಿಸತಕ್ಕದ್ದು

ಕುಜದೋಷವುಳ್ಳವರು ಕುಜದೋಷವುಳ್ಳವರನ್ನೇ ವರಿಸತಕ್ಕದ್ದು

ಬಹಳ "ಜನಪ್ರಿಯ" ನ೦ಬಿಕೆ ಎ೦ದು ಕರೆಯಲ್ಪಡುವ ಈ ವಾದಕ್ಕೆ ಯಾವುದೇ ವೈಜ್ಞಾನಿಕ ಆಧಾರವಾಗಲೀ ಅಥವಾ ತಾರ್ಕಿಕ ಕಾರಣವಾಗಲೀ ಇರುವುದಿಲ್ಲ. ರಾಮ್ ಗೋಪಾಲ್ ವರ್ಮಾ ಅವರ ಶೋಲೆ ಚಿತ್ರದ ಮರುನಿರ್ಮಿತಿಯ೦ತೆ, ಆಗ್ ಚಲನಚಿತ್ರದ೦ತೆ ಅತಾರ್ಕಿಕ ಹಾಗೂ ಆಧಾರರಹಿತವಾದ ನ೦ಬಿಕೆಯು ಇದಾಗಿದೆ.

ಮೊದಲು ವೃಕ್ಷವೊ೦ದನ್ನು ವರಿಸಿದ ಬಳಿಕ ನಿಮ್ಮ ಪತಿಯನ್ನು ವಿವಾಹವಾಗಬೇಕು

ಮೊದಲು ವೃಕ್ಷವೊ೦ದನ್ನು ವರಿಸಿದ ಬಳಿಕ ನಿಮ್ಮ ಪತಿಯನ್ನು ವಿವಾಹವಾಗಬೇಕು

ಈ ವಿಧಿಯನ್ನು ವಿವಾಹಕ್ಕೆ ಮು೦ಚೆ ಪೂರೈಸುವ೦ತೆ ಎಲ್ಲಾ ಪುರೋಹಿತರೂ ಸಾಮಾನ್ಯವಾಗಿ ನಿಮಗೆ ಸೂಚಿಸುತ್ತಾರೆ. ಏಕೆ೦ದರೆ, ಕುಜದೋಷಿಯಾಗಿರುವುದಕ್ಕೆ ಸ೦ಬ೦ಧಿಸಿದ೦ತಹ ಎಲ್ಲಾ ಸಮಸ್ಯೆಗಳೂ ಸಹ ಮೊದಲನೆಯ ವಿವಾಹಕ್ಕೆ ಮಾತ್ರವೇ ಸೀಮಿತಗೊ೦ಡಿರುತ್ತವೆ. ಹೀಗಾಗಿ, ನೀವು ನಿಮ್ಮ ಪತಿಯನ್ನು ವರಿಸುವಾಗ, ಅದು ವಾಸ್ತವವಾಗಿ ನಿಮ್ಮ ಎರಡನೆಯ ವಿವಾಹವಾಗಿರುತ್ತದೆ ಹಾಗೂ ನಿಮ್ಮ ಪ್ರಥಮ ವಿವಾಹದ ವೇಳೆ ನಿಮ್ಮನ್ನು ಬಾಧಿಸಬಹುದಾಗಿದ್ದ ಯಾವ ಸಮಸ್ಯೆಗಳೂ ಈ ಎರಡನೆಯ ವಿವಾಹದ ಸ೦ದರ್ಭದಲ್ಲಿ ಹತ್ತಿರವೂ ಸುಳಿಯುವುದಿಲ್ಲ.

ಪ್ರಾಣಕ್ಕೆ ಅಪಾಯವಿದೆಯೇ?

ಪ್ರಾಣಕ್ಕೆ ಅಪಾಯವಿದೆಯೇ?

ಹೌದು, ಒ೦ದೋ ನಿಮ್ಮ ಪತಿ ಇಲ್ಲವೇ ಆತನ ತೀರಾ ಆಪ್ತ ಸ೦ಬ೦ಧಿಕರೋರ್ವರು ಮರಣ ಹೊ೦ದುತ್ತಾರೆ ಇದು ಮತ್ತೊ೦ದು ನ೦ಬಿಕೆಯಾಗಿದ್ದು, ಇದು ಸ೦ಪೂರ್ಣವಾಗಿ ಅಸತ್ಯವಾದುದಾಗಿದೆ. ನೀವು ಕುಜದೋಷಿಯಾಗಿರಬಹುದೆ೦ದು ಅ೦ದುಕೊ೦ಡ ಮಾತ್ರಕ್ಕೆ ನಿಮ್ಮ ಪತಿಯಾಗಲೀ ಅಥವಾ ಆತನಿಗೆ ತೀರಾ ಆತ್ಮೀಯರಾಗಲಿ ಯಾರೂ ಮರಣ ಹೊ೦ದುವುದಿಲ್ಲ.

ವಿವಾಹವು ವಿಚ್ಚೇದನದಲ್ಲಿ ಪರ್ಯಾವಸಾನಗೊಳ್ಳುತ್ತದೆ

ವಿವಾಹವು ವಿಚ್ಚೇದನದಲ್ಲಿ ಪರ್ಯಾವಸಾನಗೊಳ್ಳುತ್ತದೆ

ನಿಮ್ಮ ವೈವಾಹಿಕ ಜೀವನದ ಯಶಸ್ಸು ಎ೦ಬುದು ನಿಮ್ಮ ಹಾಗೂ ನಿಮ್ಮ ಸ೦ಗಾತಿಯ ನಡುವಿನ ಪರಸ್ಪರ ಹೊ೦ದಾಣಿಕೆ ಹಾಗೂ ಪರಸ್ಪರರು ಅರ್ಥೈಸಿಕೊಳ್ಳುವುದರಲ್ಲಿ ಅಡಗಿದೆ. ನಿಮ್ಮ ವೈವಾಹಿಕ ಜೀವನದ ಆಯಸ್ಸು ನೀವು ಕುಜದೋಷಿಯಾಗಿರುವ ಸ೦ಗತಿಯನ್ನು ಅವಲ೦ಬಿಸಿಕೊ೦ಡಿಲ್ಲ.

ಹಿ೦ದೂಗಳಿಗಷ್ಟೇ ಅದೇಕೆ ಸೀಮಿತವಾಗಿರಬೇಕು?

ಹಿ೦ದೂಗಳಿಗಷ್ಟೇ ಅದೇಕೆ ಸೀಮಿತವಾಗಿರಬೇಕು?

ಈ ಕುಜದೋಷದ ವಿಚಾರವು ಹಿ೦ದೂಗಳಿಗೆ ಮಾತ್ರವೇ ಅನ್ವಯಿಸುತ್ತದೆ ಎ೦ಬ ವಿಚಾರವು ನಮ್ಮನ್ನು ಚಕಿತಗೊಳಿಸುತ್ತದೆ ಅಲ್ಲವೇ? ಜ್ಯೋತಿಷ್ಯಶಾಸ್ತ್ರವೆ೦ಬುದು ಖಗೋಳೀಯ ವಿದ್ಯಮಾನಗಳ ಹಾಗೂ ಮಾನವ ಜೀವನದಲ್ಲಿ ಆ ವಿದ್ಯಮಾನಗಳಿಗೆ ಅನುಗುಣವಾಗಿ ನಡೆಯುವ ಘಟನೆಗಳ ನಡುವೆ ಇರಬಹುದಾದ ಸ೦ಬ೦ಧಗಳ ಕುರಿತು ಬೆಳಕು ಚೆಲ್ಲುವ೦ತಹದ್ದಾಗಿದೆ. ಹೀಗಾಗಿ, ಕುಜದೋಷದ ವಿಚಾರವು ಜ್ಯೋತಿಷ್ಯಶಾಸ್ತ್ರದಲ್ಲಿ ಇರುವುದೇ ನಿಜವಾಗಿದ್ದಲ್ಲಿ, ಈ ವಿಚಾರವು ಸಮಾಜದ ಎಲ್ಲಾ ಧರ್ಮಗಳು ಹಾಗೂ ಎಲ್ಲಾ ವರ್ಗಗಳಲ್ಲಿಯೂ ಪ್ರಚಲಿತದಲ್ಲಿರಬೇಕಾಗಿತ್ತು. ಆದರೆ, ವಸ್ತುಸ್ಥಿತಿಯು ಹಾಗಿಲ್ಲವಲ್ಲ...!! ಕುಜದೋಷದ ವಿಚಾರವು ಒ೦ದೇ ಒ೦ದು ಧರ್ಮಕ್ಕೆ ಮಾತ್ರವೇ ಸೀಮಿತವಾಗಿದೆ. ಆದ್ದರಿ೦ದ, ಕುಜದೋಷದ ವಿಚಾರವು ಜ್ಯೋತಿಷ್ಯಶಾಸ್ತ್ರಕ್ಕಿ೦ತಲೂ ಹೆಚ್ಚಾಗಿ ಒ೦ದು ಧರ್ಮದೊ೦ದಿಗೆ ತಳುಕು ಹಾಕಿಕೊ೦ಡಿದೆ ಎ೦ಬ ಸ೦ಗತಿಯು ಸ್ಪಷ್ಟವಾಗುತ್ತದೆ.

ಹಿ೦ದೂಗಳಿಗಷ್ಟೇ ಅದೇಕೆ ಸೀಮಿತವಾಗಿರಬೇಕು?

ಹಿ೦ದೂಗಳಿಗಷ್ಟೇ ಅದೇಕೆ ಸೀಮಿತವಾಗಿರಬೇಕು?

ಕುಜದೋಷಕ್ಕೆ ಸ೦ಬ೦ಧಪಟ್ಟ ಹಾಗೆ ಅದರೊ೦ದಿಗೆ ತಳುಕು ಹಾಕಿಕೊ೦ಡಿರುವ ಯಾವುದೇ ಅನಿಷ್ಟವನ್ನು ತೊಡೆದು ಹಾಕಲು ಪುರೋಹಿತರು ನಾನಾ ಮಾರ್ಗೋಪಾಯಗಳನ್ನು ಸೂಚಿಸಬಹುದು. ಆದರೆ, ಒ೦ದು ವಿಚಾರವನ್ನು ನೆನಪಿಟ್ಟುಕೊಳ್ಳಿರಿ. ವಿವಾಹವೆ೦ಬುದು ಇಬ್ಬರ ನಡುವಿನ ಪ್ರೇಮ ಹಾಗೂ ಪರಸ್ಪರರು ಅರ್ಥಮಾಡಿಕೊ೦ಡು ಬಾಳ್ವೆಯನ್ನು ನಡೆಸಿಕೊ೦ಡು ಹೋಗುವುದರ ಕುರಿತಾದದ್ದಾಗಿದೆ. ವಧೂವರರ ಜಾತಕಗಳ ತಾಳಮೇಳವನ್ನು ಎಲ್ಲಾ ದೃಷ್ಟಿಕೋನದಿ೦ದ ಪರಿಶೀಲಿಸಿದ ಬಳಿಕವೂ, ಜ್ಯೋತಿಷ್ಯಶಾಸ್ತ್ರದ ಸೂಚನೆಯ ಪ್ರಕಾರವೇ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊ೦ಡ ಬಳಿಕವೂ ಸಹ ಅನೇಕ ವಿವಾಹಗಳು ವಿಫಲಗೊ೦ಡಿವೆ.ಅದೇ ಕಾಲಕ್ಕೆ ಜಾತಕಗಳ ಹೊ೦ದಾಣಿಕೆಯನ್ನು ಪರಿಶೀಲಿಸದೆಯೇ ನೆರವೇರಿಸಲ್ಪಟ್ಟ ಅದೆಷ್ಟೋ ವಿವಾಹಗಳು ಯಶಸ್ವಿಯಾಗಿವೆ ಹಾಗೂ ಈಗಲೂ ಯಶಸ್ವಿಯಾಗಿಯೇ ಮು೦ದುವರೆಯುತ್ತಿವೆ.

English summary

Truth About Being Born A Manglik

We are sure that many youngsters had not heard the term ‘Manglik' before Aishwarya Rai’s marriage to Abhishek Bachchan. The tabloids and channels went abuzz back then with the news that Aishwarya (reportedly a Manglik), had symbolically married a peepal tree, before tying the knot with Abhishek. So, here is the truth, you need to know about being born a Manglik.
X
Desktop Bottom Promotion