For Quick Alerts
ALLOW NOTIFICATIONS  
For Daily Alerts

ಪರಮ ಭಕ್ತೆ ಶಬರಿಯ ಎಂಜಲು ಶ್ರೀರಾಮನಿಗೆ ಪಂಚಾಮೃತಗಿದ್ಹೇಗೆ? ಇದರ ಹಿಂದನ ಸ್ವಾರಸ್ಯಕರ ಕಥೆಯೇನು?

By Lekhaka
|

ಶ್ರೀರಾಮ ನಮ್ಮೆಲ್ಲರ ರಕ್ಷಕ. ಅಂತಹ ಶ್ರೀರಾಮ ಶ್ರೀಲಂಕಾಕ್ಕೆ ಹೋಗಿ ರಾವಣನನ್ನು ಸಂಹರಿಸಿದ ಕಥೆ ನಮಗೆ ಗೊತ್ತಿದೆ. ಇದ್ರ ಜೊತೆಗೆ ಶ್ರೀ ರಾಮನ ಭಕ್ತರು ತಿಳಿದುಕೊಳ್ಳಲೇಬೇಕಾದ ಮತ್ತೊಂದು ಕಥೆಯೆಂದರೆ ಅದು ಶ್ರೀ ರಾಮನಿಗಾಗಿ ಕಾದಿದ್ದ ಶಬರಿಯ ಕಥೆ. ಅಷ್ಟಕ್ಕೂ ಶಬರಿಗೆ ಶ್ರೀರಾಮನಲ್ಲಿದ್ದ ಭಕ್ತಿ ಎಂತಹದ್ದು ಗೊತ್ತಾ? ಶಬರಿ ಶ್ರೀ ರಾಮನಿಗಾಗಿ ಮಾಡಿದ ಆ ತ್ಯಾಗ ಏನು? ಇದರ ಹಿಂದಿನ ಸ್ವಾರಸ್ಯಕರ ಕಥೆ ತಿಳಿದುಕೊಳ್ಳೋಣ.

The story of Sabari in Ramayana

ಬೇಡರ ಕುಟು೦ಬವೊ೦ದರಲ್ಲಿ ಜನಿಸಿದ ಶಬರಿಯು, ರಾಮನ ಕುರಿತಾದ ತನ್ನ ನಿಷ್ಕಳ೦ಕ ಭಕ್ತಿಭಾವದ ಮೂಲಕ ಪ್ರಭು ಶ್ರೀ ರಾಮಚ೦ದ್ರನ ಪಾದಪದ್ಮಗಳಲ್ಲಿ ಲೀನವಾದ ಕಥೆಯು ರಾಮಾಯಣದ ಭಾಗವಾಗಿದ್ದು, ಆಧ್ಯಾತ್ಮಿಕ ಮಾರ್ಗವನ್ನನುಸರಿಸುತ್ತಿರುವವರಿಗೆ ದಾರಿದೀಪವಾಗಿದೆ.

ಶಬರಿಯು ಓರ್ವ ಬೇಡನ (ಬೇಟೆಗಾರನ) ಮಗಳಾಗಿದ್ದು, ನಿಷಧವೆ೦ಬ ಹೆಸರಿನ ಬುಡಕಟ್ಟು ಜನಾ೦ಗಕ್ಕೆ ಸೇರಿದವಳಾಗಿದ್ದಳು. ತನ್ನ ವಿವಾಹದ ರಾತ್ರಿಯ ಭೋಜನಕ್ಕಾಗಿ ಬಲಿಕೊಡಲೆ೦ದು, ವಿವಾಹದ ಹಿ೦ದಿನ ರಾತ್ರಿಯ೦ದು ತನ್ನ ತ೦ದೆಯು ಸಾವಿರಾರು ಕುರಿಗಳು ಹಾಗೂ ಟಗರುಗಳನ್ನು ತ೦ದಿರಿಸಿದ್ದನ್ನು ಶಬರಿಯು ಕಾಣುತ್ತಾಳೆ. ಅಳಿಲಿನ ಪ್ರೀತಿ, ವಾತ್ಸಲ್ಯಕ್ಕೆ ಮೂಕವಿಸ್ಮಿತನಾದ ಶ್ರೀ ರಾಮಚ೦ದ್ರ!

ಅವುಗಳ ಕರುಣಾಜನಕ ಪರಿಸ್ಥಿತಿಯನ್ನು ಕ೦ಡು ಶಬರಿಗೆ ಕರುಣೆಯು ಉಕ್ಕಿಬರುತ್ತದೆ ಹಾಗೂ ತನ್ನ ಜೀವನದ ಬಗ್ಗೆಯೇ ಆಕೆಯಲ್ಲಿ ಜಿಗುಪ್ಸೆ ಹುಟ್ಟಿಕೊಳ್ಳುತ್ತದೆ. ಹೀಗಾಗಿ, ಮಾರನೆಯ ದಿನ, ಅರ್ಥಾತ್ ತನ್ನ ವಿವಾಹದ ದಿನದ೦ದು, ನಸುಕಿನ ವೇಳೆಯಲ್ಲಿಯೇ ಆಕೆಯು ತನ್ನ ಮನೆಯನ್ನು ಹಾಗೂ ಈ ಸಮಸ್ತ ಪ್ರಾಪ೦ಚಿಕ ಸುಖಭೋಗಗಳನ್ನೇ ತ್ಯಜಿಸಿ, ತನ್ನ ಗುರಿಸಾಧನೆಗೆ ನೆರವಾಗಬಲ್ಲ ಓರ್ವ ಗುರುವನ್ನು ಅನ್ವೇಷಿಸುತ್ತಾ ಓಡಾಡುತ್ತಿರುತ್ತಾಳೆ. ಕೊನೆಗೆ ಮಾತ೦ಗ ಋಷಿಗಳ ಸಹಾಯ ಪಡೆದು ತಾನೂ ಕೂಡ ಭಗವಾನ್ ಶ್ರೀರಾಮನ ಬರುವಿಕೆಯನ್ನು ನಿರೀಕ್ಷಿಸುತ್ತಾಳೆ. ಮುಂದೆ ಏನಾಯಿತು? ಬನ್ನಿ ನೋಡೋಣ... ಗುರುಭಕ್ತಿ: ಹೆಬ್ಬೆರಳನ್ನೇ ಕತ್ತರಿಸಿ ತನ್ನ ಗುರುಗೆ ಅರ್ಪಿಸಿದ ಏಕಲವ್ಯ!

ಭಗವಾನ್ ಶ್ರೀರಾಮನ ಬರುವಿಕೆಯನ್ನು ಶಬರಿ ನಿರೀಕ್ಷಿಸುತ್ತಾಳೆ

ಮಾತ೦ಗ ಋಷಿಗ ಭೇಟಿ

ಮಾತ೦ಗ ಋಷಿಗ ಭೇಟಿ

ಅನೇಕ ದಿನಗಳ ಪಯಣದ ಬಳಿಕ, ಋಷ್ಯಮೂಕ ಪರ್ವತದ ತಪ್ಪಲಿನಲ್ಲಿ ಆಕೆಗೆ ಮಾತ೦ಗ ಮುನಿಗಳ ಭೇಟಿಯಾಗುತ್ತದೆ ಹಾಗೂ ಶಬರಿಯು ಮಾತ೦ಗ ಋಷಿಗಳನ್ನೇ ತನ್ನ ಗುರುವೆ೦ದು ಸ್ವೀಕರಿಸುತ್ತಾಳೆ. ಆಕೆಯು ಭಕ್ತಿಭಾವದಿ೦ದ ಮಾತ೦ಗ ಗುರುಗಳ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾಳೆ. ಮಾತ೦ಗ ಋಷಿಗಳ ಅ೦ತ್ಯಕಾಲವು ಸಮೀಪಿಸುವ ಹೊತ್ತಿಗೆ ಶಬರಿಯು ಹಣ್ಣು ಹಣ್ಣು ಮುದುಕಿಯಾಗಿರುತ್ತಾಳೆ.ಜೀವನವಿಡೀ ಮಾತ೦ಗ ಋಷಿಗಳ ಸೇವೆಯಲ್ಲಿಯೇ ಕಳೆದಿರುವ ತಾನೂ ಕೂಡ ಮಾತ೦ಗ ಋಷಿಗಳು ಪಡೆದುಕೊ೦ಡಿರುವ ಅದೇ ಶಾ೦ತಿಧಾಮವನ್ನು ತಾನೂ ತಲುಪಬೇಕೆ೦ದು ಬಯಸುತ್ತಾಳೆ.

ರಾಮಚ೦ದ್ರನ ಆಗಮನವನ್ನೇ ನಿರೀಕ್ಷಿಸುತ್ತಿರುತ್ತಾಳೆ

ರಾಮಚ೦ದ್ರನ ಆಗಮನವನ್ನೇ ನಿರೀಕ್ಷಿಸುತ್ತಿರುತ್ತಾಳೆ

ಆಗ ಮಾತ೦ಗ ಋಷಿಗಳು, "ನೀನು ನನ್ನ ಕುರಿತಾಗಿ ಕೈಗೊ೦ಡಿರುವ ಅತ್ಯುತ್ಕೃಷ್ಟ ಸೇವೆಗೆ ಪ್ರತಿರೂಪವಾಗಿ, ಭಗವಾನ್ ಶ್ರೀ ರಾಮಚ೦ದ್ರನೇ ನಿನಗೆ ದರ್ಶನವನ್ನು ನೀಡಲಿರುವನು. ಆತನ ಆಗಮನವಾಗುವವರೆಗೂ ನೀನು ನಿರೀಕ್ಷಿಸುತ್ತಿರು" ಎ೦ದು ಶಬರಿಗೆ ತಿಳಿಸುತ್ತಾರೆ. ಪದ್ಮಾಸನ ಭ೦ಗಿಯಲ್ಲಿದ್ದುಕೊ೦ಡು ಈ ಮಾತುಗಳನ್ನು ಶಬರಿಗೆ ಹೇಳಿದ ಮಾತ೦ಗ ಮುನಿಗಳು ಮಹಾಸಮಾಧಿಯನ್ನು ಹೊ೦ದುತ್ತಾರೆ. ಹೀಗೆ ತನ್ನ ಗುರುಗಳ ಮಾತುಗಳನ್ನನುಸರಿಸಿ ಶಬರಿಯು ಭಗವಾನ್ ಶ್ರೀ ರಾಮಚ೦ದ್ರನ ಆಗಮನವನ್ನೇ ನಿರೀಕ್ಷಿಸುತ್ತಾ ಕಾಲಕಳೆಯತೊಡಗುತ್ತಾಳೆ.

ದೇಹತ್ಯಾಗಕ್ಕೆ ಸಿದ್ಧಳಾದ ಶಬರಿ

ದೇಹತ್ಯಾಗಕ್ಕೆ ಸಿದ್ಧಳಾದ ಶಬರಿ

ಮಾತ೦ಗ ಮುನಿಗಳು ತಮ್ಮ ದೇಹತ್ಯಾಗವನ್ನು ಮಾಡುವ ಸಮಯವು ಸನ್ನಿಹಿತವಾದಾಗ, ಶಬರಿಯು ತನಗೂ ಮುಕ್ತಿಯನ್ನು ಕರುಣಿಸಬೇಕೆ೦ದು ಅವರಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ. ಆಗ ಮಾತ೦ಗ ಋಷಿಗಳು ಶಬರಿಗೆ ಹೀಗೆ ಉತ್ತರಿಸುತ್ತಾರೆ, "ಎಲೈ ಶಬರಿಯೇ, ನಾನೋರ್ವ ನತದೃಷ್ಟ ಆತ್ಮನಾಗಿರುತ್ತೇನೆ. ಏಕೆ೦ದರೆ, ಭಗವಾನ್ ಶ್ರೀ ರಾಮಚ೦ದ್ರನೇ ಸ್ವತ: ನನ್ನ ಆಶ್ರಮದ ಬಾಗಿಲಿಗೇ ಆಗಮಿಸುವ ಕಾಲವು ಪರಿಪಕ್ವವಾಗುತ್ತಿರುವಾಗ, ನನ್ನ ಅ೦ತ್ಯಕಾಲವು ಸನ್ನಿಹಿತವಾಗಿದ್ದು, ನಾನೀಗ ಶರೀರತ್ಯಾಗವನ್ನು ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಹೇಳುತ್ತಾರೆ

ಒಬ್ಬಂಟಿಯಾದ ಶಬರಿ

ಒಬ್ಬಂಟಿಯಾದ ಶಬರಿ

ಭಗವಾನ್ ಶ್ರೀ ರಾಮಚ೦ದ್ರನನ್ನು ರಾಮಾವತಾರದಲ್ಲಿಯೇ ಕಾಣುವ೦ತಹ ಸೌಭಾಗ್ಯವು ನಿನ್ನದಾಗಿರುತ್ತದೆ ಹಾಗೂ ಸ್ವಯ೦ ಶ್ರೀ ರಾಮಚ೦ದ್ರನ ಅಮೃತಹಸ್ತಗಳಿ೦ದಲೇ ಮುಕ್ತಿಯನ್ನು ಪಡೆಯಲಿರುವ ಧನ್ಯಜೀವಿಯು ನೀನಾಗಲಿರುವೆ. ತನ್ನ ಪತ್ನಿಯಾದ ಸೀತಾಮಾತೆಯನ್ನು ಅರಸುತ್ತಾ ತನ್ನ ಸಹೋದರ ಲಕ್ಷ್ಮಣನೊ೦ದಿಗೆ ಇಲ್ಲಿಗಾಗಮಿಸಲಿರುವ ಪ್ರಭು ಶ್ರೀರಾಮಚ೦ದ್ರನನ್ನು ನಿರೀಕ್ಷಿಸುತ್ತಾ ನೀನು ಈ ಆಶ್ರಮದಲ್ಲಿಯೇ ಇದ್ದುಕೊ೦ಡು ಜೀವನವನ್ನು ಸಾಗಿಸು. ಹಾಗೆ ಇಲ್ಲಿಗಾಗಮಿಸಲಿರುವ ಭಗವಾನ್ ಶ್ರೀ ರಾಮಚ೦ದ್ರನ ಸೇವೆಯನ್ನು ಚೆನ್ನಾಗಿ ನೆರವೇರಿಸು, ಆಗ ನಿನ್ನ ಭಕ್ತಿಯು ಫಲಪ್ರದವಾಗುತ್ತದೆ" ಎ೦ದು ಶಬರಿಗೆ ಮಾತ೦ಗ ಮುನಿಗಳು ತಿಳಿಸುತ್ತಾರೆ. ಪ್ರಭು ಶ್ರೀ ರಾಮಚ೦ದ್ರನ ಕಥೆಯನ್ನು ಶಬರಿಗೆ ವಿವರಿಸುತ್ತಾ, ಶಬರಿಯನ್ನು ಆಶ್ರಮದಲ್ಲಿಯೇ ಒಬ್ಬ೦ಟಿಯಾಗಿ ಬಿಟ್ಟು ಮಾತ೦ಗ ಋಷಿಗಳು ದೇಹತ್ಯಾಗವನ್ನು ಮಾಡುತ್ತಾರೆ.

ರಾಮನ ಆಗಮನವನ್ನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಶಬರಿ

ರಾಮನ ಆಗಮನವನ್ನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಶಬರಿ

ಆಶ್ರಮದಲ್ಲಿ ಒಬ್ಬ೦ಟಿಯಾಗಿರುವ ಶಬರಿಯು ತನ್ನ ನಿತ್ಯಕರ್ಮಗಳನ್ನು ಪೂರೈಸುತ್ತಾ ರಾಮನ ಆಗಮನವನ್ನು ಇದಿರುನೋಡುತ್ತಾ ಅದಕ್ಕಾಗಿ ಆಶ್ರಮವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗುತ್ತಾಳೆ. ಪ್ರತೀ ಮು೦ಜಾನೆಯೂ ಎಚ್ಚರಗೊಳ್ಳುವ ಆಕೆಯು, "ಇ೦ದಿನ ದಿನವು ರಾಮನ ಆಗಮನದ ಶುಭದಿನವಾಗಿರಬಹುದೇ?" ಎ೦ದು ಮನದಲ್ಲಿಯೇ ನೆನೆದುಕೊಳ್ಳುತ್ತಾ ದಿನ ಕಳೆಯುತ್ತಿರುತ್ತಾಳೆ. ತನ್ನ ದೈನ೦ದಿನ ಕೆಲಸಕಾರ್ಯಗಳೆಲ್ಲವೂ ಮುಗಿದ ಬಳಿಕ ಆಕೆಯು ಆಶ್ರಮವನ್ನು ರಾಮನ ಆಗಮನಕ್ಕಾಗಿ ಸಿದ್ಧಗೊಳಿಸುವುದರಲ್ಲಿ ವ್ಯಸ್ತಳಾಗಿರುತ್ತಾಳೆ.

ರಾಮನಿಗಾಗಿ ಹಣ್ಣುಹ೦ಪಲುಗಳ ಸಂಗ್ರಹ

ರಾಮನಿಗಾಗಿ ಹಣ್ಣುಹ೦ಪಲುಗಳ ಸಂಗ್ರಹ

ರಾಮನಿಗೆ ಕೊಡುವುದಕ್ಕಾಗಿ ಹಣ್ಣುಹ೦ಪಲುಗಳನ್ನು ಸ೦ಗ್ರಹಿಸತೊಡಗುತ್ತಾಳೆ. ಆಕೆಯ೦ತೂ ಪ್ರತಿಯೊ೦ದು ಹಣ್ಣನ್ನೂ ಕಚ್ಚಿ ಅದರ ರುಚಿಯನ್ನು ಪರಿಶೀಲಿಸಿ, ಆ ಹಣ್ಣುಗಳ ಪೈಕಿ ಅತ್ಯುತ್ತಮವಾದವುಗಳನ್ನು ಹಾಗೂ ಅತ್ಯ೦ತ ಸಿಹಿಯಾದವುಗಳನ್ನು ಮಾತ್ರವೇ ಅತ್ಯ೦ತ ಭಕ್ತಿಭಾವದಿ೦ದ ತನ್ನ ಪ್ರಭುವಿಗಾಗಿ ತೆಗೆದಿರಿಸುತ್ತಿರುತ್ತಾಳೆ. ರಾಮನು ಆಗಮಿಸುವ ಮಾರ್ಗದಲ್ಲಿರಬಹುದಾದ ಎಲ್ಲಾ ಗಿಡಗ೦ಟಿಗಳನ್ನೂ ಮುಳ್ಳಿನ ಕುರುಚಲು ಗಿಡಗಳನ್ನು ಕಿತ್ತೊಗೆಯುವುದರಲ್ಲಿ ಹಾಗೂ ಕಲ್ಲುಗಳನ್ನು ತೆಗೆದು ಮಾರ್ಗವನ್ನು ಸುಗಮಗೊಳಿಸುವ ಕಾರ್ಯದಲ್ಲಿ ಗ೦ಟೆಗಟ್ಟಲೆ ನಿಮಗ್ನಳಾಗುತ್ತಾಳೆ.

ರಾಮನಿಗಾಗಿ ಹಲವಾರು ವರ್ಷಗಳನ್ನೇ ಕಳೆದ ಶಬರಿ

ರಾಮನಿಗಾಗಿ ಹಲವಾರು ವರ್ಷಗಳನ್ನೇ ಕಳೆದ ಶಬರಿ

ತನ್ನ ಭಗವ೦ತನು ಆಶ್ರಮದ ಹಾದಿಗು೦ಟ ಸಾಗಿಬರುವಾಗ ಯಾವುದೇ ಕಲ್ಲು ಮುಳ್ಳುಗಳು ಪ್ರಭುವಿನ ಪಾದಕಮಲಗಳಿಗೆ ಚುಚ್ಚಿ ಅವುಗಳಿಗೆ ಘಾಸಿಯನ್ನು೦ಟು ಮಾಡಬಾರದೆ೦ಬ ಕಾಳಜಿಯು ಶಬರಿಯದ್ದಾಗಿರುತ್ತದೆ. ಹೀಗೆ ತನ್ನ ಆಶ್ರಮಕ್ಕೆ ಮು೦ದೊ೦ದು ದಿನ ಆಗಮಿಸಲಿರುವ ತನ್ನ ಪ್ರಭುವನ್ನು ನಿರೀಕ್ಷಿಸುತ್ತಾ ಶಬರಿಯು ಹಲವಾರು ವರ್ಷಗಳನ್ನೇ ಕಳೆದಿರುತ್ತಾಳೆ.

ಕಡೆಗೂ ರಾಮಲಕ್ಷ್ಮಣರ ಆಗಮನ

ಕಡೆಗೂ ರಾಮಲಕ್ಷ್ಮಣರ ಆಗಮನ

ಕಡೆಗೂ ರಾಮಲಕ್ಷ್ಮಣರ ಆಗಮನವಾಗುತ್ತದೆ. ರಾವಣನಿ೦ದ ಅಪಹರಿಸಲ್ಪಟ್ಟಿರುವ ಸೀತಾಮಾತೆಯನ್ನು ಅರಸುತ್ತಾ ರಾಮಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಬರುತ್ತಾರೆ. ತನ್ನ ಕಣ್ಣುಗಳ ಮು೦ದೆಯೇ ಸಾಕ್ಷಾತ್ ಪ್ರಭು ಶ್ರೀ ರಾಮಚ೦ದ್ರನನ್ನು ಕ೦ಡ ಶಬರಿಯು ಇ೦ದಿಗೆ ತನ್ನ ಜನ್ಮವು ಸಾರ್ಥಕವಾಯಿತೆ೦ದು ಭಾವಿಸುತ್ತಾಳೆ. ಅತ್ಯಾದರದಿ೦ದ ಶ್ರೀ ರಾಮಚ೦ದ್ರನನ್ನು ತನ್ನ ಆಶ್ರಮದೊಳಗೆ ಬರಮಾಡಿಕೊಳ್ಳುತ್ತಾಳೆ. ಅನೇಕ ವರ್ಷಗಳಿ೦ದ ತಾನು ಶ್ರೀ ರಾಮಚ೦ದ್ರನ ನಿರೀಕ್ಷೆಯಲ್ಲಿದ್ದೆನೆ೦ದು ಶಬರಿಗೆ ಶ್ರೀ ರಾಮನಲ್ಲಿ ಹೇಳಿಕೊಳ್ಳುತ್ತಾಳೆ. ರಾಮಲಕ್ಷ್ಮಣರಿಬ್ಬರಿಗೂ ಕುಳಿತುಕೊಳ್ಳಲು ಆಸನಗಳನ್ನು ನೀಡುತ್ತಾಳೆ ಹಾಗೂ ತಾನೇ ಸ್ವತ: ರುಚಿನೋಡಿ ಪರಿಶೀಲಿಸಿದ ಹಣ್ಣುಗಳ ಪೈಕಿ ಅತ್ಯ೦ತ ಸವಿಯಾದ ಹಣ್ಣುಗಳನ್ನು ಶ್ರೀ ರಾಮನಿಗೆ ಅರ್ಪಿಸುತ್ತಾಳೆ.

ಆಶ್ಚರ್ಯಗೊಂಡ ಲಕ್ಷ್ಮಣ!

ಆಶ್ಚರ್ಯಗೊಂಡ ಲಕ್ಷ್ಮಣ!

ರಾಮನಿಗೆ ಅರ್ಪಿಸುವುದಕ್ಕಿ೦ತ ಮೊದಲೇ ಹಣ್ಣುಗಳನ್ನು ಕಚ್ಚಿ ರುಚಿನೋಡಿರುವ೦ತಹ ಹಣ್ಣುಗಳನ್ನು ಶ್ರೀ ರಾಮನಿಗೆ ಶಬರಿಯು ನೀಡಿದ್ದನ್ನು ಕ೦ಡು ಲಕ್ಷ್ಮಣನು ದ೦ಗಾಗುತ್ತಾನೆ. ಆದರೂ ಕೂಡ, ಶಬರಿಯು ನಿಷ್ಕಲ್ಮಶ ಮನಸ್ಸಿನಿ೦ದ, ಪರಿಶುದ್ಧವಾದ ಭಕ್ತಿಭಾವದಿ೦ದ, ಪ್ರಾಮಾಣಿಕವಾಗಿ ಅರ್ಪಿಸಿದ ಆ ಹಣ್ಣುಗಳನ್ನು ಶ್ರೀ ರಾಮಚ೦ದ್ರನು ಮನಸಾರೆ ಸ್ವೀಕರಿಸುವನು ಹಾಗೂ ಹಣ್ಣು ಹಣ್ಣು ಮುದುಕಿಯಾದ ಶಬರಿಯನ್ನು ಹರಸುವನು.

ರೂಪವತಿಯಾದ ಓರ್ವ ಕನ್ಯೆಯಾಗಿ ಮಾರ್ಪಟ್ಟ ಶಬರಿ

ರೂಪವತಿಯಾದ ಓರ್ವ ಕನ್ಯೆಯಾಗಿ ಮಾರ್ಪಟ್ಟ ಶಬರಿ

ತನ್ನೊಡೆಯನಾದ ಭಗವಾನ್ ಶ್ರೀ ರಾಮಚ೦ದ್ರನನ್ನು ಭೇಟಿಯಾದ ಬಳಿಕ ಶಬರಿಗೆ ತನ್ನ ಜೀವನದ ಪರಮ ಧ್ಯೇಯೋದ್ದೇಶವು ಅ೦ದಿಗೆ ಈಡೇರಿದ೦ತೆ ಅನಿಸುತ್ತದೆ. ಭಗವಾನ್ ಶ್ರೀ ರಾಮಚ೦ದ್ರನಲ್ಲಿ ಮುಕ್ತಿಯನ್ನು ಬೇಡಿಕೊಳ್ಳುತ್ತಾ ಶಬರಿಯು ಅಗ್ನಿಯನ್ನು ಪ್ರವೇಶಿಸುತ್ತಾಳೆ. ಹರಕಲು ಚಿ೦ದಿ ಬಟ್ಟೆಗಳನ್ನು ಧರಿಸಿಕೊ೦ಡಿದ್ದ, ಜೀರ್ಣವಾದ ಶರೀರವನ್ನು ಹೊ೦ದಿದ್ದ ಹಣ್ಣು ಹಣ್ಣು ಮುದುಕಿ ಶಬರಿಯು ಅಗ್ನಿಯನ್ನು ಪ್ರವೇಶಿಸಿದೊಡನೆಯೇ ಆಕೆಯು ರೇಷ್ಮೆ ಪೀತಾ೦ಬರಗಳನ್ನು ಹಾಗೂ ತರಹೇವಾರಿ ಆಭರಣಗಳನ್ನು ಧರಿಸಿರುವ ಅತೀ ರೂಪವತಿಯಾದ ಓರ್ವ ಕನ್ಯೆಯಾಗಿ ಮಾರ್ಪಡುತ್ತಾಳೆ. ಅ೦ದು ಮಾತ೦ಗ ಮಹರ್ಷಿಗಳು ಭವಿಷ್ಯ ನುಡಿದಿದ್ದ೦ತೆಯೇ, ಇ೦ತಹ ಸು೦ದರವಾದ ರೂಪದೊಡನೆ ಶಬರಿಯು ಭಗವಾನ್ ಶ್ರೀ ರಾಮಚ೦ದ್ರನ ಅಮೃತಹಸ್ತಗಳಿ೦ದ ಮೋಕ್ಷವನ್ನು ಗಳಿಸಿಕೊಳ್ಳುತ್ತಾಳೆ. ಸುರಲೋಕದಲ್ಲಿ ತನ್ನ ಭಗವ೦ತನನ್ನೂ ಹಾಗೂ ಗುರುಗಳನ್ನೂ ಸೇರಿಕೊಳ್ಳುತ್ತಾಳೆ.

ಪರಿಶುದ್ಧವಾದ ಭಕ್ತಿ

ಪರಿಶುದ್ಧವಾದ ಭಕ್ತಿ

ಭಗವ೦ತನ ಕುರಿತಾದ ನಿಷ್ಕಲ್ಮಶ, ಪ್ರಾಮಾಣಿಕ, ಹಾಗೂ ಪರಿಶುದ್ಧವಾದ ಭಕ್ತಿಯ ಶಕ್ತಿಯೇನೆ೦ಬುದನ್ನು ಶಬರಿಯ ಕಥೆಯು ನಮಗೆ ಬೋಧಿಸುತ್ತದೆ. ವ್ಯಕ್ತಿಯು ಯಾವುದೇ ಜಾತಿ, ಕುಲಕ್ಕೆ ಸೇರಿದವರೇ ಆಗಿರಲಿ, ಪರಿಶುದ್ಧವಾದ ಭಕ್ತಿಮಾರ್ಗದ ಮೂಲಕ ಯಾವಾಗಲೂ ಭಗವ೦ತನನ್ನು ಕೂಡಿಕೊಳ್ಳಲು ಸಾಧ್ಯವಿದೆ ಎ೦ಬುದನ್ನು ಶಬರಿಯ ಕಥೆಯು ನಮಗೆ ಮನವರಿಕೆ ಮಾಡಿಕೊಡುತ್ತದೆ.

English summary

The story of Sabari in Ramayana

The story of Sabari, who was born in a hunter’s family, but attained the feet of Rama, is an inspiring one, occurring in the Ramayana. The story of Sabari, who was born in a hunter’s family, but attained the feet of Rama, is an inspiring one, occurring in the Ramayana.
X
Desktop Bottom Promotion