For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ 2021: ಲಂಬೋದರನಿಗೆ ಇವುಗಳೆಂದರೆ ಅಚ್ಚುಮೆಚ್ಚು

|
Ganesh Chaturthi 2019 : ಗೌರಿ ಗಣೇಶ ಹಬ್ಬದ ಆಚರಣೆ ಹಿಂದಿನ ಮಹತ್ವ ಏನು? | BoldSky Kannada

ಗಣೇಶ ದೇವತೆಗಳಲ್ಲಿ ಜನಪ್ರಿಯ ಎಂದೇ ಸಂಬೋಧಿತರಾಗಿರುವ ವಿನಾಯಕ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. 2021ರಲ್ಲಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್‌ 10ರಂದು ಶುಕ್ರವಾರದಂದು ಅಚರಿಸಲಾಗುತ್ತಿದೆ.

ಸಂಕಷ್ಟ ನಿವಾರಕ, ವಿಘ್ನ ವಿನಾಶಕನಿಗೆ ಪ್ರತಿಯೊಂದು ಪೂಜೆ ಸಮಾರಂಭಗಳಲ್ಲಿ ಮೊದಲ ಪೂಜೆಯೇ ಸಲ್ಲುತ್ತದೆ. ಕೇಳಿದ್ದನ್ನು ಪ್ರಸಾದಿಸುವ ದೇವರೆಂದೇ ಖ್ಯಾತನಾಗಿರುವ ಮೂಷಿಕ ವಾಹನನಿಗೆ ನಾಮಗಳು ಹಲವು. ತಿಂಡಿಪೋತನೆಂದೇ ಕರೆಯಿಸಿಕೊಂಡಿರುವ ವಕ್ರ ತುಂಡನಿಗೆ ಸಿಹಿ ಪಂಚ ಭಕ್ಷ್ಯಗಳೆಂದರೆ ಪ್ರಾಣ.

Ganesh Chatuthi

ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

ಮೂಷಿಕ ವಾಹನ ಮೋದಕ ಹಸ್ತ ಚಾಮರ ಕರ್ಣ ವಿಳಂಬಿತ ಸೂತ್ರ ಎಂಬ ಶ್ಲೋಕದಂತೆ ದೇವರನ್ನು ಪ್ರಾರ್ಥಿಸುವಾಗ ಕೂಡ ಮೋದಕದಿಂದಲೇ ಅವರನ್ನು ಸಂಪ್ರೀತಿಗೊಳಿಸಬೇಕು. ಮೋದಕವೆಂದರೆ ವಿನಾಯನಿಗೆ ಅಚ್ಚುಮೆಚ್ಚು. ಹಾಗಿದ್ದರೆ ಗಣಪನಿಗೆ ಇಷ್ಟವಾಗಿರುವ ಅಂಶಗಳು ಏನು? ಅವರನ್ನು ಸಂತೃಪ್ತಿಗೊಳಿಸಲು ಏನೇನು ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಬನ್ನಿ ಆ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ....

ಮೋದಕ

ಮೋದಕ

ಗಣಪನಿಗೆ ತಿನಿಸೆಂದರೆ ಬಲು ಪ್ರೀತಿ. ಡೊಳ್ಳು ಹೊಟ್ಟೆ ಗಣಪ ಎಂಬ ಬಿರುದೇ ಈ ದೇವರಿಗಿದೆ. ಈ ದೇವರನ್ನು ಮೆಚ್ಚಿಸಲು ಅವರ ಹೊಟ್ಟೆ ತುಂಬಿಸಿದರೆ ಆಯಿತು ಎಂಬ ಮಾತಿದೆ. ಅದರಲ್ಲೂ ಮೋದಕ ಎಂದರೆ ಬಲು ಪ್ರೀತಿ ಗಣಪನಿಗೆ. ಅದಕ್ಕೆ ಅವನನ್ನು ಮೋದಕ ಹಸ್ತ ಎಂತಲೂ ಕರೆಯುವುದುಂಡು ಅಲ್ಲವೇ....

ಮೋದಕ

ಮೋದಕ

ಮೋದಕ ಗಣಪನಿಗೆ ಅಚ್ಚುಮೆಚ್ಚಿನ ತಿನಿಸಾಗಿದ್ದು ಇದನ್ನು ಹಿಟ್ಟು ಮತ್ತು ಹೂರಣದಿಂದ ತಯಾರಿಸುತ್ತಾರೆ. ಗಣೇಶ ಚತುರ್ಥಿಯ ದಿನ ಈ ಸಿಹಿಯನ್ನು ತಪ್ಪದೇ ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕೇಸರಿ ಮೋದಕ

ಗರಿಕೆ ಹುಲ್ಲು

ಗರಿಕೆ ಹುಲ್ಲು

ನೆಲದಲ್ಲಿ ವಿಸ್ತಾರವಾಗಿ ಬೆಳೆಯುವ ಒಂದು ಬಗೆಯ ಹುಲ್ಲಾಗಿದೆ ಗರಿಕೆ. ಗಣೇಶನಿಗೆ ಗರಿಕೆ ಎಂದರೆ ಏಕಿಷ್ಟ ಎಂಬುದಕ್ಕೆ ಒಂದು ಕಥೆಯೇ ಇದೆ. ದೇವತೆಗಳನ್ನು ಹಿಂಸಿಸುತ್ತಿದ್ದ ಅಸುರ ಅನಲಾಸುರನನ್ನು ಗಣಪತಿ ನುಂಗಿಬಿಡುತ್ತಾರೆ.

ಆದರೆ ಅಸುರನನ್ನು ನುಂಗಿದ ನಂತರ ಈತ ಜೀರ್ಣನಾಗದೇ ಗಣಪತಿಗೆ ಹೊಟ್ಟೆನೋವು ಉಂಟಾಗುತ್ತದೆ. ಈ ಸಂದರ್ಭದಲ್ಲಿ ಗರಿಕೆಯನ್ನು ಸೇವಿಸಲು ಗಣಪನಿಗೆ ನೀಡಿದಾಗ ಹೊಟ್ಟೆ ನೋವು ಮಾಯವಾಗುತ್ತದೆ. ಇದರ ನಂತರ ಗಣಪನಿಗೆ ಗರಿಕೆ ಎಂದರೆ ಅಚ್ಚುಮೆಚ್ಚಿನದಾಗಿ ಬಿಡುತ್ತದೆ.ಗರಿಕೆ ಇಲ್ಲದೆ ಗಣಪನ ಪೂಜೆ ಅಪೂರ್ಣ.

ಚೆಂಡು ಹೂವು

ಚೆಂಡು ಹೂವು

ಗಣೇಶನ ವಿಗ್ರಹವನ್ನು ತಂದು ಮನೆಯಲ್ಲಿ ಅದನ್ನು ಇರಿಸಿ ಪೂಜೆ ಮಾಡುವವರು ದೇವರನ್ನು ಚೆಂಡು ಹೂವಿನಿಂದ ಅಲಂಕಾರ ಮಾಡುತ್ತಾರೆ. ಇದು ಕೆಂಪು ಮತ್ತು ಹಳದಿ ಬಣ್ಣದಲ್ಲಿ ಸಾಮಾನ್ಯವಾಗಿ ಇರುತ್ತದೆ.ಶ್ರೀ ಗಣೇಶನಿಗೆ ಚೆಂಡು ಹೂವೆಂದರೆ ಬಲು ಪ್ರೀತಿ. ಚೆಂಡು ಹೂವು ಮತ್ತು ಗರಿಕೆಯಿಂದ ತಯಾರಿಸಿದ ಹಾರವೇ ಗಣಪನಿಗೆ ಪ್ರಮುಖ ಅಲಂಕಾರವಾಗಿರುತ್ತದೆ.

ಶಂಖ

ಶಂಖ

ಗಣಪತಿ ನಾಲ್ಕು ಕೈಗಳನ್ನು ಹೊಂದಿದ್ದು ಅದರಲ್ಲೊಂದರಲ್ಲಿ ಶಂಖವನ್ನು ಹಿಡಿದುಕೊಂಡಿದ್ದಾರೆ. ಶಂಖಗಳನ್ನು ಊದುವುದರ ಮೂಲಕವೇ ಹೆಚ್ಚಿನ ಹಬ್ಬಗಳು ಆರಂಭಗೊಳ್ಳುತ್ತವೆ.

ಗಣಪನಿಗೆ ಶಂಖದ ನಾದವೆಂದರೆ ತುಂಬಾ ಇಷ್ಟ. ಗಣೇಶನಿಗೆ ಆರತಿ ಬೆಳಗುವ ಸಂದರ್ಭದಲ್ಲಿ ಭಕ್ತರು ಶಂಖವನ್ನು ಊದುತ್ತಾರೆ. ಶಂಖದ ನಾದವು ದುಷ್ಟ ಶಕ್ತಿಗಳನ್ನು ಹೊಡೆದೋಡಿಸುತ್ತದೆ.

ತೆಂಗಿನ ಕಾಯಿ, ಬಾಳೆಹಣ್ಣು

ತೆಂಗಿನ ಕಾಯಿ, ಬಾಳೆಹಣ್ಣು

ತೆಂಗಿನ ಕಾಯಿ ಮತ್ತು ಬಾಳೆಹಣ್ಣು ದೇವರಿಗೆ ಹೆಚ್ಚು ಇಷ್ಟದ್ದಾಗಿದೆ. ಗಣಪನ ತಲೆಯು ಆನೆಯದ್ದಾಗಿರುವುದರಿಂದ ಬಾಳೆಹಣ್ಣು ದೇವರಿಗೆ ಹೆಚ್ಚು ಪ್ರೀತಿಯದ್ದಾಗಿದೆ. ಬಾಳೆ ಎಲೆಗಳಿಂದ ಮಾಡಿದ ಅಲಂಕಾರವನ್ನು ದೇವರಿಗೆ ಮಾಡುತ್ತಾರೆ. ಗಣೇಶನಿಗೆ ಇಷ್ಟವಾಗಿರುವ ಐದು ಅಂಶಗಳು ಇದಾಗಿದ್ದು ಈ ಬಾರಿಯ ಹಬ್ಬದಲ್ಲಿ ಈ ಅಂಶಗಳು ಇರುವಂತೆ ನೋಡಿಕೊಂಡು ಗಣಪನ ಕೃಪಾಕಟಾಕ್ಷವನ್ನು ಪಡೆಯಿರಿ.

English summary

Ganesh Chaturthi 2021: Things That Takes You Close to Lord Ganesha

Ganesh Chatuthi is special festival meant to celebrate the glory of Lord Ganesha and is due in a week's time. So, let us find out what are the things that Ganesha loves the most to please him on this special day.
X
Desktop Bottom Promotion