For Quick Alerts
ALLOW NOTIFICATIONS  
For Daily Alerts

ಮಹಾಮೃತ್ಯುಂಜಯ ಮಂತ್ರದ ಮಹತ್ವ ತಿಳಿದಿದೆಯೇ?

|

ಮಹಾಮೃತ್ಯುಂಜಯ ಮಂತ್ರವನ್ನು ಭಾರತೀಯ ಶಾಸ್ತ್ರದಲ್ಲಿ ಅದ್ಭುತವಾದ ಸಿದ್ಧಿಯುಳ್ಳ ಮಂತ್ರವೆಂದು ಪರಿಗಣಿಸಲಾಗಿದೆ ಹಾಗೂ ಶಿವ ದೇವರಿಗೆ ಸೇರಿದ ಮಂತ್ರವಾಗಿದೆ. ಈ ಮಂತ್ರವು ಮೂರು ಹಿಂದಿ ಪದಗಳ ಮಿಶ್ರಣವಾಗಿದೆ ಅಂದರೆ "ಮಹಾ" ಅಂದರೆ ಮಹಾನ್ "ಮೃತ್ಯು" ಮರಣ ಎಂದಾಗಿದ್ದು ಹಾಗೂ "ಜಯ" ಅಂದರೆ ಗೆಲುವು ಎಂದಾಗಿದೆ.

ಇದರರ್ಥ ಮರಣದ ವಿರುದ್ಧ ಪಡೆದ ಗೆಲುವು ಎಂದಾಗಿದೆ. ಇದನ್ನು "ರುದ್ರ ಮಂತ್ರ" ಅಥವಾ "ತ್ರ್ಯಯಂಬಕಮ್ ಮಂತ್ರ" ಎಂದೂ ಕರೆಯಲಾಗುತ್ತದೆ. ಶಿವನ ಇನ್ನೊಂದು ಹೆಸರು ರುದ್ರ ಎಂದಾಗಿದೆ.

ಪರಶಿವನ ಹತ್ತೊಂಭತ್ತು ಅವತಾರಗಳ ಮಹತ್ವದಲ್ಲಿ ಅಡಗಿದೆ ಶಿವ ಕಾರುಣ್ಯ

Significance of Mahamrityunjaya Mantra

ಮಂತ್ರ:

ಓಂ ತ್ರ್ಯಯಂಬಕಂ ಯಜಮಾಹೆ, ಸುಗಂಧಿಂ ಪುಷ್ಟಿ ವರ್ಧನಂ.
ಉರವರುಕಿಮೀವ್ ಬಂಧನಾತ್, ಮೃತ್ಯುರ್ ಮೋಕ್ಷಾಯ ಮಮೃತಾತ್.

ಇದರ ಅರ್ಥ:

ತ್ರ್ಯಯಂಬಕಂ: ಮೂರು ಕಣ್ಣುಗಳನ್ನು ಹೊಂದಿರುವವರು. ಶಿವ ದೇವರು ಒಬ್ಬರೇ ಮೂರು ಕಣ್ಣುಗಳನ್ನು ಹೊಂದಿದ್ದಾರೆ.

ಯಜಮಾಹೆ: ಯಾರನ್ನು ಪ್ರಾರ್ಥಿಸಲಾಗಿತ್ತದೆಯೋ ಅಥವಾ ಪೂಜಿಸಲಾಗುತ್ತಿದೆಯೋ

ಸುಗಂಧಿಂ: ಒಳ್ಳೆಯ ಸುವಾಸನೆ

ಪುಷ್ಟಿ: ಸಮೃದ್ಧ, ಪೂರ್ಣಗೊಳಿಸಿದ.

ವರ್ಧನಂ: ನಿಮಗೆ ಸಂತೋಷ, ಸಮೃದ್ಧಿ, ಮನಸ್ಸಿಗೆ ಶಾಂತಿಯನ್ನು ಉಂಟುಮಾಡುವವರು ಹಾಗೂ ನಿಮ್ಮ ಬಗ್ಗೆ ಕಾಳಜಿ ವಹಿಸುವವರು.

ಉರವರುಕಿಮೀವ್: ಅದನ್ನು ಇಷ್ಟಪಡಿ ಅಥವಾ ನಿಮ್ಮೊಡನೆ ಯಾರೂ ಇಲ್ಲ .

ಬಂಧನಾತ್: ಸಂಯೋಜಿತ ಅಥವಾ ಬಂಧನ

ಮೃತ್ಯೂರ್ - ಸಾವಿನಿಂದ.

ಮೋಕ್ಷ್ಯಾ: ನಮ್ಮನ್ನು ಮುಕ್ತಗೊಳಿಸಿ ಅಥವಾ ನಮ್ಮನ್ನು ಸ್ವರ್ಗಕ್ಕೆ ಕಳುಹಿಸಿ.

ಅಮ್ರಿತಾತ್: ಅಮರ.

ನೀವರಿಯದ ಸಾವಿನ ಕರಾಳ ಲಕ್ಷಣಗಳು!

ಮಂತ್ರದ ಸಂಪೂರ್ಣ ಅರ್ಥವೆಂದರೆ:

ನಮ್ಮ ಎರಡೂ ಕಣ್ಣುಗಳ ಹಿಂದಿರುವ ನಮ್ಮ ಮೂರನೇ ಕಣ್ಣಿನ ಮೇಲೆ ನಾವು ಕೇಂದ್ರೀಕರಿಸಬೇಕು ಹಾಗೂ ಇದು ನಿಮಗೆ ಭಾವಿಸುವ ಶಕ್ತಿಯನ್ನು ನೀಡುತ್ತದೆ ಹಾಗೂ ಇದರ ಮೂಲಕ ನಾವು ಸಂತೋಷಕರವಾಗಿ, ತೃಪ್ತಿಉಳ್ಳವರಾಗಿ ಹಾಗೂ ಜೀವನದಲ್ಲಿ ಶಾಂತಿಯನ್ನು ಪಡೆಯುತ್ತೇವೆ.

ಅಮರತ್ವ ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ ಆದರೆ ನಮ್ಮ ಮರಣಕ್ಕೆ ಕೆಲವು ವಿಸ್ತಾರವನ್ನು ನಿಮ್ಮ ಶಕ್ತಿಯ ಮೂಲಕ ನೀಡಬಹುದು ಶಿವ ದೇವರೇ ಎಂದಾಗಿದೆ.

ಈ ಮಂತ್ರವು ಒಂದು ಉಪಯುಕ್ತ ಮಂತ್ರವಾಗಿದೆ ಹಾಗೂ ಭಯಂಕರ ಕಾಯಿಲೆಯನ್ನು ಹೊಂದಿರುವವರು ಮತ್ತು ಶೀಘ್ರ ಮರಣದ ಹೆದರಿಕೆ ಉಳ್ಳವರಿಗೆ ಯಶಸ್ವಿ ಮಂತ್ರವಾಗಿದೆ. ಈ ಮಂತ್ರವು ಹೆಚ್ಚಿನ ಶಕ್ತಿಯ ರೂಪವನ್ನು ಹೊಂದಿದ್ದು ಹಾಗೂ ಗಾಯತ್ರಿ ಮಂತ್ರವನ್ನು ಸಹ ಇದು ಸೂಚಿಸುತ್ತದೆ ಮತ್ತು ಈ ಮಂತ್ರವನ್ನು ಪಠಿಸಿದಾಗ ವ್ಯಕ್ತಿಯು ತನ್ನ ದೇಹದ ಮೂಲಕ ಮಾಡುವ ಕೆಲಸಕ್ಕೆ ಹೆಚ್ಚಿನ ಶಕ್ತಿ ಉಂಟಾದ ಅನುಭವ ಆತನಿಗೆ ಉಂಟಾಗುತ್ತದೆ.

ಈ ಮಂತ್ರವನ್ನು ಬಳಸಲು ಎರಡು ವಿಧಾನಗಳಿವೆ.

1. 108 ಮಂತ್ರಗಳನ್ನು ಅಥವಾ ಮಾಲಾವನ್ನು ವ್ಯಕ್ತಿ ಪಠಿಸಬಹುದು. 108 ತುಂಬಾ ಪ್ರಮುಖವಾದುದ್ದು ಏಕೆಂದರೆ ಇದು ಗಣಿತದ ಲೆಕ್ಕಾಚಾರವನ್ನು ಹೊಂದಿದೆ. 12 ಹಾಗೂ ಒಂಭತ್ತರ ಗುಣಾಕಾರವಾಗಿದೆ 108. ಇಲ್ಲಿ 12 ರಾಶಿ ಚಕ್ರವನ್ನು ಸುಚಿಸುತ್ತದೆ ಮತ್ತು 9 ನವಗ್ರಹಗಳನ್ನು.

ಒಬ್ಬ ವ್ಯಕ್ತಿ ಈ ಮಂತ್ರವನ್ನು 108 ಬಾರಿ ಪಠಿಸಿದಾಗ ಆತನ ಎಲ್ಲಾ ನವಗ್ರಹಗಳು ಮತ್ತು ರಾಶಿ ಚಕ್ರಗಳು ಆತನ ಜೀವನದಲ್ಲಿ ಮಾಡುವ ಏರು ಪೇರುಗಳನ್ನು ಹೊರತುಪಡಿಸಿ ಸರಿಯಾದ ದಾರಿಗೆ ಬರುತ್ತವೆ ಮತ್ತು ಶಾಂತವಾಗಿ ಇರುತ್ತದೆ ಏಕೆಂದರೆ ಮಾನವನ ಜೀವನವು ಅವುಗಳ ಬದಲಾದ ಸ್ವಭಾವವನ್ನು ಪುನಃ ಸ್ಥಾಪಿಸಿರುತ್ತದೆ.

2.) ಅಸ್ವಾಭಾವಿಕ ಮರಣ ಅಥವಾ ಗಂಭೀರ ಸಾವನ್ನು ಕುರಿತು ಒಬ್ಬ ವ್ಯಕ್ತಿ ಹೆದರಿದಾಗ ಅರ್ಚಕರ ಮೂಲಕ ಮಾಡಿದ ಪೂಜೆಯನ್ನು ಆತ ಪಡೆಯಬೇಕು ಮತ್ತು ಶಿವನ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಮಾಡಿದ ನಂತರ ಹಾಗೂ ಸಾವಿರದ ಒಂದು ಮಂತ್ರವನ್ನು ಪಠಿಸಿದಾಗ ಪೂಜೆಯನ್ನು ತಯಾರು ಮಾಡಿದ ವ್ಯಕ್ತಿಗೆ ಇದರ ಫಲ ದೊರೆಯುತ್ತದೆ.

ಮೇಲೆ ತಿಳಿಸಿದ ಎರಡೂ ವಿಧಾನಗಳ ಹೊರತಾಗಿ ಆತನಿಗೆ ಸಮಯದ ಕೊರತೆ ಉಂಟಾದಲ್ಲಿ ಮತ್ತು ಆತನಿಗೆ ಮಂತ್ರದ ಫಲ ದೊರೆಯಬೇಕೆಂದಲ್ಲಿ ನಿತ್ಯವೂ ಆತ ಶಿವ ದೇವರ ದೇವಸ್ಥಾನಕ್ಕೆ ಹೋಗಬೇಕು ಮತ್ತು ಶಿವ ಲಿಂಗದ ಮೇಲೆ ನೀರನ್ನು ಸುರಿದು ಮತ್ತು ಕೇವಲ ಐದು ನಿಮಿಷಗಳ ಕಾಲ ಮಂತ್ರವನ್ನು ಪಠಿಸಬೇಕು. ಶಿವ ಲಿಂಗದ ಮೇಲೆ ಬಿಲ್ವ ಪತ್ರೆಯನ್ನು ಹಾಕಿ ನೀರನ್ನು ಸುರಿದರೆ ಕೂಡ ಅತ್ಯುತ್ತಮವಾಗಿರುತ್ತದೆ.

ಸೋಮವಾರದಿಂದ ಪ್ರಾರಂಭವಾಗುವ 15 ದಿನಗಳ ಒಳಗೆ ಮಾನಸಿಕ ಹಾಗೂ ದೈಹಿಕ ತೊಂದರೆಗಳಿಂದ ವ್ಯಕ್ತಿಗೆ ಪರಿಹಾರ ದೊರಕುತ್ತದೆ ಎಂಬುದು ನಿಜವಾಗಿದೆ.

Story first published: Wednesday, April 30, 2014, 17:40 [IST]
X
Desktop Bottom Promotion