ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳಿಗೇಕೆ ಹೆಚ್ಚು ಪ್ರಾಶಸ್ತ್ಯ

ದೀಪಗಳ, ಬೆಳಕಿನ ಹಬ್ಬವಾದ ದೀಪಾವಳಿ ಅಥವಾ ದಿವಾಳಿಯು ಸ೦ತೋಷದ, ಸ೦ಭ್ರಮಾಚರಣೆಯ, ಸಡಗರದ ಸ೦ದರ್ಭವಾಗಿದೆ. ಮಾತ್ರವಲ್ಲ, ಈ ಹಬ್ಬವು ಎಲ್ಲೆ ಮೀರಿದ ಉತ್ಸಾಹ, ಉಲ್ಲಾಸ ಹಾಗೂ ವಿಶ್ವ ಭ್ರಾತೃತ್ವವನ್ನು ಸಾರುವ ಸ೦ದರ್ಭವೂ ಕೂಡ ಹೌದು....

By: manu
Subscribe to Boldsky

ಹಿಂದೂ ಧರ್ಮದಲ್ಲಿ ದೀಪಗಳ ಹಬ್ಬ ದೀಪಾವಳಿಗೆ ಹೆಚ್ಚಿನ ಸ್ಥಾನಮಾನವಿದೆ. ಅಕ್ಟೋಬರ್ ಇಲ್ಲವೇ ನವೆಂಬರ್ ಮಾಸದಲ್ಲಿ ಬರುವ ಈ ಹಬ್ಬ ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ನಮ್ಮ ಮನೆ ಮನದಲ್ಲಿ ಪಸರಿಸುತ್ತದೆ. ದೀಪಾವಳಿ ಅಂದರೆ 'ದೀಪಗಳ ಸಾಲು" ಎಂದರ್ಥ. ಆದ್ದರಿಂದ ದೀಪಗಳು ಈ ಹಬ್ಬದ ಸಮಯದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿಕೊಳ್ಳುತ್ತದೆ. 

Diwali Lights
 

ದೀಪಾವಳಿ ಸಮಯದಲ್ಲಿ ಪ್ರತಿ ಮನೆಯಲ್ಲಿ ಎಣ್ಣೆ ದೀಪಗಳು, ಮೇಣದ ಬತ್ತಿಗಳು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಹಚ್ಚಿ ಅಲಂಕರಿಸುತ್ತಾರೆ. ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲೂ ದೀಪಾವಳಿ ಹಬ್ಬದಂದು ಮಣ್ಣಿನ ಹಣತೆ, ಗೂಡುದೀಪ, ಇಲೆಕ್ಟ್ರಿಕ್ ಬಲ್ಬ್‎ಗಳ ಸಂಭ್ರಮ ಇದ್ದೇ ಇರುತ್ತದೆ.   ದೀಪಾವಳಿ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ   

ಅದಾಗ್ಯೂ ಮಣ್ಣಿನ ಹಣತೆ ಹಚ್ಚಿಡುವುದೇ ಶುಭ ದೀಪಾವಳಿಯ ಸಂಕೇತವಾಗಿದೆ. ದೀಪಗಳನ್ನು ಹಚ್ಚಿಟ್ಟುಕೊಂಡೇ ದೀಪಾವಳಿಯನ್ನು ಏಕೆ ಆಚರಿಸಬೇಕು ಎಂಬುದು ನಿಮ್ಮ ಮನದಲ್ಲಿ ಮೂಡಿರುವ ಸಂದೇಹವಾಗಿದ್ದರೆ ಇಂದಿನ ಲೇಖನದಲ್ಲಿ ಇದರ ಇತಿಹಾಸವನ್ನು ನಿಮಗೆ ತಿಳಿಸಲಿದ್ದೇವೆ.        

Diwali Lights
 

ದೀಪಗಳನ್ನು ಹಚ್ಚಿಡುವುದರ ಹಿಂದಿರುವ ದಂತಕಥೆ
ಭಾರತದ ಉತ್ತರ ಭಾಗದಲ್ಲಿ ದೀಪಗಳನ್ನು ಏಕೆ ಹಚ್ಚಿಡುತ್ತಾರೆ ಎಂಬುದಕ್ಕೆ ಇತಿಹಾಸವಿದ್ದು ರಾಮನು 14 ವರ್ಷಗಳ ಕಾಲ ವನವಾಸವನ್ನು ಮುಗಿಸಿಕೊಂಡು ತನ್ನ ಪತ್ನಿ ಮತ್ತು ತಮ್ಮನೊಂದಿಗೆ ಅಯೋಧ್ಯೆಗೆ ಮರಳುವ ಸಂಭ್ರಮಕ್ಕಾಗಿ ದೀಪಗಳನ್ನು ಹಚ್ಚಿ ಪ್ರಜೆಗಳು ಸ್ವಾಗತಿಸುತ್ತಾರೆ ಎಂಬುದಾಗಿ ತಿಳಿಸಲಾಗಿದೆ.    

ಭಾರತದ ದಕ್ಷಿಣ ಭಾಗಗಳಲ್ಲಿ ನರಕಾಸುರನನ್ನು ದೇವಿಯು ವಧಿಸಿದ ದ್ಯೋತಕವಾಗಿ ವಿಜಯವನ್ನು ಆಚರಿಸಲು ನರಕ ಚತುರ್ದಶಿಯ ದಿನಂದು ದಕ್ಷಿಣ ಭಾಗದ ಜನರು ದೀಪಗಳನ್ನು ಹಚ್ಚಿಡುತ್ತಾರೆ. ಅಸುರೀ ಶಕ್ತಿಯ ವಿರುದ್ಧ ದೈವ ಬಲದ ವಿಜಯ ಎಂಬುದರ ದ್ಯೋತಕವಾಗಿ ದೀಪಗಳನ್ನು ಹಚ್ಚಿಟ್ಟು ಕತ್ತಲೆಯನ್ನು ದೂರಗೊಳಿಸುತ್ತಾರೆ.        ದೀಪಾವಳಿ ವಿಶೇಷ: ನರಕ ಚತುರ್ದಶಿ ಹಬ್ಬದ ಹಿನ್ನೆಲೆ  

Diwali Lights
 

ದೀಪಗಳನ್ನು ಹಚ್ಚುವುದರ ಮಹತ್ವ
ಹಿಂದೂ ಧರ್ಮದಲ್ಲಿ ದೀಪ ಒಂದು ಮಹತ್ವವುಳ್ಳ ವಿಷಯ ಯಾಕೆಂದರೆ ಅದು ಪವಿತ್ರತೆ, ಒಳ್ಳೆಯತನ ಮತ್ತು ಶಕ್ತಿ ಇವುಗಳ ಸಂಕೇತವಾಗಿದೆ. ಬೆಳಕಿದೆಯೆಂದರೆ ಕತ್ತಲೆ ಮತ್ತು ದುಷ್ಟ ಶಕ್ತಿಗಳ ಇರುವುದಿಲ್ಲ ಎನ್ನುವ ನಂಬಿಕೆ. ಅಮಾವಾಸ್ಯೆಯ ರಾತ್ರಿ ಎಲ್ಲೆಡೆಯಲ್ಲೂ ಸಂಪೂರ್ಣ ಕತ್ತಲೆ ಇರುವಾಗ ಜನರು ಲಕ್ಷಾಂತರ ದೀಪಗಳನ್ನು ಬೆಳಗಿ ಕತ್ತಲನ್ನು ತೊಡೆದುಹಾಕಲು ದೀಪಾವಳಿಯನ್ನು ಆಚರಿಸುತ್ತಾರೆ.

Diwali Lights
 

ದುಷ್ಟ ಶಕ್ತಿಗಳು ಮತ್ತು ಅವುಗಳ ಪಡೆಗಳು ಕತ್ತಲಲ್ಲಿ ಸಕ್ರಿಯವಾಗುತ್ತಾರೆಂಬ ನಂಬಿಕೆ ಜನರಿಗೆ ಇದೆ. ಆದ್ದರಿಂದ ದುಷ್ಟಶಕ್ತಿಗಳನ್ನು ದುರ್ಬಲಗೊಳಿಸಲು ಮನೆಯ ಪ್ರತಿಯೊಂದು ಮೂಲೆಯಲ್ಲೂ ದೀಪಗಳನ್ನು ಬೆಳಗುತ್ತಾರೆ. ವ್ಯಕ್ತಿಯ ಅಂತರಿಕ ಆಧ್ಯಾತ್ಮಿಕ ಬೆಳಕು ಹೊರಗೂ ಸೂಚಿಸಬೇಕೆಂಬ ಸಂದೇಶವನ್ನು ಸಾರಲು ಪ್ರತಿ ಮನೆಯ ಬಾಗಿಲ ಹೊರಗೆ ದೀಪಗಳನ್ನು ಬೆಳಗುತ್ತಾರೆ.  ಈ ದೀಪಾವಳಿಗೆ 8 ಸೂಪರ್ ರಂಗೋಲಿ ಐಡಿಯಾ  

Diwali Lights
 

ಒಂದು ದೀಪದಿಂದ ಹಲವಾರು ದೀಪಗಳನ್ನು ತನ್ನ ಬೆಳಕಿಗೆ ಧಕ್ಕೆಯಾಗದಂತೆ ಬೆಳಗಲು ಸಮರ್ಥವಾಗಿದೆ. ಆದ್ದರಿಂದ ದೀಪಾವಳಿಯ ಸಮಯದಲ್ಲಿ ದೀಪಗಳನ್ನು ಬೆಳಗುವುದು ಆಧ್ಯಾತ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲಾ ಮನುಷ್ಯರಿಗೆ ಗಮನಾರ್ಹವಾಗಿ ಅನ್ವಯಿಸುತ್ತದೆ.

English summary

Significance of Diwali, and the festival of lights

Diwali, each house is lit up with oil lamps, candles and colourful electric lights. Traditionally, the earthen lamps with cotton wicks were lit in most of the houses. However with the changing modern times, earthen lamps have been replaced by candles in many of the houses. Yet, the concept of the festival of lights remains unchanged. Has it ever occurred to you that why Hindus light lamps during Diwali? Let us find out.
Please Wait while comments are loading...
Subscribe Newsletter