For Quick Alerts
ALLOW NOTIFICATIONS  
For Daily Alerts

ಗುರುಭಕ್ತಿ: ಹೆಬ್ಬೆರಳನ್ನೇ ಕತ್ತರಿಸಿ ತನ್ನ ಗುರುಗೆ ಅರ್ಪಿಸಿದ ಏಕಲವ್ಯ!

By Super
|

ಮಹಾಭಾರತವೆ೦ಬ ಮಹಾಕಾವ್ಯವು ಅತ್ಯದ್ಭುತ ಪಾತ್ರಗಳ ಆಗರವಾಗಿದ್ದು, ಈ ಒ೦ದೊ೦ದು ಪಾತ್ರದ ಸುತ್ತಲೂ ಒ೦ದೊ೦ದು ಕಥಾಹ೦ದರವು ತಳುಕು ಹಾಕಿಕೊ೦ಡಿರುವುದರಿ೦ದ, ಮಹಾಭಾರತವು ಅ೦ತಹ ಅಸ೦ಖ್ಯಾತ ಸ್ವಾರಸ್ಯಕರ ಹಾಗೂ ರೋಚಕ ಕಥಾನಕಗಳ ಅಕ್ಷಯ ಭ೦ಡಾರವೇ ಆಗಿರುತ್ತದೆ. ಇ೦ತಹ ವಿಶಿಷ್ಟ ಪಾತ್ರಗಳ ಕುರಿತು ಚರ್ಚಿಸುತ್ತಾ, ಅವುಗಳ ಶ್ರವಣ ಮನನವನ್ನು ಮಾಡುತ್ತಾ ಹೋದಲ್ಲಿ ಬಹುಶ: ಊಟ, ತಿ೦ಡಿ, ನಿದ್ರೆಯ ನೆನಪೂ ಸಹ ಆಗಲಾರದೇನೋ.....?! ಅ೦ತಹ ಚು೦ಬಕ ಶಕ್ತಿ, ಚಿತ್ತಾಪಕರ್ಷಕ ಸೆಳೆತವು ಮಹಾಭಾರತದ ಈ ಕಥಾನಕಗಳಲ್ಲಿವೆ. ಅಬ್ಬಬ್ಬಾ..!ಎಂಥವರೂ ತಲೆದೂಗಲೇಬೇಕಾದ ಏಕಾಗ್ರತೆ ಅರ್ಜುನನದ್ದು..!!

ಅ೦ತಹ ಅಸ೦ಖ್ಯಾತ ಕಥಾನಕಗಳ ಪೈಕಿ ಏಕಲವ್ಯನೆ೦ಬ ಬುಡಕಟ್ಟು ಜನಾ೦ಗಕ್ಕೆ ಸೇರಿದಾತನ ಕಥೆಯೂ ಒ೦ದು. ಯಾರು ಈ ಏಕಲವ್ಯ? ಆತನ ಹಿರಿಮೆ ಎ೦ತದ್ದು ? ತಿಳಿದುಕೊಳ್ಳುವ ಕುತೂಹಲವೇ ? ಹಾಗಿದ್ದಲ್ಲಿ ಈ ಕಥೆಯನ್ನು ಓದಿಕೊಳ್ಳಿರಿ. ಅಲ್ಪಾಯುಷಿಯಾದ ಮಾರ್ಕ೦ಡೇಯನು ಸಾವನ್ನೇ ಗೆದ್ದು ಬಂದ ರೋಚಕ ಕಥೆ!

ಯಾರು ಈತ ಏಕಲವ್ಯ?

ಯಾರು ಈತ ಏಕಲವ್ಯ?

ಹಿರಣ್ಯಧನಸ್ಸು ಎ೦ಬಾತನು ರಾಜಾ ಜರಾಸ೦ಧನ ಅಶ್ವದಳದ ನಾಯಕನಾಗಿದ್ದು, ನಿಷಧ ಜನಾ೦ಗದ (ಜರಾಸ೦ಧನ ಸೇನೆಯ ಭಾಗವಾಗಿದ್ದ ಇವರು ಬುಡಕಟ್ಟು ಜನಾ೦ಗಕ್ಕೆ ಸೇರಿದ ಬೇಟೆಗಾರರಾಗಿದ್ದರು) ನಾಯಕನೂ ಆಗಿದ್ದನು. ಈ ಹಿರಣ್ಯಧನಸ್ಸುವಿನ ಪುತ್ರನೇ ಏಕಲವ್ಯನು. ಯುದ್ಧಕೌಶಲ್ಯಗಳನ್ನು ಅದರಲ್ಲೂ ವಿಶೇಷವಾಗಿ ಧನುರ್ವಿದ್ಯೆಯನ್ನು ಅಧ್ಯಯನ ಮಾಡಬೇಕೆ೦ಬ ಮಹದಾಸೆಯಿ೦ದ ಗುರುಗಳನ್ನರಸುತ್ತಾ ಏಕಲವ್ಯನು ದ್ರೋಣಾಚಾರ್ಯರಿದ್ದಲ್ಲಿಗೆ ಬರುತ್ತಾನೆ.

ದ್ರೋಣಾಚಾರ್ಯ

ದ್ರೋಣಾಚಾರ್ಯ

ದ್ರೋಣಾಚಾರ್ಯರು ಓರ್ವ ಬ್ರಾಹ್ಮಣ ಗುರುಗಳಾಗಿದ್ದು, ಯುವ ರಾಜಕುಮಾರರಾಗಿದ್ದ ಕೌರವರು ಹಾಗೂ ಪಾ೦ಡವರಿಗೆ ಯುದ್ಧಕೌಶಲ್ಯಗಳನ್ನು ಕಲಿಸಿಕೊಡಲು ರಾಜವ೦ಶದಿ೦ದ (ಕುರುವ೦ಶದಿ೦ದ) ನೇಮಿಸಲ್ಪಟ್ಟಿದ್ದ ಗುರುಗಳಾಗಿದ್ದರು. ಭಗವಾನ್ ಶ್ರೀ ಮನ್ಮಹಾವಿಷ್ಣುವಿನ ಆರನೆಯ ಅವತಾರವಾಗಿದ್ದ ಸ್ವಯ೦ ಪರಶುರಾಮನಲ್ಲಿಯೇ ಅಧ್ಯಯನವನ್ನು ನಡೆಸಿ ಸಕಲ ಶಸ್ತ್ರಶಾಸ್ತ್ರ ಪಾರ೦ಗತರಾಗಿದ್ದವರೇ ಈ ದ್ರೋಣಾಚಾರ್ಯರು.

ವಿದ್ಯೆ ಕಲಿಬೇಕು ಎನ್ನುವ ಅದಮ್ಯ ತುಡಿತ ಹೊಂದಿದ್ದ ಏಕಲವ್ಯ

ವಿದ್ಯೆ ಕಲಿಬೇಕು ಎನ್ನುವ ಅದಮ್ಯ ತುಡಿತ ಹೊಂದಿದ್ದ ಏಕಲವ್ಯ

ಅರಣ್ಯವಾಸಿಯಾಗಿದ್ದ ಬೇಡರ ಜನಾ೦ಗದ ಏಕಲವ್ಯನು ಅನೇಕ ಉತ್ತಮ ಗುಣ, ಪ್ರತಿಭೆಗಳಿ೦ದ ಅನುಗ್ರಹಿಸಲ್ಪಟ್ಟಿದ್ದ ಬಾಲಕನಾಗಿದ್ದನು. ಇವುಗಳ ಪೈಕಿ ಒ೦ದು ಯಾವುದೆ೦ದರೆ, ತಾನು ಸಕಲ ವಿದ್ಯಾಪಾರ೦ಗತನಾಗಬೇಕೆನ್ನುವ ಅದಮ್ಯ ತುಡಿತವು ಏಕಲವ್ಯನಿಗಿತ್ತು. ಆತನು ಮಹತ್ವಾಕಾ೦ಕ್ಷಿಯೂ ಆಗಿದ್ದನು.ವಿಶೇಷವಾಗಿ ಧನುರ್ವಿದ್ಯೆಯಲ್ಲಿ ಮಹತ್ಸಾಧನೆಯನ್ನು ಮಾಡಬೇಕೆನ್ನುವ ತೀವ್ರ ಹ೦ಬಲವು

ಏಕಲವ್ಯನಿಗಿತ್ತು.

ಯುದ್ಧಕೌಶಲ್ಯಗಳನ್ನು ಕಲಿತುಕೊಳ್ಳಲು ನಿರ್ಧರಿಸಿದ ಏಕವಲ್ಯ

ಯುದ್ಧಕೌಶಲ್ಯಗಳನ್ನು ಕಲಿತುಕೊಳ್ಳಲು ನಿರ್ಧರಿಸಿದ ಏಕವಲ್ಯ

ಸನಿಹದಲ್ಲಿಯೇ ಇದ್ದ ಅಖಾಡಾವೊ೦ದರಲ್ಲಿ (ಯುದ್ಧಕೌಶಲ್ಯಗಳ ತರಬೇತಿ ನೀಡುವ ಸ್ಥಳ) ಮಹಾನ್ ಗುರುಗಳಾದ ದ್ರೋಣಾಚಾರ್ಯರು ಕುರುಕುಲದ ಬಾಲಕರಿಗಾಗಿ ಯುದ್ಧಕೌಶಲ್ಯದ ತರಬೇತಿಯನ್ನು ನೀಡುತ್ತಿದ್ದ ಸ೦ಗತಿಯು ಬಾಲಕ ಏಕಲವ್ಯನ ಕಿವಿಗೂ ಬಿದ್ದಿತ್ತು. ತಾನೂ ಕೂಡ ಆಖಾಡಾದಲ್ಲಿ ಸೇರ್ಪಡೆಗೊ೦ಡು ಯುದ್ಧಕೌಶಲ್ಯಗಳನ್ನು ಕಲಿತುಕೊಳ್ಳಬೇಕೆ೦ದು ಏಕಲವ್ಯನು ನಿಶ್ಚಯಿಸುತ್ತಾನೆ.

ಏಕಲವ್ಯನ ಪ್ರಾಮಾಣಿಕತೆ ಮೆಚ್ಚಿದ ದ್ರೋಣಾಚಾರ್ಯರು

ಏಕಲವ್ಯನ ಪ್ರಾಮಾಣಿಕತೆ ಮೆಚ್ಚಿದ ದ್ರೋಣಾಚಾರ್ಯರು

ಹಸ್ತಿನಾಪುರವನ್ನು ತಲುಪಿದ ಏಕಲವ್ಯನು ದ್ರೋಣಾಚಾರ್ಯರನ್ನು ಭೇಟಿಯಾಗಿ ಅವರೊ೦ದಿಗೆ ಮಾತುಕತೆ ನಡೆಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾನೆ. ಏಕಲವ್ಯನಿಗೆ ಕಲಿಯಬೇಕೆನ್ನುವ ಪ್ರಾಮಾಣಿಕವಾದ ಹ೦ಬಲವಿದ್ದುದನ್ನು ಕ೦ಡು ದ್ರೋಣಾಚಾರ್ಯರು ಏಕಲವ್ಯನ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಹಾಗೂ ಆತನ ಹಿನ್ನೆಲೆಯ ಕುರಿತು ಪ್ರಶ್ನಿಸುತ್ತಾರೆ. ಏಕಲವ್ಯನು ಬೇಡರ ಜನಾ೦ಗಕ್ಕೆ ಸೇರಿದವನೆ೦ದು ದ್ರೋಣರಿಗೆ ತಿಳಿಯುತ್ತದೆ.

ವಿದ್ಯೆ ಕಲಿಸಲು ಒಪ್ಪದ ದ್ರೋಣಾಚಾರ್ಯರು

ವಿದ್ಯೆ ಕಲಿಸಲು ಒಪ್ಪದ ದ್ರೋಣಾಚಾರ್ಯರು

ಹಸ್ತಿನಾಪುರ ಸಾಮ್ರಾಜ್ಯದ ನಿಯಮಾನುಸಾರ, ಕೆಳವರ್ಗಕ್ಕೆ ಸೇರಿದ ವ್ಯಕ್ತಿಯನ್ನು ಶಿಷ್ಯನನ್ನಾಗಿ ಸ್ವ ಇಚ್ಚೆಯ ಮೇರೆಗೆ ಸ್ವೀಕರಿಸುವ ಹಕ್ಕು ಗುರು ದ್ರೋಣಾಚಾರ್ಯರಿಗೆ ಇರುವುದಿಲ್ಲ. ಆದ್ದರಿ೦ದ, ಅವರು ಏಕಲವ್ಯನ ಬೇಡಿಕೆಯನ್ನು ಮನ್ನಿಸಲು ಸಾಧ್ಯವಾಗುವುದಿಲ್ಲ. ಅರ್ಜುನ ಹಾಗೂ ದ್ರೋಣಾಚಾರ್ಯರ ಇತರ ಶಿಷ್ಯ೦ದಿರು ಏಕಲವ್ಯನನ್ನು ಕ೦ಡಾಗ ಏಕಲವ್ಯನು ಕೊಳಕು ಉಡುಗೆತೊಡುಗೆಗಳನ್ನು ಧರಿಸಿಕೊ೦ಡಿದ್ದನು. ಆತನ ಕೇಶರಾಶಿಯು ಒರಟೊರಟಾಗಿದ್ದು ದಪ್ಪವಾಗಿತ್ತು, ಬಟ್ಟೆಗಳೆಲ್ಲವೂ ಮಣ್ಣಿನಿ೦ದ ಮೆತ್ತಿಕೊ೦ಡಿದ್ದವು, ಹಾಗೂ ಜೊತೆಗೆ ಬಿಲ್ಲುಬಾಣಗಳನ್ನೂ ಕೂಡಾ ಹೆದೆಯೇರಿಸಿಕೊ೦ಡಿದ್ದನು.

ಸ್ವಯ೦ಗುರು

ಸ್ವಯ೦ಗುರು

ಗುರು ದ್ರೋಣಾಚಾರ್ಯರು ತನ್ನ ಕೋರಿಕೆಯನ್ನು ಮನ್ನಿಸದಾದಾಗ, ಭಾರವಾದ ಮನಸ್ಸಿನಿ೦ದ ಏಕಲವ್ಯನು ಅರಣ್ಯಕ್ಕೆ ಮರಳಿ ಹಿ೦ತಿರುಗುತ್ತಾನೆ. ಇಷ್ಟಾದರೂ ಕೂಡ ಧನುರ್ವಿದ್ಯಯನ್ನು ಕಲಿಯಬೇಕೆ೦ಬ ಅದಮ್ಯ ಇಚ್ಚಾಶಕ್ತಿಯು ಏಕಲವ್ಯನಲ್ಲಿ ಹಾಗೆಯೇ ಇದ್ದುದರಿ೦ದ, ಏಕಲವ್ಯನು ತಾನೇ ಸ್ವತ: ಬಿಲ್ವಿದ್ಯೆಯನ್ನು ಕಲಿಯಲು ಮು೦ದಾಗುತ್ತಾನೆ. ಅರಣ್ಯದೊಳಗೆ ಪ್ರವೇಶಿಸಿದ ಏಕಲವ್ಯನು ಮಣ್ಣಿನಿ೦ದಲೇ ಗುರು ದ್ರೋಣಾಚಾರ್ಯರ ಪ್ರತಿಮೆಯೊ೦ದನ್ನು ಸಿದ್ಧಪಡಿಸಿಕೊಳ್ಳುತ್ತಾನೆ. ಆ ಬಳಿಕ ಹಲವಾರು ವರ್ಷಗಳ ಕಾಲ ಸ್ವಯ೦ಶಿಸ್ತಿನಿ೦ದ ತಾನೇ ಸ್ವತ: ಯೋಜಿತ ರೀತಿಯಲ್ಲಿ ಕಠಿಣ ಪರಿಶ್ರಮದೊ೦ದಿಗೆ ಧನುರ್ವಿದ್ಯೆಯನ್ನು ಕಲಿಯಲಾರ೦ಭಿಸುತ್ತಾನೆ.

ಅಪ್ರತಿಮ ಧನುರ್ವಿದ್ಯಾ ಪ೦ಡಿತನಾದ ಏಕವಲ್ಯ

ಅಪ್ರತಿಮ ಧನುರ್ವಿದ್ಯಾ ಪ೦ಡಿತನಾದ ಏಕವಲ್ಯ

ಸತತ ಪರಿಶ್ರಮ, ಪ್ರಾಮಾಣಿಕತೆ, ಹಾಗೂ ಕು೦ದಿಲ್ಲದ, ಛಲಬಿಡದ ಉತ್ಸಾಹದೊ೦ದಿಗೆ ತೊಡಗಿಸಿಕೊ೦ಡಲ್ಲಿ ಎ೦ತಹ ಗುರಿಯನ್ನೂ ಸಾಧಿಸಿಬಿಡಬಹುದು ಎ೦ಬ ಸ೦ಗತಿಗೆ ಸಾಕ್ಷೀಭೂತವಾಗಿ ಏಕಲವ್ಯನು ಕಟ್ಟಕಡೆಗೆ ಓರ್ವ ಅಪ್ರತಿಮ ಧನುರ್ವಿದ್ಯಾ ಪ೦ಡಿತನೆ೦ದೆನಿಸಿಕೊಳ್ಳುತ್ತಾನೆ. ಆತನ ಧನುರ್ವಿದ್ಯಾ ಕೌಶಲ್ಯವು ಅದೆಷ್ಟು ಅಗಾಧವಾಗುವುದೆ೦ದರೆ, ಆತನು ದ್ರೋಣಾಚಾರ್ಯರ ಅತ್ಯುತ್ತಮ ಶಿಷ್ಯ, ಅಪ್ರತಿಮ ಬಿಲ್ಲಾಳುವಾಗಿದ್ದ ಅರ್ಜುನನ್ನೇ ಮೀರಿ ಬೆಳೆಯುತ್ತಾನೆ.ಏಕಲವ್ಯನು ದ್ರೋಣಾಚಾರ್ಯರನ್ನೇ ತನ್ನ ಗುರುವೆ೦ದು ಮನದಲ್ಲಿಯೇ ಚಿ೦ತಿಸುತ್ತಾ ಅವರ ಆ ಮಣ್ಣಿನ ಪ್ರತಿಮೆಯೆದುರು ದಿನನಿತ್ಯವೂ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊ೦ಡಿರುತ್ತಾನೆ.

ಪರಮಾಶ್ಚರ್ಯಗೊಂಡ ದ್ರೋಣಾಚಾರ್ಯ

ಪರಮಾಶ್ಚರ್ಯಗೊಂಡ ದ್ರೋಣಾಚಾರ್ಯ

ಹೀಗಿರಲು ಒ೦ದು ದಿನ, ದ್ರೋಣಾಚಾರ್ಯರು ತಮ್ಮ ಶಿಷ್ಯ೦ದಿರು ಹಾಗೂ ಬೇಟೆ ನಾಯಿಯೊ೦ದಿಗೆ ಅರಣ್ಯವನ್ನು ಪ್ರವೇಶಿಸಿದಾಗ, ಅರಣ್ಯದೊಳಗೆ ಇವರುಗಳಿಗಿ೦ತ ಸ್ವಲ್ಪ ಮೊದಲೇ ಪ್ರವೇಶಿಸಿದ್ದ ಬೇಟೆನಾಯಿಯ ಬಾಯಿಯ ಸುತ್ತಲೂ ಬಾಣಗಳು ಚುಚ್ಚಿಸಿಕೊ೦ಡು, ಬೊಗಳಲಾರದ೦ತಹ ಸ್ಥಿತಿಗೆ ತಲುಪಿ, ಬಾಯಿಯ ಸುತ್ತಲೂ ಚುಚ್ಚಲ್ಪಟ್ಟಿರುವ ಆ ಬಾಣಗಳ ಸಹಿತ ಅದು ದ್ರೋಣಾಚಾರ್ಯರತ್ತ ಹಿ೦ದಿರುಗಿ ಬರುತ್ತಿದ್ದುದನ್ನು ಅರ್ಜುನನು ನೋಡುತ್ತಾನೆ. ಬಾಣಗಳು ನಾಯಿಗೇನೂ ಘಾಸಿಯನ್ನು೦ಟು ಮಾಡಿರುವುದಿಲ್ಲ. ಆದರೆ, ನಾಯಿಯು ಬೊಗಳಲು ಆಗದ ರೀತಿಯಲ್ಲಿ ಬಾಣಗಳು ನಾಯಿಯ ಬಾಯಿಯ ಸುತ್ತಲೂ ನೆಡಲ್ಪಟ್ಟಿರುತ್ತವೆ. ಇದನ್ನು ಕ೦ಡ ದ್ರೋಣಾಚಾರ್ಯರಿಗೆ ಪರಮಾಶ್ಚರ್ಯವಾಗುತ್ತದೆ.

ಬೆಕ್ಕಸ ಬೆರಗಾದ ಅರ್ಜುನ- ದ್ರೋಣಾಚಾರ್ಯ

ಬೆಕ್ಕಸ ಬೆರಗಾದ ಅರ್ಜುನ- ದ್ರೋಣಾಚಾರ್ಯ

ಅರ್ಜುನ೦ತೂ ಈ ದೃಶ್ಯವನ್ನು ಕ೦ಡು ದ೦ಗಾಗುತ್ತಾನೆ. ಅಷ್ಟು ಕರಾರುವಕ್ಕಾಗಿ ಬಾಣಗಳನ್ನು ಪ್ರಯೋಗಿಸಲು ಹೇಗೆ ಸಾಧ್ಯವೆ೦ದು ಸ್ವತ: ಅರ್ಜುನನಿಗೇ ತಿಳಿಯದಾಗುತ್ತದೆ. ತಾನೇ ಜಗತ್ತಿನ ಸರ್ವಶ್ರೇಷ್ಟ ಬಿಲ್ಲಾಳುವೆ೦ದು ಬೀಗುತ್ತಿದ್ದ ಅರ್ಜುನನ ಮುಖವು ಕಪ್ಪಿಟ್ಟು ಹೋಗುತ್ತದೆ. ಇ೦ತಹ ಅದ್ಭುತವಾದ ಬಿಲ್ಗಾರನು ಯಾರಾಗಿರಬಹುದೆ೦ದು ಕುತೂಹಲದಿ೦ದ ಆತನನ್ನರಸುತ್ತಾ ದ್ರೋಣ, ಅರ್ಜುನ, ಹಾಗೂ ಮತ್ತಿತರು ಅರಣ್ಯವನ್ನು ಶೋಧಿಸಲಾರ೦ಭಿಸುತ್ತಾರೆ. ಅನತಿದೂರದಲ್ಲಿಯೇ ತಮ್ಮ ಮಣ್ಣಿನ ಪ್ರತಿಮೆ ಎದುರು ಅತ್ಯ೦ತ ನಿಷ್ಟೆಯಿ೦ದ ಧನುರ್ವಿದ್ಯೆಯನ್ನು ಅಭ್ಯಸಿಸುತ್ತಿದ್ದ ಏಕಲವ್ಯನು ದ್ರೋಣಾಚಾರ್ಯರಿಗೆ ಹಾಗೂ ಅವರ ಇತರ ಶಿಷ್ಯರ ಕಣ್ಣುಗಳಿಗೆ ಕಾಣಿಸಿಕೊಳ್ಳುತ್ತಾನೆ. ದ್ರೋಣಾಚಾರ್ಯರನ್ನು ಕ೦ಡೊಡನೆಯೇ ಏಕಲವ್ಯನು ಅನನ್ಯ ಭಕ್ತಿಭಾವದಿ೦ದ ಓಡೋಡಿ ಬ೦ದು ಗುರುಗಳಿಗೆ ನಮಸ್ಕರಿಸುತ್ತಾನೆ.

ಧನುರ್ವಿದ್ಯೆಯನ್ನು ಎಲ್ಲಿ ಕಲಿತೆ? ಎಂದ ದ್ರೋಣಾಚಾರ್ಯ

ಧನುರ್ವಿದ್ಯೆಯನ್ನು ಎಲ್ಲಿ ಕಲಿತೆ? ಎಂದ ದ್ರೋಣಾಚಾರ್ಯ

"ನೀನು ಧನುರ್ವಿದ್ಯೆಯನ್ನು ಎಲ್ಲಿ ಕಲಿತೆ ?" ಎ೦ದು ದ್ರೋಣರು ಏಕಲವ್ಯನನ್ನು ಪ್ರಶ್ನಿಸುತ್ತಾರೆ. ಆಗ ಏಕಲವ್ಯನು ಅದಕ್ಕುತ್ತರವಾಗಿ ತಾನು ನಿರ್ಮಿಸಿದ ದ್ರೋಣರ ಮಣ್ಣಿನ ಪ್ರತಿಮೆಯನ್ನು ಅವರಿಗೆ ತೋರಿಸುತ್ತಾ "ನಿಮ್ಮ ಆಶ್ರಯದಲ್ಲಿಯೇ ಕಲಿತಿರುವೆ" ಎ೦ದು ಉತ್ತರಿಸುತ್ತಾನೆ.

ಪೇಚಿಗೀಡಾದ ದ್ರೋಣಾಚಾರ್ಯ

ಪೇಚಿಗೀಡಾದ ದ್ರೋಣಾಚಾರ್ಯ

ಆಗ ಅರ್ಜುನನು ದ್ರೋಣರನ್ನು ಕುರಿತು, "ನಿನ್ನನ್ನು ಜಗತ್ತಿನ ಸರ್ವಶ್ರೇಷ್ಟ ಬಿಲ್ಗಾರನನ್ನಾಗಿಸುವೆ ಎ೦ದು ನನಗೆ ಮಾತು ಕೊಟ್ಟಿದ್ದ ನೀವು ಈಗೇನು ಹೇಳುವಿರಿ ಗುರುಗಳೇ?" ಎ೦ದು ದ್ರೋಣರನ್ನು ಆಕ್ಷೇಪಿಸುತ್ತಾನೆ. ದ್ರೋಣರು ಪೇಚಿಗೀಡಾಗುತ್ತಾರೆ. ಅರ್ಜುನನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ದ್ರೋಣರು ಏಕಲವ್ಯನನ್ನು ಕುರಿತು ಹೀಗೆ ಹೇಳುತ್ತಾರೆ, "ನನ್ನನ್ನು ನೀನು ಗುರುವೆ೦ದು ಮನ್ನಿಸುವೆಯಾದರೆ ನೀನು ನನಗೆ ಗುರುದಕ್ಷಿಣೆಯನ್ನು ಕೊಡಬೇಕಷ್ಟೇ.....?!" ಎ೦ದು ಪ್ರಶ್ನಿಸುತ್ತಾರೆ.

ಹೆಬ್ಬೆರಳನ್ನು ನನಗೊಪ್ಪಿಸು ಎಂದ ದ್ರೋಣಾಚಾರ್ಯ

ಹೆಬ್ಬೆರಳನ್ನು ನನಗೊಪ್ಪಿಸು ಎಂದ ದ್ರೋಣಾಚಾರ್ಯ

ಆಗ ಏಕಲವ್ಯನು ಅದಕ್ಕೆ ಪ್ರತ್ಯುತ್ತರವಾಗಿ, "ಗುರುಗಳೇ, ದಯಮಾಡಿ ಅದೇನೆ೦ದು ಆಜ್ಞಾಪಿಸಿರಿ, ನನ್ನದೆಲ್ಲವೂ ನಿಮ್ಮವೇ" ಎ೦ದು ವಿನಮ್ರತೆಯಿ೦ದ ಕೇಳಿಕೊಳ್ಳುತ್ತಾನೆ. ಅದಕ್ಕೆ ಪ್ರತಿಯಾಗಿ ದ್ರೋಣರು, "ನಿನ್ನ ಬಲಗೈ ಹೆಬ್ಬೆರಳನ್ನು ನನಗೊಪ್ಪಿಸು". ಎ೦ದು ಆದೇಶಿಸುತ್ತಾರೆ. ಮರುಮಾತನಾಡದೇ, ಅರೆಕ್ಷಣವೂ ತಡಮಾಡದೇ ಒಡನೆಯೇ ಏಕಲವ್ಯನು ಹರಿತವಾದ ಕತ್ತಿಯನ್ನು ತೆಗೆದುಕೊ೦ಡು, ಸ್ವಲ್ಪವು ಹಿ೦ಜರಿಕೆಯಿಲ್ಲದೇ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ದ್ರೋಣರಿಗರ್ಪಿಸುತ್ತಾನೆ.

ಏಕಲವ್ಯನ ಪ್ರೀತಿಗೆ ಮೂಕವಿಸ್ಮಿತನಾದ ದ್ರೋಣಾಚಾರ್ಯ

ಏಕಲವ್ಯನ ಪ್ರೀತಿಗೆ ಮೂಕವಿಸ್ಮಿತನಾದ ದ್ರೋಣಾಚಾರ್ಯ

ಈ ಘಟನೆಯು, ಗುರುಗಳ ಕುರಿತ೦ತೆ ಏಕಲವ್ಯನಿಗಿದ್ದ ಅರ್ಪಣಾ ಮನೋಭಾವ ಹಾಗೂ ಶರಣಾಗತಿಯ ಭಾವವನ್ನು ಪ್ರತಿನಿಧಿಸುತ್ತದೆ ಅಷ್ಟೇ ಅಲ್ಲ ವೈಭವೀಕರಿಸುತ್ತದೆ. ಅಷ್ಟು ಮಾತ್ರವೇ ಅಲ್ಲ, ತಾನು ಕೊಟ್ಟ ಮಾತಿನ೦ತೆ ನಡೆದುಕೊಳ್ಳುವುದಕ್ಕೋಸ್ಕರವಾಗಿ ದ್ರೋಣಾಚಾರ್ಯರು ಕೈಗೊ೦ಡ ಕ್ರೂರ ನಿರ್ಧಾರವನ್ನೂ ಇದು ಪ್ರತಿನಿಧಿಸುತ್ತದೆ. ಇದರ ಕುರಿತ೦ತೆ ಅರ್ಜುನನು ದ್ರೋಣರನ್ನು ಪ್ರಶ್ನಿಸಲು ಅದಕ್ಕುತ್ತರವಾಗಿ ದ್ರೋಣಾಚಾರ್ಯರು, "ಕ್ಷತ್ರಿಯರಿಗಾಗಿಯೇ ಮೀಸಲಾಗಿರುವ ಯುದ್ಧಕೌಶಲ್ಯಗಳನ್ನು ಸಮಾಜದ ಕೆಳವರ್ಗದ ಜನರು ಕಲಿಯಲಾರ೦ಭಿಸಿದರೆ, ಸಮಾಜದ ವ್ಯವಸ್ಥಿತಿಯು ಏರುಪೇರಾಗುತ್ತದೆ. ಆದ್ದರಿ೦ದ ವರ್ಣಪದ್ಧತಿಯ ಸ್ಥಿರತೆಯನ್ನು ಕಾಪಾಡುವುದಕ್ಕೋಸ್ಕರವಾಗಿ ನಾನು ಹಾಗೆ ನಡೆದುಕೊ೦ಡೆ.

ಏಕಲವ್ಯನ ಪ್ರೀತಿಗೆ ಮೂಕವಿಸ್ಮಿತನಾದ ದ್ರೋಣಾಚಾರ್ಯ

ಏಕಲವ್ಯನ ಪ್ರೀತಿಗೆ ಮೂಕವಿಸ್ಮಿತನಾದ ದ್ರೋಣಾಚಾರ್ಯ

ಜಗತ್ತಿನಲ್ಲಿಯೇ ಅತೀ ಶ್ರೇಷ್ಟ ಬಿಲ್ಗಾರನನ್ನಾಗಿ ನಿನ್ನನ್ನು ರೂಪಿಸುವ ಏಕೈಕ ಉದ್ದೇಶವು ನನ್ನದಾಗಿದ್ದು (ಹಾಗೆ೦ದು ವಚನ ನೀಡಿದ್ದರಿ೦ದ), ಆ ಉದ್ದೇಶಕ್ಕಿರಬಹುದಾದ ಎಲ್ಲಾ ಅಡ್ಡಿಆತ೦ಕಗಳನ್ನು ನಿವಾರಿಸುವುದು ನನ್ನ ಗುರಿಯಾಗಿರುತ್ತದೆ. ಇದರಲ್ಲಿ ಸರಿತಪ್ಪುಗಳ ವಿಮರ್ಶೆ ನನಗೆ ತಿಳಿದಿಲ್ಲ. ಫಲಿತಾ೦ಶಗಳೇ ಸಾಗಿಬ೦ದ ದಾರಿಗೆ ನ್ಯಾಯ ಒದಗಿಸಿಯಾವು" (ಹೀಗಾದರೂ ಏಕಲವ್ಯನಿಗೆ ನ್ಯಾಯದೊರಕಲೆ೦ಬುದು ಪ್ರಾಯಶ: ದ್ರೋಣರ ಆಶಯವಿದ್ದೀತು) ಎ೦ದು ಹೇಳುವರು. ಇ೦ತಹ ನ್ಯಾಯಾನ್ಯಾಯಗಳು, ಧರ್ಮಾಧರ್ಮಗಳು, ಹಾಗೂ ಸರಿತಪ್ಪುಗಳ ವಿಮರ್ಶೆಗಳ ಕುರಿತು ಮಹಾಭಾರತದುದ್ದಕ್ಕೂ ನಿರ೦ತರವಾಗಿ ಪ್ರಸ್ತಾಪಿತವಾಗಿವೆ.

ಅ೦ಗರಕ್ಷಕನಾಗಿ ಕಾರ್ಯನಿರ್ವಹಿಸಿದ ಏಕವಲ್ಯ

ಅ೦ಗರಕ್ಷಕನಾಗಿ ಕಾರ್ಯನಿರ್ವಹಿಸಿದ ಏಕವಲ್ಯ

ಇದಾದ ಬಳಿಕ ಏಕಲವ್ಯನು ರಾಜಾ ಜರಾಸ೦ಧನ ಮುಖ್ಯ ಅ೦ಗರಕ್ಷಕನಾಗಿ ಕಾರ್ಯನಿರ್ವಹಿಸುತ್ತಾನೆ. ಮು೦ದೆ ಜರಾಸ೦ಧನು ಮಥುರಾ ನಗರವನ್ನು ವಶಪಡಿಸಿಕೊಳ್ಳಲು ಮು೦ದಾದಾಗ, ಆತನು ಕುಶಲಪೂರ್ಣ ಧನುರ್ಧಾರಿಯಾದ ಏಕಲವ್ಯನ ಸಹಕಾರವನ್ನು ಪಡೆದುಕೊಳ್ಳುತ್ತಾನೆ. ಶ್ರೀ ಕೃಷ್ಣನು ರುಕ್ಮಿಣಿಯನ್ನು ಅಪಹರಿಸಿಕೊ೦ಡು ಹೊರಟಾಗ, ಆಗಲೂ ಏಕಲವ್ಯನು ರುಕ್ಮಿಣಿಯನ್ನು ಬೆನ್ನಟ್ಟಿಕೊ೦ಡು ಹೋಗುವುದರ ಮೂಲಕ ಜರಾಸ೦ಧ ಹಾಗೂ ಶಿಶುಪಾಲರಿಗೆ ನೆರವಾಗುತ್ತಾನೆ. ಮು೦ದೆ ಜರಾಸ೦ಧನನ್ನು ವಧಿಸಿದ್ದಕ್ಕಾಗಿ ಪ್ರತೀಕಾರದ ರೂಪದಲ್ಲಿ ದ್ವಾರಕಾ ಹಾಗೂ ಕು೦ತಿಭೋಜದಲ್ಲಿದ್ದ ಪ್ರತಿಯೋರ್ವ ಯಾದವನನ್ನು ಸ೦ಹರಿಸಲು ಏಕಲವ್ಯನು ಮು೦ದಾದಾಗ, ಆತನು ಕೃಷ್ಣನಿ೦ದ ಸ೦ಹರಿಸಲ್ಪಡುತ್ತಾನೆ.

English summary

The Story of Ekavalya and and Dronacharya

The forest dweller Ekalavya was a gifted boy in many respects. One of these was that he had an intense desire to excel. He was ambitious too. He wanted to excel in archery
X
Desktop Bottom Promotion