For Quick Alerts
ALLOW NOTIFICATIONS  
For Daily Alerts

ಮೂಢನಂಬಿಕೆ ವಿಚಿತ್ರವೆನಿಸಿದರೂ ಇದುವೇ ಸತ್ಯ!

By Manu
|

ವಿವಿಧ ಧರ್ಮಗಳು ಹಾಗೂ ಆಚರಣೆಗಳ ಹೊರತಾಗಿಯೂ ಸಹ ಭಾರತ ದೇಶದಲ್ಲಿ ಮತ್ತಿತರ ಹಲವಾರು ಸ೦ಸ್ಕೃತಿ, ಸ೦ಪ್ರದಾಯಗಳು ಚಾಲ್ತಿಯಲ್ಲಿವೆ. ಅಲ್ಲದೆ ಇ೦ತಹ ಪರಿಸ್ಥಿತಿ ನಡುವೆಯೂ ಸಹ ಸಾರ್ವಭೌಮತ್ವ, ಜಾತ್ಯಾತೀತತೆ, ಹಾಗೂ ಏಕತೆ, ಸಮಗ್ರತೆಗಳನ್ನು ವಿವಿಧ ಹ೦ತಗಳಲ್ಲಿ ಕಾಪಾಡಿಕೊ೦ಡು ಬ೦ದಿರುವುದರ ಮೂಲಕ ನಮ್ಮ ದೇಶ ಜಗತ್ತಿಗೇ ಮಾದರಿಯಾಗಿದೆ. ಅಷ್ಟೇ ಏಕೆ, ಆಧುನಿಕ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಮತ್ತೊಂದು ಕಡೆಯಲ್ಲಿ ವಿಚಿತ್ರ ಆಚರಣೆಗಳಲ್ಲಿ ಅಗ್ರಸ್ಥಾನ ಪಡೆದಿದೆ..! ಅದೇ ಮೂಢನಂಬಿಕೆ.

ಹೌದು, ಇ೦ದಿನ ದಿನಮಾನಗಳಲ್ಲಿಯೂ ಸಹ ಮೂಢನಂಬಿಕೆಗಳ ಕಟ್ಟುಪಾಡಿಗೆ ಬಿದ್ದು, ಆಘಾತಕಾರಿ ಅಥವಾ ಕೆಟ್ಟ ಆಚರಣೆಗಳು ಹಾಗೂ ಸ೦ಪ್ರದಾಯಗಳು ಭಾರತ ದೇಶದಲ್ಲಿ ಅಲ್ಲಲ್ಲಿ, ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಉದಾಹರಣೆಗೆ ಶುಭ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನ, ಮಂಗಳವಾರ ತಲೆಗೂದಲು ಕತ್ತರಿಸಬಾರದು, ಉತ್ತರ ದಿಕ್ಕಿನಲ್ಲಿ ತಲೆಇರಿಸಿ ಮಲಗಬಾರದು, ಮುಸ್ಸಂಜೆಯ ಹೊತ್ತಿನಲ್ಲಿ ಮಲಗಬಾರದು ಹೀಗೆ ಮೂಢನಂಬಿಕೆಗಳ ಆಚರಣೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ ಇದಕ್ಕೆ ಲಂಗುಲಗಾಮು ಎನ್ನುವುದೇ ಇಲ್ಲ. ಹೊರಗಿನಿಂದ ಬಂದವರಿಗೆ ನಮ್ಮ ದೇಶದಲ್ಲಿ ನಡೆಸಿಕೊಂಡು ಬರುತ್ತಿರುವ ಈ ಸಂಸ್ಕೃತಿ ವಿಚಿತ್ರ ಎಂದೆನಿಸಿದರೂ ನಾವು ಇದುವೇ ಸತ್ಯ ಎಂಬ ಧ್ಯೇಯ ವಾಕ್ಯವನ್ನು ಬಿಟ್ಟು ಬಿಡದೇ ಪರಿಪಾಲಿಸುತ್ತಾ ಹೋಗುತ್ತೇವೆ.

ಹಿಂದಿನಿಂದಲೂ ಶಾಸ್ತ್ರ ಪುರಾಣಗಳಲ್ಲಿ ಹೇಳಿರುವ ಆಚರಣೆಗಳನ್ನೇ ನಾವುಗಳು ಪಾಲಿಸಿಕೊಂಡು ಬರುತ್ತಿದ್ದು ಇದನ್ನು ಮುರಿದಲ್ಲಿ ದೈವೀ ಕೋಪಕ್ಕೆ ಗುರಿಯಾಗುತ್ತೇವೆ ಎಂಬ ಭಯ ನಮ್ಮನ್ನು ಕಾಡುತ್ತದೆ. ಅದಕ್ಕಾಗಿಯೇ ಸಂಪ್ರದಾಯಗಳ ಆಚರಣೆಯಲ್ಲಿ ಒಂದಿನಿತೂ ಲೋಪವುಂಟಾಗದಂತೆ ಪಾಲಿಸಿಕೊಂಡು ಬರುತ್ತೇವೆ. ಈ ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯದ ಆಚರಣೆ ಮೂರ್ಖತನದ ಪರಮಾವಧಿ ಎಂದೆನಿಸಿದರೂ

ಇವುಗಳ ಪಾಲನೆ ಮಾಡದಿದ್ದಲ್ಲಿ ನಮ್ಮ ಮನಸ್ಸಿಗೆ ಏನೋ ಒಂದು ರೀತಿಯ ಭಯ ಆವರಿಸಿ ಬಿಡುತ್ತದೆ. ಇಂದಿನ ಲೇಖನದಲ್ಲಿ ದೇಶದಲ್ಲಿ ಹೆಚ್ಚು ಆಚರಿಸಲಾಗುವ ಕೆಲವೊಂದು ಮೂಢನಂಬಿಕೆಗಳ ಪಟ್ಟಿ ಮಾಡಿದ್ದು ನಿತ್ಯ ಜೀವನದಲ್ಲಿ ಇವುಗಳ ಆಚರಣೆ ಇದ್ದೇ ಇದೆ. ಅವುಗಳು ಯಾವುವು ಎಂಬುದನ್ನು ನೋಡಲು ಸ್ಲೈಡರ್ ಕ್ಲಿಕ್ ಮಾಡಿ

ಒಂದು ರೂಪಾಯಿ ನಾಣ್ಯದ ಬಳಕೆ

ಒಂದು ರೂಪಾಯಿ ನಾಣ್ಯದ ಬಳಕೆ

ಮದುವೆ ಸಮಾರಂಭಗಳಲ್ಲಿ ನಗದನ್ನು ಕಾಣಿಕೆಯಾಗಿ ನೀಡುವಾಗ ಹೆಚ್ಚುವರಿ ಒಂದು ರೂಪಾಯಿಯನ್ನು ಸೇರಿಸಿ ಕೊಡುತ್ತಾರೆ. ಇದು ಶುಭದ ಸಂಕೇತವಾಗಿದ್ದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಯಾವುದೇ ಕೊಡುಗೆಯನ್ನು ನೀಡುವಾಗ ಪೂರ್ಣ ಪ್ರಮಾಣದಲ್ಲಿ ಅದನ್ನು ನೀಡಬೇಕು ಸೊನ್ನೆಯು ಅಶುಭದ ಸಂಕೇತವಾಗಿರುವುದರಿಂದ 100 ರೂ ಕೊಡುವುದರ ಜೊತೆಗೆ ಹೆಚ್ಚುವರಿ 1 ರೂಪಾಯಿಯನ್ನು ಸೇರಿಸಿ ನೀಡಲಾಗುತ್ತದೆ...!

ಕಪ್ಪು ಬೆಕ್ಕು ಕ್ರಮಿಸಿದ ದಾರಿಯನ್ನು ಬಳಸದಿರುವುದು

ಕಪ್ಪು ಬೆಕ್ಕು ಕ್ರಮಿಸಿದ ದಾರಿಯನ್ನು ಬಳಸದಿರುವುದು

ಹೆಚ್ಚಿನ ವಿದ್ಯಾವಂತರುಗಳು ಮೂಢನಂಬಿಕೆಗಳನ್ನು ನಂಬುವುದಿಲ್ಲ ಎಂದು ಹೇಳುವುದನ್ನು ಕೇಳುತ್ತೇವೆ. ಆದರೆ ಅವಿದ್ಯಾವಂತರು ಮಾತ್ರವಲ್ಲದೆ ವಿದ್ಯಾವಂತರೂ ಮೂಢನಂಬಿಕೆಗಳನ್ನು ನಂಬುತ್ತಾರೆ ಮತ್ತು ಹಾಗೆಯೇ ಅದನ್ನು ಆಚರಿಸುತ್ತಾರೆ ಕೂಡ. ನೀವು ಸಾಗುತ್ತಿರುವ ದಾರಿಯಲ್ಲಿ ಕಪ್ಪು ಬೆಕ್ಕು ಹಾದುಹೋದರೆ ನೀವು ಆ ಹಾದಿಯಲ್ಲಿ ಹೋಗದೇ ಬೇರೆ ದಾರಿಯಲ್ಲಿ ಮುಂದುವರಿಯುತ್ತೀರಿ. ಈ ಮೂಢನಂಬಿಕೆಯ ಹಿಂದಿರುವ ನೈಜತೆ ಜನರನ್ನು ಕಾಡುಪ್ರಾಣಿಗಳಿಂದ ರಕ್ಷಿಸುವುದಕ್ಕಾಗಿ ಅನುಸರಿಸಿದ ವಿಧಾನವಾಗಿದೆ. ರಾತ್ರಿವೇಳೆಯಲ್ಲಿ ಹಾದುಹೋಗುವ ಪ್ರಾಣಿಗಳನ್ನು ಕುರಿತು ಜನರು ಎಚ್ಚರಿಕೆಯಿಂದಿರಲಿ ಎಂಬ ಕಾರಣಕ್ಕಾಗಿ ಹೊಳೆಯುತ್ತಿರುವ ಕಣ್ಣುಗಳನ್ನು ನೋಡಿದಲ್ಲಿ ಆ ದಾರಿಯಲ್ಲಿ ಮುಂದುವರಿಯಬೇಡಿ ಎಂಬುದಾಗಿ ಸೂಚಿಸುತ್ತಿದ್ದರು. ಆದರೆ ಇದುವೇ ಕಾಲಸರಿದಂತೆ ಜನರ ಮೂಢನಂಬಿಕೆಯಾಗಿ ಮಾರ್ಪಟ್ಟಿದೆ.

ಕಣ್ಣುಗಳ ಅದುರುವಿಕೆ

ಕಣ್ಣುಗಳ ಅದುರುವಿಕೆ

ಎಡ ಕಣ್ಣು ಅಥವಾ ಬಲಗಣ್ಣು ಅದುರಿದಾಗ ಏನಾದರೂ ಒಳ್ಳೆಯದು ಅಥವಾ ಕೆಟ್ಟದ್ದು ಸಂಭವಿಸುತ್ತದೆ ಎಂದೇ ಜನರು ಭಾವಿಸುತ್ತಿರುತ್ತಾರೆ. ಕಣ್ಣುಗಳ ಅದುರುವಿಕೆಗೆ ಏನಾದರೂ ವೈಜ್ಞಾನಿಕ ಹಿನ್ನೆನಲೆ ಇದ್ದೇ ಇರುತ್ತದೆ. ಈ ರೀತಿ ಸಂಭವಿಸಿದಾಗ ಅದು ಮೂಢನಂಬಿಕೆ ಎಂದು ಭಾವಿಸದೇ ಕೂಡಲೇ ತಜ್ಞರ ಬಳಿ ಕಣ್ಣು ಪರೀಕ್ಷೆಯನ್ನು ಮಾಡಿಕೊಳ್ಳಿ.

ಮಂಗಳವಾರ ಕೂದಲು ಕತ್ತರಿಸುವುದು ಕೆಟ್ಟದ್ದು

ಮಂಗಳವಾರ ಕೂದಲು ಕತ್ತರಿಸುವುದು ಕೆಟ್ಟದ್ದು

ಮಂಗಳವಾರ ತಲೆಗೂದಲು ಕತ್ತರಿಸಿಕೊಳ್ಳಬಾರದೆಂದು ನಿಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿಸಿಕೊಂಡಿರುತ್ತೀರಿ. ಮೂಢನಂಬಿಕೆಯ ಭಾಗವಾಗಿ ಇದು ಪರಿಗಣಿತವಾಗಿದೆ. ಇದಕ್ಕೆ ಒಂದು ಹಿನ್ನಲೆಯಿದ್ದು ಮಂಗಳವಾರದಂದು ಏಕೆ ತಲೆಗೂದಲು ಕತ್ತರಿಸಿಕೊಳ್ಳಬಾರದು ಎಂಬುದನ್ನು ನಾವು ಇಲ್ಲಿ ತಿಳಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಭಾರತದಲ್ಲಿ ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿಕೊಂಡಿದ್ದರು. ವಾರಪೂರ್ತಿ ಕೆಲಸವನ್ನು ಮಾಡಿದ ನಂತರ ಸೋಮವಾರದಂದು ತಮ್ಮ ವೈಯಕ್ತಿಕ ಕೆಲಸಗಳನ್ನು ಅವರು ಮಾಡಿಕೊಳ್ಳುತ್ತಿದ್ದರು ಇದರಲ್ಲಿ ತಲೆಗೂದಲು ಕತ್ತರಿಸುವಿಕೆ ಕೂಡ ಒಳಗೊಂಡಿತ್ತು. ಸೋಮವಾರದಂದು ಕ್ಷೌರ ಮಾಡಿಕೊಂಡ ನಂತರ ಮಂಗಳವಾರ ಕ್ಷೌರಿಕರು ಬಿಡುವಾಗುತ್ತಿದ್ದರು. ಆದರೆ ಸಮಯ ಕಳೆದಂತೆಲ್ಲಾ ಮಂಗಳವಾರ ತಲೆಗೂದಲು ಕತ್ತರಿಸಿಕೊಳ್ಳಬಾರದು ಎಂಬಲ್ಲಿಯವರೆಗೆ ನಂಬಿಕೆ ಆಚರಣೆಗೆ ಬಂದಿದೆ. ಮಂಗಳವಾರ ಏಕೆ ತಲೆಗೂದಲು ಕತ್ತರಿಸಿಕೊಳ್ಳಬಾರದು ಎಂಬುದರ ರಹಸ್ಯ ನಿಮಗೀಗ ಗೊತ್ತಾಗಿರಬೇಕು ಅಲ್ಲವೇ?

ಉಗುರನ್ನು ಕತ್ತರಿಸುವುದು

ಉಗುರನ್ನು ಕತ್ತರಿಸುವುದು

ಉಗುರುಗಳನ್ನು ಕತ್ತರಿಸುವುದು ವಾರದ ನಿರ್ದಿಷ್ಟ ದಿನಗಳಲ್ಲಿ ಅಥವಾ ಸೂರ್ಯಾಸ್ತದ ನಂತರ ಉಗುರನ್ನು ಕತ್ತರಿಸಿಬಾರದೆನ್ನುವುದು ಇನ್ನೊಂದು ಸಾಮಾನ್ಯ ಮೂಢನಂಬಿಕೆ. ಮಂಗಳವಾರ, ಗುರುವಾರ ಮತ್ತು ಶನಿವಾರ ಉಗುರನ್ನು ಕತ್ತರಿಸಬಾರದೆಂದು ಬಹುಮಟ್ಟಿಗೆ ನಂಬುತ್ತಾರೆ. ಹಾಗೆ ಕತ್ತರಿಸಿದರೆ ದುರಾದೃಷ್ಟ ಬರುವುದೆಂದು ನಂಬಿದ್ದಾರೆ. ಹಾಗೆಯೇ ಸೂರ್ಯಾಸ್ತದ ನಂತರವೂ ಕೂಡ ಉಗುರನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ.

ಹತ್ತಿಯ ದಾರದಲ್ಲಿ ಸುತ್ತಿದ ಲಿಂಬೆ ಮತ್ತು ಮೆಣಸನ್ನು ನೇತಾಡಿಸುವುದು

ಹತ್ತಿಯ ದಾರದಲ್ಲಿ ಸುತ್ತಿದ ಲಿಂಬೆ ಮತ್ತು ಮೆಣಸನ್ನು ನೇತಾಡಿಸುವುದು

ಅಂಗಡಿಗಳ ಹೊರಗೆ, ಮನೆಯಲ್ಲಿ ಅಥವಾ ವಾಹನಗಳಲ್ಲಿ ಹತ್ತಿಯ ದಾರದಲ್ಲಿ ಕಟ್ಟಿರುವ ಲಿಂಬೆ ಮತ್ತು ಮೆಣಸನ್ನು ನೀವು ಕಂಡಿರಬಹುದು. ಕ್ರಿಮಿಕೀಟಗಳನ್ನು ದೂರವಿಡಲು ಈ ಕ್ರಮವನ್ನು ಅನುಸರಿಸಲಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಹಿಂದಿನಿಂದಲೂ ಇದು ಆಚರಣೆಯಲ್ಲಿರುವ ಪದ್ಧತಿಯಾಗಿದೆ.

English summary

some common Indian superstitions and the real reasons behind!

India is famous as the land of snake charmers from past days, but if someone asks you this question in a foreign country would you be able to answer it? Well, there are lot of superstitions that we Indians follow blindly, but most of us aren't aware of the real facts behind such superstitions. We bring you a collection of some common superstitions that we follow, but this time we bring you the reasons as well. So, check out if you follow any one of them.
Story first published: Wednesday, November 25, 2015, 17:03 [IST]
X
Desktop Bottom Promotion