For Quick Alerts
ALLOW NOTIFICATIONS  
For Daily Alerts

ಜೀವನದ ಎಲ್ಲಾ ಕಷ್ಟ-ನೋವು ನಿವಾರಿಸುವ- ಗಾಯತ್ರಿ ಮಂತ್ರ

ಎಲ್ಲಾ ಮ೦ತ್ರಗಳ ಪೈಕಿ, ಗಾಯತ್ರಿ ಮಹಾಮ೦ತ್ರವು ಅತ್ಯ೦ತ ಚಮತ್ಕಾರಿಕ ಶಕ್ತಿಗಳನ್ನು ಹೊ೦ದಿದೆ. ಗಾಯತ್ರಿ ಮಹಾಮ೦ತ್ರದ ಕುರಿತು ನಿಮಗೆ ತಿಳಿದಿರದ ಸ೦ಗತಿಗಳ ಕುರಿತು ತಿಳಿದುಕೊಳ್ಳುವ, ಮುಂದೆ ಓದಿ....

By Jayasubramanya
|

ಜನರ ಸಮಸ್ತ ಸಮಸ್ಯೆಗಳ ನಿವಾರಣೆಯಲ್ಲಿ ಸಹಕಾರಿಯಾಗಬಲ್ಲ ಮ೦ತ್ರವೊ೦ದಿದ್ದರೆ ಅ೦ತಹ ಮಹಾಮ೦ತ್ರವು 'ಗಾಯತ್ರಿ ಮ೦ತ್ರ' ಎಂದು ಈಗಲೂ ನಮ್ಮ ಹಿಂದೂ ಧರ್ಮದಲ್ಲಿ ಜನಜನಿತವಾಗಿದೆ. ಈ ಸ೦ಗತಿಯು ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ತಿಳಿದಿರುವ೦ತಹದ್ದೇ ಎಂಬುದರಲ್ಲಿ ಸಂಶಯವೇ ಇಲ್ಲ. ನಿಮ್ಮ ಕೋರಿಕೆಗಳನ್ನು ಈಡೇರಿಸಲು ಇದಕ್ಕಿ೦ತ ಉತ್ತಮವಾದ ಮ೦ತ್ರವು ಬೇರೊ೦ದಿಲ್ಲ.

ಮಾತೆ ದೇವಿ ಗಾಯತ್ರಿಯನ್ನು ಮಹಾಲಕ್ಷ್ಮೀ, ಸರಸ್ವತಿ ಮತ್ತು ಮಹಾಕಾಳಿ ದೇವತೆಗಳಂತೆಯೇ ವಿಶೇಷವಾಗಿ ಪೂಜಿಸಲಾಗುತ್ತದೆ. ಗಾಯತ್ರಿ ಪದವನ್ನು ನಾವು ವಿಭಜಿಸಿದಾಗ 'ಗಾಯ' ಎಂಬುದು ಜ್ಞಾನದ ಬುದ್ಧಿವಂತಿಕೆಯ ಸಂಕೇತವಾದರೆ ತ್ರಿ ಎಂಬುದು ಮೂರು ಶಕ್ತಿಗಳ ಸಮ್ಮಿಲನವನ್ನು ಸೂಚಿಸುತ್ತದೆ.

goddess-gayatri

ದೇವಿ ಗಾಯತ್ರಿಯನ್ನು ಮಂತ್ರದ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಾಯತ್ರಿ ಮಂತ್ರವನ್ನು ಮೂಲ ಮಂತ್ರ ಇಲ್ಲವೇ ಅತಿ ಮುಖ್ಯ ಮಂತ್ರ ಎಂಬುದಾಗಿ ಕಾಣಲಾಗುತ್ತದೆ. ಸನಾತನ ಧರ್ಮವನ್ನು ಅನುಸರಿಸಲು ಸಹಕಾರಿಯಾಗಿರುವ ಈ ಮಂತ್ರವು ಕೆಲವೊಂದು ಮಹತ್ವಗಳನ್ನು ತನ್ನಲ್ಲಿ ಒಳಗೊಂಡಿದೆ.

ಇಂದಿನ ಲೇಖನದಲ್ಲಿ ಮಂತ್ರದ ಸಾರ ಮತ್ತು ಅದನ್ನು ಪಠಿಸಿದರೆ ಉಂಟಾಗುವ ಪ್ರಯೋಜನಗಳೇನು ಎಂಬುದನ್ನು ಸರಳವಾಗಿ ಅರಿತುಕೊಳ್ಳೋಣ.

ಗಾಯತ್ರಿ ದೇವಿಯ ಮಹತ್ವ

ದೇವಿ ಸರಸ್ವತಿಯ ಅಂಶವೆಂಬುದಾಗಿ ಗಾಯತ್ರಿ ದೇವಿಯನ್ನು ಕಂಡುಕೊಳ್ಳಲಾಗಿದ್ದು ಇದರ ಹಿಂದೆ ಒಂದು ಸುಂದರ ಕಥೆಯಿದೆ. ಒಮ್ಮೆ ಬ್ರಹ್ಮ ದೇವನು ದೇವಿ ಸರಸ್ವತಿಯ ಸಾನಿಧ್ಯದಲ್ಲಿ ಮಹತ್ವದ ಕಾರ್ಯವನ್ನು ನಡೆಸುತ್ತಿದ್ದರು.

ಕೆಲವು ಕಾರಣಗಳಿಗಾಗಿ ದೇವಿ ಸರಸ್ವತಿಯು ಕಾರ್ಯ ನಡೆಯುವಲ್ಲಿಗೆ ಬರಲು ವಿಳಂಬಿಸಿದರು. ಇದರಿಂದ ಕುಪಿತಗೊಂಡ ಬ್ರಹ್ಮ ದೇವನು ತಮ್ಮ ಪತ್ನಿಯ ಜಾಗದಲ್ಲಿ ಕುಳಿತುಕೊಳ್ಳಲು ಇನ್ನೊಬ್ಬ ಮಹಿಳೆಯನ್ನು ಕರೆತರುವಂತೆ ಪುರೋಹಿತರಿಗೆ ತಿಳಿಸುತ್ತಾರೆ.

ಅಂತೆಯೇ ವಟುಗಳು ಸರಸ್ವತಿಗೆ ಬದಲಾಗಿ ಒಬ್ಬ ಸ್ತ್ರೀಯನ್ನು ಕರೆತರುತ್ತಾರೆ ಮತ್ತು ಅದು ಬೇರಾರು ಆಗಿರದೇ ಗಾಯತ್ರಿ ದೇವಿಯಾಗಿರುತ್ತಾರೆ. ಬ್ರಹ್ಮನು ಆಕೆಯನ್ನು ವಿವಾಹವಾಗುತ್ತಾರೆ ಮತ್ತು ತಮ್ಮ ಕಾರ್ಯಗಳನ್ನು ಪೂರೈಸಿಕೊಳ್ಳುತ್ತಾರೆ. ಈ ಸ್ತ್ರೀ ಬೇರಾರು ಆಗಿರದೇ ಸರಸ್ವತಿಯ ಅಂಶವಾಗಿರುತ್ತಾರೆ ಎಂಬುದು ವೇದಗಳಲ್ಲಿ ತಿಳಿಸಲಾಗಿದೆ.

ಬ್ರಹ್ಮನ ಪತ್ನಿ ಗಾಯತ್ರಿ ದೇವಿಯು ನಾಲ್ಕು ವೇದಗಳನ್ನು ಪತಿಗೆ ಅರ್ಪಿಸುತ್ತಾರೆ. ಹೀಗಾಗಿ ಗಾಯತ್ರಿ ದೇವಿಯನ್ನು ವೇದ ಮಂತ್ರ ಎಂಬುದಾಗಿ ಕೂಡ ಕರೆಯುತ್ತಾರೆ. ಕಲಾವಿದರಿಗೆ, ಸಂಗೀತಗಾರರಿಗೆ, ಕವಿಗಳಿಗೆ ಆಕೆ ದೇವಿಯಾಗಿದ್ದಾರೆ.

ಗಾಯತ್ರಿ ದೇವಿಯ ಸ್ವರೂಪ

ಗಾಯತ್ರಿ ದೇವಿಯು ಐದು ತಲೆಗಳನ್ನು ಹೊಂದಿದ್ದಾರೆ. ಪ್ರತಿ ತಲೆಯು ಐದು ಪ್ರಾಣಗಳ ಸಂಕೇತವಾಗಿದೆ. ಪ್ರಾಣ - ಸಮಾನ, ಉದಾನ, ಪ್ರಾಣ, ಅಪಾನಾ ಮತ್ತು ವ್ಯಾನ ಎಂದಾಗಿದೆ. ಐದು ತತ್ವಗಳ ಸಂಕೇತ ಕೂಡ ಇದಾಗಿದೆ. ನೀರು, ಗಾಳಿ, ಆಕಾಶ, ಬೆಂಕಿ, ಭೂಮಿ ಎಂಬುದು ಇದರ ತಾತ್ಪರ್ಯವಾಗಿದೆ.


ಓಂ ಬೂರ್ ಬುವರ್‌ಸ್ವಹ
ತತ್ಸ ವಿತುರ್ವರೇಣ್ಯಂ
ಭರ್ಗೊ ದೇವಸ್ಯ ಧೀಮಹಿ
ಧಿಯೊ ಯೊನಾ ಪ್ರಚೊದಯಾತ್ ಎಂಬುದು ಗಾಯತ್ರಿ ಮಂತ್ರವಾಗಿದೆ. ದೇವರುಗಳ ಆಶಿರ್ವಾದವನ್ನು ಪಡೆದುಕೊಳ್ಳುವಲ್ಲಿ ಈ ಮಂತ್ರಗಳು ಹೆಚ್ಚು ಫಲಪ್ರದ ಎಂದೆನಿಸಿದೆ.

ಗಾಯತ್ರಿ ದೇವಿಯ ಉಪಾಸನೆ

ಗಾಯತ್ರಿ ದೇವಿಗೆ ಸರಳ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ಕೆಳಗಿನ ಅಂಶಗಳನ್ನು ಬಳಸಿಕೊಂಡು ದೇವಿಯ ಪೂಜೆಯನ್ನು ನಿಮಗೆ ನಡೆಸಬಹುದಾಗಿದೆ.

  • ಗಾಯತ್ರಿ ದೇವಿಯ ಚಿತ್ರ
  • ದೀಪ
  • ಧೂಪದ್ರವ್ಯ
  • ಕರ್ಪೂರ
  • ಹಾಲು
  • ಮೊಸರು
  • ಪಂಚಗವ್ಯ (ದನದ ಸೆಗಣಿ, ದನದ ಮೂತ್ರ, ಹಾಲು, ಮೊಸರು ಮತ್ತು ತುಪ್ಪ)
  • ನೀರು
  • ಹಣ್ಣು
  • ಹೂವುಗಳು

ದೀಪವನ್ನು ಬೆಳಗಿಸಿ ಈ ಮಂತ್ರವನ್ನು ಪಠಿಸಿ

ಇಶಾ ದೀಪಃ ಓಂ ಗಾಯತ್ರಿ ದೇವಿಯೇ ನಮಃ
ಧೂಪವನ್ನು ಅರ್ಪಿಸಿ ಈ ಮಂತ್ರ ಉಚ್ಛರಿಸಿ
ಇಶಾ ಧೂಪಃ ಓಂ ಗಾಯತ್ರಿ ದೇವಿಯೇ ನಮಃ
ಕರ್ಪೂರ ಅರ್ಪಿಸಿ
ಓಂ ಗಂ ಗಾಯತ್ರಿ ದೇವಿಯೇ ನಮಃ ಆರತ್ರಿಕಂ ಸಮರ್ಪಯಾಮಿ
ಹಾಲಿನ ಅಭಿಷೇಕ
ಓಂ ಗಂ ಗಾಯತ್ರಿ ದೇವಿಯೇ ನಮಃ ಪಯ ಸ್ನಾನಂ ಸಮರ್ಪಯಾಮಿ
ಮೊಸರು ಅರ್ಪಿಸಿ
ಓಂ ಗಂ ಗಾಯತ್ರಿ ದೇವಿಯೇ ನಮಃ ದಧಿ ಸ್ನಾನಂ ಸಮರ್ಪಯಾಮಿ
ಪಂಚಗವ್ಯ ಅರ್ಪಿಸಿ
ಓಂ ಗಂ ಗಾಯತ್ರಿ ದೇವಿಯೇ ನಮಃ ಪಂಚಾಮೃತ ಸ್ನಾನಂ ಸಮರ್ಪಯಾಮಿ
ನೀರನ್ನು ಸಮರ್ಪಿಸಿ
ಓಂ ಗಂ ಗಾಯತ್ರಿ ದೇವಿಯೇ ನಮಃ ಗಂಗಾ ಸ್ನಾನಂ ಸಮರ್ಪಯಾಮಿ
ಹಣ್ಣುಗಳನ್ನು ಅರ್ಪಿಸಿ
ಓಂ ಗಂ ಗಾಯತ್ರಿ ದೇವಿಯೇ ನಮಃ ಫಲಂ ಸಮರ್ಪಯಾಮಿ
ಸುಗಂಧಿತ ಹೂವುಗಳನ್ನು ಅರ್ಪಿಸಿ
ಇತಿ ಗಂಧ ಪುಷ್ಪೆ ಓಂ ಗಂ ಗಾಯತ್ರಿ ದೇವಿಯೇ
ಕೊನೆಯದಾಗಿ ಈ ಮಂತ್ರವನ್ನು ಪಠಿಸಿ
ಅಗಾಚ್ಚ ವರ್ದೆ ದೇವಿ ಜಪೇ ಮಿ ಸನ್ನಿಧ ಭವ
ಗಯಂತಂ ತ್ರಯ್‌ಸೇ ಯಸ್ಮದ್ ಗಾಯತ್ರಿ ತ್ವಮಾತಾ ಸ್ಮ್ರತಃ
ಅಯಾಹೆ ವರದೆ ದೇವಿ ತ್ರಯಕ್ಸಾರೆ ಬ್ರಹ್ಮವಿಧಿನಿ
ಗಾಯತ್ರಿ ಛಂದಸಂ ಮಾತರ್‌ಬ್ರಹ್ಮ ಯೋನಿ ನಮೋ ಸ್ತುತೇ
ನೀವು ಈ ಮಂತ್ರವನ್ನು ಪಠಿಸಬಹುದಾಗಿದೆ 'ಓಂ ಗಂ ಗಾಯತ್ರಿ ದೇವಿಯೇ ನಮಃ'.

English summary

Significance Of Goddess Gayatri & The Gayatri Mantra

Goddess Gayatri is worshipped as the deity, which expresses the untiring pursuit of knowledge and wisdom. As per the Vedic literature, she is portrayed as the female form of the light of the sun.
X
Desktop Bottom Promotion