For Quick Alerts
ALLOW NOTIFICATIONS  
For Daily Alerts

ವಿಷ್ಣು ಏಕೆ ಶಾಪಗ್ರಸ್ತನಾದ ಎಂಬ ಒಂದು ಸಾಲಿಗ್ರಾಮದ ಕಥೆ

By Viswanath S
|

ಭಗವಾನ್ ವಿಷ್ಣುವನ್ನು ಅನೇಕ ಸ್ಥಳಗಳಲ್ಲಿ ಕಪ್ಪು ಕಲ್ಲಿನರೂಪದಲ್ಲಿ ಪೂಜಿಸಲಾಗುತ್ತಿರುವುದನ್ನು ನೀವೇ ಗಮನಿಸಿರಬಹುದು. ಯಾವುದೇ ಹಿಂದೂ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮಾಡಬೇಕಾದಾಗ ಅರ್ಚಕರು ಈ ಕಪ್ಪು ಕಲ್ಲನ್ನು ತಮ್ಮ ಜೊತೆಯಲ್ಲಿ ತಂದು ದೇವರ ವಿಗ್ರಹದ ಬಳಿಯಿಟ್ಟು ಮಂತ್ರ ಪಠಣ ಮಾಡಲು ತೊಡಗುತ್ತಾರೆ. ಈ ಕಪ್ಪು ಕಲ್ಲಿಗೆ ಸಾಲಿಗ್ರಾಮ ಅಥವ ಸಾಲಿಗ್ರಾಮ ಎಂದು ಕರೆಯುತ್ತಾರೆ.

ಒಂದು ಶಾಪದ ಕಾರಣದಿಂದಾಗಿ ಭಗವಾನ್ ವಿಷ್ಣುವು ಕಲ್ಲಿನ ರೂಪಕ್ಕೆ ತಿರುಗಿದನು. ಆ ಶಾಪದಲ್ಲಿ ಎಷ್ಟು ಶಕ್ತಿಯಿತ್ತೆಂದರೆ ತ್ರಿಮೂರ್ತಿಗಳಲ್ಲಿ ಅತ್ಯಂತ ಪ್ರಬಲ ದೇವರಾದ ವಿಷ್ಣುವೂ ಕೂಡ ಅದನ್ನು ತಪ್ಪಿಸಿಕೊಳ್ಳಲು ಏನೂ ಮಾಡುವುದಕ್ಕೆ ಆಗದೇ ಇದ್ದುದರಿಂದ ಶಾಪವನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಭಗವಾನ್ ವಿಷ್ಣುವು ಈ ಶಾಪವನ್ನು ತನ್ನ ಅತ್ಯಂತ ನಿಷ್ಠಾವಂತ ಭಕ್ತಳಾದ ವೃಂದಳಿಂದ (ರಾಕ್ಷಸ ರಾಜ ಜಲಂಧರ್ ಅವನ ಪತ್ನಿ), ಪಡೆದನು.

ಆ ಶಾಪದ ಪರಿಣಾಮವಾಗಿ ಭಗವಾನ್ ವಿಷ್ಣುವು ಸಾಲಿಗ್ರಾಮ ಎಂಬ ಪ್ರಖ್ಯಾತ ಹೆಸರಿನ ಕಲ್ಲಾಗಿ ಪರಿವರ್ತನೆಗೊಂಡನು. ಈ ಕಲ್ಲು ಗಂಡಕಿ ನದಿಯ ದಡದಲ್ಲಿ ಮಾತ್ರ ಕಂಡುಬರುತ್ತದೆ. ಈ ಕಲ್ಲು ಸಾಮಾನ್ಯವಾಗಿ ಕಪ್ಪು, ಕೆಂಪು ಅಥವ ಎರಡೂ ಬಣ್ಣಗಳ ಮಿಷ್ರಣದಿಂದ ಕೂಡಿದ್ದು ಒಂದು ಪೆಟ್ಟಿಗೆಯೊಳಗೆ ಇಟ್ಟಿರುತ್ತಾರೆ. ಈ ಸಾಲಿಗ್ರಾಮ ಕಲ್ಲನ್ನು ಮನೆಯೊಳಗೆ ಇಟ್ಟುಕೊಂಡಿದ್ದರೆ ಅವರು ಕಟ್ಟುನಿಟ್ಟಾದ ಸ್ವಚ್ಚತೆ ನಿಯಮಗಳನ್ನು ಅನುಸರಿಸಿ ಪೂಜೆಯನ್ನು ಮಾಡಬೇಕು.

ಸಾಲಿಗ್ರಾಮದ ಕಥೆಯು ಎಷ್ಟು ಕುತೂಹಲಕಾರಿಯಾಗಿದೆಯೋ ಅಷ್ಟೇ ವಿಷಾದಕರವಾಗಿಯೂ ಆಗಿದೆ. ಈ ಕಥೆಯು ಸೊಕ್ಕು, ಭಕ್ತಿ, ಪ್ರೀತಿ ಮತ್ತು ನಂಬಿಕೆ ದ್ರೋಹಗಳಿಂದ ಕೂಡಿದೆ. ಭಗವಂತ ವಿಷ್ಣು ತನ್ನ ಅತ್ಯಂತ ನಂಬಿಕಾರ್ಹ ಭಕ್ತಳಿಗೆ ಮೋಸ ಮಾಡಿ ಅದಕ್ಕೆ ಪ್ರತಿಫಲವಾಗಿ ತಾನೇ ಶಾಪಗ್ರಸ್ತನಾದನು. ಈ ಸಾಲಿಗ್ರಾಮ ಕಲ್ಲಿನ ಕುತೂಹಲಕಾರಿಯಾದ ಪೂರ್ಣ ಕಥೆಯನ್ನು ಮುಂದೆ ಓದಿ ಭಗವಂತ ವಿಷ್ಣುವು ಹೇಗೆ ಶಾಪಗ್ರಸ್ತನಾದನೆಂಬುದನ್ನು ತಿಳಿಯಿರಿ.

ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಂಗಸರನ್ನು ಏಕೆ ಅಪವಿತ್ರ ಎಂದು ಪರಿಗಣಿಸಲಾಗುತ್ತದೆ?

ಜಲಂಧರ, ಶಿವನ ಒಂದು ಅಂಶ

ಜಲಂಧರ, ಶಿವನ ಒಂದು ಅಂಶ

ಹಿಂದೆ ಒಬ್ಬ ಜಲಂಧರ ಎಂಬ ಹೆಸರಿನ ರಾಕ್ಷಸ ರಾಜನಿದ್ದ. ಅವನು ಶಿವನ ಮೂರನೇ ಕಣ್ಣಿನಿಂದ ಹೊರಟ ಬೆಂಕಿಯಜ್ವಾಲೆಯಿಂದ ರೂಪಗೊಂಡ. ಆದ್ದರಿಂದಲೇ ಅವನು ಅತ್ಯಂತ ಶಕ್ತಿಶಾಲಿ ಯೋಧನಾಗಿದ್ದ. ಅವನನ್ನು ವೃಂದ ಎಂಬ ಹೆಸರಿನ ರಾಕ್ಷಸಿ ರಾಜಕುಮಾರಿಯನ್ನು ಮದುವೆಯಾಗಿದ್ದ. ವೃಂದ ಜಲಂಧರನನ್ನು ಬಹಳ ಪ್ರೀತಿಮಾಡುತ್ತಿದ್ದಳು ಮತ್ತು ಅವನಿಗೆ ಶ್ರದ್ಧಾಭಕ್ತಿಯ ಪತ್ನಿಯಾಗಿದ್ದಳು.

ಶಿವನನ್ನು ಎದುರಿಸಿದ ಜಲಂಧರ

ಶಿವನನ್ನು ಎದುರಿಸಿದ ಜಲಂಧರ

ಜಲಂಧರನು ದೇವತೆಗಳಿಗೆ ವಿರುದ್ಧವಾಗಿದ್ದು ಅವರೆಲ್ಲರನ್ನೂ ಸ್ವರ್ಗದಿಂದ ಹೊರಗೋಡಿಸಿದನು. ಅವನು ಅಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದನು. ದೇವತೆಗಳು ಭಗವಾನ್ ವಿಷ್ಣು ಮತ್ತು ಶಿವನೆಡೆಗೆ ಹೋಗಿ ಅವರ ಸಹಾಯಕ್ಕಾಗಿ ಪ್ರಾರ್ಥಿಸಿದರು. ಶಿವನಿಗೆ ತನ್ನ ಅಂಶವಿದ್ದ ಜಲಂಧರನನ್ನು ಎಂದೂ ಸೋಲಿಸಲು ಸಾಧ್ಯವಿಲ್ಲವೆಂದು ತಿಳಿದಿದ್ದನು. ಆದರೂ ಭಗವಾನ್ ಶಿವನು ಜಲಂಧರನ ಜೊತೆ ಯುದ್ಧಮಾದಲು ಹೊರಟು ಬಿಟ್ಟನು. ಅವರಿಬ್ಬರ ಅನೇಕ ವರ್ಷಗಳಕಾಲ ನಡೆದರೂ ಜಲಂಧರನ ಪತ್ನಿಯ ನೈತಿಕತೆ ಮತ್ತು ಅವನ ಮೇಲಿಟ್ಟಿದ್ದ ಶ್ರದ್ಧಾಭಕ್ತಿಯು ಅವನಿಗೆ ರಕ್ಷಣೆ ಕೊಟ್ಟಿದ್ದರಿಂದ ಅವನನ್ನು ಸೋಲಿಸಲು ಸಾಧ್ಯವಾಗಲಿಲ್ಲ.

ವೃಂದ: ಭಗವಾನ್ ವಿಷ್ಣುವಿನ ಅತ್ಯಂತ ಶ್ರೇಷ್ಠ ಭಕ್ತೆ

ವೃಂದ: ಭಗವಾನ್ ವಿಷ್ಣುವಿನ ಅತ್ಯಂತ ಶ್ರೇಷ್ಠ ಭಕ್ತೆ

ವೃಂದೆಯು ರಾಕ್ಷಸ ರಾಜಕುಮಾರಿ ಮತ್ತು ರಾಕ್ಷಸ ರಾಜನ ಪತ್ನಿಯಾಗಿದ್ದರೂ ಸಹ ಭಗವಾನ್ ವಿಷ್ಣುವನ್ನು ಆರಾಧಿಸುತ್ತಿದ್ದಳು. ಅವಳು ಭಗವಾನ್ ವಿಷ್ಣುವಿಗೆ ತನ್ನನ್ನು ಅರ್ಪಿಸಿಕೊಂಡು ಶ್ರದ್ಧಾಭಕ್ತಿಗಳಿಂದ ಅವನ ಮೇಲೆ ಸಂಪೂರ್ಣ ನಂಬಿಕೆಯಿಟ್ಟು ಆರಾಧಿಸುತ್ತಿದ್ದಳು.

ಭಗವಾನ್ ವಿಷ್ಣು ಮಾಡಿದ ನಂಬಿಕೆ ದ್ರೋಹ

ಭಗವಾನ್ ವಿಷ್ಣು ಮಾಡಿದ ನಂಬಿಕೆ ದ್ರೋಹ

ಶಿವನು ಜಲಂಧರನನ್ನು ಸೋಲಿಸಲು ಸಾಧ್ಯವಾಗದಿದ್ದುದನ್ನು ಕಂಡು, ದೇವತೆಗಳು ಭಗವಾನ್ ವಿಷ್ಣುವಿನ ಕಡೆಗೆ ತಿರುಗಿದರು. ಭಗವಾನ್ ವಿಷ್ಣು ಇತರ ಯಾವರೀತಿಯಲ್ಲೂ ಜಲಂಧರನನ್ನು ಸೋಲಿಸಲು ಸಾಧ್ಯವಿಲ್ಲವೆಂದು ಒಂದು ಕಪಟರೀತಿಯಲ್ಲಿ ವೃಂದೆಯ ಪಾವಿತ್ರ್ಯತೆಯಮೇಲೆ ಅಪವಾದಹೊರಿಸುವ ಕಾರ್ಯವನ್ನು ಮಾಡಿದನು. ಅವನು ಜಲಂಧರನ ವೇಷಧರಿಸಿ ವೃಂದೆಯ ಮುಂದೆ ಹೋಗಿ ನಿಂತನು. ವೃಂದೆಯು ಅವನನ್ನು ಜಲಂಧರನಲ್ಲವೆಂದು ಗುರುತಿಸಲಾಗದೆ ತನ್ನ ಪತಿ ಜಲಂಧರನೇ ಮರಳಿಬಂದಿದ್ದಾನೆಂದು ತಿಳಿದು ಅವನನ್ನು ಅಪ್ಪಿಕೊಂಡುಬಿಟ್ಟಳು. ಹಾಗೆ ಮಾಡಿದ ತಕ್ಷಣವೇ ಪರಪುರುಷನನ್ನು ಅಪ್ಪಿಕೊಂಡಿದ್ದರಿಂದ ಅವಳ ಪಾತಿರ್ವತ್ಯೆಯನ್ನು ಕಳೆದುಕೊಂಡುಬಿಟ್ಟಳು. ಇದರ ಫಲವಾಗಿ ಜಲಂಧರನಿಗೆ ತನ್ನ ಪತ್ನಿಯ ಪಾತಿರ್ವತೆಯ ರಕ್ಷಣೆ ಕಳೆದುಕೊಂಡಿದ್ದರಿಂದ ಶಿವನು ಅವನನ್ನು ಸ್ವಲ್ಪವೂ ಸಮಯವನ್ನು ಕಳೆಯದೆ ಕೊಂದುಬಿಟ್ಟನು.

ವೃಂದೆಯ ಶಾಪ

ವೃಂದೆಯ ಶಾಪ

ವೃಂದೆಯು ತನ್ನ ತಪ್ಪನ್ನು ಅರಿತುಕೊಂಡು, ಭಗವಾನ್ ವಿಷ್ಣುವನ್ನು ತನ್ನ ನಿಜರೂಪವನ್ನು ತೋರಿಸೆಂದು ಕೇಳಿದಳು. ಅವಳಿಗೆ ತಾನು ನಂಬಿಕೆಯಿಟ್ಟುಕೊಂಡಿದ್ದ ಆರಾಧ್ಯದೈವ ಭಗವಾನ್ ವಿಷ್ಣುವೇ ತನಗೆ ಮೋಸಗೊಳಿಸಿದನೆಂದು ಅವನಲ್ಲಿಟ್ಟಿದ್ದ ಶ್ರದ್ಧಾಭಕ್ತಿಯು ಛಿದ್ರವಾಗಿಹೋಯಿತು. ಭಗವಾನ್ ವಿಷ್ಣುವು ತನ್ನ ಪತಿಯ ವೇಷದಲ್ಲಿ ಬಂದು ತನ್ನನ್ನು ಮೋಸಮಾಡಿದನೆಂದು ಅವನಿಗೆ ಶಾಪವನ್ನು ಕೊಟ್ಟಳು. ಅವಳು ಭಗವಾನ್ ವಿಷ್ಣುವು ಒಂದು ಕಲ್ಲಾಗಿಹೋಗಲಿ ಎಂದು ಶಾಪವನ್ನು ಕೊಟ್ಟಳು. ಭಗವಾನ್ ವಿಷ್ಣು ಅವಳ ಶಾಪವನ್ನೊಪ್ಪಿಕೊಂಡು ಸಾಲಿಗ್ರಾಮ ಕಲ್ಲಾಗಿ ಪರಿವರ್ತಿತನಾದನು. ವೃಂದೆಗೆ ತನ್ನ ಹೃದಯ ಒಡೆದುಹೋದದ್ದರಿಂದ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದಳು.

ತುಳಸಿಯ ವರ

ತುಳಸಿಯ ವರ

ಭಗವಾನ್ ವಿಷ್ಣುವು ತನ್ನ ಅತ್ಯಂತ ಶ್ರೇಷ್ಠ ಭಕ್ತೆಯನ್ನು ಮೋಸಮಾಡಿದುದಕ್ಕಾಗಿ ತಪ್ಪಿತಸ್ಥ ಭಾವನೆ ಹೊಂದಿದನು. ಆ ಕಾರಣದಿಂದಾಗಿ ವೃಂದೆಗೆ ಅವಳ ಚಿತಾಭಸ್ಮದಿಂದ ತುಳಸಿ ಜನ್ಮತಾಳುತ್ತಾಳೆಂದು ಮತ್ತು ಅವಳನ್ನು ಸಾಲಿಗ್ರಾಮ ಕಲ್ಲಿಗೆ ಕೊಟ್ಟು ಮದುವೆಯಾಗುವಳೆಂದು ವರವನ್ನು ನೀಡಿದನು. ಹೀಗೆ ಆಗುವುದರಿಂದ ವೃಂದೆಯ ಪಾತಿರ್ವತೆಯು ಕಳಂಕಗೊಳ್ಳದೆ ಅವಳು ಶಾಶ್ವತವಾಗಿ ಭಗವಾನ್ ವಿಷ್ಣುವಿನ ಜೊತೆಯಲ್ಲಿರುವಳು. ಹಾಗೆ ಮುಂದುವರೆದು ಭಗವಾನ್ ವಿಷ್ಣು ತಾನು ತುಳಸಿ ಇಲ್ಲದೆ ಆಹಾರವನ್ನು ಸ್ವೀಕರಿಸುವುದಿಲ್ಲವೆಂದು ಹೇಳಿದನು. ಆದ್ದರಿಂದ ವಿಷ್ಣುಪ್ರಸಾದದಲ್ಲಿ ಯಾವಾಗಲೂ ಒಂದು ತುಳಸಿ ಎಲೆ ಇಟ್ಟೇ ನೀಡಲಾಗುತ್ತದೆ.

ಸಾಲಿಗ್ರಾಮದ ಜೊತೆ ತುಳಸಿ ವಿವಾಹ

ಸಾಲಿಗ್ರಾಮದ ಜೊತೆ ತುಳಸಿ ವಿವಾಹ

ದೇವ್ ಪ್ರಭೋಧಿನಿ ಏಕಾದಶಿಯ ಮಾರನೇದಿವಸ ಬರುವ ಉತ್ತಾನ ದ್ವಾದಶಿಯಂದು ಸಾಲಿಗ್ರಾಮದ ಕಲ್ಲಿನ ಜೊತೆ ತುಳಸಿ ಗಿಡವನ್ನಿಟ್ಟು ಮದುವೆ ಮಾಡಿದರೆ ದಂಪತಿಗಳಿಗೆ ಅತ್ಯಂತ ಶ್ರೇಯಸ್ಕರವೆಂದು ಹೇಳುತ್ತಾರೆ. ಹಾಗೆ ಮಾಡುವುದರಿಂದ ತಮ್ಮ ವೈವಾಹಿಕ ಜೀವನಕ್ಕೆ ಸಂತೋಷ ಮತ್ತು ಏಳಿಗೆಯನ್ನೂ ತರುತ್ತದೆಯೆಂದು ಹೇಳುತ್ತಾರೆ.

English summary

Tale Of The Shaligram: Why Was Vishnu Cursed?

The God tricked His most loyal devotee and earned a curse for Himself in return. Read on to find out the whole story of the Shalimar stone and why Lord Vishnu was cursed.
X
Desktop Bottom Promotion