For Quick Alerts
ALLOW NOTIFICATIONS  
For Daily Alerts

ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ

By Prasad
|
Buddha is your own mind
ಒಬ್ಬ ಹೆಸರಾಂತ ಝೆನ್ ಗುರುಗಳು ತಮ್ಮ ಬೋಧನೆಯಲ್ಲಿ ಒಂದು ಪ್ರಮುಖವಾದಂಥ ಹೇಳಿಕೆಯನ್ನು ಪ್ರಸ್ತುತ ಪಡಿಸಿದರು. ಅವರು ತಮ್ಮೆಲ್ಲ ಶಿಷ್ಯಂದರಿಗೆ ಇದೇ ತತ್ವವನ್ನು ಬೋಧನೆ ಮಾಡುತ್ತಿದ್ದರು. ಅದೇನು ಅಂದರೆ "ನಿಮ್ಮ ಸ್ವಂತ ಮನಸ್ಸೇ ಬುದ್ಧ" ಅಂದರೆ, ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ ಎಂದು.

ಝೆನ್ ಗುರುಗಳ ಬೋಧನೆಯಿಂದ ಒಬ್ಬ ಸನ್ಯಾಸಿಯು ಗಾಢ ಪ್ರಭಾವಕ್ಕೊಳಗಾದನು. ಧ್ಯಾನದ ಒಳ ನೋಟವನ್ನು ಗ್ರಹಿಸುವ ಉದ್ದೇಶದಿಂದ ಮತ್ತು ಆ ಬೋಧನೆಯ ತನಿಖೆಯನ್ನು ಮಾಡುವ ಉದ್ದೇಶದಿಂದ ಮಠವನ್ನು ಬಿಟ್ಟು ಕಾಡಿಗೆ ಹೋಗಲು ನಿರ್ಧರಿಸಿದನು. ಸುಮಾರು 20 ವರ್ಷಗಳ ಕಾಲ ಆ ಅತ್ಯುತ್ತಮ ಬೋಧನೆಯ ತನಿಖೆ ಮಾಡುತ್ತಾ ಆ ಕಾಡಿನಲ್ಲಿ ಕಳೆದನು. ಇಷ್ಟೆಲ್ಲ ತನಿಖೆ ಮಾಡಿದರೂ ಆತನಲ್ಲಿ ಏನೋ ದ್ವಂದ್ವ ಮನೆ ಮಾಡಿತ್ತು.

ಒಂದು ದಿನ ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಮತ್ತೊಬ್ಬ ಸನ್ಯಾಸಿಯನ್ನು ಕಂಡನು. ಅವನನ್ನು ನೋಡಿದ ಈ ವಿರಕ್ತ ಸನ್ಯಾಸಿಯು, ಆ ಕಾಡಿನಲ್ಲಿ ಅಲೆದಾಡುತ್ತಿದ್ದ ಸನ್ಯಾಸಿಯೂ ಅದೇ ಜೈನ ಗುರುಗಳ ಹತ್ತಿರ ಅಧ್ಯಯನ ಮಾಡಿದವನು ಎಂದು ಗುರುತು ಹಿಡಿದನು. ಗುರುಗಳ ಬೋಧನೆಯಿಂದ ಅವರು ಕಂಡುಕೊಂಡಿರುವ ಸತ್ಯವನ್ನು ಅರಿಯಬೇಕೆಂದು ಅಂದುಕೊಂಡು ಅವರನ್ನು ಮಾತನಾಡಿಸಬೇಕೆಂದು ಅವರ ಬಳಿ ಬಂದನು.

ಆ ಅಲೆಮಾರಿ ಸನ್ಯಾಸಿಯ ಬಳಿಗೆ ಹೋಗಿ “ಗುರುಗಳ ಅತ್ಯುತ್ತಮ (ಮಹಾನ್) ಬೋಧನೆಯಲ್ಲಿ ನೀವು ಏನು ಅರ್ಥ ಮಾಡಿಕೊಂಡಿದ್ದೀರಿ ಎಂದು ದಯವಿಟ್ಟು ಹೇಳಿ” ಎಂದು ಕೇಳಿದನು. ಆಗ ಅಲೆಮಾರಿ ಸನ್ಯಾಸಿ “ಓಹೋ ಅದಾ? ಆ ವಿಚಾರದ ಬಗ್ಗೆ ಗುರುಗಳು ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರಲ್ಲವೇ? ಗುರುಗಳು ತಮ್ಮ ಮಹಾನ್ ಬೋಧನೆಯಲ್ಲಿ ಹೇಳಿದ್ದು ಏನೆಂದರೆ “ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇಲ್ಲ” ಎಂದು.

English summary

The Most Important Teaching | Zen short stories | Buddha is your own mind | ಬುದ್ಧನು ನಿಮ್ಮ ಸ್ವಂತ ಮನಸ್ಸಿನಲ್ಲಿ ಇದ್ದಾನೆ

A renowned Zen master said that his greatest teaching was this: Buddha is your own mind. So impressed by how profound this idea was, one monk decided to leave the monastery and retreat to the wilderness to meditate on this insight. What did he ultimately achieve?
Story first published: Tuesday, June 5, 2012, 12:15 [IST]
X
Desktop Bottom Promotion