For Quick Alerts
ALLOW NOTIFICATIONS  
For Daily Alerts

ಝೆನ್ ಕಥೆ: ಬುದ್ಧ ನೀ ತಪ್ಪು ಭಾವಿಸಬೇಡ!

|
Kannada Zen story
ಝೆನ್‌ ಗುರು ತೊಸುಯಿಗೆ ಸಾಂಪ್ರದಾಯಿಕ ಆಚರಣೆಗಳಲ್ಲಿ ಅಷ್ಟೊಂದು ನಂಬಿಕೆ ಇರಲಿಲ್ಲ. ಆದ್ದರಿಂದ ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳನ್ನು ಬಿಟ್ಟು ಒಂದು ಸೇತುವೆಯ ಕೆಳಗೆ ಭಿಕ್ಷುಕರ ಜೊತೆ ಭಿಕ್ಷುಕನಾಗಿ ಬದುಕುತ್ತಿದ್ದ.

ತೊಸುಯಿಗೆ ವಯಸ್ಸಾದಾಗ ಒಬ್ಬ ಹಳೆಯ ಬಾಲ್ಯದ ಸ್ನೇಹಿತ ಸಿಕ್ಕನು. ಅವನು ತೊಸುಯಿಗೆ ಬದುಕು ನಡೆಸಲು ಅಕ್ಕಿಯಿಂದ ವಿನೆಗರ್ ಮಾಡು ಎಂದು ಸಲಹೆ ನೀಡಿ ಅದನ್ನು ತಯಾರಿಸುವುದು ಹೇಗೆ ಎಂದು ಕಲಿಸಿಕೊಟ್ಟನು. ಮುಂದೆ ಇದೇ ವೃತ್ತಿಯನ್ನು ತೊಸುಯಿ ತಾನು ಸಾಯುವವರೆಗೂ ಕೂಡಾ ನಡೆಸಿಕೊಂಡು ಹೋದ.

ಒಮ್ಮೆ ಹೀಗೆ ವಿನೆಗರ್ ತಯಾರಿಸುತ್ತಿದ್ದಾಗ, ಒಬ್ಬ ಭಿಕ್ಷುಕ ಗೆಳೆಯ ಸಿಕ್ಕಿ ಅವನು ತೊಸುಯಿಗೆ ಬುದ್ಧನ ಚಿತ್ರವನ್ನು ನೀಡಿದ. ತೊಸುಯಿ ಎಲ್ಲಾ ಧರ್ಮಗಳಿಂದಲೂ ಮುಕ್ತನಾಗಿದ್ದವನಾಗಿದ್ದರೂ ಕೂಡಾ ಈ ಚಿತ್ರವನ್ನು ಸ್ವೀಕರಿಸಿದ. ನಂತರ ಈ ಬುದ್ಧನ ಚಿತ್ರವನ್ನು ಎಲ್ಲಿ ಇಡುವುದು ಎಂದು ತನ್ನ ಕೋಣೆಯ ಸುತ್ತ ನೋಡಿದನು.

ಕೊನೆಗೆ ತನ್ನ ಪುಟ್ಟ ಗುಡಿಸಿಲಿನ ಗೋಡೆಯ ಮೇಲೆ ಬುದ್ಧನ ಫೋಟೊವನ್ನು ನೇತುಹಾಕಿದ. ನಂತರ ಅದರ ಪಕ್ಕದಲ್ಲಿ ಒಂದು ಸಾಲನ್ನು ಬರೆದ "ಮಿ. ಅಮಿದ ಬುದ್ಧ: ಈ ಕೋಣೆ ಸಣ್ಣದಾಗಿರುವವರೆಗೂ ನಿನ್ನನ್ನು ನಾನು ತಾತ್ಕಾಲಿಕವಾಗಿ ಇಲ್ಲಿ ಇರಿಸಬಲ್ಲೆ. ಆದರೆ, ನಾನು ನಿನ್ನ ಅರಮನೆಯಲ್ಲಿ ಮತ್ತೊಮ್ಮೆ ಹುಟ್ಟಿ ಬಾ ಎಂದು ಹೇಳುತ್ತೇನೆಂದು ತಪ್ಪು ಭಾವಿಸಬೇಡ..!"

English summary

Kannada Zen story | Inspirational short stories | ಝೆನ್ ಕಥೆ : ಬುದ್ಧ ನೀ ತಪ್ಪು ಭಾವಿಸಬೇಡ!

Once while Tosui got picture of Buddha. He hung it on the wall of his hut and said this room is narrow, I can only let you remain as a transient, a temporary guest.
X
Desktop Bottom Promotion