For Quick Alerts
ALLOW NOTIFICATIONS  
For Daily Alerts

ಹೆಣ್ಣಿಗೆ ಮೂಗುತಿ ಚೆಂದ

|

ಭಾರತೀಯ ಮಹಿಳೆಯರಿಗೆ ಮೂಗು ಚುಚ್ಚಿಸಿಕೊಳ್ಳುವುದು ಒಂದು ಪ್ರಮುಖ ಸಂಪ್ರದಾಯವಾಗಿದೆ. ಹಿಂದೂ ಧರ್ಮದಲ್ಲಿ ಮಂಗಳಸೂತ್ರ, ಮೂಗುತಿ, ಕಾಲುಂಗುರ, ಕಿವಿಯೋಲೆ, ಕುಂಕುಮ ಇವುಗಳನ್ನು ಮುತ್ತೈದೆಯ ಲಕ್ಷಣಗಳೆಂದು ಹೇಳಲಾಗುತ್ತದೆ. ಆದರೆ ಮೂಗುತಿಯನ್ನು ಮದುವೆಯಾಗದಿದ್ದವರೂ ಕೂಡ ಹಾಕಿಕೊಳ್ಳಬಹುದು.

ಮೂಗುತಿ ಹಾಕಿಕೊಳ್ಳುವ ಸಂಪ್ರದಾಯ ಪ್ರದೇಶದಿಂದ ಪ್ರದೇಶಕ್ಕೆ ಬೇರೆಯದೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಸಾಮಾನ್ಯವಾಗಿ ಮೂಗುತಿಯನ್ನು ಮದುವೆಯ ಸಂದರ್ಭದಲ್ಲಿ ಹಾಕಿಕೊಳ್ಳಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿ ಕುರಿತಂತೆ ಹಲವು ನಂಬಿಕೆಗಳಿವೆ. ಕೆಲವು ನಂಬಿಕೆಗಳ ಪ್ರಕಾರ ಮೂಗುತಿಯನ್ನು ಇಟ್ಟುಕೊಳ್ಳುವ ಸಂಪ್ರದಾಯವು ಮೊಗಲರ ಕಾಲದಲ್ಲಿ ಅಂದರೆ 16ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿತು.ಮೂಗುತಿಯನ್ನು ಇಟ್ಟುಕೊಳ್ಳುವುದರಿಂದ ಆಗುವ ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳನ್ನು ಕುರಿತಂತೆ ಪುರಾತನ ಆಯುರ್ವೇದದ ಕೃತಿ ಸುಶೃತ ಸಂಹಿತದಲ್ಲೂ ಉಲ್ಲೇಖಗಳಿರುವುದನ್ನು ಕಾಣಬಹುದಾಗಿದೆ.ಅದೇನೆ ಇದ್ದರೂ ಮೂಗುತಿಯನ್ನು ಇಟ್ಟುಕೊಳ್ಳುವುದು ಭಾರತೀಯ ಸಂಪ್ರದಾಯದ ಭಾಗವಾಗಿದೆ.ಈ ಸಂಪ್ರದಾಯವು ಹಿಂದೂ ಮಹಿಳೆಯರಲ್ಲಿ ಮಾತ್ರವಲ್ಲ ಬೇರೆ ಧರ್ಮಗಳವರಲ್ಲೂ ಕಾಣಬಹುದಾಗಿದೆ.

Nose Rings

ಭಾರತೀಯ ಮಹಿಳೆಯರು ಮೂಗುತಿಯನ್ನು ಏಕೆ ಇಟ್ಟುಕೊಳ್ಳುತ್ತಾರೆ ಬನ್ನಿ ನೋಡೋಣ.

ಆರೋಗ್ಯದ ಮಹತ್ವ
ಆಯುರ್ವೇದದ ಪ್ರಕಾರ ಮೂಗಿನ ಒಂದು ನಿಗದಿತ ಸ್ಥಳದಲ್ಲಿರುವ ನರವನ್ನು ಒತ್ತಿ ಮೂಗುತಿಯನ್ನು ಹಾಕುವುದರಿಂದ ಋತುಚಕ್ರದ ಸಮಯದಲ್ಲಿ ಉಂಟಾಗುವ ನೋವು ಕಡಿಮೆಯಾಗುತ್ತದೆ. ಆದ್ದರಿಂದಲೇ ಹುಡುಗಿಯರು ಋತುಮತಿಯರಾಗುತ್ತಿದ್ದಂತೆ ಕೆಲವರು ಮೂಗು ಚುಚ್ಚಿಸುತ್ತಾರೆ. ಇದೇ ಕಾರಣದಿಂದಲೇ ಮುದುಕಿಯರು ಕೂಡ ಮೂಗುತಿಯನ್ನು ಧರಿಸುತ್ತಾರೆ.

ಹೆಂಗಸರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುವುದು ಉತ್ತಮವೆಂದು ಹೇಳಲಾಗುತ್ತದೆ. ಏಕೆಂದರೆ ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಂಗಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆಯಂತೆ. ಹಾಗಾಗಿ ಮೂಗುತಿಯನ್ನು ಈ ಭಾಗದಲ್ಲಿ ಚುಚ್ಚಿಸಿಕೊಳ್ಳುವುದರಿಂದ ಹೆರಿಗೆಗೆ ನೆರವಾಗುತ್ತದೆಯಂತೆ.

ಧಾರ್ಮಿಕ ಮಹತ್ವ
ಭಾರತದಲ್ಲಿ ಮೂಗುತಿಯನ್ನು ಧರಿಸುವುದು ವಿವಾಹವಾಗಿರುವುದರ ಲಕ್ಷಣ. ವಿಧವೆಯಾದಾಗ ಮೂಗುತಿಯನ್ನು ತೆಗೆಯಲಾಗುತ್ತದೆ. ಹೆಣ್ಣುಮಕ್ಕಳು 16ನೆಯ ವಯಸ್ಸಿನಲ್ಲಿ ಅಂದರೆ ಅದನ್ನು ವಿವಾಹದ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಈ ವಯಸ್ಸಿಗೆ ಬರುತ್ತಿದ್ದಂತೆ ಮೂಗನ್ನು ಚುಚ್ಚಿಸುತ್ತಾರೆ. ಪಾರ್ವತಿಯ ದೇವಿಗೆ ಗೌರವಸೂಚಕವಾಗಿ ಕೂಡ ಇದನ್ನು ಬಳಸುವುದನ್ನು ಕಾಣಬಹುದು.

ಮೂಢನಂಬಿಕೆ
ಕೆಲವು ನಂಬಿಕೆಗಳ ಪ್ರಕಾರ ಹೆಂಡತಿಯು ಉಸಿರನ್ನು ಒಳತೆಗೆದುಕೊಂಡು ಹೊರಬಿಡುವಾಗ ಅದು ಗಂಡನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಹಾಗಾಗಿ ಮೂಗುತಿಯನ್ನು ಧರಿಸಿದ್ದರೆ ಗಾಳಿಯು ಲೋಹವನ್ನು ದಾಟಿ ಹೊರಬರುವುದರಿಂದ ಯಾವುದೇ ರೀತಿಯ ಕೆಟ್ಟ ಪರಿಣಾಮಗಳುಂಟಾಗುವುದಿಲ್ಲವಂತೆ. ಈ ನಂಬಿಕೆಯನ್ನು ಭಾರತದ ಪೂರ್ವಭಾಗದಲ್ಲಿ ಹೆಚ್ಚಾಗಿ ಕಾಣುತ್ತೇವೆ.
ಆದ್ದರಿಂದ ಮೂಗುತಿಯನ್ನು ಧರಿಸುವುದಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಬಹಳ ಮಹತ್ವವಿದೆ. ಇದಲ್ಲದೆ ಇದರಿಂದ ಪ್ರಯೋಜನಗಳು ಕೂಡ ಇದೆ. ಇದನ್ನು ಅಲಂಕಾರದ ಆಭರಣವಾಗಿ ಕೂಡ ಬಳಸುತ್ತಾರೆ. ಮೂಗುತಿಗಳು ವಿವಿಧ ವಿನ್ಯಾಸಗಳಲ್ಲಿದ್ದು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ.

Story first published: Saturday, November 30, 2013, 15:34 [IST]
X
Desktop Bottom Promotion