For Quick Alerts
ALLOW NOTIFICATIONS  
For Daily Alerts

ಪ್ರೀತಿ, ಮತ್ಸರದ ನಡುವೆಯೇ ಸುತ್ತುವ ಊರ್ವಶಿಯ ಪ್ರೇಮಕಥೆ!

By Super
|

ಮೈ ಮನಗಳನ್ನು ರೋಮಾ೦ಚನಗೊಳಿಸುವ ಅಸ೦ಖ್ಯಾತ ವಿಸ್ಮಯಕಾರಿ ಕಥೆಗಳು ಹಾಗೂ ಪ್ರಸ೦ಗಗಳು ಹಿ೦ದೂ ಪುರಾಣಶಾಸ್ತ್ರಗಳಲ್ಲಿ ಹೇರಳವಾಗಿ ಕ೦ಡುಬರುತ್ತವೆ. ರಾಮಾಯಣ ಹಾಗೂ ಮಹಾಭಾರತಗಳೆರಡೂ ಕೂಡ ಇ೦ತಹ ವಿಸ್ಮಯಕಾರಿ ಕಥೆಗಳ ಬಹು ದೊಡ್ಡ ಆಗರ ಗ್ರ೦ಥಗಳಾಗಿದ್ದು, ಹೆಚ್ಚು ಕಡಿಮೆ ಎಲ್ಲಾ ಭಾರತೀಯ ಮಕ್ಕಳೂ ಕೂಡ ಇವುಗಳನ್ನೇ ಕೇಳುತ್ತಾ ಬೆಳೆದವರು. ಈ ಎರಡೂ ಮಹಾನ್ ಗ್ರ೦ಥಗಳು ಅತ್ಯ೦ತ ಸೊಗಸಾದ ಕಥೆಗಳ ಆಗರಗಳಾಗಿದ್ದು, ಇವುಗಳು ನಮ್ಮನ್ನು ನಿಬ್ಬೆರಗಾಗಿಸುತ್ತವೆ.

ಮಹಾಭಾರತದಲ್ಲಿ ಒದಗಿ ಬರುವ ಅ೦ತಹ ಕುತೂಹಲಕಾರಿಯಾದ ಹಾಗೂ ಮೈನವಿರೇಳಿಸುವ ಕಥೆಗಳ ಪೈಕಿ ಒ೦ದು ಯಾವುದೆ೦ದರೆ, ಸುಪ್ರಸಿದ್ಧ ದೇವಲೋಕದ ಅಪ್ಸರೆಯಾದ ಊರ್ವಶಿ ಹಾಗೂ ಮಾನವ ಕುಲದಲ್ಲಿ ಜನಿಸಿರುವ ರಾಜನಾದ ಪುರೂರವರ ನಡುವಿನ ಪ್ರೇಮಕಥಾನಕವಾಗಿದೆ. ದೇವಲೋಕಕ್ಕೆ ಸೇರಿದವರು ಮಾನವಕುಲದಲ್ಲಿ ಜನಿಸಿದವರೊ೦ದಿಗೆ ಪ್ರೇಮಪಾಶದಲ್ಲಿ ಸಿಲುಕಿಕೊಳ್ಳುವ೦ತಹ ಪ್ರಸ೦ಗಗಳು ಭಾರತೀಯ ಪೌರಾಣಿಕ ಕಥೆಗಳಲ್ಲಿ ಬಹು ಜನಪ್ರಿಯವಾಗಿವೆ.

The mysterious Love story of Apsara Urvashi no one knows!

ಪುರೂರವ ಎಂಬುವನು ಚಂದ್ರವಂಶದ ರಾಜನಾಗಿದ್ದ ಮತ್ತು ಅದೇ ಸಮಯದಲ್ಲಿ ಇಂದ್ರನ ಆಸ್ಥಾನದಲ್ಲಿ ಊರ್ವಶಿಯು ಒಂದು ಸುಂದರ ನರ್ತಕಿಯಾಗಿದ್ದಳು. ಅವಳ ಪ್ರೇಮ ಕಥೆ ವಾಸ್ತವವಾಗಿ ಒಂದು ಶಾಪದಿಂದ ಆರಂಭವಾಗುತ್ತದೆ. ಅವಳ ಗುರು ಭಾರತ್ ಮತ್ತು ವರುಣ ಅವಳಿಗೆ ಭೂಮಿಯ ಮೇಲೆ ಸಮಯಕಳೆಯಲು ಶಾಪವನ್ನು ಕೊಟ್ಟರು ಎಂದು ನಿಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲದೇ ಇರಬಹುದು. ಊರ್ವಶಿಯು ಹೇಗೆ ಭೂಮಿಗೆ ಇಳಿದು ಬಂದಳು ಮತ್ತು ಅವಳ ಪ್ರೇಮ ಕಥೆ ಹೇಗೆ ಆರಂಭವಾಯಿತೆಂಬುದನ್ನು ಮುಂದೆ ಓದಿರಿ:

ಒಮ್ಮೆ ಪುರೂರವನು ಊರ್ವಶಿಯನ್ನು ಗಂಧಮದನ್ ಗಿರಿಯಲ್ಲಿ ನೋಡಿದನು. ಅವಳು ಅಲ್ಲಿ ತನ್ನ ಕಾಲುಗಳ ಕೆಳಗೆ ಇಬ್ಬನಿಯ ಮತ್ತು ಅಲ್ಲಿ ಬೀಸುವ ಮೃದು ತಂಗಾಳಿಗೆ ತನ್ನ ಮೈಯೊಡ್ಡಿ ಇಹಲೋಕದ ವಿನೋದವನ್ನು ಆನಂದಿಸಲು ಇಳಿದು ಬಂದಿದ್ದಳು. ಅವಳನ್ನು ನೋಡಿದ ಪುರೂರವನಿಗೆ ಅವಳಲ್ಲಿ ಪ್ರೇಮ ಉಂಟಾಯಿತು. ಅವನು ಅವಳನ್ನು ಮದುವೆಯಾಗಲು ಕೇಳಿಕೊಂಡನು. ಆದರೆ, ಊರ್ವಶಿಯು ಮದುವೆಯಾಗಲು ಮೂರು ಶರತ್ತುಗಳನ್ನು ಮುಂದಿಟ್ಟಳು.

ಆ ಮೂರು ಶರತ್ತುಗಳೇನೆಂದರೆ:
1. ಎರಡು ಕುರಿಗಳು ತನ್ನ ಹಾಸಿಗೆಯ ಬಳಿಯೇ ಸದಾ ಇರಬೇಕು.ಅಕಸ್ಮಾತ್ ಅನಿರೀಕ್ಷಿತವಾಗಿ ಕುರಿಗಳು ಅಲ್ಲಿ ಇಲ್ಲದಿದ್ದಲ್ಲಿ ಅವಳು ತಕ್ಷಣವೇ ಸ್ವರ್ಗಕ್ಕೆ ಹಿಂದಿರುಗುವಳು.
2. ಅವಳಿಗೆ ಎಂದೂ ರಾಜನು ಬೆತ್ತಲೆಯಾಗಿರುವುದನ್ನು ಕಾಣಬಾರದು.
3. ಅವಳಿಗೆ ತುಪ್ಪವನ್ನು ಆಹಾರದಂತೆ ಬಡಿಸಬೇಕು.

ಈ ಷರತ್ತುಗಳಿಗೆಲ್ಲಾ ಒಪ್ಪಿಕೊಂಡ ನಂತರ ಅವಳು ಅವನ ಜೊತೆ 60,000 ವರ್ಷಗಳ ಕಾಲ ಕಳೆದಳು. ಆದಾಗ್ಯೂ ಎಲ್ಲಾ ಒಳ್ಳೆಯ ಕಥೆಗಳು ಕೊನೆಗೊಳ್ಳುವಂತೆ, ಈ ಪ್ರೇಮದ ಕಥೆಯೂ ಕೊನೆಗೊಳ್ಳಬೇಕಾಯಿತು. ಗಂಧರ್ವರಿಗೆ ಊರ್ವಶಿಯು ಬಹಳಕಾಲ ಸ್ವರ್ಗದಲ್ಲಿ ಇಲ್ಲದಿರುವುದು ಬೇಜಾರಾಗಲು ಆರಂಭವಾಯಿತು. ಅವರಿಗೆ ಊರ್ವಶಿಯು ಒಡ್ಡಿದ್ದ ಷರತ್ತುಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು.

ಒಂದು ರಾತ್ರಿ ಗಂಧರ್ವರು ಎರಡು ಕುರಿಗಳನ್ನು ಕದ್ದುಬಿಟ್ಟರು. ಊರ್ವಶಿಗೆ ಕುರಿಗಳು ಕಾಣದಿದ್ದಾಗ ಸಹಾಯಕ್ಕಾಗಿ ಕೂಗಿಕೊಂಡಳು. ಆ ಸಮಯದಲ್ಲಿ ಬರಿಯ ಮೈಯಲ್ಲಿ ಮಲಗಿದ್ದ ಪುರೂರವನು ಗಂಧರ್ವರ ಹಾಗೆಯೇ ಹಿಂದೆ ಓಡಿದನು. ಗಂಧರ್ವರಿಗೆ ಬೆಂಕಿ ಹಚ್ಚಲು ಗೊತ್ತಿದ್ದರಿಂದ ರಾಜನು ಬರಿಯ ಮೈಯಲ್ಲಿ ಓಡಿಬರುತ್ತಿದ್ದಾಗೆ ಬೆಂಕಿ ಹಚ್ಚಿ ಅವನನ್ನು ಬೆಳಕಿನಲ್ಲಿ ಕಾಣುವಂತೆ ಮಾಡಿದರು. ಹಾಗಾದಾಗ ಊರ್ವಶಿಯ ಎರಡನೇ ಶರತ್ತೂ ಸಹ ಮುರಿದುಹೋಯಿತು.

ಈ ರೀತಿ ಗಲಾಟೆಯು ನಡೆಯುತ್ತಿದ್ದಾಗೆ ಊರ್ವಶಿಗೆ ತುಪ್ಪದ ಆಹಾರವನ್ನು ಕೊಡಲಾಗಲಿಲ್ಲ. ಹಾಗೆ ಎಲ್ಲಾ ಶರತ್ತುಗಳು ಮುರಿದುಹೋದೊಡನೆಯೇ ಅವಳು ಸ್ವರ್ಗಕ್ಕೆ ಹಿಂದಿರುಗಿದಳು. ಊರ್ವಶಿಯು ಪುರೂರವನೊಡನೆ ಭೂಮಿಯಲ್ಲಿದ್ದಾಗ ಆರು ಮಕ್ಕಳನ್ನು ಹಡೆದಳು: - ಆಯು, ಅಮಾವಸು, ವಿಶ್ವಾಯು, ಶತಾಯು, ಘಟಾಯು ಮತ್ತು ದ್ರಿಡಾಯು.

English summary

The mysterious Love story of Apsara Urvashi no one knows!

Apsaras or the dancers from heaven are known for being sent down to Earth to distract rishis, munis, saints and sadhus involved in intense meditation or (tapasya). This was their major part of job – look gorgeous and amuse noble saints. But did you know there was one celestial nymph (again apsara) who had fallen in love?
X
Desktop Bottom Promotion