ಪ್ರತಿಯೊಬ್ಬ ಮನುಷ್ಯನಲ್ಲೂ ಅಡಗಿರುವ ಆ ಮೂರು ಗುಣಗಳು...

ಹಿಂದೂ ಧರ್ಮದಲ್ಲಿ ಹುಟ್ಟಿನಿಂದ ಸಾವಿನ ತನಕ ಮನುಷ್ಯ ಹೇಗೆ ಬದುಕಬಹುದು ಎಂದು ಪ್ರತಿಯೊಂದು ಹಂತದಲ್ಲೂ ಹೇಳಿಕೊಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಮಾನವನಲ್ಲಿ ಇರಬೇಕಾದ ಮೂರು ಗುಣಗಳು.

By: manu
Subscribe to Boldsky

ಹಿಂದೂ ಧರ್ಮ ತುಂಬಾ ಪುರಾತನವಾದ ಧರ್ಮವೆಂದು ನಂಬಲಾಗಿದೆ. ಹಿಂದೂ ಧರ್ಮವು ಬದಲಾವಣೆಗಳಿಗೆ ಹೊಂದಿಕೊಂಡು ಎಲ್ಲವನ್ನೂ ತನ್ನಲ್ಲಿ ಸೇರಿಸಿಕೊಂಡು ಈಗಲೂ ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯತೆಯನ್ನು ಪಡೆದಿದೆ.

ಹಿಂದೂ ಧರ್ಮದಲ್ಲಿ ಹುಟ್ಟಿನಿಂದ ಸಾವಿನ ತನಕ ಮನುಷ್ಯ ಹೇಗೆ ಬದುಕಬಹುದು ಎಂದು ಪ್ರತಿಯೊಂದು ಹಂತದಲ್ಲೂ ಹೇಳಿಕೊಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿರುವುದು ಮಾನವನಲ್ಲಿ ಇರಬೇಕಾದ ಮೂರು ಗುಣಗಳು. ಈ ಮೂರು ಗುಣಗಳ ಬಗ್ಗೆ ಈ ಲೇಖನದಲ್ಲಿ ಚರ್ಚೆ ಮಾಡುತ್ತಾ ಹೋಗುವ. ಇಂದಿಗೂ ಹಿಂದೂ ಧರ್ಮದಲ್ಲಿ 'ಈ ವಸ್ತುಗಳಿಗೆ' ಪವಿತ್ರ ಸ್ಥಾನವಿದೆ  

Significance of The Three Gunas In Hinduism
 

ಗುಣ ಎಂದರೆ ಪ್ರವೃತ್ತಿ ಎಂದು ಹೇಳಲಾಗುತ್ತದೆ. ಮಾನವನಲ್ಲಿ ಇರಬೇಕಾದ ಮೂರು ಗುಣಗಳನ್ನು ಇಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಯಾವುದೇ ವ್ಯಕ್ತಿಯಲ್ಲಿ ಒಂದು ಪರಿಸ್ಥಿತಿ ಅಥವಾ ಗುರಿಯ ಬಗ್ಗೆ ಇರುವ ಪ್ರವೃತ್ತಿಯನ್ನು ಇಲ್ಲಿ ತಿಳಿಸಲಾಗಿದೆ. ಹಿಂದೂ ಧರ್ಮದಲ್ಲಿ ಇರುವ ಮೂರು ಗುಣಗಳು ಏನು ಎನ್ನುವ ಬಗ್ಗೆ ತಿಳಿಯುವ ಮೊದಲು ಆ ಮೂರು ಗುಣಗಳು ಯಾವುದು ಎಂದು ತಿಳಿಯುವ.

ಈ ಎಲ್ಲಾ ಮೂರು ಗುಣಗಳು ಪ್ರತಿಯೊಬ್ಬ ವ್ಯಕ್ತಿಯೊಬ್ಬರಲ್ಲೂ ಇರುತ್ತದೆ ಎಂದು ಹಿಂದೂ ಧರ್ಮವು ಹೇಳುತ್ತದೆ. ತಮಸ, ರಾಜಸ ಮತ್ತು ಸತ್ವ ಇದು ಹಿಂದೂ ಧರ್ಮದಲ್ಲಿರುವ ಮೂರು ಪ್ರಮುಖ ಗುಣಗಳು. ಈ ಮೂರು ಗುಣಗಳಿಗೆ ಯಾವ ಪ್ರಾಮುಖ್ಯತೆ ಇದೆ ಎಂದು ಈ ಲೇಖನದ ಮುಖೇನ ತಿಳಿಯುವ. ಹಿಂದೂ ಧರ್ಮ: ಪೂಜಾ ಗೃಹದಲ್ಲಿ 'ಅಗರಬತ್ತಿಯ' ಮಹತ್ವ   

Significance of The Three Gunas In Hinduism
 

ತಮಸವು ಅಜ್ಞಾನ ಮತ್ತು ಸೊಕ್ಕನ್ನು ಪ್ರತಿನಿಧಿಸುತ್ತದೆ. ಎರಡನೇಯದಾಗಿರುವ ರಾಜಸದ ಅರ್ಥವೇನೆಂದರೆ ಜೀವನ ಹಾಗೂ ಜನರ ಬಗ್ಗೆ ಸ್ವಾರ್ಥಪರ ಧೋರಣೆ ಹೊಂದುವುದು. ಮೂರನೇ ಗುಣವಾಗಿರುವ ಸತ್ವವು ಶಾಂತತೆ ಹಾಗೂ ಹಿಡಿತದ ಸ್ವಯಂ ಪೂರಕ ಗುಣವಾಗಿದೆ. ಹಿಂದೂ ಧರ್ಮದ ಪ್ರಕಾರ ಮೂರು ಗುಣಗಳಿಗೆ ಹೊಂದಿಕೊಂಡು ಜನರು ತಮ್ಮ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಮೂರನೇ ಗುಣವಾಗಿರುವ ಸತ್ವದಿಂದಾಗಿ ಅನಗತ್ಯ ದುಃಖದಿಂದ ದೂರವಾಗಬಹುದು ಎಂದು ಹಿಂದೂ ಧರ್ಮವು ಹೇಳುತ್ತದೆ. ಜೀವನದಲ್ಲಿ ಯಾವುದೇ ಪರಿಸ್ಥಿತಿಯಿದ್ದರೂ ಖುಷಿಯನ್ನು ಹೊಂದಿರುವುದು ಸತ್ವದ ಲಕ್ಷಣವಾಗಿದೆ. ಮನುಷ್ಯರು ತಮಸ ಹಾಗೂ ರಾಜಸದಿಂದ ದೂರ ಉಳಿಯಬೇಕು.

Significance of The Three Gunas In Hinduism
 

ಇದರಿಂದ ದೂರ ಉಳಿಯದೆ ಇದ್ದರೆ ನಮಗೆ ಜೀವನದಲ್ಲಿ ನಕಾರಾತ್ಮಕ ಅಂಶಗಳು ಕಂಡುಬರುವುದು ಮತ್ತು ಧನಾತ್ಮಕ ಅಂಶಗಳು ನಮ್ಮಿಂದ ದೂರವಾಗುವುದು. ಸತ್ವವನ್ನು ಅಳವಡಿಸದೆ ಇದ್ದರೆ ದೇವರು ಕೂಡ ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡಲು ಸಾಧ್ಯವಾಗುವುದಿಲ್ಲ. ತಮಸ ಹಾಗೂ ರಾಜಸದಲ್ಲಿ ನಾವು ಒಳ್ಳೆಯದನ್ನು ಕಂಡರೂ ಮಾನವ ಅಸ್ತಿತ್ವದ ಬಗ್ಗೆ ಇರುವ ಸತ್ಯವನ್ನು ಕಂಡುಕೊಳ್ಳಲು ನಮ್ಮಿಂದ ಸಾಧ್ಯವಾಗದೆ ಇರಬಹುದು.

English summary

Significance of The Three Gunas In Hinduism

Hinduism is one of the most profound religions on the globe and has numerous concepts that attest its validity and probable supremacy. Amongst the many profound concepts of Hinduism is that which talks about the three Gunas. Before we actually go about elucidating the three Gunas in Hinduism, let us first answer the basic question of what is Guna.
Please Wait while comments are loading...
Subscribe Newsletter