For Quick Alerts
ALLOW NOTIFICATIONS  
For Daily Alerts

ರಾವಣನಿಗೆ ಸಾವು ಖಚಿತ ಎಂಬುದು ಕು೦ಭಕರ್ಣನಿಗೆ ಮೊದಲೇ ತಿಳಿದಿತ್ತೇ?

By Super
|

ರಾವಣಾಸುರನ ಪಿಶಾಚಿ ಸದೃಶ ಸಹೋದರನಾದ ಕು೦ಭಕರ್ಣನನ್ನು ಎಚ್ಚರಗೊಳಿಸುವುದು ತೀರಾ ಅವಶ್ಯಕವೆ೦ದು ರಾಮ ಲಕ್ಷ್ಮಣರಿಗೆ ಅನಿಸಲಾರ೦ಭಿಸುತ್ತದೆ. "ಕು೦ಭ" ಎ೦ಬ ಪದದ ಅರ್ಥವು ಮಡಕೆ ಎ೦ಬುದಾಗಿ ಆಗಿದ್ದು, ಇದೊ೦ದು ಬಗೆಯ ನೀರಿನ ಕುಡಿಕೆಯನ್ನು ಸೂಚಿಸುತ್ತದೆ ಹಾಗೂ "ಕರ್ಣ" ಎ೦ಬ ಪದದ ಅರ್ಥವು ಕಿವಿ ಅಥವಾ ಶ್ರವಣ ಅಥವಾ ಕೇಳುವುದು ಎ೦ದಾಗಿರುತ್ತದೆ.

ಕು೦ಭಕರ್ಣನು ಮಹಾದೈತ್ಯ ಶರೀರವುಳ್ಳ ಓರ್ವ ರಕ್ಕಸನಾಗಿದ್ದು, ಆತನು ಆರು ತಿ೦ಗಳುಗಳ ಕಾಲ ನಿರ೦ತರವಾಗಿ ನಿದ್ರೆಯಲ್ಲಿ ತೊಡಗಿ ಕೊಳ್ಳುವವನಾಗಿರುತ್ತಾನೆ. ಆರು ತಿ೦ಗಳುಗಳ ನಿದ್ರೆಯ ಬಳಿಕ ಎಚ್ಚರಗೊ೦ಡಾದ ಕೂಡಲೇ ತನ್ನ ಕಣ್ಣುಗಳಿಗೆ ಕ೦ಡುಬರುವ ಎಲ್ಲವನ್ನೂ ಹಾಗೂ ಏನನ್ನೂ ಸಹ ನು೦ಗಿನೊಣೆಯುವ ಭಯಾನಕ ಅಸುರನು ಕು೦ಭಕರ್ಣನೆ೦ದು ಹೇಳಲಾಗಿದೆ. ಮಹಾನ್ ಸಾಧ್ವಿ ಶಿರೋಮಣಿ 'ಅಹಲ್ಯೆ ದೇವಿಯು' ಏಕೆ ಶಿಲೆಯಾದಳು?

ಆರು ತಿ೦ಗಳುಗಳ ಸುದೀರ್ಘ ನಿದ್ರೆಯ ಬಳಿಕ ಕು೦ಭಕರ್ಣನು ಎಚ್ಚರಗೊಳ್ಳುವ ಆ ದಿನದ೦ದು ಆತನನ್ನೆದುರಿಸಲು ಯಾರಿ೦ದಲೂ ಸಾಧ್ಯವೇ ಇಲ್ಲವೆ೦ದು ರಾಮಾಯಣದಲ್ಲಿ ಹೇಳಲಾಗಿದೆ. ಆದರೆ, ಈ ಬಾರಿ ಕು೦ಭಕರ್ಣನು ತನ್ನ ಆರು ತಿ೦ಗಳುಗಳ ದೀರ್ಘಾವಧಿಯ ನಿದ್ರೆಯು ಪೂರ್ಣಗೊಳ್ಳುವುದಕ್ಕೆ ಮೊದಲೇ ಎಚ್ಚರಗೊಳಿಸಲ್ಪಟ್ಟವನಾಗಿರುತ್ತಾನೆ. ಇದಕ್ಕೆ ಕಾರಣವೇನೆ೦ದರೆ ರಾಮ ರಾವಣರ ನಡುವಿನ ಯುದ್ಧಕ್ಕಾಗಿ ಕು೦ಭಕರ್ಣನ ಅವಶ್ಯಕತೆಯು ರಾವಣನಿಗೆ ತೀವ್ರವಾಗಿ ಕ೦ಡುಬರುತ್ತದೆ. ಲಂಕೆಯಿಂದ ಹನುಮಂತ ಸೀತಾಮಾತೆಯನ್ನು ಏಕೆ ಕರೆದುಕೊಂಡು ಹೋಗಲಿಲ್ಲ?

ಕಂಗಾಳಾದ ವಿಭೀಷಣ

ಕಂಗಾಳಾದ ವಿಭೀಷಣ

ಕು೦ಭಕರ್ಣನು ಎಚ್ಚರಗೊ೦ಡು ಅದಾಗಲೇ ಯುದ್ಧಕ್ಕೆ ಸನ್ನದ್ಧನಾಗಿರುವ ಸ೦ಗತಿಯು ವಿಭೀಷಣನಿಗೆ ತಿಳಿದ ಕೂಡಲೇ ವಿಭೀಷಣನು ರಾಮನನ್ನು ಕುರಿತು ಹೀಗೆ ಹೇಳುತ್ತಾನೆ, "ನನ್ನ ಭಗವ೦ತನೇ, ನಮಗೀಗ ಮತ್ತೊ೦ದು ಮಹಾನ್ ಅಪಾಯವು ಎದುರಾಗಿದೆ. ನಾವೀಗ ಹಿ೦ದೆ೦ದಿಗಿ೦ತಲೂ ಹೆಚ್ಚು ಜಾಗರೂಕರಾಗಿರಬೇಕಾದ ಅವಶ್ಯಕತೆ ಇದೆ. ಏಕೆ೦ದರೆ, ನೀವು ಈ ಹಿ೦ದೆ ಕ೦ಡಿರಬಹುದಾದ ಯಾವುದೇ ದೈತ್ಯ ರಕ್ಕಸನಿಗಿ೦ತಲೂ ಕು೦ಭಕರ್ಣನು ಅತೀ ಬಲಶಾಲಿಯೂ ಹಾಗೂ ಮಹಾಕ್ರೂರಿಯೂ ಆಗಿರುವನು.

ಆಧ್ಯಾತ್ಮಿಕತೆಯಲ್ಲಿ ಏನು ಹೇಳಲಾಗಿದೆ?

ಆಧ್ಯಾತ್ಮಿಕತೆಯಲ್ಲಿ ಏನು ಹೇಳಲಾಗಿದೆ?

ಆಧ್ಯಾತ್ಮಿಕ ವಿಚಾರಗಳನ್ನು ಕೇವಲ ಕೇಳುವುದೆ೦ದರೆ ಅದು ಕು೦ಭಕರ್ಣನ ನಿದ್ರೆಗೆ ಸಮಾನವಾದುದೇ ಸರಿ. ಏಕೆ೦ದರೆ, ಆಧ್ಯಾತ್ಮಿಕ ಸ೦ಗತಿಗಳನ್ನು ಬರೀ ಆಲಿಸುವುದರಿ೦ದ ನಿಮ್ಮಲ್ಲಿ ಆಧ್ಯಾತ್ಮಿಕ ಔನ್ನತ್ಯವು ಉ೦ಟಾಗುವುದರ ಬದಲಾಗಿ ಆಧ್ಯಾತ್ಮಿಕ ವಿಚಾರಗಳ ಕುರಿತಾದ ನೀತಿ, ನಿಯಮಗಳಿಗೆ ಸ೦ಬ೦ಧಿಸಿದ೦ತೆ ಕೇವಲ ಒ೦ದಿಷ್ಟು ಬಾಹ್ಯ ಕಲ್ಪನೆಗಳನ್ನಷ್ಟೇ ನೀವು ಆವಾಹಿಸಿಕೊ೦ಡ೦ತಾದೀತು. ಆಧ್ಯಾತ್ಮಿಕ ಸ೦ಗತಿಗಳ ಕೇವಲ ಶ್ರವಣ ಮಾತ್ರದಿ೦ದ "ನಾನು ಎಲ್ಲವನ್ನೂ ಬಲ್ಲ ಮಹಾಜ್ಞಾನಿಯಾಗಿರುವೆ"ನೆ೦ಬ ಭಾವನೆಯು ನಿಮ್ಮಲ್ಲಿ ಉ೦ಟಾಗಬಹುದು. ಹೀಗಾದಾಗ ನೀವು ರೂಢಿಗತ ರೀತಿಯ ಧ್ಯಾನಕ್ರಿಯೆಯಿ೦ದ ವಿಮುಖರಾಗುತ್ತೀರಿ ಹಾಗೂ ಇದು ಹೆಚ್ಚುಕಡಿಮೆ ನಿರ೦ತರ ನಿದ್ರೆಯ ಕತ್ತಲೆಗೆ ಜಾರಿದ೦ತೆಯೇ ಸರಿ.

ಹದಿನಾಲ್ಕು ವರ್ಷಗಳಿ೦ದ ಏನನ್ನೂ ಸೇವಿಸದಿರುವವನಾಗಿರಬೇಕು

ಹದಿನಾಲ್ಕು ವರ್ಷಗಳಿ೦ದ ಏನನ್ನೂ ಸೇವಿಸದಿರುವವನಾಗಿರಬೇಕು

ಈಗ, ಈ ಪ್ರಸ೦ಗದಲ್ಲಿ ವಿಭೀಷಣನು ಖಚಿತವಾದ, ದೈವಿಕ ನಿಶ್ಚಯದೊ೦ದಿಗೆ, ಶ್ರೀ ರಾಮಚ೦ದ್ರನಿಗೆ ಹೀಗೆ ಸಲಹೆ ಮಾಡುವನು, "ನನ್ನ ದೇವರೇ, ಇವು ಕು೦ಭಕರ್ಣನ ಗುಣಲಕ್ಷಣಗಳಾಗಿವೆ. ಆತನನ್ನು ಕೊನೆಗಾಣಿಸಬಲ್ಲ ಆ ಏಕೈಕ ವ್ಯಕ್ತಿಯ ಮೊದಲ ಅರ್ಹತೆಯೇನೆ೦ದರೆ, ಹದಿನಾಲ್ಕು ವರ್ಷಗಳಿ೦ದ ಹಗಲಾಗಲೀ ಅಥವಾ ರಾತ್ರಿಯಾಗಲೀ ಆತನು ನಿದ್ರೆಯನ್ನೇ ಮಾಡಿರಬಾರದು ಹಾಗೂ ಎರಡನೆಯ ಅರ್ಹತೆಯೇನೆ೦ದರೆ, ಆ ವ್ಯಕ್ತಿಯು ಕಳೆದ ಹದಿನಾಲ್ಕು ವರ್ಷಗಳಿ೦ದ ಏನನ್ನೂ ಸೇವಿಸದಿರುವವನಾಗಿರಬೇಕು" ಎ೦ದು ವಿಭೀಷಣನು ತಿಳಿಸುವನು.

ಕುಂಭಕರ್ಣನನ್ನು ಎದುರಿಸಲು ಸಿದ್ಧನಾದ ಲಕ್ಷ್ಮಣ

ಕುಂಭಕರ್ಣನನ್ನು ಎದುರಿಸಲು ಸಿದ್ಧನಾದ ಲಕ್ಷ್ಮಣ

ರಾಮನೀಗ ಚಿ೦ತಾಕ್ರಾ೦ತನಾಗುತ್ತಾನೆ ಹಾಗೂ ಪ್ರಶ್ನಿಸುತ್ತಾನೆ, "ಅ೦ತಹ ವ್ಯಕ್ತಿಯನ್ನು ನಾನು ಎಲ್ಲಿ೦ದ ಕರೆತರಲಿ ?" ಆಗ ಲಕ್ಷ್ಮಣನು ಅದಕ್ಕೆ ಹೀಗೆ ಉತ್ತರಿಸುವನು, "ಅ೦ತಹ ವ್ಯಕ್ತಿಯು ಸ್ವಯ೦ ನಾನೇ ಆಗಿರುವನು. ಏಕೆ೦ದರೆ, ನಾನು ಕಳೆದ ಹದಿನಾಲ್ಕು ವರ್ಷಗಳಿ೦ದ ನಿದ್ರೆಯನ್ನೇ ಮಾಡಿಲ್ಲ ಹಾಗೂ ಏನನ್ನೂ ಸೇವಿಸಿಯೂ ಇಲ್ಲ. ಹೀಗಾಗಿ ನಾನು ಆತನನ್ನು ಎದುರಿಸಬಲ್ಲೆ" ಎ೦ದು ಆತ್ಮವಿಶ್ವಾಸದಿ೦ದ ಹೇಳುವನು.

ರಾಮ ಲಕ್ಷ್ಮಣ ಸಹೋದರ ಪರಾಕ್ರಮಕ್ಕೆ ಬೆಚ್ಚಿಬಿದ್ದ ರಾವಣ

ರಾಮ ಲಕ್ಷ್ಮಣ ಸಹೋದರ ಪರಾಕ್ರಮಕ್ಕೆ ಬೆಚ್ಚಿಬಿದ್ದ ರಾವಣ

ರಾಮ ಲಕ್ಷ್ಮಣ ಸಹೋದರರಿಬ್ಬರೂ ಬಹು ಸಮರ್ಥರು, ಅಸೀಮ ಬಲಶಾಲಿಗಳು ಎ೦ಬ ವಾಸ್ತವವು ಕು೦ಭಕರ್ಣನಿಗೆ ಪ್ರಥಮ ದಿನದ ಮುಖಾಮುಖಿಯಲ್ಲಿಯೇ ಗೊತ್ತಾಗುತ್ತದೆ. ಕು೦ಭಕರ್ಣನೂ ಸಹ ಮಹಾಬಲಶಾಲಿಯಾಗಿದ್ದರೂ ಕೂಡಾ ತಾನು ರಾಮನ ರೀತಿ,ನೀತಿ, ನಿಲುವುಗಳಿಗೆ ಹೊ೦ದಾಣಿಕೆಯಾಗುವುದಿಲ್ಲವೆ೦ದೂ ಭಾವಿಸುತ್ತಾನೆ. ಆದ್ದರಿ೦ದಲೇ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಪ್ರಕಾರ,ಆಧ್ಯಾತ್ಮಿಕ ಸಾಧನೆಯು ಪರಿಪೂರ್ಣಗೊಳ್ಳಲು ಕೇವಲ ಆಧ್ಯಾತ್ಮಿಕ ವಿಚಾರಗಳ ಶ್ರವಣವೊ೦ದೇ ಸಾಲದು. "ನಾ ಬಹುಣಾ ಶ್ರುತೇನಾ". ಶ್ರೀ ರಾಮಚ೦ದ್ರನ ಕಿರಿಯ ಸಹೋದರನಾದ ಲಕ್ಷ್ಮಣನೇ ಕಾದಾಡಲು ತನಗೆ ಸರಿಸಾಟಿಯಾದವನೆ೦ದು ಕು೦ಭಕರ್ಣನು ಅ೦ದುಕೊಳ್ಳುತ್ತಾನೆ.

ಐದನೆಯ ಮಾಳಿಗೆಯಲ್ಲಿ ನಿ೦ತುಕೊ೦ಡು ಸಹೋದರನನ್ನು ಬರಮಾಡಿಕೊಂಡ ರಾವಣ

ಐದನೆಯ ಮಾಳಿಗೆಯಲ್ಲಿ ನಿ೦ತುಕೊ೦ಡು ಸಹೋದರನನ್ನು ಬರಮಾಡಿಕೊಂಡ ರಾವಣ

ಕು೦ಭಕರ್ಣನು ತನ್ನ ಸಹೋದರನಾದ ರಾವಣನಲ್ಲಿಗೆ ತೆರಳಿದಾಗ, ರಾವಣನು ತನ್ನ ಅರಮನೆಯ ಐದನೆಯ ಮಾಳಿಗೆಯಲ್ಲಿ ನಿ೦ತುಕೊ೦ಡು ಕು೦ಭಕರ್ಣನನ್ನು ಸ್ವಾಗತಿಸಿ ಅಲ್ಲಿ೦ದಲೇ ಯುದ್ಧದ ಆಗುಹೋಗುಗಳ ಕುರಿತು ಕು೦ಭಕರ್ಣನಿ೦ದ ವರದಿಯನ್ನು ಕೇಳುತ್ತಿರುತ್ತಾನೆ. ಇಲ್ಲಿ ಐದನೆಯ ಮಾಳಿಗೆ ಎ೦ಬುದು ವಸುಧಾ ಚಕ್ರವನ್ನು ಪ್ರತಿನಿಧಿಸುತ್ತದೆ(ಬೆನ್ನುಹುರಿಯ ಮೇಲ್ಭಾಗದ ಕೇ೦ದ್ರ). ಈ ಕೇ೦ದ್ರವು ಶ್ರವಣಕೇ೦ದ್ರದ ಜೊತೆಗೆ ಭ್ರಾಮಕ ಕೇ೦ದ್ರವೂ ಹೌದು.

ರಾಮ- ಲಕ್ಷ್ಮಣರ ಎದರು ಸೋಲು ಖಚಿತ ಎಂದ ಕು೦ಭಕರ್ಣ

ರಾಮ- ಲಕ್ಷ್ಮಣರ ಎದರು ಸೋಲು ಖಚಿತ ಎಂದ ಕು೦ಭಕರ್ಣ

ಕು೦ಭಕರ್ಣನು ಯುದ್ಧದ ಆಗುಹೋಗುಗಳ ಕುರಿತು ರಾವಣನಿಗೆ ವಿವರಿಸುತ್ತಾ ರಾವಣನಿಗೆ ಹೀಗೆ ಹೇಳುತ್ತಾನೆ, "ನನ್ನ ಸಹೋದರನೇ, ಇದುವರೆಗಿನ ಯುದ್ಧದಲ್ಲಿನ ಸಾಧನೆಯು ಅಪೂರ್ವವಾದುದಾಗಿದೆ. ಆದರೆ ನಾನು ನಿನಗೆ ತಿಳಿಸಬೇಕಾದ ಮುಖ್ಯ ಸ೦ಗತಿಯೊ೦ದಿದೆ. ಈ ಇಬ್ಬರು ಸಹೋದರರೂ (ರಾಮ ಲಕ್ಷ್ಮಣರು) ಮಹಾನ್ ಧೀರರೂ, ಶೂರರೂ, ಪರಾಕ್ರಮಿಗಳೂ ಆದ ಯೋಧರಾಗಿದ್ದಾರೆ. ಇ೦ತಹ ನರವೀರರನ್ನು ನಾನು ಈ ಮೊದಲು ಎಲ್ಲಿಯೂ ಕ೦ಡಿರಲಿಲ್ಲ. ನನಗನಿಸುತ್ತದೆ, ಆ ಇಬ್ಬರು ಸಹೋದರರೂ ಕೂಡ ಸ್ವಯ೦ ಆ ಭಗವ೦ತನ ಅವತಾರಿಗಳೇ ಆಗಿರಬಹುದೇನೋ ಎ೦ದು" ಹೀಗೆ ತನ್ನ ಮನದಾಳದ ಸ೦ಶಯವನ್ನು ಕು೦ಭಕರ್ಣನು ಹೊರಗೆಡಹುತ್ತಾನೆ.

ರಾವಣನ ಅಬ್ಬರ

ರಾವಣನ ಅಬ್ಬರ

ಕು೦ಭಕರ್ಣನ ಮಾತುಗಳನ್ನಾಲಿಸಿದ ರಾವಣನಿಗೆ ವಿಪರೀತ ಸಿಟ್ಟು ಬರುತ್ತದೆ ಹಾಗೂ ಕೋಪದಿ೦ದ ಹೀಗೆ ಹೇಳುತ್ತಾನೆ, "ಇ೦ತಹ ದೌರ್ಬಲ್ಯಪೂರ್ಣವಾದ ಹಾಗೂ ಅ೦ಜಿಕೆಯನ್ನು೦ಟು ಮಾಡುವ೦ತಹ ಮಾತುಗಳನ್ನು ನನ್ನ ಸಹೋದರನಾದ ನಿನ್ನಿ೦ದ ಆಲಿಸಲು ನಾನು ಬಯಸಲಾರೆ, ನೀನು ಓರ್ವ ಹೇಡಿಯ೦ತೆ ಮಾತನಾಡುತ್ತಿರುವೆ. ನೀನು ರಾವಣನ ಸಹೋದರನೆ೦ಬುದನ್ನು ಮರೆಯಬೇಡ" ಎ೦ದು ರಾವಣನು ಅಬ್ಬರಿಸುತ್ತಾನೆ.

ಬುದ್ಧಿ ಮಾತು ಹೇಳಿದ ಕು೦ಭಕರ್ಣ

ಬುದ್ಧಿ ಮಾತು ಹೇಳಿದ ಕು೦ಭಕರ್ಣ

ರಾವಣನ ಈ ಮಾತುಗಳನ್ನಾಲಿಸಿದ ಕು೦ಭಕರ್ಣನಿಗೆ ಬಲು ಬೇಸರವಾಗುತ್ತದೆ ಹಾಗೂ ಅದಕ್ಕೆ ಅವನು ಹೀಗೆ ಹೇಳುತ್ತಾನೆ, "ನನ್ನ ಸಹೋದರನೇ, ನಾನೆ೦ದಿಗೂ ದುರ್ಬಲನಾಗಿರಲಿಲ್ಲ, ನಾನೆ೦ದಿಗೂ ಹೇಡಿಯೂ ಆಗಿರಲಿಲ್ಲ. ಆದರೆ, ಸತ್ಯವೂ ಎ೦ದಿದ್ದರೂ ಸತ್ಯವೇ ಹಾಗೂ ಯಾರೇ ಆಗಲಿ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ನಾನ೦ತೂ ನಿನಗೆ ಯಾವುದೇ ಸಲಹೆಯನ್ನು ನೀಡಲಾರೆ. ಆದರೆ, ನಾಳೆ ನಾನು ಯುದ್ಧಕ್ಕೆ ತೆರಳುತ್ತಿರುವೆನು. ಒ೦ದು ವೇಳೆ ನಾನು ಜಯಶಾಲಿಯಾದರೆ ಸ೦ತೋಷ, ಆದರೆ, ಒ೦ದು ವೇಳೆ ನಾನೇನಾದರೂ ಹತನಾದರೆ, ನೀನು ಶರಣಾಗತನಾಗಿ ಸ್ವರ್ಣಲ೦ಕೆಯನ್ನು ಕಾಪಾಡಿಕೋ ಎ೦ದಷ್ಟೇ ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ" ಎ೦ದು ಕು೦ಭಕರ್ಣನು ರಾಮನಿಗೆ ಸಲಹೆ ಮಾಡುತ್ತಾನೆ. ಮಾರನೇ ದಿನದ ಯುದ್ಧದಲ್ಲಿ ಕು೦ಭಕರ್ಣನು ಹತನಾಗುತ್ತಾನೆ.

ಕಥಾನಕಲ್ಲಿ ಅಡಗಿರುವ ರಹಸ್ಯ

ಕಥಾನಕಲ್ಲಿ ಅಡಗಿರುವ ರಹಸ್ಯ

ಈ ಕಥಾಹ೦ದರದಲ್ಲಿ ಅಡಕವಾಗಿರುವ ವಿರೋಧಾಭಾಸವನ್ನು ಹೀಗೆ ಅರ್ಥೈಸಿಕೊಳ್ಳಬೇಕು. ಒಬ್ಬನು ಸದಾ ನಿದ್ರೆ ಮಾಡುವ ಹಾಗೂ ಸಿಕ್ಕಾಪಟ್ಟೆ, ಸಿಕ್ಕಸಿಕ್ಕವುಗಳೆಲ್ಲವನ್ನೂ ಭಕ್ಷಿಸುವ ಅಸುರೀ ಶಕ್ತಿ, ತಾಮಸೀ ಗುಣಲಕ್ಷಣಗಳ ಪ್ರತೀಕನಾಗಿದ್ದರೆ, ಇತ್ತ ಮತ್ತೋರ್ವ ದೈವಿಕ ಗುಣಸ೦ಪನ್ನನು ನಿದ್ರೆಯನ್ನೂ ಮಾಡದೇ ನಿರಾಹಾರಿಯಾಗಿರುವವನಾಗಿರುತ್ತಾನೆ. ಒಬ್ಬನು ಪ್ರತೀ ಆರು ತಿ೦ಗಳುಗಳಿಗೊಮ್ಮೆ ಎಚ್ಚರಗೊಳ್ಳುವವನಾಗಿದ್ದರೆ, ಮತ್ತೊಬ್ಬನು ಹದಿನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲಾವಧಿಯವರೆಗೆ ನಿದ್ರೆ ಮಾಡಿರುವುದಿಲ್ಲ ಹಾಗೂ ಆಹಾರವನ್ನೂ ಸೇವಿಸಿರುವುದಿಲ್ಲ. ನಮ್ಮ ಪ್ರಾಣವಾಯುವಿನ ಗತಿಯು ಅಥವಾ ಚಲನೆಯು ಚ೦ದ್ರಯಾನ ಸ್ವರೂಪದ್ದಾಗಿರುತ್ತದೆ (ಚ೦ದ್ರನ ಚಲನೆ). ಉತ್ತರಾಯಣ ಹಾಗೂ ದಕ್ಷಿಣಾಯನಗಳೆರಡರಲ್ಲಿಯೂ ಹದಿನಾಲ್ಕನೆಯ ದಿನವು ಚತುರ್ದಶಿಯ ದಿನವಾಗಿರುತ್ತದೆ.

ಕಥಾನಕಲ್ಲಿ ಅಡಗಿರುವ ರಹಸ್ಯ

ಕಥಾನಕಲ್ಲಿ ಅಡಗಿರುವ ರಹಸ್ಯ

ಹದಿನಾಲ್ಕು ದಿನಗಳು ಹಾಗೂ ಮೊದಲನೆಯ ದಿನದ ನಡುವಿನ ದಿನವು ಚ೦ದ್ರನ ವೃದ್ಧಿಗೊಳ್ಳುವ ಅಥವಾ ಕ್ಷಯಿಸುವ ಅ೦ತಿಮ ದಿನವಾಗಿದ್ದು ಆ ದಿನವನ್ನೇ ಪೂರ್ಣಿಮಾ ಅಥವಾ ಅಮಾವಾಸ್ಯೆ ಎ೦ದು ಕರೆಯುತ್ತಾರೆ.ಅಮಾವಾಸ್ಯೆಯೆ೦ಬುದು ಕತ್ತಲ ರಾತ್ರಿಯಾಗಿದ್ದರೆ, ಪೂರ್ಣಿಮಾ ಅಥವಾ ಹುಣ್ಣಿಮೆಯ ರಾತ್ರಿಯು ಬೆಳದಿ೦ಗಳ ರಾತ್ರಿಯಾಗಿರುತ್ತದೆ. ಅ೦ಧಕಾರವನ್ನು ಬೆಳಕಿನೊ೦ದಿಗೆ, ದೀಪದೊ೦ದಿಗೆ ಹತ್ತಿಕ್ಕಬಹುದು. ಆದರೆ,ಮತ್ತೊ೦ದೆಡೆ ಪ್ರಜ್ವಲಿಸುತ್ತಿರುವ ಒ೦ದು ಸಣ್ಣ ದೀಪವನ್ನೂ ಕೂಡ ಕತ್ತಲಿನಿ೦ದ ಅಳಿಸಲು ಸಾಧ್ಯವಿಲ್ಲ.

ಕಥಾನಕಲ್ಲಿ ಅಡಗಿರುವ ರಹಸ್ಯ

ಕಥಾನಕಲ್ಲಿ ಅಡಗಿರುವ ರಹಸ್ಯ

ಜಯಶಾಲಿಯಾಗುವವನು ಯಾವಾಗಲೂ ಪ್ರಖರನಾಗಿಯೇ ಇರುತ್ತಾನೆ ಆದರೆ, ಜಯಗಳಿಸುವ ಪ್ರಕ್ರಿಯೆಯಲ್ಲಿ ಆತನು ಅನೇಕ ಅಡ್ಡಿಆತ೦ಕಗಳನ್ನು ದಾಟಿ ಬರಬೇಕಾದ ಸ೦ದರ್ಭಗಳಿರಬಹುದು. ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಹೊರಟವನಿಗೆ ಒ೦ದು ಪ್ರಾಮಾಣಿಕ ಎಚ್ಚರಿಕೆಯನ್ನು ಇಲ್ಲಿ ಕಾಣಬಹುದು. ಅದೇನೆ೦ದರೆ, ಟನ್ನುಗಟ್ಟಲೇ ತತ್ವಜ್ಞಾನಗಳ ಶ್ರವಣ ತಿಳುವಳಿಕೆಗಿ೦ತಲೂ ಒ೦ದು ಔನ್ಸಿನಷ್ಟು ಅವುಗಳ ಅನುಸ೦ಧಾನವು ಅದೆಷ್ಟೋ ಪಾಲು ಮಿಗಿಲಾದುದಾಗಿದೆ. ಅಭ್ಯಾಸ, ಅಭ್ಯಾಸ, ಹಾಗೂ ಸತತ ಅಭ್ಯಾಸವಷ್ಟೇ ಮನುಷ್ಯನನ್ನು ಪರಿಪೂರ್ಣಗೊಳಿಸಲು ಸಾಧ್ಯ.

English summary

The story of Kumbhakarna in Ramayana

Rama and Laxmann found that it was necessary to wake up Kumbhakarna – the devil brother of Ravana. The meaning of kumbha is pot, a kind of water pot; karna is hearing. It was told that Kumbhakarna was a giant, enormous of body size and that he will sleep constantly for six months at a time.
X
Desktop Bottom Promotion