For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಗುಟ್ಟು-ಸರ್ವಂ ಶಿವ ಮಯಂ

By manu
|

ಭಗವಂತ ಶಿವನ ಹೆಸರು ಕೇಳುತ್ತಿದ್ದಂತೆಯೇ ಮನದಲ್ಲಿ ಮೂಡುವ ಚಿತ್ರವೆಂದರೆ ಹಿಮಪರ್ವತದ ಮೇಲೆ ಕುಳಿತು ಶಿಖದಲ್ಲಿ ಚಂದ್ರನನ್ನೂ, ಕೊರಳಲ್ಲಿ ನಾಗನನ್ನೂ, ರುದ್ರಾಕ್ಷಿಮಾಲೆಗಳನ್ನೂ, ಕೈಯಲ್ಲೊಂದು ತ್ರಿಶೂಲ, ಡಮರುಗ ಮತ್ತು ತಲೆಯಿಂದ ಚಿಮ್ಮುತ್ತಿರುವ ಗಂಗೆ, ಹೀಗೆ ಅನೇಕ ರೀತಿಯ ಕಲ್ಪನೆಗಳು ಮನದಲ್ಲಿ ಮೂಡುತ್ತದೆ. ಹಿಂದೂ ಧರ್ಮದಲ್ಲಿ ಶಿವನು "ದೇವಾದಿದೇವ" (ದೇವರುಗಳಿಗೆ ದೇವನಾದ ಅಗ್ರಗಣ್ಯನು) ಎ೦ದೇ ಲೋಕಪ್ರಸಿದ್ಧನಾಗಿರುವವನು.

ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿದೇವರಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಶಿವನ ಕಣ್ಣೀರಿನಲ್ಲಡಗಿದೆ ಜಗದ ದುಃಖವನ್ನು ನೀಗಿಸುವ ಶಕ್ತಿ!

ಹೀಗೆ ಅತಿ ಶಕ್ತಿಶಾಲಿಯಾಗಿರುವ ಭಗವಂತ ಶಿವರ ಮಹಾತ್ಮೆಯ ಬಗ್ಗೆ ತಿಳಿಸ ಹೊರಟರೆ ಉದ್ಗ್ರಂಥವಾಗಬಹುದು. ಆತನ ಕೆಲವಾರು ಚರ್ಯೆಗಳು ಆದರ್ಶಪ್ರಾಯವಾಗಿವೆ. ಶಾಂತರೂಪದಲ್ಲಿದ್ದಾಗ ಆತನ ಉದಾತ್ತ ರೂಪವನ್ನು ಕಂಡ ಭಕ್ತರು ಧನ್ಯತಾ ಮತ್ತು ಸುರಕ್ಷಾ ಭಾವನೆಯನ್ನು ತಳೆಯುತ್ತಾರೆ. ಆದರೆ ಶಿವನ ಹಲವು ರೂಪಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ನೀಡುತ್ತಿರುವ ಸೂಚನೆಯಾಗಿದೆ. ಭಸ್ಮಾಸುರನಿಗೆ ನೀಡಿದ ವರ ಶಿವನ ಕುತ್ತಿಗೆಗೆ ಉರುಳಾಯಿತೇ?

ಉದಾಹರಣೆಗೆ ಶಿವನ ತಾಂಡವನೃತ್ಯ ಒಂದು ಅತ್ಯುತ್ತಮವಾದ ವ್ಯಾಯಮವಾಗಿದ್ದು ಮನಸ್ಸು ಮತ್ತು ಶರೀರಕ್ಕೆ ಅತ್ಯುತ್ತಮವಾದ ಆರೈಕೆಯನ್ನು ನೀಡುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಜಡೆಕಟ್ಟಿದ ಕೂದಲು-ಚಿಂತನೆ, ಮಾತು ಮತ್ತು ಕೃತಿಯ ಧ್ಯೋತಕ

ಜಡೆಕಟ್ಟಿದ ಕೂದಲು-ಚಿಂತನೆ, ಮಾತು ಮತ್ತು ಕೃತಿಯ ಧ್ಯೋತಕ

ಶಿವನಿಗೆ ತಲೆತುಂಬಾ ದಟ್ಟವಾದ ಕೂದಲಿದ್ದು ಇದನ್ನು ಹಾಗೇ ಬಿಡದೇ ಮೇಲಿನ ಕೂದಲನ್ನು ಸುಂದರವಾಗಿ ಜಡೆಕಟ್ಟಿ ಉಳಿದ ಕೂದಲನ್ನು ಜಲಪಾತದಂತೆ ಪಕ್ಕಕ್ಕೆ ಇಳಿಬಿಟ್ಟಿದ್ದಾನೆ. ಜಡೆಯಲ್ಲಿ ಗಂಗೆಯನ್ನು ಹಿಡಿದಿಟ್ಟುಕೊಂಡಿದ್ದರೂ ಕೊಂಚವೂ ಬಿಗುಮಾನ ತೋರದ ಆತನ ಪರಿ ಅನುಕರಣೀಯವಾಗಿದೆ. ಪಕ್ಕದ ಕೂದಲುಗಳು ಒಂದಕ್ಕೊಂದು ಸಿಕ್ಕುಗೊಳ್ಳದೇ ಇರುವುದು ಸಹಬಾಳ್ವೆ ಮತ್ತು ಸೌಹಾರ್ದತೆಯ

ಸಂಕೇತವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜಡೆಕಟ್ಟಿದ ಕೂದಲು-ಚಿಂತನೆ, ಮಾತು ಮತ್ತು ಕೃತಿಯ ಧ್ಯೋತಕ

ಜಡೆಕಟ್ಟಿದ ಕೂದಲು-ಚಿಂತನೆ, ಮಾತು ಮತ್ತು ಕೃತಿಯ ಧ್ಯೋತಕ

ಒಟ್ಟಾರೆ ಇವು ನಮ್ಮ ಚಿಂತನೆ, ನಮ್ಮ ಮಾತು ಮತ್ತು ಕೃತಿಯ ಧ್ಯೋತಕವಾಗಿದೆ. ಎಂದರೆ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುವ ಮೂಲಕ ಆರೋಗ್ಯ ಮತ್ತು ಸಂತೋಷವನ್ನು ಪಡೆಯಬಹುದು ಎಂದು ಶಿವ ಸೂಚ್ಯವಾಗಿ ತಿಳಿಸುತ್ತಾನೆ.

ಮೂರನೆಯ ಕಣ್ಣು: ಭವಿಷ್ಯದ ದೃಷ್ಟಿ

ಮೂರನೆಯ ಕಣ್ಣು: ಭವಿಷ್ಯದ ದೃಷ್ಟಿ

ಶಿವನಿಗೆ ಹಣೆಯಲ್ಲಿ ಮೂರನೆಯ ಕಣ್ಣೊಂದಿದ್ದು ಇದು ಸದಾ ಮುಚ್ಚಿರುತ್ತದೆ. ಇದು ಭವಿಷ್ಯವನ್ನು ನೋಡುವ ದೂರದೃಷ್ಟಿಯ ಸಂಕೇತವಾಗಿದ್ದು ಮುಂಬರುವ ಸಂಭವಗಳನ್ನು ಇಂದೇ ಊಹಿಸಿ ಆ ಪ್ರಕಾರ ಮುಂದಡಿ ಇಡಲು ಶಿವ ಪ್ರೇರಣೆ ನೀಡುತ್ತಾನೆ. ದೂರದೃಷ್ಟಿಯಿಂದ ಭವಿಷ್ಯದಲ್ಲಾಗುವ ಬದಲಾವಣೆಯನ್ನು ಗಮನಿಸಿ ಆ ಪ್ರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡುವವರು ಸದಾ ಸಫಲರಾಗಿರುತ್ತಾರೆ.

ತ್ರಿಶೂಲ: ಸ್ವಯಂ ನಿಯಂತ್ರಣ

ತ್ರಿಶೂಲ: ಸ್ವಯಂ ನಿಯಂತ್ರಣ

ನಮ್ಮ ಮನಸ್ಸು ಪರಿಸ್ಥಿತಿಗನುಗುಣವಾಗಿ ಎತ್ತೆತ್ತಲೂ ಹರಿಯುತ್ತಲೇ ಇರುತ್ತದೆ. ಇದು ಜಾಣ್ಮೆಯದ್ದೂ ಆಗಿರಬಹುದು ಅಥವಾ ಸೈತಾನನ ಕೆಟ್ಟ ಪ್ರಭಾವವೂ ಆಗಿರಬಹುದು. ಆದರೆ ನಿಮ್ಮ ವಿವೇಕ ನಿಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ ಹಾಗೂ ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟು ಸ್ವಯಂ ನಿಯಂತ್ರಣ ಸಾಧಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತ್ರಿಶೂಲ: ಸ್ವಯಂ ನಿಯಂತ್ರಣ

ತ್ರಿಶೂಲ: ಸ್ವಯಂ ನಿಯಂತ್ರಣ

ತ್ರಿಶೂಲ ಈ ವಿವೇಕದ ಪ್ರತೀಕವಾಗಿದ್ದು ನಿಮ್ಮ ನಿತ್ಯದ ಚಟುವಟಿಕೆ, ಪ್ರವೃತ್ತಿಗಳ ಮೇಲೆ ಹತೋಟಿ ಸಾಧಿಸಿ ನಿಮ್ಮ ಆರೋಗ್ಯ ಮತ್ತು ವೃತ್ತಿರಂಗದಲ್ಲಿ ಉತ್ತಮ ಸಾಧನೆ ಸಾಧಿಸಲು ಸಾಧ್ಯವಾಗುತ್ತದೆ.

ವಿಚಾರಶೀಲ ಭಂಗಿ : ಏಕಾಂತದಲ್ಲಿ ಕೆಲ ಕ್ಷಣ ಕಳೆಯಲು ಪ್ರೇರಣೆ

ವಿಚಾರಶೀಲ ಭಂಗಿ : ಏಕಾಂತದಲ್ಲಿ ಕೆಲ ಕ್ಷಣ ಕಳೆಯಲು ಪ್ರೇರಣೆ

ಇಂದಿನ ಜೀವನಶೈಲಿ ಅತ್ಯಂತ ವ್ಯಸ್ತತೆಯಿಂದ ಕೂಡಿದ್ದು ನಮ್ಮ ಬಗ್ಗೆ ಯೋಚಿಸಲೂ ನಮಗೆ ಸಮಯವಿಲ್ಲವಾಗಿದೆ. ಆಗಾಗ ಏಕಾಂತದಲ್ಲಿರುವುದು ಅಗತ್ಯ ಎಂಬ ಸೂಚನೆಯನ್ನು ಶಿವನ ವಿಚಾರಶೀಲ ಭಂಗಿ ನೀಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಚಾರಶೀಲ ಭಂಗಿ : ಏಕಾಂತದಲ್ಲಿ ಕೆಲ ಕ್ಷಣ ಕಳೆಯಲು ಪ್ರೇರಣೆ

ವಿಚಾರಶೀಲ ಭಂಗಿ : ಏಕಾಂತದಲ್ಲಿ ಕೆಲ ಕ್ಷಣ ಕಳೆಯಲು ಪ್ರೇರಣೆ

ಪ್ರತಿದಿನ ಕೆಲ ಕ್ಷಣಗಳಾದರೂ ಕುಳಿತು ಆತ್ಮವಿಮರ್ಶೆ ಮಾಡಿಕೊಂಡು ತಾವು ನಡೆಯುತ್ತಿರುವ ದಾರಿ ಸರಿ ಇದೆಯೇ ಎಂಬುದನ್ನು ನೋಡಿಕೊಳ್ಳುವುದು ಅಗತ್ಯ ಎಂಬುದನ್ನು ಶಿವ ತಿಳಿಸುತ್ತಾನೆ. ಇದು ನಮ್ಮ ಕೃತಿ ಮತ್ತು ಸ್ವಭಾವಗಳ ಮೇಲೆ ಅಪಾರವಾದ ಪರಿಣಾಮ ಬೀರುತ್ತದೆ.

ವಿಭೂತಿ: ಉದಾರತೆ ಮತ್ತು ಕ್ಷಮಾಶೀಲತೆಯ ಸಂಕೇತ

ವಿಭೂತಿ: ಉದಾರತೆ ಮತ್ತು ಕ್ಷಮಾಶೀಲತೆಯ ಸಂಕೇತ

ಮಾನವನ ಶರೀರ ನಶ್ವರವಾದುದು. ಎಷ್ಟೇ ಐಶ್ವರ್ಯ ಹೊಂದಿದರೂ ಕಡೆಗೆ ಸಾವಿನ ಬಳಿಕ ಸುಟ್ಟ ಶರೀರದಲ್ಲಿ ಉಳಿಯುವುದು ಬೂದಿ ಮಾತ್ರ. ಆದ್ದರಿಂದ ಜೀವಿತಾವಧಿಯಲ್ಲಿ ಮನಸ್ಸಿನಲ್ಲಿ ಶಾಂತಿ ನೆಮ್ಮದಿ ನೆಲೆಸಲು ದ್ವೇಶ ಮತ್ತು ಮತ್ಸರಗಳನ್ನು ಮನದಿಂದ ಹೊರಹಾಕುವುದು ಅವಶ್ಯವಾಗಿದೆ. ಜೀವನದಲ್ಲಿ ನಮ್ಮ ಕರ್ತವ್ಯಗಳನ್ನು ದಕ್ಷತೆಯಿಂದ ಪೂರೈಸಿ ಕಡೆಗೆ ನೆಮ್ಮದಿಯಿಂದ ಶಿವನೆಡೆಗೆ ತೆರಳುವುದನ್ನೇ ವಿಭೂತಿ ಸೂಚಿಸುತ್ತದೆ.

ವಿಷಕಂಠ: ಕ್ರೋಧವನ್ನು ನಿಗ್ರಹದಲ್ಲಿಟ್ಟುಕೊಳ್ಳುವ ಸಂಕೇತ

ವಿಷಕಂಠ: ಕ್ರೋಧವನ್ನು ನಿಗ್ರಹದಲ್ಲಿಟ್ಟುಕೊಳ್ಳುವ ಸಂಕೇತ

ಈ ಜಗತ್ತು ಘೋರ ವಿಷದ ಪ್ರಭಾವಕ್ಕೆ ಒಳಗಾಗುವಾಗ ಆ ವಿಷವನ್ನು ಕುಡಿದು ತನ್ನ ಕಂಠದಲ್ಲಿರಿಸುವ ಮೂಲಕ ಲೋಕವನ್ನು ರಕ್ಷಿಸಿದ ಶಿವನ ಕಂಠ ನೀಲಿಯಾಗಿದೆ. ಈ ವಿಷವನ್ನು ತಾನೂ ಕುಡಿಯದೇ ಜಗತ್ತಿಗೂ ಬಿಡದೇ ಕಂಠದಲ್ಲಿಯೇ ಇರಿಸಿಕೊಂಡಿರುವ ಕಾರಣದಿಂದಲೇ ವಿಷಕಂಠನೆಂಬ ಹೆಸರು ಆತನಿಗೆ ಬಂದಿದೆ. ಕ್ರೋಧವೆಂಬ ವಿಷವನ್ನು ನಾವು ನುಂಗಿಕೊಂಡರೆ ಉದ್ವೇಗ ಮತ್ತು ಖಿನ್ನತೆಗಳು ಎದುರಾಗುತ್ತವೆ. ಅದೇ ಕ್ರೋಧವನ್ನು ವ್ಯಕ್ತಪಡಿಸಿದರೆ ಉದ್ವೇಗ, ಒತ್ತಡ ಮತ್ತು ಮನಸ್ಸಿನ ಮೇಲಿನ ನಿಯಂತ್ರಣ ತಪ್ಪುವ ಸಾಧ್ಯತೆ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಷಕಂಠ: ಕ್ರೋಧವನ್ನು ನಿಗ್ರಹದಲ್ಲಿಟ್ಟುಕೊಳ್ಳುವ ಸಂಕೇತ

ವಿಷಕಂಠ: ಕ್ರೋಧವನ್ನು ನಿಗ್ರಹದಲ್ಲಿಟ್ಟುಕೊಳ್ಳುವ ಸಂಕೇತ

ಆದ್ದರಿಂದ ಕ್ರೋಧವನ್ನು ಅತ್ತ ನುಂಗದೇ ಇತ್ತ ಹೊರಹಾಕದೇ ನಿಯಂತ್ರಣದಲ್ಲಿಟ್ಟು ಎಷ್ಟು ಬೇಕೋ ಅಷ್ಟೇ ನುಂಗಿ ಎಷ್ಟು ಬೇಕೋ ಅಷ್ಟೇ ವ್ಯಕ್ತಪಡಿಸುವ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳಬಹುದು. ಇದರಿಂದ ದೇಹದ ಹಲವು ವ್ಯಾಧಿಗಳಾದ ಅಸ್ತಮಾ, ಹೊಟ್ಟೆಯುರಿ, ಗಂಟಲೂತ ಮೊದಲಾದ ತೊಂದರೆಗಳಿಂದ ದೂರವಿರಬಹುದು.

ಡಮರುಗ: ಆಕಾಂಕ್ಷೆಗಳ ಮೇಲೆ ಹತೋಟಿ

ಡಮರುಗ: ಆಕಾಂಕ್ಷೆಗಳ ಮೇಲೆ ಹತೋಟಿ

ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ದ ಹೇಳಿದ್ದಾನೆ. ಇಂದು ಪರರ ಬಳಿ ಇರುವ ವಸ್ತು ಅಥವಾ ಐಭೋಗಗಳನ್ನು ಕಂಡಾಗ ಅದು ತಮಗೂ ಬೇಕು ಎಂದು ಮನ ಮಿಡಿಯುತ್ತದೆ. ಆದರೆ ಅನಗತ್ಯವಾದ ವಸ್ತು ಅಥವಾ ಐಭೋಗಗಳನ್ನು ಬಯಸದಿರಲು ಮನವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಡಮರುಗ ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಡಮರುಗ: ಆಕಾಂಕ್ಷೆಗಳ ಮೇಲೆ ಹತೋಟಿ

ಡಮರುಗ: ಆಕಾಂಕ್ಷೆಗಳ ಮೇಲೆ ಹತೋಟಿ

ನಿಮ್ಮ ಆಹಾರ ಮಿತವಾಗದಿರುವುದು, ಅನಾರೋಗ್ಯಕರ ಆಹಾರ ಸೇವಿಸುವುದು, ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವುದು ಮೊದಲಾದವುಗಳಿಂದ ಶರೀರವೂ ಸ್ಥೂಲವಾಗಿ ಮನಸ್ಸೂ ದುಗುಡಕ್ಕೆ ಒಳಗಾಗಿ ಮನಃಶಾಂತಿ ಮತ್ತು ಆರೋಗ್ಯ ಕೆಡುತ್ತದೆ. ಇದರಿಂದ ಪಾರಾಗಲು ಮನಸ್ಸಿನ ಸೆಳೆತವನ್ನು ಹತೋಟಿಯಲ್ಲಿಡಲು ಡಮರುಗದ ಬಡಿತ ಎಚ್ಚರಿಸುತ್ತದೆ.

ಗಂಗೆ: ಶರೀರ ಮತ್ತು ಮನಸ್ಸಿನ ಸ್ವಚ್ಛತೆಗೆ ಆದ್ಯತೆ

ಗಂಗೆ: ಶರೀರ ಮತ್ತು ಮನಸ್ಸಿನ ಸ್ವಚ್ಛತೆಗೆ ಆದ್ಯತೆ

ಉತ್ತಮ ಆರೋಗ್ಯಕ್ಕೆ ಕೇವಲ ಶರೀರವನ್ನು ಸ್ವಚ್ಛವಾಗಿಟ್ಟುಕೊಂಡಿದ್ದರೆ ಸಾಲದು. ಮನಸ್ಸೂ ಸ್ವಚ್ಛವಾಗಿರಬೇಕು. ಗಂಗೆ ಪಾವಿತ್ರ್ಯತೆಯ ಸಂಕೇತವಾಗಿದೆ. ಕಾಲಕಾಲಕ್ಕೆ ಉಪವಾಸವಿದ್ದು ಶರೀರದ ವಿಷಕಾರಿ ವಸ್ತುಗಳನ್ನು ಹೊರಹಾಕಲು, ಪ್ರಾಣಾಯಾಮದ ಮೂಲಕ ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲು, ಶಾರೀರಿಕ ವ್ಯಾಯಾಮಗಳ ಮೂಲಕ ತ್ವಚೆ ಮತ್ತು ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿಡಲು ಹಾಗೂ ಪವಿತ್ರ ಓಂಕಾರದಿಂದ ಮನಸ್ಸನ್ನು ಶುದ್ಧಗೊಳಿಸಲು ಹಾಗೂ ಶಾಂತಸ್ಥಿತಿಯಲ್ಲಿಡಲು ಗಂಗೆ ಪ್ರೇರಣೆಯಾಗಿದೆ.

ನಾಗರಹಾವು: ಪ್ರಶಾಂತ ಸ್ಥಿತಿ ಅನುಭವಿಸಲು

ನಾಗರಹಾವು: ಪ್ರಶಾಂತ ಸ್ಥಿತಿ ಅನುಭವಿಸಲು

ಶಿವನ ಕೊರಳಿನಲ್ಲಿ ಯಾವಾಗಲೂ ನಾಗರ ಹಾವೊಂದು ಹೆಡೆ ಬಿಚ್ಚಿರುತ್ತದೆ. ಆದರೆ ಶಿವನ ಮೊಗದಲ್ಲಿ ಮಾತ್ರ ಮಂದಹಾಸ ತುಳುಕುತ್ತಿರುತ್ತದೆ. ನಮ್ಮ ಸಿಟ್ಟು, ಕ್ರೋಧ ಮೊದಲಾದವು ನಾಗರ ಹಾವಿನ ರೂಪದಲ್ಲಿದ್ದು ಇವು ಸದಾ ನಮ್ಮೊಂದಿಗಿದ್ದರೂ ಪ್ರಶಾಂತತೆಯಲ್ಲಿರುವುದನ್ನು ಶಿವ ಬಿಂಬಿಸುತ್ತಾನೆ. ಇದರಿಂದ ಸುತ್ತ ಮುತ್ತಲಿನವರೊಂದಿಗೆ, ನೆರೆಹೊರೆಯವರೊಂದಿಗೆ, ಸಂಬಂಧಿಕರೊಂದಿಗೆ ಮನಸ್ತಾಪವಾಗದೇ ಇರಲು ಸಾಧ್ಯವಾಗುತ್ತದೆ. ಪ್ರಶಾಂತವಾಗಿರುವ ಮನದ ಮೂಲಕ ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆಗಳು ದೂರವೇ ಉಳಿಯುತ್ತವೆ.

ಮುಚ್ಚಿದ ಕಣ್ಣುಗಳು: ಕೆಟ್ಟದನ್ನು ನೋಡದಿರಲು

ಮುಚ್ಚಿದ ಕಣ್ಣುಗಳು: ಕೆಟ್ಟದನ್ನು ನೋಡದಿರಲು

ಇಂದು ನಮ್ಮ ಕಣ್ಣುಗಳಿಗೆ ಅಗತ್ಯಕ್ಕಿಂತಲೂ ಹೆಚ್ಚಾಗಿ ಅನಗತ್ಯವಾದುದೇ ಬೀಳುತ್ತಿರುತ್ತವೆ. ಇವು ಸುಂದರವೂ ಆಗಿದ್ದು ಸುಲಭವಾಗಿ ಇದರ ಆಕರ್ಷಣೆಗೆ ಒಳಗಾಗುತ್ತೇವೆ. ಇದು ಆಹಾರವೇ ಇರಬಹುದು ಅಥವಾ ಯಾವುದಾದರೂ ಚಟಕ್ಕೆ ಒಳಗಾಗುವ ವಸ್ತುವೇ ಇರಬಹುದು. ಇದರತ್ತ ನಮ್ಮ ಚಿತ್ತವನ್ನು ಹರಿಸದೇ ಇರುವುದನ್ನು ಶಿವನ ಮುಚ್ಚಿದ ಕಣ್ಣುಗಳು ಬಿಂಬಿಸುತ್ತವೆ.

ಮುಚ್ಚಿದ ಕಣ್ಣುಗಳು: ಕೆಟ್ಟದನ್ನು ನೋಡದಿರಲು

ಮುಚ್ಚಿದ ಕಣ್ಣುಗಳು: ಕೆಟ್ಟದನ್ನು ನೋಡದಿರಲು

ಇದರಿಂದ ಮನಸ್ಸಿಗೆ ಮತ್ತು ದೇಹಕ್ಕೆ ಎದುರಾಗಬಹುದಾಗಿದ್ದ ಹಲವಾರು ತೊಂದರೆಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಮುಚ್ಚಿದ ಕಣ್ಣುಗಳ ಮೂಲಕ ಶಿವ ನೀವು ನೋಡುವ ನೋಟ ಸುಂದರವಾಗಿರಲಿ, ನಿಮ್ಮ ಕಾರ್ಯ ಶುದ್ಧವಾಗಿರಲಿ, ನಿಮ್ಮ ಯೋಚನೆಗಳು ಸಕಾರಾತ್ಮಕವಾಗಿರಲಿ ಎಂದು ತಿಳಿಸುತ್ತಾನೆ.

English summary

Things Lord Shiva Teaches You About Your Health in kannada

Divine form of Lord Shiva is always awe inspiring and comforting to look at. Looking at the benign and majestic form of the Lord, we gain confidence and feel our worries are removed. In fact, More than inspiring devotion, Lord Shiva's form can also open up our eyes regarding some important aspects of our health
X
Desktop Bottom Promotion