For Quick Alerts
ALLOW NOTIFICATIONS  
For Daily Alerts

ಗಂಗಾ ಸ್ನಾನ ಮಾಡಿದರೆ ಪಾಪದಿಂದ ಮುಕ್ತಿ, ಮೋಕ್ಷ ಲಭ್ಯ

ಗಂಗೆಯಲ್ಲಿ ಸ್ನಾನ ಮಾಡಿದರೆ ಸ್ವರ್ಗ ಲೋಕಕ್ಕೆ ಹೋಗಿ ಮುಕ್ತಿಯನ್ನು ಗಳಿಸಬಹುದು ಎಂಬ ನಂಬಿಕೆ ಇರುವುದರಿಂದಲೇ ನಮ್ಮ ಹಿರಿಯರು ಗಂಗಾ ಸ್ನಾನವನ್ನು ಮಾಡಿ ಧನ್ಯತೆಯನ್ನು ಕಾಣುತ್ತಾರೆ...

By Manu
|

ಹಿಂದೂ ಶಾಸ್ತ್ರ ಪುರಾಣಗಳಲ್ಲಿ ಪ್ರತಿಯೊಂದು ಜೀವಿ, ವಸ್ತುಗಳಿಗೂ ಒಂದೊಂದು ಇತಿಹಾಸವಿದ್ದು ಅವುಗಳ ಉಗಮಕ್ಕೆ ಪ್ರತ್ಯೇಕ ಕಾರಣವಿರುತ್ತದೆ. ಉದಾಹರಣೆಗೆ ಮಹಾಭಾರತ ರಾಮಾಯಣ ಕಥಾನಕಗಳು ಇರಬಹುದು, ಸಾಗರ ಮಂಥನವಿರಬಹುದು, ಶಿವನು ವಿಷವನ್ನು ಕುಡಿದು ನೀಲಕಂಠನಾಗಿದ್ದು ಹೀಗೆ ಪುರಾಣದಲ್ಲಿ ನಮಗೆ ಎಷ್ಟೋ ಕಥೆಗಳು ದೊರಕಿದ್ದರೂ ಆ ಎಲ್ಲಾ ಕಥೆಗಳಿಗೂ ಒಂದೊಂದು ಮೂಲವಿದೆ ಮತ್ತು ಪ್ರತಿಯೊಂದು ಒಂದೊಂದು ಕಾರಣಕ್ಕೆ ಸಂಭವಿಸಿವೆ.

ಇಂದಿನ ಲೇಖನದಲ್ಲಿ ಗಂಗಾ ಮಾತೆಯ ಕಥೆಯನ್ನು ನಾವು ಹೇಳುತ್ತಿದ್ದೇವೆ. ನಮ್ಮ ಜೀವನದಲ್ಲಿ ನಾವು ಮಾಡಿರುವ ಎಲ್ಲಾ ಪಾಪಗಳು ಗಂಗಾ ಮಾತೆಯಿಂದ ತೊಳೆದು ಹೋಗುತ್ತದೆ ಎಂಬ ಮಾತಿದೆ. ಗಂಗೆಯಲ್ಲಿ ಸ್ನಾನ ಮಾಡಿದರೆ ಸ್ವರ್ಗ ಲೋಕಕ್ಕೆ ಹೋಗಿ ಮುಕ್ತಿಯನ್ನು ಗಳಿಸಬಹುದು ಎಂಬ ನಂಬಿಕೆ ಇರುವುದರಿಂದಲೇ ನಮ್ಮ ಹಿರಿಯರು ಗಂಗಾ ಸ್ನಾನವನ್ನು ಮಾಡಿ ಧನ್ಯತೆಯನ್ನು ಕಾಣುತ್ತಾರೆ.

ಗಂಗೆಯ ಉಗಮಕ್ಕೂ ಪುರಾಣದಲ್ಲಿ ಒಂದು ಕಥೆಯಿದ್ದು ಅದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ. ಗಂಗಾ ಪುಣ್ಯವತಿಯಾಗಿದ್ದು ಹೇಗೆ ಮತ್ತು ಜನರ ಪಾಪಗಳನ್ನು ತೊಳೆಯುವ ಪಾಪನಾಶಿನಿಯಾಗಿ ಆಕೆ ಹೇಗೆ ಹೊರಹೊಮ್ಮಿದಳು ಎಂಬುದನ್ನೇ ಇಲ್ಲಿ ತಿಳಿಸುತ್ತಿದ್ದೇವೆ...

ಬ್ರಹ್ಮನ ಮಗಳು ಗಂಗಾ

ಬ್ರಹ್ಮನ ಮಗಳು ಗಂಗಾ

ವಾಮನ ಅವತಾರದಲ್ಲಿ ಮಹಾವಿಷ್ಣುವು ರಾಜ ಮಹಾಬಲಿಯಲ್ಲಿ ಮೂರು ತುಂಡುಗಳ ಭೂಮಿಯನ್ನು ದಾನವಾಗಿ ಕೇಳುತ್ತಾರೆ. ತಮ್ಮ ಒಂದು ಕಾಲನ್ನು ಸ್ವರ್ಗ ಲೋಕದಲ್ಲೂ, ಇನ್ನೊಂದು ಕಾಲನ್ನು ಭೂಲೋಕದಲ್ಲೂ ಇನ್ನೊಂದು ತುಂಡು ಭೂಮಿಗಾಗಿ ಮಹಾಬಲಿಯ ಮೇಲೆ ತಮ್ಮ ಕಾಲನ್ನು ವಾಮನ ರೂಪದಲ್ಲಿದ್ದ ಮಹಾವಿಷ್ಣುವು ಇರಿಸುತ್ತಾರೆ. ವಾಮನನು ಮೊದಲು ತಮ್ಮ ಕಾಲನ್ನು ಇಟ್ಟಾಗ ಬ್ರಹ್ಮ ದೇವರು ತಮ್ಮ ಕಮಂಡಲ (ಪುಣ್ಯಜಲವನ್ನು ಇರಿಸುವಂತಹ ತಾಮ್ರದ ಸಣ್ಣ ಬಿಂದಿಗೆ) ದಲ್ಲಿದ್ದ ನೀರಿನಿಂದ ವಾಮನನ ಪಾದಗಳನ್ನು ತೊಳೆಯುತ್ತಾರೆ. ಇದು ಗಂಗಾ ನೀರಾಗಿರುತ್ತದೆ. ಬ್ರಹ್ಮಾಂಡದಲ್ಲಿ ಆಕೆ ನೆಲೆಸಿ ಕ್ಷೀರ ಪಥದಲ್ಲಿ ಸಂಚರಿಸುತ್ತಾಳೆ ಎಂಬುದಾಗಿ ಉಲ್ಲೇಖಿಸಲಾಗಿದೆ. ಬ್ರಹ್ಮನು ನೀರನ್ನು ಚಿಮುಕಿಸಿದಾಗ ಗಂಗೆಯು ಅವರ ಮಗಳಾಗುತ್ತಾರೆ. ಶಿವ-ಸರಸ್ವತಿ ಶಾಪಕ್ಕೆ 'ಬ್ರಹ್ಮನಿಗೆ' ಪೂಜೆಯೇ ನಿಂತು ಹೋಯಿತು!

ಶಾಪ

ಶಾಪ

ಸಣ್ಣ ಮಗುವಾದ ಗಂಗ ಬೆಳೆದು ದೊಡ್ಡವಳಾಗುತ್ತಾಳೆ. ಒಮ್ಮೆ ದುರ್ವಾಸರು ಸ್ನಾನ ಮಾಡುತ್ತಿದ್ದಾಗ ಆಕೆ ಆ ದಾರಿಯಲ್ಲಿ ಹರಿಯುತ್ತಾಳೆ. ದುರ್ವಾಸರ ಸ್ನಾನದ ಭಂಗಿಯನ್ನು ಕಂಡು ಆಕೆ ನಗುತ್ತಾಳೆ. ಇದರಿಂದ ಕೋಪಗೊಂಡ ಋಷಿಯು ಭೂಮಿಗೆ ಹೋಗಿ ಪಾಪಿಗಳು ನಿನ್ನ ನೀರಿನಲ್ಲಿ ಸ್ನಾನ ಮಾಡುತ್ತಾರೆ ಎಂಬುದಾಗಿ ಶಾಪವನ್ನು ನೀಡುತ್ತಾರೆ.

ಭಗೀರಥ ಪ್ರಾಯಶ್ಚಿತ್ತ

ಭಗೀರಥ ಪ್ರಾಯಶ್ಚಿತ್ತ

ಗಂಗೆಯು ಭೂಮಿಗೆ ಬಂದಿರುವುದಕ್ಕೆ ಭಗೀರಥ ಕೂಡ ಕಾರಣ ಎಂಬುದಾಗಿ ಪುರಾಣದಲ್ಲಿ ಉಲ್ಲೇಖಗೊಂಡಿದೆ. ಅಯೋಧ್ಯೆಯನ್ನು ಆಳುತ್ತಿದ್ದ ಸಾಗರ ಎಂಬ ಅರಸನು ಅರವತ್ತು ಸಾವಿರ ಮಕ್ಕಳನ್ನು ಪಡೆದುಕೊಳ್ಳುತ್ತಾರೆ. ಅಶ್ವಮೇಧ ಯಾಗವನ್ನು ಮಾಡಿ ಬಲಶಾಲಿಯಾಗಬೇಕೆಂಬ ಅದಮ್ಯ ಇಚ್ಚೆಯಿಂದ ರಾಜ ಯಾಗವನ್ನು ಕೈಗೊಳ್ಳುತ್ತಾರೆ. ಇದರಿಂದ ಭಯಭೀತಗೊಂಡ ಇಂದ್ರ ಮತ್ತು ಇತರ ದೇವತೆಗಳು ರಾಜನ ಯಜ್ಞವನ್ನು ನಿಲ್ಲಿಸುವ ಪ್ರಯತ್ನದಲ್ಲಿ ತೊಡಗುತ್ತಾರೆ. ಯಾಗಕ್ಕಾಗಿ ಕಟ್ಟಿದ್ದ ಕುದುರೆಯನ್ನು ಋಷಿ ಕಪಿಲರು ಹಲವಾರು ವರ್ಷಗಳಿಂದ ಧ್ಯಾನಮಗ್ನರಾಗಿದ್ದ ಸ್ಥಳದಲ್ಲಿ ಕಟ್ಟುತ್ತಾರೆ. ಸಾಗರನ ಮಗನು ಕುದುರೆಯನ್ನು ಹುಡುಕುತ್ತಾ ಕಪಿಲ ಋಷಿಯ ಆಶ್ರಮವನ್ನು ತಲುಪಿದಾಗ ಅಲ್ಲಿ ಕುದುರೆಯನ್ನು ನೋಡುತ್ತಾನೆ. ಋಷಿಯು ಕುದುರೆಯನ್ನು ಕದ್ದಿದ್ದಾನೆ ಎಂಬುದಾಗಿ ಸಾಗರನ ಮಗನು ಅಪಾರ್ಥವಾಗಿ ಅರಿತುಕೊಳ್ಳತ್ತಾನೆ.

ಋಷಿಯ ಕೋಪ...

ಋಷಿಯ ಕೋಪ...

ಧ್ಯಾನಕ್ಕೆ ಭಂಗವನ್ನು ಹೊಂದಿದ ಋಷಿಯು ಕೋಪದಿಂದ ಸಾಗರನ ಒಬ್ಬ ಮಗನನ್ನು ಉಳಿಸಿ ಮತ್ತೆಲ್ಲರನ್ನೂ ಮರಣ ಹೊಂದುವಂತೆ ಶಪಿಸುತ್ತಾರೆ. ಆದರೆ ಮರಣ ಹೊಂದಿದ ಸಾಗರನ ಮಕ್ಕಳು ಮೋಕ್ಷವನ್ನು ಪಡೆದುಕೊಂಡಿರುವುದಿಲ್ಲ. ಅಂಶುಮಾನ್ ಎಂಬ ಬದುಕುಳಿದ ಸಾಗರನ ಪುತ್ರನು ಬ್ರಹ್ಮ ದೇವರನ್ನು ಒಲಿಸಿಲು ಧ್ಯಾನವನ್ನು ಕೈಗೊಳ್ಳುತ್ತಾರೆ ಆದರೆ ತಮ್ಮ ಜೀವಿತಾವಧಿಯಲ್ಲಿ ಇದು ಅವರಿಂದ ಸಾಧ್ಯವಾಗದೇ ಹೋಗುತ್ತದೆ. ಹೆಚ್ಚಿನ ತಲೆಮಾರುಗಳು ಇದಕ್ಕಾಗಿ ಪ್ರಯತ್ನಪಟ್ಟರೂ ಅವರು ವಿಫಲರಾಗುತ್ತಾರೆ. ಕೊನೆಗೆ ರಾಜ ಭಗೀರಥನು ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡುತ್ತಾರೆ. ಗಂಗೆಯನ್ನು ಒಲಿಸಿಕೊಂಡು ಭೂಮಿಗೆ ಬರುವಂತೆ ಮಾಡು ಎಂಬುದಾಗಿ ಬ್ರಹ್ಮನು ಭಗೀರಥನಿಗೆ ಸಲಹೆಯನ್ನು ನೀಡುತ್ತಾರೆ.

ಗಂಗೆಯ ಭೋರ್ಗರೆತ!

ಗಂಗೆಯ ಭೋರ್ಗರೆತ!

ಭಗೀರಥನ ಪೂರ್ವಜರ ಅಸ್ಥಿಗಳನ್ನು ಗಂಗೆಯು ಸ್ಪರ್ಶಿಸಿದಾಗ ಅವರಿಗೆ ಮೋಕ್ಷ ದೊರೆಯುತ್ತದೆ. ಆದರೆ ಗಂಗೆಯ ಭೋರ್ಗರೆತದಿಂದ ಭೂಮಿಯಲ್ಲಿ ಅಲ್ಲೋಲ ಕಲ್ಲೋಲವುಂಟಾಗುತ್ತದೆ. ತನ್ನ ರಭಸವನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ ಎಂಬುದಾಗಿ ಗಂಗೆಯು ಅಹಂಕಾರದ ಮಾತುಗಳನ್ನಾಡುತ್ತಾಳೆ. ಭಗೀರಥನು ಶಿವನನ್ನು ಸಂಕಟದಿಂದ ಪಾರುಮಾಡುವಂತೆ ಪ್ರಾರ್ಥಿಸುತ್ತಾರೆ.

ಗಂಗೆ ಶಿವನ ಜಟೆಯಲ್ಲಿ ಬಂಧಿ

ಗಂಗೆ ಶಿವನ ಜಟೆಯಲ್ಲಿ ಬಂಧಿ

ಗಂಗೆಯ ಭೋರ್ಗರೆತವನ್ನು ತಡೆಯಲು ಶಿವನು ತನ್ನ ಜಟೆಯನ್ನು ಬಿಡಿಸಿ ಹರಡುತ್ತಾರೆ ಮತ್ತು ಗಂಗೆಯು ಅದರಲ್ಲಿ ಬಂಧಿಯಾಗುತ್ತಾಳೆ. ತಮ್ಮ ಜಟೆಯಲ್ಲಿಯೇ ಆಕೆಯನ್ನು ಬಂಧಿಸಿಡುತ್ತಾರೆ ಮತ್ತು ಆ ಜಟೆಯ ಬಂಧನದಿಂದ ಆಕೆ ಹೊರಬರಲು ಸಾಧ್ಯವಾಗುವುದೇ ಇಲ್ಲ. ಇದರಿಂದ ಗಂಗೆಯ ಜಂಭ, ಅಹಂಕಾರ ಅಡಗಿ ಹೋಗುತ್ತದೆ. ಭಗೀರಥನಿಂದ ಗಂಗೆಯು ಭೂಮಿಗೆ ಬಂದಿರುವುದರಿಂದ ಆಕೆಯ ಹೆಸರು ಭಗೀರಥಿ ಎಂದಾಗುತ್ತದೆ. ಮುಕ್ಕಣ್ಣ ಶಿವನ ಮೂರನೆಯ ಕಣ್ಣಿನ ರೋಚಕ ಕಹಾನಿ...

ಗಂಗಾ ಸಪ್ತಮಿ

ಗಂಗಾ ಸಪ್ತಮಿ

ಗಂಗೆ ಭೂಮಿಯಲ್ಲಿ ಹರಿಯುವಾಗ ತನ್ನ ಭೋರ್ಗರೆತದಿಂದ ಜಹ್ನು ಋಷಿಯ ಆಶ್ರಮವನ್ನು ಹಾಳುಮಾಡುತ್ತಾಳೆ. ಇದರಿಂದ ಕೋಪಗೊಂಡ ಋಷಿಯು ಆಕೆಯನ್ನು ಸೇವಿಸುತ್ತಾರೆ. ಭಗೀರಥನು ವಿನಂತಿಸಿದ ನಂತರ ಜಹ್ನು ಋಷಿಯು ತಮ್ಮ ಮೂಗಿನ ಹೊಳ್ಳೆಯಿಂದ ಗಂಗೆಯನ್ನು ಹೊರಬಿಡುತ್ತಾರೆ ಇದರಿಂದ ಜಾಹ್ನವಿ ಎಂಬ ಹೆಸರೂ ಆಕೆಗೆ ಬರುತ್ತದೆ.

ಪೂರ್ವಜರಿಗೆ ಮೋಕ್ಷ

ಪೂರ್ವಜರಿಗೆ ಮೋಕ್ಷ

ಭಗೀರಥನ ಪೂರ್ವಜರಿಗೆ ಮೋಕ್ಷವನ್ನು ಗಂಗೆಯು ನೀಡುತ್ತಾಳೆ. ನಂತರ ಭೂಮಿಯಲ್ಲಿಯೇ ನೆಲೆನಿಲ್ಲುತ್ತಾಳೆ.

English summary

The Story Of Mother Ganga

When poojas are conducted by the Hindus who live away from the holy banks of Ganga, they summon her into the water they have ready and use it instead. This is done because the presence of Mother Ganga's water is considered to be important for the successful completion of any pooja. But why do we give so much respect to the river Ganga? What is the mythological story behind it? Read on to find out.
X
Desktop Bottom Promotion