For Quick Alerts
ALLOW NOTIFICATIONS  
For Daily Alerts

ಮನುಷ್ಯನ ನಂಬಿಕೆಯಲ್ಲಿದೆ ಯಶಸ್ಸಿನ ಒಳಗುಟ್ಟು!

|

ವಾಸ್ತವವಾಗಿ ಆಧ್ಯಾತ್ಮಿಕತೆ ನಂಬಿಕೆಯ ವಿಷಯದಮೇಲೆ ಒತ್ತಿ ಹೇಳುತ್ತದೆ. ವಾಸ್ತವವಾಗಿ ನಂಬಿಕೆಯು ತೃಪ್ತಿಯ ಜೀವನದಲ್ಲಿ ಒಂದು ಅತ್ಯಂತ ನಿರ್ಣಾಯಕ ಅಂಶವಾಗಿದೆ. ಈ ವಿಷಯದಲ್ಲಿ ಮುಖ್ಯವಾಗಿ ಎರಡು ದೃಷ್ಟಿಕೋನಗಳಿವೆ - ಮೊದಲನೆಯದು ವಿಶ್ವಾಸ ಮತ್ತು ಎರಡನೆಯದು ಧೃಢ ನಂಬಿಕೆ. ವಿಶ್ವಾಸ ಮತ್ತು ಧೃಢ ನಂಬಿಕೆ ಎರಡೂ ಒಂದು ಅರ್ಥದಲ್ಲಿ ಒಂದೇ ತಿಳುವಳಿಕೆಗೆ ಸಂಬಂಧಿಸುತ್ತವೆ.

ಆದಾಗ್ಯೂ, ವಿಶ್ವಾಸ ಮತ್ತು ಗಾಢನಂಬಿಕೆಗಳಲ್ಲಿ ತಮ್ಮಲ್ಲೇ ಸಂಯೋಜಿಸಲು ನಂಬಿಕೆಯ ಮಟ್ಟದಲ್ಲಿ ಸೂಕ್ಷ್ಮವಾದ ಭಿನ್ನತೆಯಿರುತ್ತದೆ. ಈ ಲೇಖನದಲ್ಲಿ ನಾವು ನಂಬಿಕೆಯ ಶಕ್ತಿ ಮತ್ತು ಆಧ್ಯಾತ್ಮದ ಕ್ಷೇತ್ರದಲ್ಲಿ ನಂಬಿಕೆಯ ಶಕ್ತಿಯೇನೆಂಬುದನ್ನು ಅವಲೋಕಿಸುತ್ತೇವೆ.

The Immeasurable Power Of Belief

ನಮ್ಮ ಜೀವನದಲ್ಲಿ ನಾವು ಏನನ್ನಾದರೂ ಸಾಧಿಸಬೇಕಾಗಿದ್ದಲ್ಲಿ, ನಂಬಿಕೆಯ ನಿರ್ಣಾಯಕ ಅಂಶದ ಅಗತ್ಯವಿರುತ್ತದೆ. ನಂಬಿಕೆಯಿಲ್ಲದ್ದಿದ್ದಲ್ಲಿ ಸ್ಪಷ್ಟವಾಗಿ ಸಾಧನೆಯನ್ನು ಮಾಡುವುದಕಾಗುವುದಿಲ್ಲ. ಆಧ್ಯಾತ್ಮಿಕತೆಯು ನಂಬಿಕೆಯನ್ನು ಹೆಚ್ಚಿಸಲು ಖಚಿತವಾಗಿದ್ದರೂ ಕೂಡ ಆಧ್ಯಾತ್ಮಿಕೆಯ ಪ್ರಾಮುಖ್ಯತೆಯ ಬಗ್ಗೆ ನಂಬಿಕೆಯಿಲ್ಲದಿರುವಾಗ ಮಾತನಾಡಲು ಆಗುವುದಿಲ್ಲ. "ಆಧ್ಯಾತ್ಮಿಕ ಜನರು ಏಕೆ ಯಶಸ್ವಿಯಾಗಿದ್ದಾರೆ" ಎಂಬ ಪ್ರಶ್ನೆ ಬಂದಾಗ, ಎಲ್ಲಾ ನಂಬಿಕೆಯ ಬಗ್ಗೆ ನಿರ್ದೇಶಿಸುತ್ತದೆ. ಮಾನವರಾಗಿ ಸಹ ನಂಬಿಕೆಯು ಅಸ್ತಿತ್ವದ ಮೂಲಭೂತವಾದ ಅಂಶವಾಗಿದೆ.

ನಂಬಿಕೆಯಿಲ್ಲದ್ದಿದ್ದಲ್ಲಿ ಸಾಧನೆ ಮತ್ತು ಅದರ ಯಶಸ್ವಿ ಪೂರ್ಣಫಲ ತೃಪ್ತಿಯ ಮಟ್ಟದ ಸಾಧನೆಯು ಒಂದು ಆಗದಿರುವ ಮಾತು. ಮಾನವರಾಗಿ ನಾವು ಮಾನವ ಪ್ರಜ್ಞೆಯ ಶಕ್ತಿಯನ್ನು ಸ್ವಲ್ಪವಾದರೂ ಅರ್ಥಮಾಡಿಕೊಳ್ಳಬೇಕು. ಮತ್ತು ಆ ಕಾರಣ ನಾವು ನಂಬಿಕೆಯ ಶಕ್ತಿಯನ್ನು ಸ್ವಲ್ಪವಾದರೂ ಅರ್ಥಮಾಡಿಕೊಳ್ಳಬೇಕು. ಸೂರ್ಯನಿಗೆ ಅರ್ಘ್ಯಪ್ರಧಾನವನ್ನು ಮಾಡುವುದು ಯಾವುದರ ಸೂಚಕ?

ನಂಬಿಕೆಯ ಶಕ್ತಿ ಕಲ್ಪನಾತೀತವೆಂಬುದನ್ನು ನಾವು ಗಮನಿಸಬೇಕು. ವಿಶ್ವದ ಎಲ್ಲಾ ಶ್ರೇಷ್ಠರು ನಂಬಿಕೆಯಿಲ್ಲದ್ದಿದ್ದಲ್ಲಿ ತಮ್ಮ ಯಶಸ್ಸನ್ನು ಸ್ವಲ್ಪವಾದರೂ ಗಳಿಸಲು ಸಾಧ್ಯವಾಗಿರುತ್ತಿರಲಿಲ್ಲ. ಅವರು ನಂಬಿದ್ದ ಕಾರಣ ಅವರ ನಂಬಿಕೆಗಳಿಗೆ ಪ್ರಖ್ಯಾತಿಗೊಂಡರು. ವೈಯುಕ್ತಿಕ ಅರಿವಿನ ಶಕ್ತಿ ನಂಬಿಕೆಯ ಮೂಲಕ ವರ್ಧಿಸುತ್ತದೆ. ಸಾಮಾನ್ಯ ಮಾನವರಾಗಿ ಜೀವನದಲ್ಲಿ ಒಂದು ನಿರ್ದಿಷ್ಟ ಉದ್ದೇಶದ ಸಾಧನೆಯು ಸಾಧ್ಯವಾಗಿದೆಯೆಂದರೆ ಇಡೀ ವಿಶ್ವವು ಆ ಗುರಿಯನ್ನು ಈಡೇರಿಸಿ ಮುಟ್ಟುವವರೆಗೆ ಕೆಲಸಮಾಡುತ್ತದೆ, ಏಕೆಂದರೆ ಪ್ರಬಲ ನಂಬಿಕೆಯು ವಿಶ್ವದದ್ಯಾಂತ ಅರಿವನ್ನು ಆಕರ್ಷಿಸಲು ವೈಯುಕ್ತಿಕ ಪ್ರಜ್ಞೆಯನ್ನು ಸಕ್ರಿಯಗೊಳಿಸುತ್ತದೆ.

English summary

The Immeasurable Power Of Belief

Spirituality often stresses on the aspect of belief. In fact, belief is the most crucial aspect in achieving a life of fulfillment. There are two main angles to this topic- the first being faith and the second, conviction. In this article, we look at the power of belief and what the power of belief in the realm of spirituality can do.
Story first published: Wednesday, October 8, 2014, 17:58 [IST]
X
Desktop Bottom Promotion