ಹಿಂದೂ ಧರ್ಮದಲ್ಲಿ ನಡೆಯುವ ಮಕ್ಕಳ ಮೊದಲ 'ಅಕ್ಷರಾಭ್ಯಾಸ'...

ಹಿಂದೂ ಧರ್ಮದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಅಕ್ಷರಾಭ್ಯಾಸವನ್ನು ನಡೆಸುವ ಪದ್ಧತಿ ಕೂಡ ಇದರಲ್ಲಿ ಒಂದಾಗಿದ್ದು ಇದರ ನಂತರವೇ ಶಾಲಾ ಶಿಕ್ಷಣವನ್ನು ನೀಡಲಾಗುತ್ತದೆ.

By: Jaya subramanya
Subscribe to Boldsky

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಯನ್ನೂ ಧಾರ್ಮಿಕ ನಂಬಿಕೆ ಶ್ರದ್ಧೆಗಳಿಂದ ಆಚರಿಸಲಾಗುತ್ತದೆ. ಇದು ಹಿಂದಿನ ಕಾಲದಿಂದಲೂ ನಡೆಯುತ್ತಿದ್ದು, ಇಂದಿನ ಆಧುನೀಕತೆಗೆ ಪದ್ಧತಿಗಳು ಕೊಂಚ ಒಳಗಾಗಿದ್ದರೂ ಅದಕ್ಕಿರುವ ನೀತಿ ನಿಯಮಗಳನ್ನು ಪಾಲಿಸಲೇಬೇಕು. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಅಕ್ಷರಾಭ್ಯಾಸವನ್ನು ಅಥವಾ ವಿದ್ಯಾರಂಭ ನಡೆಸುವ ಪದ್ಧತಿ ಕೂಡ ಇದರಲ್ಲಿ ಒಂದಾಗಿದ್ದು ಇದರ ನಂತರವೇ ಶಾಲಾ ಶಿಕ್ಷಣವನ್ನು ನೀಡಲಾಗುತ್ತದೆ.  ಹಿಂದೂ ಧರ್ಮದಲ್ಲಿ ಅನ್ನಪ್ರಾಶನ ಸಂಸ್ಕಾರದ ಮಹತ್ವ

ಇಂದಿನ ಲೇಖನದಲ್ಲಿ ಈ ಪದ್ಧತಿಯನ್ನು ಏಕೆ ಆಚರಿಸಬೇಕು ಮತ್ತು ಇದರ ಮಹತ್ವವೇನು ಎಂಬುದನ್ನು ಅರಿತುಕೊಳ್ಳೋಣ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇದು ಹೆಚ್ಚು ವಿಶೇಷವಾಗಿರುವುದು ಎಂದೆನಿಸಿದ್ದು, ಬೆಂಗಾಳಾದಲ್ಲಿ 'ಹಾತೆ ಕೋರಿ' ಎಂಬುದಾಗಿ ಇದನ್ನು ಕರೆಯುತ್ತಾರೆ.....  


ವಿದ್ಯಾಭ್ಯಾಸದ ಆರಂಭ

ಪ್ರತಿಯೊಬ್ಬ ಮಾನವರ ಬದುಕಿನಲ್ಲೂ ವಿದ್ಯಾಭ್ಯಾಸವೆನ್ನುವುದು ಹೆಚ್ಚು ಮುಖ್ಯ ಸಂಗತಿಯಾಗಿದೆ. ಶಿಕ್ಷಣವನ್ನು ಪಡೆಯುವುದು ಎಂದರೆ ಜ್ಞಾನ ಮತ್ತು ಬುದ್ಧಿಮತ್ತೆಯ ಲೋಕವನ್ನು ನೀವು ಪ್ರವೇಶಿಸಿದಂತೆ. ದೇವಿ ಸರಸ್ವತಿಯನ್ನು ಪೂಜಿಸುವ ಮೂಲಕ ಅಕ್ಷರಾಭ್ಯಾಸದ ಕ್ರಿಯೆಯನ್ನು ನೀವು ಆರಂಭಿಸಬಹುದಾಗಿದೆ.

ವಿಜಯ ಸಾಧಿಸಲು

ಹೆಚ್ಚಿನ ರಾಜ್ಯಗಳಲ್ಲಿ, ಅಕ್ಷರಾಭ್ಯಾಸವನ್ನು ವಿಜಯ ದಶಮಿಯಂದೇ ಆಚರಿಸುತ್ತಾರೆ. ಇದು ವಿಜಯದ ಸಂಕೇತವಾಗಿದೆ. ಅಜ್ಞಾನದ ಅಂಧಕಾರದ ಮೇಲೆ ನಡೆಸಿರುವ ವಿಜಯ ಎಂಬುದಾಗಿ ಇದನ್ನು ಕರೆಯಲಾಗಿದೆ. ಇಚ್ಛಾ, ಕ್ರಿಯಾ ಮತ್ತು ಜ್ಞಾನಗಳೆಂಬ ಮೂರು ಶಕ್ತಿಗಳು ಒಂದಾಗಿರುವ ದಿನ ಇದಾಗಿದ್ದು, ಇದು ನಿಮ್ಮ ಜ್ಞಾನ ದೀವಿಗೆಯನ್ನು ಬೆಳಗಿಸಲು ಸಹಕಾರಿಯಾಗಿದೆ.

ಅಕ್ಷರಮಾಲೆಗಳನ್ನು ಕಲಿಸುವುದು

ಮಕ್ಕಳಿಗೆ ಈ ದಿನಗಳಂದು ಅಕ್ಷರಗಳನ್ನು ಕಲಿಸಲಾಗುತ್ತದೆ. ತಮ್ಮ ಹೆಸರನ್ನು ಅಕ್ಷರ ರೂಪದಲ್ಲಿ ಬರೆಯುವುದು ಹೇಗೆ ಎಂಬುದನ್ನು ಈ ದಿನ ತಿಳಿಸಿಕೊಡಲಾಗುತ್ತದೆ. ತದನಂತರ ಅವರುಗಳು ವಾಕ್ಯಗಳನ್ನು ಈ ಮೂಲಕ ರಚಿಸಿ ತಮ್ಮ ಆಲೋಚನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ನಿಮ್ಮ ಮಕ್ಕಳನ್ನು ಬುದ್ಧಿವಂತರನ್ನಾಗಿಸಲು ಈ ಅಂಶಗಳು ಸಹಕಾರಿಯಾಗಿದೆ.

ಓಂ ಗುರುತಿನ ಮಹತ್ವ

ಯಾವುದೇ ಆಗಿರಲಿ ಅದರ ಆರಂಭ ಮತ್ತು ಅಂತ್ಯ 'ಓಂ' ಆಗಿದೆ. ಇದು ಶಾಶ್ವತತೆಯ ಚಿಹ್ನೆಯಾಗಿದೆ. ಈ ಗುರುತನ್ನು ಬರೆಯುವ ಮೂಲಕವೇ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಲಾಗುತ್ತದೆ. ಸಂಸ್ಕೃತದಲ್ಲಿ ಇದನ್ನು ಬೀಜಾಕ್ಷರ ಎಂದು ಕರೆಯಲಾಗುತ್ತದೆ. ಅಂದರೆ ಪ್ರತಿಯೊಂದರ ಮೂಲ ಎಂದಾಗಿದೆ.

ಮರಳು/ಅಕ್ಕಿಯ ಮೇಲೆ ಮಕ್ಕಳು ಬರೆಯುತ್ತಾರೆ

ಮಕ್ಕಳು ಗುರುಕುಲದಲ್ಲಿದ್ದರೆ ಅವರಿಗೆ ಅಕ್ಷರಾಭ್ಯಾಸವನ್ನು ಮರಳ ಮೇಲೆ ಮಾಡಿಸಲಾಗುತ್ತದೆ. ಈಗ ದೊಡ್ಡ ತಟ್ಟೆಯಲ್ಲಿ ಅಕ್ಕಿಯನ್ನು ಇರಿಸಿ ಅದರಲ್ಲಿ ಮಕ್ಕಳ ಕೈಹಿಡಿದುಕೊಂಡು ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಬೆಂಗಾಳಾದಲ್ಲಿ ಚಾಕ್ ಹಿಡಿದುಕೊಂಡು ಸ್ಲೇಟ್‌ನಲ್ಲಿ ಬರೆಯುತ್ತಾರೆ.

ವೇದಗಳ ಕಾಲದಲ್ಲಿ....

ವೇದಗಳ ಕಾಲದಲ್ಲಿ, ಉಪನಯನದ ಸಮಯದಲ್ಲಿ ಅಕ್ಷರಾಭ್ಯಾಸವನ್ನು ನಿರ್ವಹಿಸಲಾಗುತ್ತದೆ. ಐದನೆಯ ವಯಸ್ಸಿನಲ್ಲಿ ಮಕ್ಕಳಿಗೆ ಇದನ್ನು ನೆರವೇರಿಸಲಾಗುತ್ತದೆ. ಆದರೆ ವಿದ್ಯಾಭ್ಯಾಸದಲ್ಲಿ ಈಗ ನವೀಕರಣತೆ ಉಂಟಾಗಿದ್ದು ಮಕ್ಕಳು ತಮ್ಮ ಮೂರನೇ ವಯಸ್ಸಿನಲ್ಲಿಯೇ ಪ್ರಥಮ ಅಕ್ಷರದ ಬರವಣಿಗೆಯನ್ನು ಆರಂಭಿಸುತ್ತಾರೆ.

 

English summary

Significance Of Aksharabhyasam

Aksharabhyasam is an ancient tradition that is followed even today. It marks the beginning of a child starting to write his/her first words. Read to know the significance of this tradition, here!
Please Wait while comments are loading...
Subscribe Newsletter