For Quick Alerts
ALLOW NOTIFICATIONS  
For Daily Alerts

ಧುಮ್ಮಿಕ್ಕುವ ಜಲಪಾತದಲ್ಲಿ ಬಿದ್ದರೂ ಎದ್ದು ಬಂದ!

|
Kannada Zen story
ಒಬ್ಬ ಮುದುಕನಿದ್ದ, ಒಂದು ದಿನ ನದಿ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಅಚಾನಕ್ ಆಗಿ ನದಿಯಲ್ಲಿ ಬಿದ್ದನು. ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದರಿಂದ ಅವನು ನೀರಿನ ಜೊತೆ ಕೊಚ್ಚಿಕೊಂಡು ಹೋದನು.

ಆ ಮುದುಕ ಕೊಚ್ಚಿ ಹೋದದ್ದನ್ನು ಸ್ವಲ್ಪ ಜನ ನೋಡಿದರೂ ನೀರು ತುಂಬಾ ರಭಸವಾಗಿ ತುಂಬಿ ಹರಿಯುತ್ತಿದ್ದರಿಂದ ಕಾಪಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಆ ನೀರು ಹರಿದು ಜಲಪಾತ ಸೇರುತ್ತಿದ್ದರಿಂದ ಅಲ್ಲಿ ಬಿದ್ದವರು ಬದುಕುವ ಸಾಧ್ಯತೆ ಕೂಡ ಇರಲಿಲ್ಲ. ಅಲ್ಲಿದ್ದವರೆಲ್ಲರಿಗೂ ಆ ಮುದುಕ ನೀರಿನಲ್ಲಿ ಮುಳುಗಿ ಸತ್ತು ಹೋಗುತ್ತಾನೆ ಎಂಬುದು ಖಾತರಿಯಾಯಿತು, ಆದರೆ ಬಚಾವು ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಆ ಮುದುಕನನ್ನು ನೀರು ಕೊಚ್ಚಿಕೊಂಡು ಜಲಪಾತದಲ್ಲಿ ತಂದು ಹಾಕಿತು. ಸ್ವಲ್ಪ ಹೊತ್ತಿಗೆ ಮುದುಕ ಜಲಪಾತದಿಂದ ಕಷ್ಟು ಪಟ್ಟು ಎದ್ದು ಬಂದ. ಇದನ್ನು ನೋಡಿದಾಗ ಜನರಿಗೆ ತುಂಬಾ ಆಶ್ಚರ್ಯವಾಯಿತು. ನಿಮಗೆ ಅಷ್ಟೊಂದು ರಭಸದ ನೀರಿನ ಜೊತೆ ಸೆಣಿಸಿ ಮೇಲೆ ಬರಲು ಹೇಗೆ ಸಾಧ್ಯವಾಯಿತು ಎಂದು ಕೇಳಿದರು.

ಆಗ ಆ ಮುದುಕನು ಎಲ್ಲವೂ ನಂಬಿಕೆ, ನಾನು ನೀರಿಗೆ ಬಿದ್ದಾಗ ಭಯಪಡಲಿಲ್ಲ, ನೀರು ನನ್ನನ್ನು ಕೊಚ್ಚಿಕೊಡು ಹೋಗುತ್ತಿದೆ ಎಂದು ಭಾವಿಸದೆ, ನಾನು ನೀರಿನ ಜೊತೆ ಹೋಗುತ್ತಿದ್ದೇನೆ ಎಂದು ಭಾವಿಸಿದರೆ. ಆದ್ದರಿಂದ ನನಗೆ ಮೇಲೆ ಬರಲು ಸಾದ್ಯವಾಯಿತು ಎಂದು ಹೇಳಿದನು.

English summary

Kannada Zen story | Inspirational short stories | ಝೆನ್ ಕಥೆ : ವಾಸ್ತವದ ಜೊತೆ ನಂಬಿಕೆಯಿಂದ ಸಾಗಬೇಕು

A Taoist story has an old man who by accident fell into the speeding waters of a river that lead to a dangerous waterfall. The people who witnessed the mishap feared for his life. But miraculously the man emerged alive .
X
Desktop Bottom Promotion