For Quick Alerts
ALLOW NOTIFICATIONS  
For Daily Alerts

ಧನ-ಸಂಪತ್ತಿನ ಒಡೆಯರಾಗಲು ಚಿನ್ನಾಭರಣಗಳನ್ನು ಹೀಗೆ ಧರಿಸಿ...

By Manu
|

ಚಿನ್ನದ ಆಭರಣಗಳು ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ಎಲ್ಲಾ ಧರ್ಮೀಯರೂ ಚಿನ್ನವನ್ನು ಕೊಂಚವಾದರೂ ಧರಿಸಿಯೇ ಧರಿಸುತ್ತಾರೆ. ಹಿಂದೂ ಧರ್ಮದಲ್ಲಂತೂ ಚಿನ್ನದ ಆಭರಣಗಳನ್ನು ಧರಿಸಿದರ ದೇವರ ಪಟಗಳೇ ಅಪರೂಪ. ಚಿನ್ನವನ್ನು ಧರಿಸುವುದು ಪ್ರತಿಷ್ಠೆಯ ಸಂಕೇತಕ್ಕಿಂತಲೂ ಇದರ ಆಭರಣಗಳನ್ನು ಧರಿಸಿದವರಿಗೆ ಒಲಿಯುವ ಅದೃಷ್ಟವೇ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ.

ಚಿನ್ನದ ಆಭರಣದಲ್ಲಿ ಕೆಲವು ಅದೃಷ್ಟ ತರುವ ಕಲ್ಲು, ವಜ್ರ ವೈಢೂರ್ಯಗಳನ್ನು ಅಳವಡಿಸಿ ಅದೃಷ್ಟ ಮಾತ್ರವಲ್ಲ, ನೆಮ್ಮದಿ, ಪ್ರೀತಿ, ಪ್ರೇಮ ಮತ್ತು ಆಧ್ಯಾತ್ಮಿಕ ಶಾಂತಿಯನ್ನೂ ಬಯಸುತ್ತಾರೆ. ನವಗ್ರಹ ಉಂಗುರದ ಜನಪ್ರಿಯತೆಯೇ ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ.

ಚಿನ್ನದ ಆಭರಣಗಳನ್ನು ಧರಿಸುವ ಮೂಲಕ ದೇಹದಲ್ಲಿ ದುಷ್ಟಶಕ್ತಿಗಳು ಪ್ರವೇಶಿಸದಂತೆ ತಡೆಯುವುದು, ದೈವಿಕ ಶಕ್ತಿಗಳು ದೇಹದಲ್ಲಿ ಪ್ರವಹಿಸುವಂತೆ ಮಾಡುವುದು, ಋಣಾತ್ಮಕ ಚಿಂತನೆ ಮತ್ತು ಶಕ್ತಿಗಳಿಂದ ದೂರವಿರುವಂತೆ, ಆಧ್ಯಾತ್ಮಿಕ ಶಕ್ತಿಯಿಂದ ವೇದನೆ ದೂರವಾಗಲು ಮೊದಲಾದ ಪ್ರಯೋಜನಗಳು ಲಭಿಸುತ್ತವೆ. ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ...

ಅಲ್ಲದೆ ಚಿನ್ನವನ್ನು ಧರಿಸುವ ಮೂಲಕ ಮನದಲ್ಲಿ ಮೂಡುವ ಶಾಂತಿ, ಆತ್ಮವಿಶ್ವಾಸ ಬೇರೆ ಯಾವ ಲೋಹದಿಂದಲೂ ಪಡೆಯುವುದು ಅಸಾಧ್ಯ. ಆದರೆ ಇದರ ಪ್ರಯೋಜನಗಳನ್ನು ಪಡೆಯಬೇಕಾದರೆ ಇದನ್ನು ಸರಿಯಾದ ರೀತಿಯಲ್ಲಿ ಧರಿಸುವುದೂ ಅಗತ್ಯವಾಗಿದೆ. ತಪ್ಪಾದ ರೀತಿಯಲ್ಲಿ ಧರಿಸುವುದು ಸಂಪೂರ್ಣ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಹುದು.....

ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯಲು

ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯಲು

ಆಧ್ಯಾತ್ಮಿಕ ಪ್ರಯೋಜನವನ್ನು ಪಡೆಯಲು ಮಹಿಳೆಯರು ಚಿನ್ನದ ಉಂಗುರವನ್ನು ಎಡಗೈ ಬೆರಳಿನಲ್ಲಿ ಹಾಗೂ ಪುರುಷರು ಬಲಗೈ ಬೆರಳಿನಲ್ಲಿ ತೊಟ್ಟುಕೊಳ್ಳಬೇಕು.

ಸಮೃದ್ಧತೆಯ ಸಂಕೇತ

ಸಮೃದ್ಧತೆಯ ಸಂಕೇತ

ಚಿನ್ನ ಸಮೃದ್ಧತೆಯ ಸಂಕೇತವಾಗಿದ್ದು ಪ್ರತಿಷ್ಠೆಯನ್ನೂ ಪ್ರಕಟಿಸುತ್ತದೆ. ಜ್ಯೋತಿಷ್ಯಾಸ್ತ್ರದಲ್ಲಿ ಇದಕ್ಕೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಎಲ್ಲಾ ಗ್ರಹಗಳೊಂದಿಗೆ ಕೊಂಚವಾದರೂ ಸಂಬಂಧವನ್ನು ಕಲ್ಪಿಸಲಾಗಿದೆ. ಆದರೆ ಗುರುಗ್ರಹಕ್ಕೆ ಹೆಚ್ಚಿನ ಸಂಬಂಧವನ್ನು ನೀಡಲಾಗಿದೆ.

ಅದೃಷ್ಟ ಮತ್ತು ನೆಮ್ಮದಿಗೆ

ಅದೃಷ್ಟ ಮತ್ತು ನೆಮ್ಮದಿಗೆ

ಸಾಮಾನ್ಯವಾಗಿ ಚಿನ್ನ ಈ ಜಗತ್ತಿನ ಮೇಲಿನ ಎಲ್ಲಾ ಜನರಿಗೂ ಒಳ್ಳೆಯದನ್ನೇ ಮಾಡುತ್ತದೆ. ಒಂದು ವೇಳೆ ಇದು ನಿಮಗೆ ಸೂಕ್ತವಲ್ಲ ಎಂದು ಸಾಬೀತಾದರೆ ಇದಕ್ಕಿಂತ ಹೆಚ್ಚಿನ ದುರಾದೃಷ್ಟ ಇನ್ನೊಂದಿಲ್ಲ. ಚಿನ್ನವನ್ನು ಸರಿಯಾದ ಕ್ರಮದಲ್ಲಿ ಧರಿಸಿದವರನ್ನು ಅದೃಷ್ಟ ಮತ್ತು ನೆಮ್ಮದಿ ಅರಸಿಕೊಂಡು ಬರುತ್ತವೆ.

ಇನ್ನಷ್ಟು ಚಿನ್ನದ ಒಡೆಯರಾಗುವಿರಿ!

ಇನ್ನಷ್ಟು ಚಿನ್ನದ ಒಡೆಯರಾಗುವಿರಿ!

ಚಿನ್ನಕ್ಕೆ ಶಕ್ತಿ ಮತ್ತು ತಾಪವನ್ನು ಪ್ರವಹಿಸುವ ಶಕ್ತಿಯಿದೆ. ಅಲ್ಲದೇ ಇದು ದೇಹದಲ್ಲಿರುವ ವಿಷವನ್ನೂ (ಮಾನಸಿಕ ಮತ್ತು ದೈಹಿಕ) ನಿವಾರಿಸುವ ಗುಣವನ್ನು ಹೊಂದಿದೆ. ಚಿನ್ನವನ್ನು ಸರಿಯಾದ ಕ್ರಮದಲ್ಲಿ ಧರಿಸುವ ಮೂಲಕ ಹಲವು ಕಾಯಿಲೆಗಳನ್ನೂ ದೂರವಿಡಬಹುದೆಂದರೆ ನಂಬುತ್ತೀರಾ? ಅಷ್ಟೇ ಅಲ್ಲ, ಚಿನ್ನವನ್ನು ಹೊಂದಿರುವವರು ಇನ್ನಷ್ಟು ಚಿನ್ನವನ್ನು ಹೊಂದಲು ಚಿನ್ನವೇ ನೆರವಾಗುತ್ತದೆ.

ಸತತ ಕೆಮ್ಮಿನಿಂದ ಬಳಲುತ್ತಿದ್ದರೆ

ಸತತ ಕೆಮ್ಮಿನಿಂದ ಬಳಲುತ್ತಿದ್ದರೆ

ಒಂದು ವೇಳೆ ನೀವು ಸತತ ಕೆಮ್ಮಿನಿಂದ ಬಳಲುತ್ತಿದ್ದರೆ ನಿಮ್ಮ ಕಿರುಬೆರಳಿನಲ್ಲಿ ಚಿನ್ನದ ಉಂಗುರ ಧರಿಸುವುದರಿಂದ ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ನ್ಯಾಯವಾಗಿ ಸಲ್ಲಬೇಕಾದ ಹೆಸರು, ಖ್ಯಾತಿ, ಗಣನೆ ಸಿಗದೇ ಇದ್ದಲ್ಲಿ ಉಂಗುರವನ್ನು ಮಧ್ಯದ ಬೆರಳಿಗೆ ತೊಟ್ಟುಕೊಳ್ಳಬೇಕು.

ಏಕಾಗ್ರತೆಯ ಕೊರತೆಯಿದ್ದಲ್ಲಿ

ಏಕಾಗ್ರತೆಯ ಕೊರತೆಯಿದ್ದಲ್ಲಿ

ಒಂದು ವೇಳೆ ಏಕಾಗ್ರತೆಯ ಕೊರತೆಯಿದ್ದಲ್ಲಿ ಕಿರುಬೆರಳಿನಲ್ಲಿ ಉಂಗುರ ತೊಡಬೇಕು. ಇದರಿಂದ ಏಕಾಗ್ರತೆ ಸಾಧಿಸುವುದರ ಜೊತೆಗೇ ಮಾನಸಿಕ ಶಾಂತಿಯನ್ನೂ ಪಡೆಯಬಹುದು.

ಗಂಡ-ಹೆಂಡತಿಯ ನಡುವಿನ ಸಂಬಂಧ

ಗಂಡ-ಹೆಂಡತಿಯ ನಡುವಿನ ಸಂಬಂಧ

ವಿವಾಹದ ಬಳಿಕ ಸಂಬಂಧ ಚಿಗುರುತ್ತಿಲ್ಲವೇ? ಕಲಹ ಹೆಚ್ಚುತ್ತಿದ್ದರೆ, ಪ್ರೀತಿಯ ಕೊರತೆ ಇದ್ದರೆ ಕೊರಳಿನಲ್ಲಿ ಚಿನ್ನದ ಸರ ಮತ್ತು ಒಂದು ಪದಕವನ್ನು ಧರಿಸಿ. ಎರಡೂ ಚಿನ್ನದ್ದಾಗಲು ಸಾಧ್ಯವಾಗದಿದ್ದಲ್ಲಿ ಎರಡರಲ್ಲೊಂದಾದರೂ ಚಿನ್ನದ್ದಾಗಿರಲಿ. ನಂತರ ಪ್ರೀತಿ ಹೇಗೆ ಹೆಚ್ಚುತ್ತದೆ ನೋಡಿ.

ಸಂತಾನಫಲ ಪಡೆಯಲು

ಸಂತಾನಫಲ ಪಡೆಯಲು

ವಿವಾಹದ ಬಳಿಕ ಸಂತಾನಫಲ ಪಡೆಯಲು ಅಶಕ್ತರಾಗಿರುವವರು ಉಂಗುರಬೆರಳಿಗೇ ಚಿನ್ನದ ಉಂಗುರವನ್ನು ಸದಾ ತೊಟ್ಟಿರಬೇಕು.

ಸೊಂಟಕ್ಕಿಂತ ಕೆಳಗೆ ಚಿನ್ನದ ಆಭರಣವನ್ನು ಧರಿಸಬೇಡಿ

ಸೊಂಟಕ್ಕಿಂತ ಕೆಳಗೆ ಚಿನ್ನದ ಆಭರಣವನ್ನು ಧರಿಸಬೇಡಿ

ಎಂದಿಗೂ ಸೊಂಟಕ್ಕಿಂತ ಕೆಳಗೆ ಯಾವುದೇ ಚಿನ್ನದ ಆಭರಣವನ್ನು ಧರಿಸಬೇಡಿ. ಇದು ದುರಾದೃಷ್ಟದ ಚಿಹ್ನೆಯಾಗಿದೆ. ವಿಶೇಷವಾಗಿ ಕಾಲುಗೆಜ್ಜೆ ಚಿನ್ನದ್ದಾಗಿರಬಾರದು. ಏಕೆಂದರೆ ಚಿನ್ನ ಲಕ್ಷ್ಮೀದೇವಿಯ ಸಂಕೇತವಾಗಿದ್ದು ಈಕೆಯನ್ನು ಸೊಂಟದ ಕೆಳಗಿನ ಯಾವುದೇ ಭಾಗದಲ್ಲಿ ಧರಿಸಿದರೂ ಆಕೆಗೆ ಅಗೌರವ ಸಲ್ಲಿಸಿದಂತಾಗುತ್ತದೆ. ತನಗೆ ಅಗೌರವ ಸಲ್ಲುವ ಮನೆಗೆ ಆಕೆ ಬರಲಾರಳು.

ಮಾಂಸಾಹಾರ ಅಥವಾ ಮದ್ಯಪಾನದಿಂದ ದೂರವಿರಿ

ಮಾಂಸಾಹಾರ ಅಥವಾ ಮದ್ಯಪಾನದಿಂದ ದೂರವಿರಿ

ಚಿನ್ನವನ್ನು ಧರಿಸಿರುವವರು ಮಾಂಸಾಹಾರ ಅಥವಾ ಮದ್ಯಪಾನದಂತಹ ಯಾವುದೇ ವ್ಯಸನಗಳನ್ನು ಹೊಂದಿರಬಾರದು. ಆಗಲೇ ಅದೃಷ್ಟ ಅವರ ಪಾಲಿಗೆ ಒಲಿಯುತ್ತದೆ.

ಕೆಂಪು ಬಣ್ಣದ ಕಾಗದದಲ್ಲಿ ಸುತ್ತಿಡಿ

ಕೆಂಪು ಬಣ್ಣದ ಕಾಗದದಲ್ಲಿ ಸುತ್ತಿಡಿ

ಸುರಕ್ಷತೆಗಾಗಿ ಹೆಚ್ಚಿನವರು ಚಿನ್ನವನ್ನು ಲಾಕರುಗಳಲ್ಲಿರಿಸುತ್ತಾರೆ. ಆದರೆ ಇದನ್ನು ಕೆಂಪು ಬಣ್ಣದ ಕಾಗದ ಅಥವಾ ಬಟ್ಟೆಯಲ್ಲಿ ಸುತ್ತಿಟ್ಟರೆ ಇದು ಸುರಕ್ಷಿತವಾಗಿರುತ್ತದೆ. ಅಲ್ಲದೇ ಈ ಚಿನ್ನವನ್ನು ಮನೆಯ ಪೂರ್ವ ಅಥವಾ ನೈಋತ್ಯ ಭಾಗದಲ್ಲಿ ಇರುವಂತೆ ರಕ್ಷಿಸಿಡಬೇಕು.

English summary

Simple rules while wearing gold to attract wealth!

Generally gold suit everyone but if it does not suit you, you may face bad luck. Gold can attract abundance of luck and prosperity if one wears it correctly. Gold has power to observe energy and heat. And so, it has the power to reduce the poison. Take a look at various rules while wearing gold. Using this trick and tips will make you wealthier instantly.
X
Desktop Bottom Promotion