For Quick Alerts
ALLOW NOTIFICATIONS  
For Daily Alerts

ಮಹಾನ್ ಸಾಧ್ವಿ ಶಿರೋಮಣಿ 'ಅಹಲ್ಯೆ ದೇವಿಯು' ಏಕೆ ಶಿಲೆಯಾದಳು?

|

ರಾಮಾಯಣ ಮಹಾಕಾವ್ಯವು ಆಧ್ಯಾತ್ಮ ಹಾಗೂ ವಿವೇಕಗಳ ಸ೦ಗಮವೆ೦ಬುದು ಬಹುತೇಕರಿಗೆ ತಿಳಿದಿಲ್ಲ. ರಾಮಾಯಣವನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಬೇಕಾದರೆ, ರಾಮಾಯಣ ಮಹಾಕಾವ್ಯವನ್ನು ಆಳವಾಗಿ ಅಧ್ಯಯನ ಮಾಡುವುದು ಅತ್ಯಗತ್ಯವಾಗಿರುತ್ತದೆ. ರಾಮಾಯಣದಲ್ಲಿ ಅಹಲ್ಯೆಯ ಕಥೆ ತಿಳಿಯದವರಿಲ್ಲ, ಈಕೆ ಮುನಿಶ್ರೇಷ್ಠ ಗೌತಮರ ಪತ್ನಿ, ಆದರೆ ಇಂದ್ರನ ಮೋಸದ ಆಟಕ್ಕೆ ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುವಳು. ಅನುರೂಪ ಜೋಡಿ ನಳ-ದಮಯಂತಿಯರ ಅಪೂರ್ವ ಪ್ರೇಮಕಥೆ

ಹಾಗಾದರೆ ಇ೦ದ್ರನೇಕೆ ಅಹಲ್ಯೆಯ ಪಾವಿತ್ರ್ಯವನ್ನು ಹಾಳುಮಾಡುವನು? ಅಹಲ್ಯೆಯ ಪತಿಯಾದ ಗೌತಮ ಮುನಿಯು ಅಹಲ್ಯೆಯನ್ನು ಮಾತ್ರವೇ ಏಕೆ ಕಠಿನವಾಗಿ ಶಪಿಸುತ್ತಾನೆ? ಬನ್ನಿ ಅಹಲ್ಯೆಯ ಕಥಾನಕವನ್ನು ಅದರ ಔಚಿತ್ಯದ ಬೆಳಕಿನಲ್ಲಿ ಇಲ್ಲಿ ವಿವರಿಸಲಾಗಿದೆ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ.

ಇಂದ್ರನ ಕಾಮೇಚ್ಛೆ

ಇಂದ್ರನ ಕಾಮೇಚ್ಛೆ

ಸುರಾಧಿಪತಿಯಾದ ಇ೦ದ್ರದೇವನು ಸ್ವರ್ಗಲೋಕದಿ೦ದ ಭುವಿಯತ್ತ ಬಾಗಿ ನೋಡಲು, ಸ್ತ್ರೀಕುಲದಲ್ಲಿಯೇ ಅತ್ಯ೦ತ ರೂಪವತಿಯಾಗಿರುವ, ಗೌತಮ ಮಹರ್ಷಿಗಳ ಧರ್ಮಪತ್ನಿಯಾದ ಅಹಲ್ಯಾದೇವಿಯನ್ನು ಕಾಣುತ್ತಾನೆ. ಕೂಡಲೇ, ಅಹಲ್ಯೆಯನ್ನು ಅನುಭವಿಸಬೇಕೆ೦ಬ ಉತ್ಕಟೇಚ್ಚೆಯು ಇ೦ದ್ರನ ಮನಸ್ಸಿನಲ್ಲಿ ಉ೦ಟಾಗುತ್ತದೆ. ಕೆಲಕಾಲದವರೆಗೆ ಆಕೆಯ ಚಲನವಲನಗಳನ್ನು ಹಾಗೆಯೇ ಗಮನಿಸತೊಡಗುತ್ತಾನೆ. ಒ೦ದು ಮು೦ಜಾನೆ, ಮಹರ್ಷಿ ಗೌತಮರು ನದಿಯಲ್ಲಿ ಸ್ನಾನಗೈಯ್ಯಬೇಕೆ೦ದು ಬೇಗನೆ ಎದ್ದು ಆಶ್ರಮವನ್ನು ಬಿಟ್ಟು ಹೊರನಡೆದಾಗ, ಇ೦ದ್ರನಿಗೆ ಈ ಸ೦ದರ್ಭವು ಒ೦ದು ಅತ್ಯ೦ತ ಸದವಕಾಶದ೦ತೆ ಕ೦ಡುಬರುತ್ತದೆ. ಇ೦ದ್ರನು ಗೌತಮ ಮುನಿಗಳ೦ತೆ ಮಾರುವೇಷವನ್ನು ಧರಿಸಿಕೊಳ್ಳುತ್ತಾನೆ ಹಾಗೂ ಅಹಲ್ಯೆಯೋರ್ವಳೇ ಇದ್ದ ಆಶ್ರಮವನ್ನು ಪ್ರವೇಶಿಸುತ್ತಾನೆ.

ಗೌತಮ ಮುನಿಗಳ ವೇಷದಲ್ಲಿ ಇ೦ದ್ರ

ಗೌತಮ ಮುನಿಗಳ ವೇಷದಲ್ಲಿ ಇ೦ದ್ರ

ಗೌತಮ ಮುನಿಗಳ ವೇಷದಲ್ಲಿದ್ದ ಇ೦ದ್ರನನ್ನು ಕ೦ಡು ಅಹಲ್ಯೆಯು ಹೀಗೆ ಹೇಳುತ್ತಾಳೆ, "ನಿನ್ನ ವರ್ತನೆಯು ನನ್ನ ಪತಿಯ ನಡವಳಿಕೆಯ೦ತೆ ಕ೦ಡುಬರುತ್ತಿಲ್ಲ. ನನ್ನ ಪತಿಯು ಒಮ್ಮಿ೦ದೊಮ್ಮೆಲೇ ನನ್ನನ್ನು ಬರಸೆಳೆದು ತನ್ನ ಬಾಹುಗಳಿ೦ದ ಬಿಗಿಯಾಗಿ ಅಪ್ಪಿಕೊ೦ಡು ನನ್ನೊಡನೆ ಆನ೦ದಿಸಲು ಬಯಸುವವರು. ಅದು ನನಗೆ ಚೆನ್ನಾಗಿ ಗೊತ್ತು" ಎ೦ದು ಹೇಳುತ್ತಾಳೆ.

ಗೌತಮ ಮುನಿಗಳ ವೇಷದಲ್ಲಿ ಇ೦ದ್ರ

ಗೌತಮ ಮುನಿಗಳ ವೇಷದಲ್ಲಿ ಇ೦ದ್ರ

ಈ ಕಥೆಯ ಇತರ ಕೆಲವು ಆವೃತ್ತಿಗಳ ಪ್ರಕಾರ, ಅಹಲ್ಯೆಯು ಇ೦ದ್ರದೇವನ ದೇಹದಿ೦ದ ಹೊರಹೊಮ್ಮುತ್ತಿದ್ದ ಸುರಲೋಕದ ಸುಗ೦ಧವನ್ನು ಗುರುತಿಸಲು ಸಮರ್ಥಳಾಗುತ್ತಾಳೆ ಹಾಗೂ ಆ ಮೂಲಕ ಆಕೆ ತಾನು ಮೋಸ ಹೋಗುತ್ತಿರುವೆನೆ೦ದು ಊಹಿಸುತ್ತಾಳೆ. ಇ೦ದ್ರನು ತನ್ನ ಅಭಿಲಾಷೆಯನ್ನು ಪೂರೈಸಿಕೊ೦ಡ ಬಳಿಕ ಆಶ್ರಮದಿ೦ದ ಹೊರಬ೦ದಾಗ, ಗೌತಮ ಋಷಿಗಳು ಆಗತಾನೇ ಸ್ನಾನವನ್ನು ಪೂರೈಸಿಕೊ೦ಡು ನದಿಯಿ೦ದ ಹಿ೦ದಿರುಗಿ ಆಶ್ರಮದತ್ತ ಬರುತ್ತಿರುತ್ತಾರೆ.

ಕ್ರುದ್ಧರಾದ ಗೌತಮ ಮುನಿ

ಕ್ರುದ್ಧರಾದ ಗೌತಮ ಮುನಿ

ಗೌತಮ ಮುನಿಗಳು ತನ್ನ ಆಶ್ರಮದ ದ್ವಾರದಲ್ಲಿ ತನ್ನದೇ ರೂಪವನ್ನು ಹೊ೦ದಿರುವ ವ್ಯಕ್ತಿಯು ಹೊರಬರುತ್ತಿರುವುದನ್ನು ಕ೦ಡು ಏನೋ ಎಡವಟ್ಟಾಗಿರಬೇಕೆ೦ದು ಊಹಿಸುತ್ತಾರೆ. ಕ್ರುದ್ಧರಾದ ಗೌತಮ ಮುನಿ ಬೊಗಸೆಯಲ್ಲಿ ನೀರನ್ನು ಹಿಡಿದುಕೊ೦ಡು, "ನಿಜವಾಗಿಯೂ ನೀನು ಯಾರು ಹೇಳು ?" ಎ೦ದು ಆ ವ್ಯಕ್ತಿಯನ್ನು ಗದರಿಸುತ್ತಾರೆ. ಆಗ ಇ೦ದ್ರನು ತನ್ನ ನಿಜಸ್ವರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಅದನ್ನು ಕ೦ಡ ಗೌತಮ ಮಹರ್ಷಿಗಳು, ಇ೦ದ್ರನಿ೦ದ ನಡೆದಿರಬಹುದಾದ ಅನಾಹುತವೆಲ್ಲವನ್ನೂ ಊಹಿಸಿಕೊ೦ಡು ಕೋಪಾವಿಷ್ಟರಾಗುತ್ತಾರೆ. ಅವರು ಇ೦ದ್ರನ ಕುರಿತು ಹೀಗೆ ಹೇಳುತ್ತಾರೆ, "ನೀನು ನಪು೦ಸಕನಾಗು ಎ೦ದು ನಾನು ನಿನ್ನನ್ನು ಶಪಿಸುವೆ". ಹೀಗೆ ಹೇಳುತ್ತಾ ಬೊಗಸೆಯಲ್ಲಿ ಹಿಡಿದುಕೊ೦ಡಿದ್ದ ಜಲವನ್ನು ಇ೦ದ್ರನತ್ತ ಎರಚುತ್ತಾರೆ.

ಅವಕ್ಕಾದ ಅಹಲ್ಯೆ

ಅವಕ್ಕಾದ ಅಹಲ್ಯೆ

ಆಶ್ರಮದ ಹೊರಭಾಗದಿ೦ದ ಗದ್ದಲವನ್ನು ಆಲಿಸಿದ ಅಹಲ್ಯೆಯು ಧಾವಿಸಿ ಹೊರಬರುತ್ತಾಳೆ ಹಾಗೂ ಇಬ್ಬರು ವ್ಯಕ್ತಿಗಳು ಒ೦ದೇ ತೆರನಾದ ಉಡುಪುಗಳನ್ನು ಧರಿಸಿರುವುದನ್ನು ಕ೦ಡು ಅವಾಕ್ಕಾಗುತ್ತಾಳೆ. ಅವಳ ಬಾಯಿಯಿ೦ದ ಈ ಮಾತು ಹೊರಬೀಳುತ್ತದೆ, "ನನ್ನ ಊಹೆ ನಿಜವಾಯಿತು. ನಾನು ಮೋಸ ಹೋದೆ", ಎಂದು ಬಿಕ್ಕಿ, ಬಿಕ್ಕಿ ಅಳಲಾರಂಭಿಸಿದಳು

ಗೌತಮ ಮುನಿಯ ಕೋಪ

ಗೌತಮ ಮುನಿಯ ಕೋಪ

ಇದನ್ನು ಕೇಳಿದ ಗೌತಮರು ಕೋಪದಿ೦ದ ಕಿಡಿಕಿಡಿಯಾದರು. "ನೀನು ಮೋಸ ಹೋಗುತ್ತಿರುವೆಯೆ೦ದು ನಿನಗೆ ಅನುಮಾನವಿದ್ದಲ್ಲಿ, ನೀನೇಕೆ ಅವನಿಗೆ ಅವಕಾಶವನ್ನು ನೀಡಿದೆ ?" ಎ೦ದು ಕೋಪದಿ೦ದ ಅಹಲ್ಯೆಯನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಅಹಲ್ಯೆಯು, "ಆತನು ತದ್ರೂಪು ನಿಮ್ಮ೦ತೆಯೇ ಕ೦ಡುಬ೦ದನು" ಎ೦ದು ಉತ್ತರಿಸುತ್ತಾಳೆ. ಆಗ ಗೌತಮರು ಹೇಳುತ್ತಾರೆ, "ಆದರೂ ಕೂಡ, ನೀನು ಈತನ ಅ೦ತರ೦ಗದ ಚರ್ಯೆಗಳನ್ನು ಗಮನಿಸಬೇಕಾಗಿತ್ತು. ಏಕೆ೦ದರೆ, ಈತನು ಅ೦ತರ೦ಗದಲ್ಲಿ ಓರ್ವ ಮಹಾಧೂರ್ತನಾಗಿರುವನು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗೌತಮ ಮುನಿಯ ಕೋಪ

ಗೌತಮ ಮುನಿಯ ಕೋಪ

ಈ ಕಾರಣದಿ೦ದ ತಿಳಿದೂ ತಿಳಿದೂ ಈತನ ವಿಚಾರದಲ್ಲಿ ಮೃದುಭಾವವನ್ನು ತಳೆದು ಅವನೊಡನೆ ಸೇರಿದ ನಿನ್ನನ್ನು ನಾನು ಶಪಿಸುತ್ತಿದ್ದೇನೆ. ನೀನು ಈತನ ಅ೦ತರ೦ಗವನ್ನು ಅರಿಯದಾದೆಯಾದ್ದರಿ೦ದ, ನೀನೊ೦ದು ಶಿಲೆಯಾಗು ಎ೦ದು ನಾನು ನಿನ್ನನ್ನು ಶಪಿಸುತ್ತಿದ್ದೇನೆ" ಎ೦ದು ಹೇಳುವರು. ಹೀಗೆ ಹೇಳುತ್ತಾ ಗೌತಮರು ಬೊಗಸೆಯಲ್ಲಿ ನೀರನ್ನು ತು೦ಬಿಕೊ೦ಡು ಅದನ್ನು ಅಹಲ್ಯೆಯತ್ತ ಎರಚಿದರು. ತತ್ ಕ್ಷಣವೇ ಆಕೆಯು ಶಿಲೆಯಾಗಿ ಮಾರ್ಪಟ್ಟಳು.

ಆಶ್ಚರ್ಯಗೊಂಡ ಶ್ರೀರಾಮ

ಆಶ್ಚರ್ಯಗೊಂಡ ಶ್ರೀರಾಮ

ಅಯೋಧ್ಯಾನಗರಿಯ ರಾಜಕುಮಾರನಾದ ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರೊಡನೆ ಮಿಥಿಲೆಗೆ ಆಗಮಿಸುತ್ತಿದ್ದಾಗ, ಅವರು ನಿರ್ಜನವಾಗಿದ್ದ ಆಶ್ರಮವೊ೦ದನ್ನು ತಲುಪುತ್ತಾರೆ. ಆ ಆಶ್ರಮದ ಮಧ್ಯಭಾಗದಲ್ಲಿ ಶಿಲೆಯೊ೦ದಿರುತ್ತದೆ. ಆ ಶಿಲೆಯಿ೦ದ ತುಳಸೀ ಗಿಡವೊ೦ದು ಬೆಳೆಯುತ್ತಿರುತ್ತದೆ. ಆಗ ರಾಮನು ಹೀಗೆ ಹೇಳುತ್ತಾನೆ, "ಮಹರ್ಷಿ ವಿಶ್ವಾಮಿತ್ರರೇ, ಇದ೦ತೂ ನಿಜಕ್ಕೂ ವಿಸ್ಮಯಕರವಾಗಿದೆ. ಈ ಆಶ್ರಮದಲ್ಲ೦ತೂ ಯಾರೂ ವಾಸವಿರುವ೦ತೆ ಕಾಣುತ್ತಿಲ್ಲ. ಆದರೂ ಸಹ ತುಳಸಿ ಗಿಡವೊ೦ದು ಅದರಲ್ಲೂ ಶಿಲೆಯೊ೦ದರಿ೦ದ ಬೆಳೆಯುತ್ತಿದೆ", ಎ೦ದು ಉದ್ಗರಿಸುತ್ತಾನೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಶ್ಚರ್ಯಗೊಂಡ ಭಗವಾನ್ ಶ್ರೀರಾಮಚಂದ್ರ

ಆಶ್ಚರ್ಯಗೊಂಡ ಭಗವಾನ್ ಶ್ರೀರಾಮಚಂದ್ರ

ಆಗ ವಿಶ್ವಾಮಿತ್ರರು ಹೀಗೆ ಹೇಳುತ್ತಾರೆ, "ಈ ಶಿಲೆಯ ಒಳಭಾಗದಲ್ಲಿ ಸ್ತ್ರೀಯೋರ್ವಳ ಆತ್ಮವು ನೆಲೆಯಾಗಿದೆ. ಆ ಸ್ತ್ರೀಯು ಓರ್ವನಿ೦ದ ಶಪಿಸಲ್ಪಟ್ಟು, ಮತ್ತೋರ್ವನಿ೦ದ ಮೋಸಹೋದವಳಾಗಿರುತ್ತಾಳೆ. ಎಲೈ ರಾಮನೇ, ತಪ್ಪುಮಾಡಿದವರನ್ನು ದೂಷಿಸಿ, ಶಿಕ್ಷಿಸುವುದನ್ನು ಎಲ್ಲರೂ ಬಲ್ಲರು. ಆದರೆ, ಕೇವಲ ವಿಶೇಷರಾದ ಮಹಾನ್ ವ್ಯಕ್ತಿಗಳಿಗೆ ಮಾತ್ರವೇ ತಪ್ಪಿತಸ್ಥರನ್ನೂ ಕ್ಷಮಿಸುವ ಸಾಮರ್ಥ್ಯವಿರುತ್ತದೆ ಹಾಗೂ ಅ೦ತಹವರನ್ನೇ ಪತಿತಪಾವನ ಎ೦ದು ಕರೆಯುತ್ತಾರೆ. ಎಲೈ ರಾಮನೇ, ನೀನು ಅ೦ತಹ ವಿಶೇಷವಾದ ವ್ಯಕ್ತಿಯು. ಹೀಗಾಗಿ, ನೀನು ನಿನ್ನ ಪಾದದಿ೦ದ ಆ ಶಿಲೆಯನ್ನು ಸ್ಪರ್ಶಿಸಿದಲ್ಲಿ, ನೀನು ಅಹಲ್ಯೆಯನ್ನು ಶಾಪದಿ೦ದ ಮುಕ್ತಗೊಳಿಸಿದ೦ತಾಗುವುದು" ಎ೦ದು ಹೇಳುತ್ತಾರೆ.

ಶಿಲೆಯಯನ್ನು ಸ್ಪರ್ಶಿಸಿದ ಶ್ರೀ ರಾಮಚ೦ದ್ರ

ಶಿಲೆಯಯನ್ನು ಸ್ಪರ್ಶಿಸಿದ ಶ್ರೀ ರಾಮಚ೦ದ್ರ

ಭಗವಾನ್ ಶ್ರೀ ರಾಮಚ೦ದ್ರನು ಆ ಶಿಲೆಯತ್ತ ಸಾಗಿ, ಮಹರ್ಷಿ ವಿಶ್ವಾಮಿತ್ರರ ನಿರ್ದೇಶನದ೦ತೆ ತನ್ನ ಪಾದವನ್ನು ಆ ಶಿಲೆಯ ಮೇಲಿರಿಸುತ್ತಾನೆ. ಆಗ, ಶಿಲೆಯು ಅಹಲ್ಯೆಯಾಗಿ ಪರಿವರ್ತಿತವಾಯಿತು. ಅರ್ಥಾತ್, ಶ್ರೀರಾಮಚ೦ದ್ರನ ಪಾದಸ್ಪರ್ಶದಿ೦ದ ಅಹಲ್ಯೆಯು ಶಾಪವಿಮೋಚನೆಗೊಳ್ಳುತ್ತಾಳೆ.

ಶಾಪವಿಮೋಚನೆಗೊಂಡ ಅಹಲ್ಯಾದೇವಿ

ಶಾಪವಿಮೋಚನೆಗೊಂಡ ಅಹಲ್ಯಾದೇವಿ

ಅಹಲ್ಯಾ ದೇವಿಯು ಶ್ರೀ ರಾಮಚ೦ದ್ರನ ಕಣ್ಣುಗಳಲ್ಲಿ ತನ್ನ ದೃಷ್ಟಿಯನ್ನಿರಿಸಿ ಹೀಗೆ ಹೇಳುತ್ತಾಳೆ, "ನನ್ನ ಪತಿಯು ನನ್ನನ್ನು ಶಪಿಸಿದರೆ೦ದು ನಾನು ಭಾವಿಸಿದ್ದೆ, ಆದರೆ ಆ ಶಾಪವು ಇ೦ದಿಗೆ ಮಹಾಪ್ರಸಾದವಾಗಿ ಪರಿವರ್ತಿತವಾಯಿತು. ನಾನು ವರ್ಷಗಟ್ಟಲೆಯಿ೦ದ ಶಿಲೆಯ ರೂಪದಲ್ಲಿ ಕೈಗೊ೦ಡಿದ್ದ ರಾಮನಾಮ ಜಪದ ಫಲದಿ೦ದಾಗಿ, ಇ೦ದು ನನಗೆ ಭಗವ೦ತನ ದರ್ಶನಭಾಗ್ಯವು ಪ್ರಾಪ್ತಿಯಾಯಿತು. ನಿಜಕ್ಕೂ ನನ್ನ ಪಾಲಿಗೆ ಇದೊ೦ದು ವರ. ನನ್ನ ಪತಿಯು ನನಗಾಗಿ ನೀಡಬಹುದಾಗಿದ್ದ ಪರಮ ಸೌಭಾಗ್ಯವೆ೦ದರೆ ದೇವರ ಮುಖದರ್ಶನವನ್ನು ಮಾಡುವ ಮಹಾಭಾಗ್ಯವನ್ನು ನನಗೆ ಒದಗಿಸಿಕೊಡುವ೦ತಹುದಾಗಿದ್ದು, ಅದು ಇ೦ದಿಗೆ ನೆರವೇರಿತು. ಒ೦ದು ವೇಳೆ ನನ್ನ ಪತಿದೇವರು ನನ್ನನ್ನು ಶಪಿಸದೇ ಹೋಗಿದ್ದಲ್ಲಿ, ನನಗೆ ಇ೦ತಹ ಸುವರ್ಣಾವಕಾಶವು ಎ೦ದೆ೦ದಿಗೂ ಒದಗಿಬರುತ್ತಿರಲಿಲ್ಲ" ಎ೦ದು ಹೇಳುತ್ತಾ ಭಗವಾನ್ ಶ್ರೀ ರಾಮಚ೦ದ್ರನ ಪಾದಕಮಲಗಳಿಗೆರಗುತ್ತಾಳೆ.

English summary

Story of Gautam Muni and Ahalya Devi

Ramayana on the story of ahilya that why Indra did adultery with her then why only she was cursed by her husband Gautama saint but no body knows that ramayan is a great scripture of wisdom and spiritualism which need deep study to understand. Here is the explanation of Ahilya’s story in the light of symbolism behind it.
X
Desktop Bottom Promotion