For Quick Alerts
ALLOW NOTIFICATIONS  
For Daily Alerts

ಆಂಜನೇಯನಿಗೆ ಹನುಮಾನ್ ಎಂಬ ಹೆಸರು ಬರಲು ಕಾರಣವೇನು?

ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹನುಮಂತನು ತಮ್ಮ ವಾನರ ಸೇನೆಯಿಂದ ಪರಾಕ್ರಮಗಳಿಂದ ಯುದ್ಧದ ಸಮಯದಲ್ಲಿ ಹೆಚ್ಚು ಸ್ಮರಣೀಯರಾಗಿದ್ದಾರೆ.ಹಿಂದೂ ಮಹಾನ್ ಗ್ರಂಥಗಳಾದ ಮಹಾಭಾರತ-ಅಗ್ನಿ ಪುರಾಣದಲ್ಲೂ ಹನುಮಂತನ ಹೊಗಳಿಕೆಯನ್ನು ಮಾಡಲಾಗಿದೆ

By Jaya Subramanya
|

ರಾಮ ಭಕ್ತ ಹನುಮಂತನನ್ನು ಬಜರಂಗಿ ಆಂಜನೇಯ ಮುಂತಾದ ಹೆಸರುಗಳಿಂದ ಪ್ರಪಂಚದಾದ್ಯಂತ ಭಕ್ತರು ಪೂಜಿಸುತ್ತಾರೆ. ಧೈರ್ಯ, ಸ್ಥೈರ್ಯಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಆಂಜನೇಯ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾದವರು. ರಾಮ ಸೀತೆಯರನ್ನು ತಮ್ಮ ಹೃದಯದಲ್ಲಿಟ್ಟು ಪೂಜಿಸುವಷ್ಟು ಕಟ್ಟಾ ಭಕ್ತರಾಗಿದ್ದಾರೆ. ಹನುಮಂತನಿಗೆ ತನ್ನ ಸಾಹಸಗಳಿಂದ ಹೋದಲ್ಲೆಲ್ಲಾ ಹಲವಾರು ಹೆಸರುಗಳಿವೆ. ಮಾರುತಿ, ಪವನ ಪುತ್ರ, ಆಂಜನೀಪುತ್ರ ಹೀಗೆ ಭಕ್ತರ ಭಕ್ತಿಗೆ ಅನುಗುಣವಾಗಿ ಕರೆಯಲ್ಪಟ್ಟ ಹೆಸರುಗಳಿಂದ ಹನುಮಾನ್ ಪ್ರಸಿದ್ಧರು.

Lord Hanuman

ರಾಮಾಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹನುಮಂತನು ತಮ್ಮ ವಾನರ ಸೇನೆಯಿಂದ ಪರಾಕ್ರಮಗಳಿಂದ ಯುದ್ಧದ ಸಮಯದಲ್ಲಿ ಹೆಚ್ಚು ಸ್ಮರಣೀಯರಾಗಿದ್ದಾರೆ. ಹಿಂದೂ ಮಹಾನ್ ಗ್ರಂಥಗಳಾದ ಮಹಾಭಾರತ ಮತ್ತು ಅಗ್ನಿ ಪುರಾಣದಲ್ಲೂ ಹನುಮಂತನ ಹೊಗಳಿಕೆಯನ್ನು ಮಾಡಲಾಗಿದೆ.

ಕೋತಿಯ ಮುಖವನ್ನು ಹೊಂದಿರುವ ಹನುಮಾನ್ ವೃತ್ತಾಕಾರದ ಕೆಂಪು ಮುಖದಿಂದ ಜನಜನಿತರು. ಬಿಳಿಯ ಹಲ್ಲುಗಳು, ಅಶೋಕ ಹೂವುಗಳನ್ನು ಪ್ರತಿನಿಧಿಸುವ ಕೂದಲು ಮತ್ತು ಉದ್ದನೆಯ ಬಾಲ ಹನಮಂತನನ್ನು ಬಿಂಬಿಸುವ ಗುರುತುಗಳಾಗಿವೆ. ಹನುಮಾನ್ ನಮ್ಮ ನಡುವೆ ಇದ್ದಾನೆಯೇ? ಇಲ್ಲಿದೆ ಪುರಾವೆಗಳು!

ಪರ್ವತದಂತೆ ಬೃಹದಾಕಾರವಾಗಿ ಬೆಳೆಯುವ ಶಕ್ತಿಯನ್ನು ಪಡೆದುಕೊಂಡಿರುವ ಹನುಮಂತನಿಗೆ ತಮ್ಮ ಈ ಶಕ್ತಿಯ ಬಗ್ಗೆ ಸ್ವಯಂ ಅರಿವಿಲ್ಲ. ಸುಗ್ರೀವ ಹನುಂತನ ಈ ಶಕ್ತಿಯನ್ನು ರಾಮಾಯಣ ಸಮಯದಲ್ಲಿ ಹೇಳಿದಾಗ ಬೃಹದಾಕಾರವಾಗಿ ಬೆಳೆದು ವಾನರ ಶಕ್ತಿಯನ್ನು ಇಮ್ಮಡಿಸಿದರು. ಇಂದಿನ ಲೇಖನದಲ್ಲಿ ಹನುಂತನ ಕುರಿತಾದ ಇನ್ನಷ್ಟು ಪರಾಕ್ರಮಗಳು ಮತ್ತು ಸಾಹಸಗಳ ಬಗ್ಗೆ ಅರಿತುಕೊಳ್ಳೋಣ...

ಜನನ
ಹನುಮಂತನನ್ನು ಶಿವನ ಅವತಾರವೆಂದು ಕರೆಯಲಾಗಿದೆ. ವಿಷ್ಣುವು ರಾಮನ ಅವತಾರವೆತ್ತಿದಾಗ, ಶಿವನು ಹನುಮಂತನ ಅವತಾರವನ್ನು ಎತ್ತಿದರು ಎಂಬುದಾಗಿ ಹಿಂದೂ ಪುರಾಣಗಳು ತಿಳಿಸುತ್ತವೆ. ಶಿವನನ್ನು ಬಿಟ್ಟು ಇರಬೇಕು ಎಂಬುದಕ್ಕೆ ಹೆದರಿ ಸತಿ ದೇವಿಯು ಶಿವನನ್ನು ವಿನಂತಿಸಿದಾಗ ತಮ್ಮ ಅಂಶವನ್ನು ಹನುಮಾನ್ ರೂಪದಲ್ಲಿ ಜನಿಸುವಂತೆ ಪರಶಿವನು ಮಾಡುತ್ತಾರೆ. ಕೋತಿಯ ಅವತಾರದಲ್ಲಿ ಸರಳವಾಗಿ ರೂಪವನ್ನು ಪಡೆದುಕೊಳ್ಳುವ ನಿರ್ಧಾರವನ್ನು ಶಿವನು ಮಾಡುತ್ತಾರೆ. ಭಗವಾನ್ ಆಂಜನೇಯ ಸ್ವಾಮಿ ಶಿವನ ಮೂಲ ಶಕ್ತಿ

ಆಂಜನೇಯ
ಕೇಸರಿ ಮತ್ತು ಅಂಜನೆಯರ ಪುತ್ರನಾಗಿ ಹನುಮಾನ್ ಜನ್ಮವನ್ನು ತಾಳುತ್ತಾರೆ. ಅಪ್ಸರೆಯಾಗಿದ್ದ ಅಂಜನೆಗೆ ಅಹಂಕಾರ ವಿಪರೀತವಿತ್ತು. ಸಾಧುವೊಬ್ಬರನ್ನು ಅಂಜನೆಯು ಅಪಮಾನ ಮಾಡಿದ್ದಕ್ಕಾಗಿ ಶಾಪಕ್ಕೆ ಒಳಗಾಗುತ್ತಾಳೆ. ಶಾಪವು ಏನಾಗಿತ್ತು ಅಂದರೆ ಅಂಜನೆಯು ಪ್ರೇಮಕ್ಕೆ ಒಳಗಾದಾಗ ಕೋತಿಯ ರೂಪವನ್ನು ಪಡೆದುಕೊಳ್ಳುತ್ತಾಳೆ ಎಂದಾಗಿತ್ತು. ಈ ಪ್ರಕಾರವಾಗಿ ಭೂಮಿಗೆ ಬರುವ ಅಂಜನೆಯು ಕೋತಿಗಳ ರಾಜ ಕೇಸರಿಯೊಂದಿಗೆ ಅನುರಾಗಕ್ಕೆ ಒಳಗಾಗುತ್ತಾಳೆ ಮತ್ತು ಶಾಪ ಪ್ರಕಾರವಾಗಿ ಕೋತಿಯ ರೂಪವನ್ನು ಪಡೆದುಕೊಳ್ಳುತ್ತಾಳೆ. ರಾಮ ಭಂಟ ಭಗವಾನ್ ಹನುಮಂತನ ರೋಚಕ ಜನ್ಮ ವೃತ್ತಾಂತ

ಶಿವ ಭಕ್ತೆಯಾಗಿದ್ದ ಅಂಜನೆಯು ತನ್ನ ಭಕ್ತಿಯಿಂದ ಶಿವನ ಅನುಗ್ರಹಕ್ಕೆ ಒಳಗಾಗುತ್ತಾಳೆ ಮತ್ತು ಶಿವನ ವರಪ್ರಸಾದವಾಗಿ ತನ್ನನ್ನೇ ಮಗನಾಗಿ ಪಡೆದುಕೊಳ್ಳುವ ವರವನ್ನು ನೀಡುತ್ತಾರೆ. ಇದೇ ಸಂದರ್ಭದಲ್ಲಿ ರಾಜ ದಶರಥನು 'ಪುತ್ರಕಾಮೇಷ್ಟಿ' ಯಜ್ಞವನ್ನು ನಡೆಸುತ್ತಿರುತ್ತಾರೆ. ಪುತ್ರರ ಜನನಕ್ಕಾಗಿ ರಾಜನು ಈ ಯಾಗವನ್ನು ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪಾಯಸ ರೂಪದಲ್ಲಿ ಪ್ರಸಾದವನ್ನು ತಮ್ಮ ಮೂವರೂ ಪತ್ನಿಯರಿಗೆ ರಾಜನು ಹಂಚುತ್ತಾನೆ.

ಕೌಸಲ್ಯೆಯು ಪಾಯಸವನ್ನು ಸೇವಿಸುತ್ತಿದ್ದಾಗ ಪಾಯಸದ ಸ್ವಲ್ಪ ಅಂಶವು ರಾಣಿಯ ಕೈಯಿಂದ ಬಿದ್ದು ವಾಯು ದೇವರ ಮುಖಾಂತರ ಪ್ರಾರ್ಥನೆ ಸಲ್ಲಿಸುತ್ತಿದ್ದ ಅಂಜನೆಯ ಕೈಗೆ ಬೀಳುತ್ತದೆ. ಶಿವನ ಪ್ರಸಾದವೆಂದು ನೆನೆದು ಅಂಜನೆಯು ಪಾಯಸವನ್ನು ಸೇವಿಸುತ್ತಾರೆ. ಹೀಗೆ ಹನುಮಂತ ಜನನವನ್ನು ಪಡೆದುಕೊಳ್ಳುತ್ತಾರೆ. ಅಂಜನೆಯ ಮಗನಾದ್ದರಿಂದ ಆಂಜನೇಯ ಎಂಬ ಹೆಸರು ದೇವರಿಗೆ ಬರುತ್ತದೆ.

ಹನುಮಾನ್ ಹೆಸರಿನ ಅರ್ಥ
ಹನಮಂತನನ್ನು ಸಣ್ಣ ವಯಸ್ಸಿನಲ್ಲಿ ಆಂಜನೇಯ ಎಂದು ಕರೆಯಲಾಗುತ್ತಿತ್ತು. ಒಮ್ಮೆ ಹನುಂತನಿಗೆ ವಿಪರೀತ ಹಸಿವಾಗಿ ತನ್ನ ತಾಯಿಯಲ್ಲಿ ಆಹಾರಕ್ಕಾಗಿ ಕೇಳುತ್ತಾರೆ. ಯಾವುದೋ ಕೆಲಸದಲ್ಲಿ ಮಗ್ನಳಾಗಿದ್ದ ಅಂಜನೆ ತೋಟದಲ್ಲಿರುವ ಮರದಿಂದ ಹಣ್ಣನ್ನು ಸೇವಿಸುವಂತೆ ತಿಳಿಸುತ್ತಾಳೆ. ಹಣ್ಣು ಮತ್ತು ಕಾಯಿಯ ವ್ಯತ್ಯಾಸ ಮಗುವಾದ ಹನುಂತನಿಗೆ ತಿಳಿದಿರುವುದಿಲ್ಲ.

ಕೆಂಪು ಮತ್ತು ಅರಿಶಿನ ಬಣ್ಣದಿಂದ ಕೂಡಿರುವ ಯಾವುದೇ ಹಣ್ಣನ್ನು ತಿನ್ನು ಎಂಬುದಾಗಿ ಅಂಜನೆ ಪುತ್ರನಿಗೆ ತಾವು ಮಾಡುತ್ತಿದ್ದ ಕೆಲಸದಲ್ಲಿಂದಲೇ ತಿಳಿಸುತ್ತಾಳೆ. ಕೂಡಲೇ ತೋಟಕ್ಕೆ ತೆರಳಿದ ಹನುಮಂತ ತಾಯಿ ಹೇಳಿದ ಹಣ್ಣಿಗಾಗಿ ಹುಡುಕಾಡುತ್ತಾರೆ. ಆದರೆ ಅಂತಹ ಹಣ್ಣು ತೋಟದಲ್ಲಿ ಇರುವುದಿಲ್ಲ. ಆಕಾಶದಲ್ಲಿ ಹೊಳೆಯುತ್ತಿದ್ದ ಸೂರ್ಯನನ್ನು ಹಣ್ಣು ಎಂಬುದಾಗಿ ತಿಳಿದು ಹನುಂತ ಆಕಾಶಕ್ಕೆ ನೆಗೆಯುತ್ತಾರೆ.

ಈ ಸಮಯದಲ್ಲಿ ಭಯಗೊಂಡ ಸೂರ್ಯನು ಇಂದ್ರನ ಬಳಿಗೆ ಬಂದು ಒಬ್ಬ ಸಣ್ಣ ಹುಡುಗನು ತನ್ನನ್ನು ಹಣ್ಣೆಂದು ತಿಳಿದು ತಿನ್ನುವುದಕ್ಕೆ ಬರುತ್ತಿದ್ದಾನೆ ಎಂಬುದಾಗಿ ತಿಳಿಸುತ್ತಾನೆ. ಇಂದ್ರನು ಹನುಮಂತನನ್ನು ತಡೆಗಟ್ಟಲು ವಿಪರೀತ ಪ್ರಯತ್ನಿಸುತ್ತಾರೆ. ಆದರೆ ಹನುಮಂತನನ್ನು ತಡೆಯಲು ಇಂದ್ರನಿಗೆ ಸಾಧ್ಯವಾಗುವುದಿಲ್ಲ. ಕೊನೆಯದಾಗಿ ಇಂದ್ರನು ತನ್ನ ಆಯುಧವನ್ನು ಹನುಮಂತನೆಡೆಗೆ ಬೀಸಿ ಒಗೆಯುತ್ತಾರೆ.

ವಜ್ರಾಯುಧವು ಹನುಮಂತನನ್ನು ಹೊಡೆದು ಅವರ ದವಡೆಗೆ ಹಾನಿಯನ್ನುಂಟು ಮಾಡುತ್ತದೆ. ಹೀಗೆ ಹನಮಂತನ ಮುಖವು ಕೋತಿಯ ಮುಖದ ಆಕಾರವನ್ನು ಪಡೆದುಕೊಳ್ಳುತ್ತದೆ. ಹೀಗೆ ಕೋತಿಯ ಮುಖ ಮತ್ತು ಮಾನವ ಆಕಾರವನ್ನು ಪಡೆದಿರುವ ಆಂಜನೇಯನು ಹನುಮಾನ್ ಎಂಬುದಾಗಿ ಕರೆಯಲ್ಪಡುತ್ತಾರೆ. ರಾಮ ಭಕ್ತ ಹನುಮಂತನ ಧೈರ್ಯ, ಪರಾಕ್ರಮಕ್ಕೆ ಎಣೆಯುಂಟೇ?

English summary

Stories On How Anjaneya Came To Be Known As Lord Hanuman

“Hanuman” from “Anjaneya”. Read on. Hanuman, the monkey-god and the constant companion of Lord Rama, is worshipped all over the country. There are temples which are dedicated to Lord Hanuman and people throng these places with complete devotion.
X
Desktop Bottom Promotion