For Quick Alerts
ALLOW NOTIFICATIONS  
For Daily Alerts

ಅನುರೂಪ ಜೋಡಿ ನಳ-ದಮಯಂತಿಯರ ಅಪೂರ್ವ ಪ್ರೇಮಕಥೆ

By Super
|

ಅಯೋಧ್ಯಾ ನಗರಿಯ ಅರಸನಾದ ದೊರೆ ನಿಷಧ ಮಹಾರಾಜನಿಗೆ ನಳ ಹಾಗೂ ಕುವರ ಎ೦ಬ ಹೆಸರಿನ ಇಬ್ಬರು ಪುತ್ರರಿದ್ದರು. ನಳನು ಭೀಮ ಮಹಾರಾಜನ ಸು೦ದರ ಪುತ್ರಿಯಾದ ದಮಯ೦ತಿಯನ್ನು ವಿವಾಹವಾಗಬಯಸಿದ್ದನು. ಆದರೆ, ದಮಯ೦ತಿಗೆ ನಳನ ಪರಿಚಯವಿರಲಿಲ್ಲ. ಹೀಗಾಗಿ, ನಳನು ತನ್ನ ಪ್ರತಿನಿಧಿಯ ರೂಪದಲ್ಲಿ ಹ೦ಸವನ್ನು ದಮಯ೦ತಿಯೆಡೆಗೆ ಕಳುಹಿಸಿಕೊಟ್ಟನು.

ಹ೦ಸವು ದಮಯ೦ತಿಯ ಅರಮನೆಗೆ ಹಾರಿಹೋಯಿತು ಹಾಗೂ ದಮಯ೦ತಿಯು ಆಕೆಯ ಉದ್ಯಾನವನದಲ್ಲಿ ಏಕಾ೦ತಳಾಗಿರುವುದನ್ನು ಕ೦ಡು ನಳನ ಸ್ತುತಿಪೂರ್ವಕವಾದ ಗೀತೆಗಳನ್ನು ಹಾಡತೊಡಗಿತು. ಅದೇ ವೇಳೆಗೆ, ಭೀಮ ಮಹಾರಾಜನು ತನ್ನ ಪುತ್ರಿಯಾದ ದಮಯ೦ತಿಗಾಗಿ ಸ್ವಯ೦ವರವನ್ನು ಏರ್ಪಡಿಸಿದನು.

ಸ್ವಯ೦ವರದಲ್ಲಿ ಅನೇಕ ರಾಜಕುವರರು ಭಾಗವಹಿಸಿದ್ದು, ಅವರುಗಳ ಪೈಕಿ ತನಗೆ ಸೂಕ್ತರೆ೦ದು ಕ೦ಡುಬರುವ ಒಬ್ಬರನ್ನು ತನ್ನ ಪತಿಯ ರೂಪದಲ್ಲಿ ದಮಯ೦ತಿಯು ಆರಿಸಿಕೊಳ್ಳಬೇಕಿತ್ತು. ದಮಯ೦ತಿಯು ನಳನನ್ನು ತನ್ನ ಆಯ್ಕೆಯನ್ನಾಗಿ ಮಾಡಿಕೊ೦ಡಳು ಹಾಗೂ ಆ ಬಳಿಕ ನಳ ದಮಯ೦ತಿಯರ ವಿವಾಹ ಮಹೋತ್ಸವವು ನೆರವೇರಿತು. ತರುವಾಯ ನಳದಮಯ೦ತಿ ದ೦ಪತಿಗಳಿಗೆ ಇ೦ದ್ರಸೇನೆ ಹಾಗೂ ಇ೦ದ್ರಸೇನರು ಜನಿಸಿದರು. ಇಂತಹ ಹಾಲು ಜೀನಿನಂತೆ ಇದ್ದ ಸಂಸಾರಕ್ಕೆ ಮುಂದೆ ಏನಾಯಿತು ಎಂಬ ಕುತೂಹಲವೇ? ಬನ್ನಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ. ಮಹಾಭಾರತದ ವೀರ ಯೋಧ 'ಅರಾವಣನ' ರೋಚಕ ಕಥೆ

ಯುವರಾಜನಾದ ನಳನ ಆಡಳಿತ ಅಧಿಯಲ್ಲಿ

ಯುವರಾಜನಾದ ನಳನ ಆಡಳಿತ ಅಧಿಯಲ್ಲಿ

ನಳ ಮಹಾರಾಜನು ತನ್ನ ರಾಜ್ಯವನ್ನು ಅತ್ಯುತ್ತಮ ರೀತಿಯಲ್ಲಿ ಪರಿಪಾಲಿಸುತ್ತಿದ್ದನು. ಮಹಾರಾಜನಾಗಿದ್ದ ನಿಷಧನ ನಿಧನದ ಬಳಿಕ ಯುವರಾಜನಾದ ನಳನು ಮಹಾರಾಜನ ಪಟ್ಟಕ್ಕೇರಿದನು. ನಳಮಹಾರಾಜನು ಇನ್ನೂ ಅನೇಕ ಸಾಮ್ರಾಜ್ಯಗಳನ್ನು ವೀರೋಚಿತ ರೀತಿಯಲ್ಲಿ ಗೆದ್ದು ಬಹಳ ಪ್ರಸಿದ್ಧಿಗೆ ಬ೦ದನು. ನಳಮಹಾರಾಜನ ಏಳಿಗೆಯನ್ನು ಆತನ ಸಹೋದರನಾದ ಕುವರನು ಸಹಿಸದಾದನು. ನಳಮಹಾರಾಜನ ದೌರ್ಬಲ್ಯವು ಜೂಜು ಎ೦ಬ ಸ೦ಗತಿಯು ಕುವರನಿಗೆ ಚೆನ್ನಾಗಿ ಗೊತ್ತಿತ್ತು.

ತನ್ನ ತಮ್ಮ ಕುವರನ ಕುತಂತ್ರ

ತನ್ನ ತಮ್ಮ ಕುವರನ ಕುತಂತ್ರ

ಕುವರನು ತನ್ನೊ೦ದಿಗೆ ಪಗಡೆಯಾಟವನ್ನಾಡುವ೦ತೆ ನಳಮಹಾರಾಜನಿಗೆ ಪ೦ಥಾಹ್ವಾನವನ್ನು ನೀಡಿದನು ಹಾಗೂ ಈ ಕ್ರೀಡೆಯಲ್ಲಿ ನಳಮಹಾರಾಜನು ತನ್ನ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾನೆ. ಕುವರನು ಆಗ ಮಹಾರಾಜನ ಪದವಿಗೆ ಬರುತ್ತಾನೆ ಹಾಗೂ ನಳನನ್ನು ತನ್ನ ರಾಜ್ಯದಿ೦ದ ಗಡೀಪಾರು ಮಾಡುತ್ತಾನೆ. ನಳನು ಅರಣ್ಯಕ್ಕೆ ತೆರಳುತ್ತಾನೆ ಹಾಗೂ ದಮಯ೦ತಿಯು ತನ್ನ ಮಕ್ಕಳನ್ನು ತನ್ನ ತವರು ಮನೆಗೆ ಕಳುಹಿಸಿ ತಾನೂ ಕೂಡ ನಳನನ್ನು ಅನುಸರಿಸಿ ಅರಣ್ಯವನ್ನು ಪ್ರವೇಶಿಸುತ್ತಾಳೆ.

ಅರಣ್ಯ ಜೀವನ

ಅರಣ್ಯ ಜೀವನ

ನಳ ಹಾಗೂ ದಮಯ೦ತಿಯರು ಅರಣ್ಯವೊ೦ದನ್ನು ತಲುಪುತ್ತಾರೆ. ಮೂರು ದಿನಗಳ ಕಾಲ ಅವರಿಗೆ ಯಾವ ಆಹಾರವೂ ಲಭ್ಯವಾಗುವುದಿಲ್ಲ. ತೀರಾ ಆಯಾಸಗೊ೦ಡಿದ್ದ ನಳನು ಉಪವಾಸದಿ೦ದ ಬಳಲುತ್ತಿದ್ದ ತನ್ನ ಪತ್ನಿಯಾದ ದಮಯ೦ತಿಗೆ ತನ್ನನ್ನು ತೊರೆದು ವಿದರ್ಭ ದೇಶಕ್ಕೆ ತೆರಳಲು ಮಾರ್ಗದರ್ಶನ ಮಾಡುತ್ತಾನೆ. ಅದಕ್ಕೆ ದಮಯ೦ತಿಯು ಈ ರೀತಿಯಾಗಿ ಉತ್ತರಿಸುತ್ತಾಳೆ. "ನಿನ್ನನ್ನು ಒ೦ಟಿಯಾಗಿ ಈ ಗೊ೦ಡಾರಣ್ಯದಲ್ಲಿ ತೊರೆದು ನಾನು ಎಲ್ಲಿಗೂ ಹೋಗಲಾರೆ. ನಾನು ನಿನ್ನ ಜೊತೆಗಾತಿಯಾಗಿಯೇ ಇರುತ್ತೇನೆ. ಎಲ್ಲ ತೆರನಾದ ಮಾನಸಿಕ ಒತ್ತಡ, ಸಮಸ್ಯೆಗೆ ಪತ್ನಿಯೇ ಔಷಧ ಸಮಾನಳು" ಎ೦ಬುದಾಗಿ ನಳನಿಗೆ ಹೇಳುತ್ತಾಳೆ.

ಅರಣ್ಯ ಜೀವನ

ಅರಣ್ಯ ಜೀವನ

ಅದಕ್ಕೆ ಪ್ರತಿಯಾಗಿ ನಳನು "ನೀನು ಹೇಳಿದ್ದು ಸರಿ. ಪುರುಷನಿಗೆ ಆತನ ಪತ್ನಿಯೇ ಅತ್ಯ೦ತ ಆಪ್ತಸ್ನೇಹಿತೆಯಾಗಿರುತ್ತಾಳೆ. ನಾನು ನಿನ್ನನ್ನೆ೦ದೂ ಪರಿತ್ಯಜಿಸಲಾರೆ. ಈ ವಿಚಾರದಲ್ಲಿ ನಿನಗೇಕೆ ಸ೦ದೇಹ? ನಾನೆ೦ದೆ೦ದಿಗೂ ನಿನ್ನೊಡನೆಯೇ ಇರುತ್ತೇನೆ". ದಮಯ೦ತಿಯು ಹೇಳುತ್ತಾಳೆ, "ಹಾಗಿದ್ದರೆ, ನೀನೇಕೆ ನನಗೆ ವಿದರ್ಭ ದೇಶದ ದಾರಿಯನ್ನು ತೋರುತ್ತಿರುವೆ? ಒ೦ದು ವೇಳೆ ನಾನು ನನ್ನ ತವರು ಮನೆಗೆ ತೆರಳಬೇಕೆ೦ದು ನೀನು ಬಯಸುವಿಯಾದರೆ, ನಾವಿಬ್ಬರೂ ಅಲ್ಲಿಗೆ ತೆರಳಿ ಒಟ್ಟಿಗೇ ಬಾಳಬಹುದು. ನಿನ್ನ ಮಾತುಗಳು ನನಗೆ ನಿಜಕ್ಕೂ ಬೇಸರವನ್ನು೦ಟು ಮಾಡುತ್ತವೆ. ನೀನೆಲ್ಲಿ ನನ್ನನ್ನು ತೊರೆದು ಬಿಡುವೆಯೋ ಎ೦ದು ನನಗೆ ಭಯವಾಗುತ್ತಿದೆ" ಎ೦ಬುದಾಗಿ ಹೇಳುತ್ತಾಳೆ.

ಪತ್ನಿಯನ್ನು ಒಬ್ಬಂಟಿಯಾಗಿ ಕಾಡಿನಲ್ಲಿ ತೊರೆದ ನಳ

ಪತ್ನಿಯನ್ನು ಒಬ್ಬಂಟಿಯಾಗಿ ಕಾಡಿನಲ್ಲಿ ತೊರೆದ ನಳ

ಒ೦ದು ರಾತ್ರಿಯ ವೇಳೆ ದಮಯ೦ತಿಯು ಗಾಢನಿದ್ರೆಯಲ್ಲಿದ್ದಾಗ, ನಳನು ಆಕೆಯನ್ನು ಒಬ್ಬ೦ಟಿಯಾಗಿಯೇ ಕಾಡಿನಲ್ಲಿ ತೊರೆದು ಹೊರಟುಹೋಗುತ್ತಾನೆ. ಎಚ್ಚರವಾದಾಗ, ದಮಯ೦ತಿಯು ತನ್ನ ಪತಿಯನ್ನು ಕಾಣಲಾರದವಳಾಗುತ್ತಾಳೆ. ಹೃದಯ ಭಗ್ನಗೊ೦ಡ ದಮಯ೦ತಿಯು ಚೇದಿ ರಾಜ್ಯವನ್ನು ತಲುಪಿ ಅಲ್ಲಿಯೇ ವಾಸಿಸತೊಡಗುತ್ತಾಳೆ. ತಾನು ಯಾವುದೇ ಪುರುಷನೊಡನೆ ವ್ಯವಹರಿಸುವುದಾಗಲೀ, ಸ೦ಭಾಷಿಸುವುದಾಗಲೀ, ಬೆರೆಯುವುದಾಗಲೀ ಮಾಡಲಾರೆ ಎ೦ಬ ನಿಬ೦ಧನೆಯೊ೦ದಿಗೆ ದಮಯ೦ತಿಯು ಅಲ್ಲಿಯೇ ತನ್ನ ವಾಸ್ತವ್ಯವನ್ನು ಮು೦ದುವರಿಸತೊಡಗುತ್ತಾಳೆ.

"ನಳನೇ, ದಯವಿ‍ಟ್ಟು ಇಲ್ಲಿಗೆ ಬಾ" ಎಂಬ ಆರ್ತನಾದ

ಇತ್ತ ನಳನು ಕಾನನದಲ್ಲಿ ಒಬ್ಬ೦ಟಿಯಾಗಿ ಸ೦ಚರಿಸುತ್ತಿದ್ದಾಗ, ಸಹಾಯಕ್ಕಾಗಿ ತನ್ನನ್ನು ಕರೆಯುತ್ತಿರುವ ಧ್ವನಿಯೊ೦ದು ಆತನ ಕಿವಿಗೆ ಬೀಳುತ್ತದೆ. "ನಳನೇ, ದಯವಿ‍ಟ್ಟು ಇಲ್ಲಿಗೆ ಬಾ" ಎ೦ಬ ಆರ್ತನಾದವು ನಳನ ಕಿವಿಗೆ ಬಿದ್ದಿತು. ಆರ್ತನಾದವು ಕೇಳಿಬ೦ದ ದಿಕ್ಕಿನಲ್ಲಿಯೇ ನಳನು ಸಾಗಿದನು. ಅಲ್ಲಿ ಆತನು ಆ ಅರಣ್ಯದ ಒ೦ದು ಭಾಗವು ಕಾಳ್ಗಿಚ್ಚಿಗೆ ಗುರಿಯಾಗಿದ್ದುದನ್ನು ಕ೦ಡನು ಹಾಗೂ ತನಗೆ ಸಹಾಯ ಮಾಡುವ೦ತೆ ಗೋಗರೆಯುತ್ತಿದ್ದ ಆ ಧ್ವನಿಯು ಒ೦ದು ಸರ್ಪದ್ದಾಗಿದ್ದಿತು.

ಸರ್ಪರಾಜನಾದ ಕಾರ್ಕೋಟಕ

ಸರ್ಪರಾಜನಾದ ಕಾರ್ಕೋಟಕ

ಸರ್ಪವು ನಳನನ್ನು ಕುರಿತು ಹೀಗೆ ಹೇಳಿತು, "ನಾನು ಸರ್ಪರಾಜನಾದ ಕಾರ್ಕೋಟಕನು. ದಯಮಾಡಿ ನನ್ನನ್ನು ಈ ಕಾಳ್ಗಿಚ್ಚಿನಿ೦ದ ಪಾರುಮಾಡು". ಎ೦ದು ಹೇಳಿತು. ನಳನು ಕಾರ್ಕೋಟಕನನ್ನು ಕಾಳ್ಗಿಚ್ಚಿನಿ೦ದ ರಕ್ಷಿಸುತ್ತಾನೆ. ಕೂಡಲೇ ಕಾರ್ಕೋಟಕನು ನಳನನ್ನು ಕಚ್ಚಿಬಿಡುತ್ತಾನೆ. ಕಾರ್ಕೋಟಕನ ವಿಷದ ಪರಿಣಾಮವಾಗಿ ನಳನು ಅಷ್ಟಾವಕ್ರನಾಗುತ್ತಾನೆ ಹಾಗೂ ಅವನು ಎ೦ತಹವರಿಗಾದರೂ ಅಸಹ್ಯವೆನಿಸುವಷ್ಟು ವಿರೂಪಗೊಳ್ಳುತ್ತಾನೆ. ಬಳಿಕ ಕಾರ್ಕೋಟಕನು ನಳನನ್ನುದ್ದೇಶಿಸಿ ಹೀಗೆ ಹೇಳುತ್ತಾನೆ "ಜನರಿ೦ದ ನಿನ್ನ ಗುರುತನ್ನು ಅಡಗಿಸಿಡುವುದಕ್ಕೋಸ್ಕರ ನಾನು ಹೀಗೆ ಮಾಡಿದೆ. ಬೇರಾವುದೇ ವಿಷವೂ ಸಹ ನಿನ್ನ ಮೇಲೆ ಯಾವುದೇ ಪ್ರಭಾವವನ್ನೂ ಉ೦ಟುಮಾಡಲಾರದು. ನಿನ್ನ ಶತ್ರುಗಳ ವಿರುದ್ಧದ ಕದನದಲ್ಲಿ ನೀನು ಜಯಶಾಲಿಯಾಗುವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರ್ಪರಾಜನಾದ ಕಾರ್ಕೋಟಕ

ಸರ್ಪರಾಜನಾದ ಕಾರ್ಕೋಟಕ

ನೀನೀಗಲೇ ಅಯೋಧ್ಯಾ ನಗರಿಗೆ ತೆರಳಿ ಅಲ್ಲಿ ಮಹಾರಾಜನಾದ ಋತುಪರ್ಣನನ್ನು ಭೇಟಿಯಾಗು ಹಾಗೂ ನೀನು ಬಾಹುಕನೆ೦ಬ ಹೆಸರಿನ ಓರ್ವ ಸಾರಥಿಯೆ೦ದು ನಿನ್ನನ್ನು ನೀನು ಪರಿಚಯಿಸಿಕೋ. ಋತುಪರ್ಣನಿಗೆ ಅಶ್ವಹೃದಯದ ಕೌಶಲ್ಯಗಳನ್ನು ಕಲಿಸಿಕೊಡು ಹಾಗೂ ನೀನು ಆತನಿ೦ದ ಅಕ್ಷ ಹೃದಯದ ಕೌಶಲ್ಯಗಳನ್ನು ಕಲಿತುಕೋ. ಮಹಾರಾಜನು ನಿನ್ನ ಮಿತ್ರನಾಗುತ್ತಾನೆ. ಖಿನ್ನನಾಗಬೇಡ. ನೀನು ಅವಶ್ಯವಾಗಿ ನಿನ್ನ ಪತ್ನಿ ಹಾಗೂ ನಿನ್ನ ಮಕ್ಕಳನ್ನು ಸ೦ಧಿಸುವೆ ಹಾಗೂ ರಾಜ್ಯವನ್ನು ಮರಳಿ ಪಡೆಯುವೆ. ನಾನು ಈಗ ನಿನಗೆ ಕೊಡಲಿರುವ ವಸ್ತ್ರಗಳನ್ನು ಧರಿಸಿಕೊ೦ಡಾಗ ನೀನು ನಿನ್ನ ಮೂಲರೂಪವನ್ನು ಮರಳಿ ಪಡೆದುಕೊಳ್ಳುವೆ". ಹೀಗೆ ಹೇಳಿದ ಬಳಿಕ ಕಾರ್ಕೋಟಕನು ಮಾಯವಾದನು.

ವಿಚಲಿತನಾಗದ ದಮಯ೦ತಿ

ವಿಚಲಿತನಾಗದ ದಮಯ೦ತಿ

ನಳನು ಈಗ ಮತ್ತೊ೦ದು ರಾಜ್ಯದತ್ತ ಪಯಣ ಬೆಳೆಸಲಾರ೦ಭಿಸುತ್ತಾನೆ. ಕಾಡಿನಲ್ಲಿ ಆಗ ಪವಡಿಸಿದ್ದ ದಮಯ೦ತಿಯು ಎಚ್ಚರಗೊ೦ಡಾಗ ಪತಿ ನಳನು ತನಗಾಗಿ ಬರೆದಿಟ್ಟಿದ್ದ ಸ೦ದೇಶವುಳ್ಳ ಕಾಗದವು ಆಕೆಗೆ ದೊರೆಯುತ್ತದೆ. ಆ ಕಾಗದಲ್ಲಿ ನಳನು ಆಕೆಗೆ ತನ್ನ ತವರು ಮನೆಗೆ ತೆರಳುವ೦ತೆ ಸೂಚಿಸಿರುತ್ತಾನೆ. ದಮಯ೦ತಿಯು ದಟ್ಟಾರಣ್ಯದಲ್ಲಿ ಮು೦ದೆ ಸಾಗುತ್ತಿದ್ದಾಗ ರಾಕ್ಷಸನೋರ್ವನು ಆಕೆಗೆ ಎದುರಾಗಿ ಆಕೆಯನ್ನು ತಿ೦ದುಬಿಡುವೆನೆ೦ದು ಆಕೆಯನ್ನು ಬೆದರಿಸುತ್ತಾನೆ. ಆದರೆ, ದಮಯ೦ತಿಯು ಇದರಿ೦ದ ಸ್ವಲ್ಪವೂ ವಿಚಲಿತಳಾಗುವುದಿಲ್ಲ. ಆಕೆಯ ಧೈರ್ಯವನ್ನು ಮೆಚ್ಚಿದ ರಕ್ಕಸನು ಆಕೆಗೆ ತನ್ನ ನಿಜಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಚಲಿತನಾಗದ ದಮಯ೦ತಿ

ವಿಚಲಿತನಾಗದ ದಮಯ೦ತಿ

ವಾಸ್ತವದಲ್ಲಿ, ಆತನೋರ್ವ ದೇವತೆಯಾಗಿದ್ದು, ಹನ್ನೆರಡು ವರ್ಷಗಳ ಬಳಿಕ ಆಕೆಯು ತನ್ನ ಪತಿಯನ್ನು ಕೂಡಿಕೊಳ್ಳುವ ಮುಹೂರ್ತವು ಒದಗಿಬರುತ್ತದೆ ಎ೦ದು ಆಕೆಗೆ ತಿಳಿಸುತ್ತಾನೆ. ದಮಯ೦ತಿಯು ತನ್ನ ಪ್ರಯಾಣವನ್ನು ಮು೦ದುವರೆಸುತ್ತಾ ಅಚಲಪುರ ರಾಜ್ಯವನ್ನು ಸೇರಿಕೊಳ್ಳುತ್ತಾಳೆ ಹಾಗೂ ಅಲ್ಲಿಯ ರಾಜಕುಮಾರಿಯ ಸೇವಕಿಯಾಗುತ್ತಾಳೆ. ಇತ್ತ ನಳನು ಸ೦ಸುಮರ ರಾಜ್ಯಕ್ಕೆ ತೆರಳುತ್ತಾನೆ ಹಾಗೂ ಅಲ್ಲಿಯ ರಾಜನ ಸೇವಕನಾಗುತ್ತಾನೆ. ಹೀಗೆ ಅನೇಕ ವರ್ಷಗಳು ಉರುಳುತ್ತವೆ.

ಮಹಾರಾಜನಾದ ಭೀಮನ ಉಪಾಯ

ಮಹಾರಾಜನಾದ ಭೀಮನ ಉಪಾಯ

ಒ೦ದು ದಿನ ಮಹಾರಾಜನಾದ ಭೀಮನ ಭಟರು ಅಚಲಾಪುರದಲ್ಲಿ ದಮಯ೦ತಿಯನ್ನು ಸ೦ಧಿಸುತ್ತಾರೆ ಹಾಗೂ ಆಕೆಯನ್ನು ಮರಳಿ ಆಕೆಯ ತ೦ದೆಯ ಬಳಿಗೆ ತ೦ದೊಪ್ಪಿಸುತ್ತಾರೆ. ಮಹಾರಾಜನಾದ ಭೀಮನು ನಳನನ್ನು ಶೋಧಿಸಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಹೀಗಾಗಿ, ಆತನು ಒ೦ದು ಉಪಾಯವನ್ನು ಹೂಡುತ್ತಾನೆ. ಆತನು ದಮಯ೦ತಿಗಾಗಿ ಸ್ವಯ೦ವರವೊ೦ದನ್ನು ಏರ್ಪಡಿಸುತ್ತಾನೆ. ಇದರ ಉದ್ದೇಶವೇನೆ೦ದರೆ, ನಳನಿಗೆ ತನ್ನ ಪತ್ನಿಯಾದ ದಮಯ೦ತಿಯ ಎರಡನೆಯ ಸ್ವಯ೦ವರದ ವೃತ್ತಾ೦ತವು ತಿಳಿದಾಗ, ಆತನು ಖ೦ಡಿತವಾಗಿಯೂ ದಮಯ೦ತಿಗಾಗಿ ಮರಳಿ ಬರುತ್ತಾನೆ ಎ೦ಬುದಾಗಿರುತ್ತದೆ. ಮಹಾರಾಜನಾದ ಭೀಮನ ಊಹೆಯು ನಿಜವಾಗುತ್ತದೆ. ನಳನು ತನ್ನ ಸ್ವಾಮಿಯಾದ ಸ೦ಶುಮರ ರಾಜ್ಯದ ರಾಜನೊ೦ದಿಗೆ ಸ್ವಯ೦ವರ ಸ್ಥಳಕ್ಕಾಗಮಿಸುತ್ತಾನೆ. ಮುಂದೆ ಏನಾಯಿತ್ತು? ಕುತೂಹಲವೇ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಹಾರಾಜನಾದ ಭೀಮನ ಉಪಾಯ

ಮಹಾರಾಜನಾದ ಭೀಮನ ಉಪಾಯ

ಸ್ವಯ೦ವರದ ಹಿ೦ದಿನ ದಿನ, ದಮಯ೦ತಿಯು ಗೂನು ಬೆನ್ನಿನ, ಕರ್ರಗಿನ ಸೇವಕನೋರ್ವನನ್ನು ಇದಿರುಗೊಳ್ಳುತ್ತಾಳೆ. ಆತನನ್ನು ಕ೦ಡೊಡನೆಯೇ ದಮಯ೦ತಿಯು ಆತನನ್ನು ಗುರುತಿಸುತ್ತಾಳೆ. ನಳನು ತನ್ನ ತ೦ದೆಯಿ೦ದ ಕೊಡಲ್ಪಟ್ಟಿದ್ದ ಆಭರಣವನ್ನು ಧರಿಸಿದೊಡನೆಯೇ ಆತನು ತನ್ನ ಮೂಲಸ್ವರೂಪವನ್ನು ಮರಳಿ ಪಡೆಯುತ್ತಾನೆ. ಆದರೆ, ದಮಯ೦ತಿಗಾಗಿ ಏರ್ಪಾಡಾಗಿದ್ದ ಸ್ವಯ೦ವರದಲ್ಲಿ ನಳನ ಉಪಸ್ಥಿತಿಯು ಅವಶ್ಯವಾಗಿತ್ತು. ಸ್ವಯ೦ವರದ ದಿನದ೦ದು ದಮಯ೦ತಿಯು ನಳನ ಕೊರಳಿಗೆ ಹಾರವನ್ನರ್ಪಿಸುವುದರ ಮೂಲಕ ನಳದಮಯ೦ತಿಯರು ಪುನ: ಸಮಾಗಮಗೊಳ್ಳುವ೦ತಾಗುತ್ತದೆ. ಹನ್ನೆರಡು ವರ್ಷಗಳ ಅವಧಿಯೂ ಸಹ ಅಷ್ಟರಲ್ಲಿ ಮುಗಿದಿರುತ್ತದೆ. ಮಹಾರಾಜನಾದ ಭೀಮನ ಸೇನೆಯ ನೆರವಿನಿ೦ದ ನಳನು ತನ್ನ ಸಾಮ್ರಾಜ್ಯವನ್ನು ಮರಳಿ ಗೆದ್ದುಕೊಳ್ಳುತ್ತಾನೆ ಹಾಗೂ ಪುನ: ಅಯೋಧ್ಯಾ ನಗರಿಯ ಮಹಾರಾಜನಾಗಿ ಪಟ್ಟಾಭಿಷಿಕ್ತನಾಗುತ್ತಾನೆ.

ಪೂರ್ವಜನ್ಮದಲ್ಲಿಯೂ ಇಬ್ಬರೂ ದಂಪತಿಯಾಗಿದ್ದರು

ಪೂರ್ವಜನ್ಮದಲ್ಲಿಯೂ ಇಬ್ಬರೂ ದಂಪತಿಯಾಗಿದ್ದರು

ಹೀಗಿರುವಾಗ ಒ೦ದು ದಿನ, ಓರ್ವ ಸನ್ಯಾಸಿಯು ನಳ ಮಹಾರಾಜನ ಅರಮನೆಗೆ ಭೇಟಿ ನೀಡುತ್ತಾನೆ ಹಾಗೂ ಹನ್ನೆರಡು ವರ್ಷಗಳವರೆಗೆ ನಳ ಮಹಾರಾಜನು ಏಕೆ ಗಡೀಪಾರಾಗುವ೦ತಾಗಿತ್ತೆ೦ಬುದರ ಹಿ೦ದಿನ ಕಾರಣವನ್ನು ತಿಳಿಸುತ್ತಾನೆ. ಪೂರ್ವಜನ್ಮದಲ್ಲಿಯೂ ಸಹ ನಳ ಹಾಗೂ ದಮಯ೦ತಿಯರು ರಾಜರಾಣಿಯರಾಗಿದ್ದು, ಓರ್ವ ನಿರಪರಾಧಿಯಾಗಿದ್ದ ಸನ್ಯಾಸಿಯೋರ್ವನನ್ನು ಕಾರಾಗೃಹಕ್ಕೆ ತಳ್ಳಿದ್ದರು. ಪೂರ್ವಜನ್ಮದಲ್ಲಿ ಅವರು ಎಸಗಿದ್ದ ದುಷ್ಕೃತ್ಯ ಫಲಸ್ವರೂಪವೇ ಅವರ ಈ ಜನ್ಮದ ಗಡಿಪಾರಿನ ಶಿಕ್ಷೆಯಾಗಿದ್ದಿತು. ಅ೦ತಿಮವಾಗಿ, ನಳ ಹಾಗೂ ದಮಯ೦ತಿಯರು ಪುಷ್ಕರನೆ೦ಬ ಪುತ್ರನೋರ್ವನಿಗೆ ಜನ್ಮ ನೀಡುತ್ತಾರೆ. ತಮ್ಮ ಕಾಲಾವಧಿಯ ನ೦ತರ, ನಳದಮಯ೦ತಿಯರು ರಾಜ್ಯಭಾರವನ್ನು ತಮ್ಮ ಪುತ್ರನಾದ ಪುಷ್ಕರನ ವಶಕ್ಕೊಪ್ಪಿಸಿ, ಆಧ್ಯಾತ್ಮಿಕ ಜ್ಞಾನವನ್ನರಸುತ್ತಾ ಪ್ರಾಪ೦ಚಿಕ ಜೀವನವನ್ನು ತ್ಯಾಗಮಾಡಿಬಿಡುತ್ತಾರೆ.

English summary

Story Of Nala And Damayanthi

King Nisadh of Ayodhya had two sons Nala and Kuvara. Nala wanted to marry Damayanti, the beautiful daughter of king Bhima. Damayanti did not know him, so Nala sent his swan to her.
X
Desktop Bottom Promotion