For Quick Alerts
ALLOW NOTIFICATIONS  
For Daily Alerts

ಪ್ರಪಂಚದ ಮೊದಲ ಪತ್ರಕರ್ತ 'ನಾರದ ಮುನಿ'- ಇದು ಅಪರೂಪದ ಮಾಹಿತಿ ಸ್ವಾಮೀ!

By Divya
|

ನಾರದ ಮುನಿಗಳ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಹಿಂದೂ ಪುರಾಣದಲ್ಲಿ ನಾರದ ಮುನಿಯ ಪಾತ್ರ ಮಹತ್ತರವಾದದ್ದು. ಅನೇಕ ಪೌರಾಣಿಕ ಕಥೆಗಳಲ್ಲಿ ಬಹು ಮುಖ್ಯ ಪಾತ್ರವಹಿಸಿರುವುದನ್ನು ಕಾಣಬಹುದು. ಮಹಾಭಾರತ, ರಾಮಾಯಣ ಮತ್ತು ಶ್ರೀಮದ್ ಭಾಗವತ್ ಗೀತೆಯಲ್ಲಿ ಕಾಣಿಸಿಕೊಂಡ ಮಹಾನ್ ಯೋಗಿ.

ಸೃಷ್ಟಿ ಕರ್ತ ಬ್ರಹ್ಮನ ಮಗನಾಗಿ ಜನಿಸಿದ ನಾರದಮುನಿಗಳು ಮಹಾ ವಿಷ್ಣುವಿನ ಪರಮ ಭಕ್ತರು. ಪೌರಾಣಿಕ ಕಥೆಗಳಲ್ಲಿ ಮಧ್ಯಸ್ಥಿಕೆಯ ಪಾತ್ರ, ಸುದ್ದಿಗಳ ರವಾನೆಯ ಕೆಲಸ ಹಾಗೂ ಒಂದಿಷ್ಟು ತಮಾಷೆ ಸನ್ನಿವೇಶಗಳ ಸೃಷ್ಟಿಸಿರುವುದನ್ನು ಕಾಣಬಹುದು. ಕೆಲವು ಪ್ರಮುಖ ಸನ್ನಿವೇಶದಲ್ಲಿ ನಿಸ್ವಾರ್ಥ ಸಹಾಯ ಗೈದಿರುವುದು ಪ್ರಶಂಸನೀಯವಾದ ಪಾತ್ರ ಎನಿಸಿಕೊಂಡಿದೆ... ಬ್ರಹ್ಮ, ವಿಷ್ಣು, ಮಹೇಶ್ವರ - ಈ ತ್ರಿಮೂರ್ತಿಗಳಲ್ಲಿ ಯಾರು ಸಮರ್ಥರು?

ಉತ್ತಮ ಕಾರ್ಯಗಳಿಗೆ ಹಾಗೂ ಉದ್ದೇಶಗಳಿಗೆ ಸದಾ ಶ್ರಮಿಸುತ್ತಿದ್ದ ನಾರದ ಮುನಿಗಳು, ಮೂರು ಲೋಕದ ಸುದ್ದಿಯನ್ನು ಸಂಗ್ರಹಿಸಿ ಎಲ್ಲೆಡೆಯೂ ನೀಡುತ್ತಿದ್ದರು ಎನ್ನಲಾಗುತ್ತದೆ. ಸೃಷ್ಟಿಯ ಮೊದಲ ಪತ್ರಕರ್ತ ಎಂದು ನಾರದರನ್ನು ಕರೆಯಲಾಗುತ್ತದೆ. ಕೇಸರಿ ಬಣ್ಣದ ಕಾವಿ ಬಟ್ಟೆಯನ್ನು ಧರಿಸಿ, ಕೂದಲನ್ನು ಗಂಟುಕಟ್ಟಿಕೊಳ್ಳುತ್ತಿದ್ದರು.

ಒಂದು ಕೈಯಲ್ಲಿ ವೀಣೆ ಹಾಗೂ ಇನ್ನೊಂದು ಕೈಯಲ್ಲಿ ಕರ್ತಾಲ್‍ಅನ್ನು ಹಿಡಿದುಕೊಂಡು "ನಾರಾಯಣ ನಾರಾಯಣ' ಎಂದು ವಿಷ್ಣುವಿನ ಹೆಸರನ್ನು ಜಪಿಸುತ್ತಿದ್ದರು. ದೇವತೆಗಳ ಸಾಲಿನಲ್ಲೇ ನಿಲ್ಲುವ ನಾರದ ಮುನಿಗಳು ಸದಾ ಭಗವಾನ್ ವಿಷ್ಣುವಿನ ಸಹಾಯಕ್ಕೆ ನಿಲ್ಲುತ್ತಿದ್ದರು. ಮೇ 12, 2017 ನಾರದ ಜಯಂತಿಯ ದಿನ. ಸೌರಮಾನ ಪಂಚಾಂಗದ ಪ್ರಕಾರ "ವೈಶಾಖ ತಿಂಗಳ ಪೂರ್ಣಿಮೆಯ ನಂತರದ ದಿನದಲ್ಲಿ ನಾರದ ಜಯಂತಿಯನ್ನು ಆಚರಿಸಲಾಗುತ್ತದೆ. ಇದು ಕೃಷ್ಣ ಪಕ್ಷದ ಪಾಡ್ಯ (ಪ್ರತಿಪದ) ತಿಥಿಯಂದು ಆಚರಿಸುತ್ತಾರೆ...

ಈ ವರ್ಷದ ನಾರದ ಜಯಂತಿಯ ಸಮಯ

ಈ ವರ್ಷದ ನಾರದ ಜಯಂತಿಯ ಸಮಯ

ಪಾಡ್ಯ ತಿಥಿಯ ಆರಂಭ ಮೇ 11, 2017 ಬೆಳಗ್ಗೆ 03:12 ರಿಂದ

ಪಾಡ್ಯ ತಿಥಿಯ ಮುಕ್ತಾಯ ಮೇ 12, 2017ರ ಬೆಳಗ್ಗೆ 05:28 ರವರೆಗೆ. ಈ ಶುಭ ದಿನದ ಪ್ರಯುಕ್ತ ನಾರದ ಮುನಿಗಳ ಬಗ್ಗೆ ನಿಮಗೆ ತಿಳಿಯದಿರುವ ವಿಷಯಗಳ ಸಂಗ್ರಹವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ತಪ್ಪದೆ ಓದಿ...

ನಾರದರ ಜನ್ಮದ ವಿವರ

ನಾರದರ ಜನ್ಮದ ವಿವರ

ಒಂದು ಪವಿತ್ರ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಸೇವಕಿಯ ಮಗನಾಗಿ ನಾರದ ಮುನಿಗಳು ಜನಿಸಿದರು. ಮಹಾ ಜ್ಞಾನಿಗಳ ವಾಸವಿರುವ ಆ ಆಶ್ರಮದಲ್ಲಿ ಹರಿಯ ಕುರಿತಾದ ಜಪ-ತಪ, ಹಾಡುಗಳು, ಶ್ಲಾಘನೆಗಳು ನಡೆಯುತ್ತಿದ್ದವು. ಇವೆಲ್ಲವೂ ನಾರದರ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಚಿಕ್ಕಂದಿನಿಂದಲೇ ನಾರದರು ಹರಿಯ ಭಕ್ತರಾದರು. ಇವರು ಚಿಕ್ಕವರಿರುವಾಗಲೇ ತಾಯಿ ಹಾವಿನ ಕಡಿತಕ್ಕೆ ಒಳಗಾಗಿ ತೀರಿಕೊಂಡರು. ನಂತರ ನಿಧಾನವಾಗಿ ಸಂಬಂಧಗಳ ಸೆಳೆತದಿಂದ ದೂರಾದರು. ಹರಿಯ ಭಕ್ತಿಯಲ್ಲೇ ಮುಳುಗಿ ತೃಪ್ತರಾದರು. ನಂತರದ ಜನ್ಮದಲ್ಲಿ ನಾರದ ಮುನಿಯಾಗಿ ಜನಿಸಿದರು.

ನಾರದ ಮುನಿಗಳನ್ನು ಮೊದಲ ಪತ್ರಕರ್ತ

ನಾರದ ಮುನಿಗಳನ್ನು ಮೊದಲ ಪತ್ರಕರ್ತ

ನಾರದರು ಭೂಮಿ, ಸ್ವರ್ಗ ಹಾಗೂ ಪಾತಾಳ ಎಂಬ ಮೂರು ಲೋಕದೆಲ್ಲೆಡೆಯು ಸಂಚರಿಸುತ್ತಾ ಸುದ್ದಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸುತ್ತಿದ್ದರು. ಹಾಗಾಗಿ ನಾರದ ಮುನಿಗಳನ್ನು ಮೊದಲ ಪತ್ರಕರ್ತ ಎಂದು ಪರಿಗಣಿಸಲಾಗಿದೆ. ಇದರ ಸಲುವಾಗಿಯೇ ನಾರದ ಜಯಂತಿಯನ್ನು ಪತ್ರಕರ್ತರ ದಿನ ಎಂದು ಆಚರಿಸಲಾಗುತ್ತದೆ.

ಸಂಗೀತಗಾರರ ಪೋಷಕರು

ಸಂಗೀತಗಾರರ ಪೋಷಕರು

ನಾರದರು ಬಹಳ ಮಧುರವಾದ ಧ್ವನಿಯನ್ನು ಹೊಂದಿದ್ದರು. ಕೈಯಲ್ಲಿ ಸಂಗೀತ ವಾದ್ಯಗಳನ್ನು ಹಿಡಿದು ಸದಾ ಭಗವಾನ್ ವಿಷ್ಣುವಿನ ಮೆಚ್ಚುಗೆಯ ವಿಚಾರವಾಗಿಯೇ ಹಾಡುತ್ತಿದ್ದರು. ಜೊತೆಗೆ ನಾರಾಯಣ ಎಂದು ಸದಾ ಸ್ಮರಿಸುತ್ತಿದ್ದರು. ಆದ್ದರಿಂದ ಇವರು ಸಂಗೀತಗಾರರ ಪೋಷಕರು ಎಂದು ಕರೆಲಾಗುತ್ತದೆ.

ನಾರದ ಮುನಿ ಮೂಲತಹ ಚೀನಾದವರಿರಬಹುದು

ನಾರದ ಮುನಿ ಮೂಲತಹ ಚೀನಾದವರಿರಬಹುದು

ಋಗ್ವೇದದ ಪ್ರಕಾರ ನಾರದ ಮುನಿ "ಹೂ ದೇಶ್' ನಿವಾಸಿ ಎಂದು ಹೇಳಲಾಗಿದೆ. ಇದು ಚೀನಾದ ಗಡಿ ಪ್ರದೇಶದಲ್ಲಿದೆ. ಒಂದು ದಂಥ ಕಥೆಯ ಪ್ರಕಾರ ನಾರದರ ಥಾಲಿಂಗ್ ಮಠ ಹೂನ್ ದೇಶದಲ್ಲಿ ಇದೆ ಎಂದು ಹೇಳಲಾಗುತ್ತದೆ.

64 ವಿದ್ಯೆಯಲ್ಲಿ ಪಂಡಿತ

64 ವಿದ್ಯೆಯಲ್ಲಿ ಪಂಡಿತ

ಮೂರು ಲೋಕವನ್ನು ಸುತ್ತುವ ನಾರದರು ಎಲ್ಲರಿಗೂ ಬೇಕಾದ ಮಾಹಿತಿಯನ್ನು ನೀಡುತ್ತಿದ್ದರು. ಅಲ್ಲದೆ 64 ವಿದ್ಯೆಯಲ್ಲಿ ಮಹಾಜ್ ಜ್ಞಾನ ಪಡೆದು ಪಂಡಿತರು ಎನಿಸಿಕೊಂಡಿದ್ದರು.

ನಾರದ ಮುನಿಯ ಪುಸ್ತಕಗಳು

ನಾರದ ಮುನಿಯ ಪುಸ್ತಕಗಳು

ನಾರದ ಮುನಿಯ ವಿಚಾರವಾಗಿ ಎರಡು ಪುಸ್ತಕಗಳಿವೆ. ಒಂದು 'ನಾರ ಪುರಾಣ' ಇನ್ನೊಂದು ನಾರದ ಸೂಕ್ತಿ'.

ನಾರದ ದೇಗುಲ

ನಾರದ ದೇಗುಲ

ನಾರದ ಮುನಿಗಳಿಗೆ ಮೀಸಲಾಗಿ ಒಂದು ದೇವಾಲಯವಿದೆ. ಇದು ಕರ್ನಾಟಕದ ಕಷ್ಣಾನದಿಯಲ್ಲಿ ಕೂರ್ವಾ ಎಂಬ ಸಣ್ಣ ದ್ವೀಪವಿದೆ. ಈ ದ್ವೀಪದಲ್ಲಿ ನಾರದ ದೇವಸ್ಥಾನವಿದೆ. ಇದನ್ನು ನರದ್ಗದ್ದೆ ಎಂದು ಕರೆಯಲಾಗುತ್ತದೆ.

English summary

Things You Did Not Know About Narada Muni

Narada Muni is perhaps one of the most recognizable characters in the Hindu mythology. He can be seen prominently in many of the mythological stories. He features in epics such as the Mahabharata, Ramayana and Srimad Bhagwat Gita. He also plays a major role in the Puranas.
X
Desktop Bottom Promotion