For Quick Alerts
ALLOW NOTIFICATIONS  
For Daily Alerts

ಅಕ್ಷಯ ತೃತೀಯದ ಮಹತ್ವ ಮತ್ತು ಪ್ರಾಮುಖ್ಯತೆಗಳು

By Arpitha Rao
|

ನಾವು ಬೇರೆಯವರಿಗೆ ನೀಡಿದಾಗ ನಮಗೆ ತಾನಾಗೇ ದೊರೆಯುತ್ತದೆ,ಎನ್ನುವುದು ಸತ್ಯ ಮಾತು.ಈ ಜಗತ್ತು ತನ್ನದೇ ಆದ ಒಂದು ನಿಗೂಡ ನಿಯಮಗಳನ್ನು ಒಳಗೊಂಡಿದೆ.ಒಳ್ಳೆಯ ಮನಸ್ಸಿನಿಂದ ಬೇರೆಯವರಿಗೆ ನೀಡಿದಾಗ ನಮಗೆ ಇನ್ನೆಲ್ಲಿಂದಲೋ ಅದು ದೊರೆಯುತ್ತದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಒಳ್ಳೆಯ ಮನಸ್ಸಿನಿಂದ ನೀಡಿದಾಗ ಅದರಿಂದ ನಮಗೂ ಕೂಡ ಒಳ್ಳೆಯದಾಗುತ್ತದೆ ಎಂಬ ಮಾತಿದೆ.ಆದ್ದರಿಂದಲೇ ಹಿರಿಯರು ಇದನ್ನು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

ಇದನ್ನು ನೀವು'ಅಕ್ಷಯ ತೃತೀಯದ ದಿನ' ಅಥವಾ 'ಬಂಗಾರದ ದಿನ' ಎಂದು ಕರೆಯಬಹುದಾದ ದಿನದಂದು ಪಾಲಿಸಬೇಕು.ಅಕ್ಷಯ ತೃತೀಯ ಎಂದರೆ ಬಂಗಾರ ಕೊಳ್ಳುವ ದಿನ ಎಂದಲ್ಲ.ಪ್ರತೀವರ್ಷ ಎಪ್ರಿಲ್ ಮಧ್ಯದಲ್ಲಿ ಅಥವಾ ಮೇ ಮಧ್ಯದಲ್ಲಿ ಬರುವ 3ನೇ ಚಂದ್ರನ ದಿನವನ್ನು ದಾನ ಮಾಡಲು ಶಕ್ತಿಶಾಲಿ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಚಂದ್ರ ಮತ್ತು ಸೂರ್ಯ ಅತ್ಯಂತ ಉತ್ತುಂಗ ಸ್ಥಿತಿಯಲ್ಲಿದ್ದು ದಾನ ಮತ್ತು ಹಿತಚಿಂತಕ ಕೃತ್ಯಗಳಿಗೆ ಇದು ಮಂಗಳಕರ ದಿನ ಎನ್ನಲಾಗುತ್ತದೆ.

ಪರಶಿವನ ಹತ್ತೊಂಭತ್ತು ಅವತಾರಗಳ ಮಹತ್ವದಲ್ಲಿ ಅಡಗಿದೆ ಶಿವ ಕಾರುಣ್ಯ

The Significance & Importance of Akshaya Tritiya

ನೀವು ಈ ದಿನ ಹಣ ಅಥವಾ ವಸ್ತ್ರ ಯಾವುದನ್ನಾದರೂ ಒಳ್ಳೆಯ ಮನಸ್ಸಿನಿಂದ ದಾನವಾಗಿ ನೀಡಿ,ಹೀಗೆ ಮಾಡುವುದರಿಂದ ನಿಮಗೆ ದ್ವಿಗುಣದಷ್ಟು ಹರಿದು ಬರುತ್ತದೆ ಎನ್ನಲಾಗುತ್ತದೆ.ಹಸಿದವನಿಗೆ ಅನ್ನ ನೀಡುವುದು,ಬಡವರಿಗೆ ದಾನ ನೀಡುವುದು ಈ ದಿನದಲ್ಲಿ ಮಾಡುವುದರಿಂದ ನಿಮಗೆ ಧಾರ್ಮಿಕ ಆಶೀರ್ವಾದ ದೊರೆಯುತ್ತದೆ ಎನ್ನಲಾಗುತ್ತದೆ.

ಅಕ್ಷಯ ತೃತೀಯದ ದಿನ ನೀವು ನೀಡಿದ್ದು ನಿಮಗೆ ಎರಡರಷ್ಟು ಹೆಚ್ಚು ಬರುತ್ತದೆ (ನೀವು ಬಯಸದಿದ್ದರೂ ಕೂಡ).ನೀವು ದಾನ ಮಾಡಲು ಬಯಸುವುದಾದರೆ ಈ ದಿನ ಉತ್ತಮವಾದ ದಿನ.ಭಗವಂತನು ಈ ಜಗತ್ತನ್ನು ಸೃಷ್ಟಿಸುವಾಗ ಆತನ ಬಾಯಿಯಿಂದ ಹೊರಟ ಮೊದಲ ಪದ ಅಕ್ಷಯ ಎಂದರೆ ಅನಿಯಮಿತ ಎಂದು ನಂಬಲಾಗಿದೆ.ಈ ದಿನ ಸಂಪತ್ತನ್ನು ಕೊಡುವ ಏಕೈಕ ದಿನ ಎನ್ನಲಾಗುತ್ತದೆ. ಸಾಕಷ್ಟು ಜನರು ಈ ದಿನ ಬಂಗಾರವನ್ನು ಕೊಂಡುಕೊಳ್ಳುತ್ತಾರೆ.ವರ್ಷಪೂರ್ತಿ ಅದೃಷ್ಟ ಮತ್ತು ಸಮೃದ್ಧಿ ತರುವ ಚಿನ್ನವನ್ನು ಈ ದಿನ ಕೊಂಡುಕೊಂಡರೆ ಸಂಪತ್ತು ಸಿಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.

ಸ್ವರ್ಗದ ಖಜಾಂಚಿ ಕುಬೇರ ಶಿವನಿಂದ ಸಂಪತ್ತನ್ನು ಪಡೆದುಕೊಂಡ ದಿನ ಅಕ್ಷಯ ತ್ರಿತೀಯ ಎನ್ನಲಾಗುತ್ತದೆ.ಜೊತೆಗೆ ಶಿವ ಲಕ್ಷ್ಮಿ ದೇವಿಗೆ ತನ್ನ ಧನವನ್ನು ನೀಡಿದ ದಿನ.ಶಿವನು ಕುಬೇರನನ್ನು ಸಂಪತ್ತಿನ ದೇವನಾಗಿ ಮತ್ತು ಲಕ್ಷ್ಮಿಯನ್ನು ಸಂಪತ್ತಿನ ದೇವಿಯನ್ನಾಗಿ ಮಾಡಿದನು ಎನ್ನಲಾಗುತ್ತದೆ.ಕುಬೇರನು ಶಿವಪುರಂ ಎಂಬಲ್ಲಿ ಶಿವನನ್ನು ಪುಜಿಸಿದನು.ಈ ದೇವಾಲಯದ ಸುತ್ತಲೂ ಸಾವಿರಾರು ಶಿವಲಿಂಗಗಳು ಉದ್ಬವಿಸಿದ್ದು,ಶಿವಪುರಂ ನಲ್ಲಿ ಪೂಜಿಸುವುದರಿಂದ ಸಾಲಗಳು ತೀರುತ್ತವೆ ಎಂಬ ನಂಬಿಕೆ ಇದೆ.

ಬಡವರಿಗೆ ಅಥವಾ ಹಸಿದವರಿಗೆ ಅನ್ನ ನೀಡುವುದು ಅತ್ಯುತ್ತಮ ದಾನಗಳಲ್ಲಿ ಒಂದು.ಕೆಲವು ಜನರು ಬಡ ಮಕ್ಕಳಿಗೆ ಚಪ್ಪಲಿ ಮತ್ತು ಕೊಡೆಯನ್ನು ಕೂಡ ಈ ದಿನ ದಾನವಾಗಿ ನೀಡುತ್ತಾರೆ.ಅಕ್ಷಯ ತೃತೀಯದ ದಿನ ಮಾಡುವ ಪೂಜೆ ಮತ್ತು ದಾನಗಳಿಗೆ ವಿಶೇಷ ಬೆಲೆಯಿದೆ.

ರಾಮ ನವಮಿಯ ಮಹತ್ವವನ್ನು ತಿಳಿಯೋಣ ಬನ್ನಿ

ವೈದಿಕ ಬರಹಗಳಲ್ಲಿ ಎಲ್ಲೂ ಚಿನ್ನವನ್ನು ಅಥವಾ ಆಭರಣಗಳನ್ನು ಕೊಂಡುಕೊಳ್ಳುವುದರ ಬಗ್ಗೆ ಬರೆದಿಲ್ಲ. ಕೆಲವು ಧಾರ್ಮಿಕತೆಯ ಹೆಸರಿನಲ್ಲಿ ಈ ದಿನ ತಮ್ಮ ಹಿತಾಸಕ್ತಿಯಂತೆ ಚಿನ್ನವನ್ನು ಕೊಂಡುಕೊಳ್ಳುವುದು ನಡೆದುಕೊಂಡು ಬಂದಿದೆ.

ಅಕ್ಷಯ ತೃತೀಯದಂದು ದಾನ ಮಾಡುವುದರಿಂದ ಆಗುವ ಅನುಕೂಲಗಳ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳಿವೆ :-

1.ದಾನ ಮಾಡಿದಲ್ಲಿ ಸಾವಿನ ನೋವು ಪರಿಹಾರವಾಗುತ್ತದೆ.

2.ಬಡವರಿಗೆ ಸಹಾಯ ಮಾಡಿದಲ್ಲಿ ಮುಂದಿನ ಜನ್ಮಕ್ಕೆ ಆಶೀರ್ವಾದ ಪಡೆಯುತ್ತೀರಿ.

3.ನೀವು ಬಡವರಿಗೆ ವಸ್ತ್ರವನ್ನು ನೀಡಿದರೆ ರೋಗಗಳಿಂದ ಮುಕ್ತರಾಗುತ್ತೀರಿ.

4.ಹಣ್ಣುಗಳನ್ನು ಬಡವರಿಗೆ ನೀಡಿದಲ್ಲಿ ಜೀವನದಲ್ಲಿ ಯಶಸ್ಸು ನಿಮ್ಮದಾಗುತ್ತದೆ.

5.ಹಾಲು,ಬೆಣ್ಣೆ,ಮೊಸರು ಇವುಗಳನ್ನು ದಾನವಾಗಿ ನೀಡಿದಲ್ಲಿ ವಿದ್ಯಾಭ್ಯಾಸದಲ್ಲಿ ಉನ್ನತಿ ದೊರೆಯುತ್ತದೆ.

6.ಧಾನ್ಯಗಳನ್ನು ದಾನ ನೀಡಿದಲ್ಲಿ ಅಕಾಲಿಕ ಮರಣ ನಿಮ್ಮದಾಗುವುದಿಲ್ಲ.

7.'ದೇವ ತರ್ಪಣ'ವನ್ನು ನೀಡಿದಲ್ಲಿ ಬಡತನದಿಂದ ಮುಕ್ತರಾಗುತ್ತೀರಿ.

8.ನೀವು ಮೊಸರನ್ನವನ್ನು ದಾನವಾಗಿ ನೀಡಿದಲ್ಲಿ ಪಾಪಗಳು ಪರಿಹಾರವಾಗಿ,ಜೀವನದಲ್ಲಿ ಮುನ್ನುಗ್ಗುತ್ತೀರಿ.

English summary

The Significance & Importance of Akshaya Tritiya

The hand that gives is the hand that gathers" is a timeless truth. Universe is a mysterious place and has its own secret laws. One of the important secrets to manifesting material success is first to give with a clean heart.
X
Desktop Bottom Promotion